IPL 2022 ಆರ್‌ಸಿಬಿಗೆ 7 ಕೋಟಿ ರೂ, ಚಾಂಪಿಯನ್ ತಂಡಕ್ಕೆ ಸಿಗುವ ಪ್ರಶಸ್ತಿ ಮೊತ್ತವೆಷ್ಟು?

Published : May 29, 2022, 04:45 PM IST
IPL 2022 ಆರ್‌ಸಿಬಿಗೆ 7 ಕೋಟಿ ರೂ, ಚಾಂಪಿಯನ್ ತಂಡಕ್ಕೆ ಸಿಗುವ ಪ್ರಶಸ್ತಿ ಮೊತ್ತವೆಷ್ಟು?

ಸಾರಾಂಶ

ಐಪಿಎಲ್ ಪ್ರಶಸ್ತಿ ಗೆಲ್ಲುವ ತಂಡಕ್ಕೆ ಸಿಗುವ ಮೊತ್ತವೆಷ್ಟು? ಆರೇಂಜ್, ಪರ್ಪಲ್ ಸೇರಿದಂತೆ ಇತರ ಆಟಗಾರರಿಗೆ ಸಿಗುವ ಹಣವೆಷ್ಟು? ಐಪಿಎಲ್ ಪ್ರಶಸ್ತಿ,ಮೊತ್ತದ ಸಂಪೂರ್ಣ ಮಾಹಿತಿ ಇಲ್ಲಿದೆ

ಅಹಮ್ಮದಾಬಾದ್(ಮೇ.29): ಕಳೆದೆರಡು ತಿಂಗಳಿನಿಂದ ಜಿದ್ದಾಜಿದ್ದಿನ IPL 2022 ಹೋರಾಟ ಅಂತಿಮ ಹಂತ ತಲುಪಿದೆ. ಇಂದು ಗುಜರಾತ್ ಟೈಟಾನ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ನಡುವಿನ ಫೈನಲ್ ಪಂದ್ಯದೊಂದಿಗೆ ಟೂರ್ನಿಗೆ ತೆರೆ ಬೀಳಲಿದೆ. ಇದೀಗ ಚಾಂಪಿಯನ್ ಯಾರಾಗ್ತಾರೆ ಅನ್ನೋ ಕುತೂಹಲವೂ ಹೆಚ್ಚಾಗಿದೆ. ಇದರೊಂದಿಗೆ ಐಪಿಎಲ್ ಪ್ರಶಸ್ತಿ ಗೆಲ್ಲುವ ತಂಡಕ್ಕೆ ಸಿಗುವ ಪ್ರಶಸ್ತಿ ಮೊತ್ತ ಬರೋಬ್ಬರಿ 20 ಕೋಟಿ ರೂಪಾಯಿ. 

ಚಾಂಪಿಯನ್ ತಂಡಕ್ಕೆ 20 ಕೋಟಿ ರೂಪಾಯಿ ಸಿಗಲಿದೆ. ಹಾಗಾದಾರೆ ರನ್ನರ್ ಅಪ್, 3 ಮತ್ತು 4ನೇ ಸ್ಥಾನ ಪಡೆದ ತಂಡಗಳು, ಆರೇಂಜ್ ಕ್ಯಾಪ್, ಪರ್ಪಲ್ ಕ್ಯಾಪ್ ಸೇರಿದಂತೆ ಐಪಿಎಲ್ ಪ್ರಶಸ್ತಿಗಳ ಮೊತ್ತವೆಷ್ಟು ಅನ್ನೋ ಕುತೂಹಲಕ್ಕೆ ಇಲ್ಲಿದೆ ಉತ್ತರ.

IPL Final ಕನ್ನಡದಲ್ಲಿ ವೇಗಿ ಪ್ರಸಿದ್ಧ್ ಕೃಷ್ಣ ಮಾತು, ಫೈನಲ್ ಫೈಟ್ ಗೇಮ್ ಪ್ಲಾನ್ ಬಹಿರಂಗ!

ಚಾಂಪಿಯನ್ ತಂಡ:
IPL 2022 ಟೂರ್ನಿ ಚಾಂಪಿಯನ್ ತಂಡಕ್ಕೆ ಬಿಸಿಸಿಐ 20 ಕೋಟಿ ರೂಪಾಯಿ ನಗದು ಬಹುಮಾನ ನೀಡಲಿದೆ. ಪ್ರಶಸ್ತಿಗಾಗಿ ಗುಜರಾತ್ ಟೈಟಾನ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ಹೋರಾಟ ನಡೆಸಲಿದೆ.

ರನ್ನರ್ ಅಪ್:
ಫೈನಲ್ ಸುತ್ತಿನಲ್ಲಿ ಮುಗ್ಗರಿಸುವ ತಂಡ ಅಂದರೆ ರನ್ನರ್ ಅಪ್ ತಂಡಕ್ಕೆ ಬಿಸಿಸಿಐ 13 ಕೋಟಿ ರೂಪಾಯಿ ನೀಡಲಿದೆ. 

3ನೇ ಸ್ಥಾನ
ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ದ ಸೋಲು ಕಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. 3ನೇ ಸ್ಥಾನ ಪಡೆಯುವ ತಂಡಕ್ಕೆ 7 ಕೋಟಿ ರೂಪಾಯಿ ನಗದು ಬಹುಮಾನವಿದೆ.

IPL 2022: RCB ಕಪ್‌ ಗೆಲ್ಲೋವರೆಗೂ ಮದುವೆಯಾಗೊಲ್ಲ, ಬೆಂಗಳೂರು ಫ್ಯಾನ್ ಪೋಸ್ಟರ್‌ ವೈರಲ್‌..!

4ನೇ ಸ್ಥಾನ
ಎಲಿಮಿನೇಟರ್ ಪಂದ್ಯದಲ್ಲಿ ಸೋಲುವ ತಂಡ 4ನೇ ಸ್ಥಾನಕ್ಕೆ ತೃಪ್ತಿಪಡಲಿದೆ. ಈ ಬಾರಿಯ ಎಲಿಮಿನೇಟರ್ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಲಖನೌ ಸೂಪರ್ ಜೈಂಟ್ಸ್ ಮುಗ್ಗರಿಸಿತ್ತು. ಹೀಗಾಗಿ 4ನೇ ಸ್ಥಾನ ಪಡೆದಿರುವ ಲಖನೌ ತಂಡ 6.5 ಕೋಟಿ ರೂಪಾಯಿ ನಗದು ಬಹುಮಾನ ಪಡೆಯಲಿದೆ.

ಆರೇಂಜ್ ಕ್ಯಾಪ್:
ಟೂರ್ನಿಯಲ್ಲಿ ಗರಿಷ್ಠ ರನ್ ಸಿಡಿಸುವ ಬ್ಯಾಟ್ಸ್‌ಮನ್ ಆರೇಂಜ್ ಕ್ಯಾಪ್ ಧರಿಸಲಿದ್ದಾರೆ ಈ ಬಾರಿ ಸದ್ಯ ರಾಜಸ್ಥಾನ ರಾಯಲ್ಸ್ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ಆರೇಂಜ್ ಕ್ಯಾಪ್ ಹೋಲ್ಡರ್ ಆಗಿದ್ದಾರೆ. ಆರೇಂಜ್ ಕ್ಯಾಪ್ ಗೆಲ್ಲುವ ಬ್ಯಾಟ್ಸ್‌ಮನ್ 15 ಲಕ್ಷ ರೂಪಾಯಿ ನಗದು ಬಹುಮಾನ ಪಡೆಯಲಿದ್ದಾರೆ.

ಪರ್ಪಲ್ ಕ್ಯಾಪ್:
ಐಪಿಎಲ್ ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಕಬಳಿಸಿ ಬೌಲರ್‌ಗೆ ಪರ್ಪಲ್ ಕ್ಯಾಪ್ ಪ್ರಶಸ್ತಿ ನೀಡಲಾಗುತ್ತದೆ. ಈ ಬಾರಿ ರಾಜಸ್ಥಾನ ರಾಯಲ್ಸ್ ಸ್ಪಿನ್ನರ್ ಯಜುವೇಂದ್ರ ಚಹಾಲ್ ಗರಿಷ್ಠ ವಿಕೆಟ್ ಕಬಳಿಸಿ ಮುನ್ನಡೆಯಲಿದ್ದಾರೆ. ಪರ್ಪಲ್ ಕ್ಯಾಪ್ ಹೋಲ್ಡರ್‌ಗೆ 15 ಲಕ್ಷ ರೂಪಾಯಿ ನಗದು ಬಹುಮಾನ ಪಡೆಯಲಿದ್ದಾರೆ.

ಐಪಿಎಲ್ ಎಮರ್ಜಿಂಗ್ ಪ್ಲೇಯರ್:
ಯುವ ಪ್ರತಿಭೆಗಳನ್ನು ಗುರುತಿಸಲು ಐಪಿಎಲ್ ಎಮರ್ಜಿಂಗ್ ಪ್ಲೇಯರ್ ಅವಾರ್ಡ್ ನೀಡಲಾಗುತ್ತದೆ. ಈ ಪ್ರಶಸ್ತಿ ಪಡೆಯುವ ಯುವ ಕ್ರಿಕೆಟಿಗ 20 ಲಕ್ಷ ರೂಪಾಯಿ ನಗದು ಬಹುಮಾನ ಪಡೆಯಲಿದ್ದಾರೆ.

ಗರಿಷ್ಠ ಸಿಕ್ಸರ್ ಅವಾರ್ಡ್
ಆವೃತ್ತಿಯಲ್ಲಿ ಗರಿಷ್ಠ ಸಿಕ್ಸರ್ ಸಿಡಿಸುವ  ಬ್ಯಾಟ್ಸ್‌ಮನ್‌ಗೆ ಈ ಪ್ರಶಸ್ತಿ ನೀಡಲಾಗುತ್ತದೆ. ಗರಿಷ್ಠ ಸಿಕ್ಸರ್ ಪಶಸ್ತಿಗೆ 12 ಲಕ್ಷ ರೂಪಾಯಿ ನಗದು ಬಹುಮಾನವಿದೆ.

ಗೇಮ್ ಚೇಂಜರ್ 
ಐಪಿಎಲ್ ಪಂದ್ಯದಲ್ಲಿ ಗೇಮ್ ಚೇಂಜಿಂಗ್ ಪರ್ಫಾಮೆನ್ಸ್ ನೀಡುವ ಕ್ರಿಕೆಟಿಗನಿಗೆ 12 ಲಕ್ಷ ರೂಪಾಯಿ ನಗದು ಬಹುಮಾನವಿದೆ.

ಸೂಪರ್ ಸ್ಟೈಕರ್ 
ಐಪಿಎಲ್ ಪ್ರತಿ ಆವೃತ್ತಿಯಲ್ಲಿ ಸೂಪರ್ ಸ್ಟೈಕರ್ ಕ್ರಿಕೆಟಿಗನಿಗೆ 15 ಲಕ್ಷ ರೂಪಾಯಿ ನಗದು ಬಹುಮಾನ ನೀಡಲಾಗುತ್ತದೆ.

ವ್ಯಾಲ್ಯುಯೇಬಲ್ ಪ್ಲೇಯರ್
ಐಪಿಎಲ್ ಆವೃತ್ತಿಯ ಮೋಸ್ಟ್ ವ್ಯಾಲ್ಯುಯೇಬಲ್ ಪ್ಲೇಯರ್‌ ಪ್ರಶಸ್ತಿ ಪಡೆಯುವ ಕ್ರಿಕೆಟಿಗನಿಗೆ 12 ಲಕ್ಷ ರೂಪಾಯಿ ನಗದು ಬಹುಮಾನವಿದೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮೆಹೆಂದಿಯಾಗಿತ್ತು, ಆದರೆ ಮದುವೆಯಾಗಲ್ಲ: ಕೊನೆಗೂ Palash Muchhal ಜೊತೆಗಿನ ಸಂಬಂಧಕ್ಕೆ ತೆರೆ ಎಳೆದ Smriti Mandhana
ಚಿನ್ನಸ್ವಾಮಿಗೆ ಅಂತಾರಾಷ್ಟ್ರೀಯ ಮತ್ತು IPL ಪಂದ್ಯಗಳು ವಾಪಸ್; ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ