IPL 2022: ವಿರಾಟ್ ಕೊಹ್ಲಿ ಸಲೆಬ್ರೇಶನ್ ಕಾಪಿ ಮಾಡಿದ ಡೆಲ್ಲಿ ಬಾಯ್..!​

Published : Apr 10, 2022, 02:42 PM ISTUpdated : Apr 10, 2022, 02:45 PM IST
IPL 2022: ವಿರಾಟ್ ಕೊಹ್ಲಿ ಸಲೆಬ್ರೇಶನ್ ಕಾಪಿ ಮಾಡಿದ ಡೆಲ್ಲಿ ಬಾಯ್..!​

ಸಾರಾಂಶ

* ಲಖನೌ ತಂಡದಲ್ಲಿದ್ದಾರೆ ಜೂನಿಯರ್ ಎಬಿ ಡಿವಿಲಿಯರ್ಸ್‌ * ಸ್ಪೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆಯುತ್ತಿರುವ ಆಯುಶ್ ಬದೋನಿ * ಕೊಹ್ಲಿ ರೀತಿ ಸಂಭ್ರಮಾಚರಣೆ ಮಾಡಿ ಗಮನ ಸೆಳೆದ ಆಯುಶ್ ಬದೋನಿ

ಮುಂಬೈ(ಏ.10): ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಕೇವಲ ಕಲರ್ ಫುಲ್ ಟೂರ್ನಿ ಮಾತ್ರವಲ್ಲ. ಕಲರ್ ಫುಲ್ ಆಟಗಾರರನ್ನೂ ಬೆಳಕಿಗೆ ತರೋ ಟೂರ್ನಿ. ಐಪಿಎಲ್ ಮೂಲಕ ಪ್ರತಿ ವರ್ಷ ಹೊಸ ಹೊಸ ಪ್ರತಿಭೆಗಳು ಬೆಳಕಿಗೆ ಬರುತ್ತವೆ. ಈ ವರ್ಷವೂ ಸಾಕಷ್ಟು ಯಂಗ್‌ಸ್ಟರ್​ಗಳು ಕಲರ್ ಫುಲ್ ಟೂರ್ನಿಯಲ್ಲಿ ಬೆಳಕಿಗೆ ಬಂದಿದ್ದಾರೆ. ಹಿಂದಿನ ವರ್ಷಗಳಿಗೆ ಹೋಲಿಸಿದ್ರೆ ಈ ವರ್ಷ ಹೆಚ್ಚಾಗಿಯೇ ಯುವ ಆಟಗಾರರ ಉಗಮವಾಗಿದೆ. ಅದರಲ್ಲಿ ಒಬ್ಬರು ಡೆಲ್ಲಿ ಡ್ಯಾಶರ್​ ಆಯುಶ್ ಬದೋನಿ (Ayush Badoni).

ಯೆಸ್, ಡೆಲ್ಲಿಯ ಬಲಗೈ ಬ್ಯಾಟರ್​​ ಅಯುಶ್ ಬದೋನಿ, ಭಾರತ ಅಂಡರ್​-19 ತಂಡದ ಮೆಂಬರ್. ಆದರೆ ಇನ್ನೂ ಡೆಲ್ಲಿ ರಣಜಿ ಟೀಂ​ನಲ್ಲಿ (Delhi Ranji Team) ಸ್ಥಾನ ಪಡೆದಿಲ್ಲ. ಐಪಿಎಲ್ ಆಡೋದಕ್ಕೂ ಮುನ್ನ ಅವರು ಡೆಲ್ಲಿ ಪರ ಆಡಿದ್ದು ಜಸ್ಟ್ 5 ಟಿ20 ಮ್ಯಾಚ್​ಗಳನ್ನ ಮಾತ್ರ. ಅದರಲ್ಲಿ ಅವರು ಹೊಡೆದಿದ್ದು, ಬರೀ 8 ರನ್​ಗಳನ್ನ. ಆದರೂ ಲಖನೌ ಸೂಪರ್ ಜೈಂಟ್ಸ್​ ಫ್ರಾಂಚೈಸಿ​ ಈ ಸಲ ಅವರನ್ನ ಮೂಲ ಬೆಲೆ 20 ಲಕ್ಷ ಕೊಟ್ಟು ಖರೀದಿಸಿತ್ತು. ಲಖನೌ ಮೆಂಟರ್​ ಗೌತಮ್ ಗಂಭೀರ್ (Gautam Gambhir)​ ಶೋಧ ಮಾಡಿ ತಂದ ಪ್ರತಿಭೆನೇ ಈ ಆಯುಶ್. ಕಳೆದ ಸಲ ಆನ್ ಸೋಲ್ಟ್ ಆಗಿದ್ದರು ಬದೋನಿ.

ವಿರಾಟ್ ಕೊಹ್ಲಿ ಸ್ಟೈಲ್​ನಲ್ಲಿ ವಿನ್ನಿಂಗ್ ಸಲೆಬ್ರೇಶನ್:

ಮೊನ್ನೆ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ವಿರುದ್ಧ ಲಖನೌ ಟೀಂ ಕೊನೆ ಓವರ್​​​ನಲ್ಲಿ ರೋಚಕ ಜಯ ಸಾಧಿಸಿತು. ಆ ಪಂದ್ಯದಲ್ಲಿ 22 ವರ್ಷದ ಆಯುಶ್ ಬದೋನಿ, ಸಿಕ್ಸ್ ಮೂಲಕ ವಿನ್ನಿಂಗ್​ ಶಾಟ್ ಹೊಡೆದ್ರು. ಇದರಲ್ಲಿ ವಿಶೇಷ ಏನಿಲ್ಲ. ಆದರೆ ಸಿಕ್ಸರ್ ಬಾರಿಸಿ ಲಖನೌ ಗೆಲ್ಲುತ್ತಿದಂತೆ ಆಯುಶ್ ಬದೋನಿ, ವಿರಾಟ್ ಕೊಹ್ಲಿ (Virat Kohli) ಸ್ಟೈಲ್​ನಲ್ಲಿ ಸಲೆಬ್ರೇಶನ್ ಮಾಡಿದ್ರು. ಅದು ಎಲ್ಲರ ಗಮನ ಸೆಳೆಯಿತು. ಕಿಂಗ್ ಕೊಹ್ಲಿ ಸೆಂಚುರಿ ಬಾರಿಸಿದಾಗ ಅಥವಾ ಅವರು ಕ್ರೀಸಿನಲ್ಲಿದ್ದಾಗ ಟೀಂ ಇಂಡಿಯಾ (Team India) ಅಥವಾ ಆರ್​ಸಿಬಿ (RCB) ವಿನ್ ಆದ್ರೆ ಆಗ ಅವರು, ಜೆರ್ಸಿ ಹಿಂದಿರುವ ತಮ್ಮ ಹೆಸರನ್ನ ತೋರಿಸಿಕೊಂಡು ಸೆಲಬ್ರೇಶನ್ ಮಾಡ್ತಾರೆ. ಥೇಟ್ ಹಾಗೆಯೇ ಆಯುಶ್ ಬದೋನಿ ಮೊನ್ನೆ ಡೆಲ್ಲಿ ವಿರುದ್ಧ ಗೆದ್ದ ನಂತರ ಸೆಲೆಬ್ರೇಶನ್ ಮಾಡಿದ್ದಾರೆ. ಆ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಬದೋನಿ ಫೇವರಿಟ್ ಪ್ಲೇಯರ್ ಎಬಿಡಿ..!

ವಿರಾಟ್ ಕೊಹ್ಲಿ ಸಲೆಬ್ರೇಶನ್ ಕಾಪಿ ಮಾಡಿದ್ರೂ ಆಯೋಶ್ ಬದೋನಿ ಫೇವರಿಟ್ ಪ್ಲೇಯರ್, ಕೊಹ್ಲಿ ಅಲ್ಲ. ಕೊಹ್ಲಿಯ ಆತ್ಮೀಯ ಗೆಳೆಯ ಎಬಿ ಡಿವಿಲಿಯರ್ಸ್ (AB de Villiers)​. ಇದನ್ನ ಅವರೇ ಹೇಳಿಕೊಂಡಿದ್ದಾರೆ. ನನ್ನ ಫೇವರಿಟ್ ಪ್ಲೇಯರ್ ಎಬಿಡಿ ಅಂತ ಲಕ್ನೋ ತಂಡದ ಕ್ಯಾಪ್ಟನ್ ಕೆ,ಎಲ್. ರಾಹುಲ್ (KL Rahul) ಬಳಿ ಬದೋನಿ ಹೇಳಿದ್ರಂತೆ. ಆಗ ರಾಹುಲ್, ಹಾಗಾದ್ರೆ ಎಬಿಡಿ ಸ್ಟೈಲ್​ನಲ್ಲೇ ಬ್ಯಾಟಿಂಗ್ ಮಾಡು ಅಂದ್ರಂತೆ. ಹಾಗಾಗಿನೇ ಬದೋನಿ, ಎಬಿಡಿ ಸ್ಟೈಲ್​ನಲ್ಲಿ ಬ್ಯಾಟ್ ಬೀಸಿದ್ದು. ಇನ್ನು ಆಯುಶ್ ಬದೋನಿ ಶಾರ್ಟ್​ ನೇಮ್ ಎಬಿಡಿ. ಆತ ಆಫ್ರಿಕಾ ಎಬಿಡಿಯಾದ್ರೆ, ಈತ ಭಾರತದ ಎಬಿಡಿ. ಕೆ.ಎಲ್ ರಾಹುಲ್ ಬದೋನಿಯನ್ನ ಎಬಿ ಅಂತ ಕರೆಯತ್ತಾರಂತೆ.

IPL 2022: ದಿನೇಶ್​ ಕಾರ್ತಿಕ್ ಡಿಫರೆಂಟ್​​ ಹೆಲ್ಮೆಟ್​​ ಹಾಕಿ ಆಡೋದ್ಯಾಕೆ..?

ಐಪಿಎಲ್ ಪಾದಾರ್ಪಣೆ ಪಂದ್ಯದಲ್ಲೇ ಆಯುಶ್ ಬದೋನಿ ಗುಜರಾತ್ ಟೈಟಾನ್ಸ್ ಎದುರು ಆಕರ್ಷಕ ಅರ್ಧಶತಕ ಚಚ್ಚಿದ್ದರು. ಇದಾದ ಬಳಿಕ ಚೆನ್ನೈ ಎದುರು 9 ಎಸೆತಗಳಲ್ಲಿ 19 ರನ್ ಚಚ್ಚಿದ್ದರು. ಇನ್ನು ಡೆಲ್ಲಿ ಕ್ಯಾಪಿಟಲ್ಸ್ ಎದುರು ಸಿಕ್ಸರ್‌ ಬಾರಿಸುವ ಮೂಲಕ ಲಖನೌ ತಂಡಕ್ಕೆ ಬದೋನಿ ರೋಚಕ ಗೆಲುವು ತಂದುಕೊಟ್ಟಿದ್ದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಇದೇ ನನ್ನ ಮೊದಲ ಬ್ಯಾಟ್‌, ತೆಂಗಿನ ಹೆಡೆಯನ್ನು ವೇದಿಕೆಗೆ ತಂದು ತೋರಿಸಿದ ಟೀಮ್‌ ಇಂಡಿಯಾ ಬ್ಯಾಟರ್‌!
CSK ಫ್ರಾಂಚೈಸಿಗೆ ಬಲವಾದ ಹೊಡೆತ; ಗಾಯದಿಂದಾಗಿ ತಂಡದ ಕ್ಯಾಪ್ಟನ್‌ ಟೂರ್ನಿಯಿಂದಲೇ ಔಟ್!