IPL 2022: ಅಹಮದಾಬಾದ್‌ ತಂಡಕ್ಕೆ ಗ್ರೀನ್ ಸಿಗ್ನಲ್‌..?

Suvarna News   | Asianet News
Published : Dec 06, 2021, 01:26 PM IST
IPL 2022: ಅಹಮದಾಬಾದ್‌ ತಂಡಕ್ಕೆ ಗ್ರೀನ್ ಸಿಗ್ನಲ್‌..?

ಸಾರಾಂಶ

* 15ನೇ ಆವೃತ್ತಿಯ ಐಪಿಎಲ್ ಟೂರ್ನಿಗೂ ಮುನ್ನ ಅಹಮದಾಬಾದ್‌ ಫ್ರಾಂಚೈಸಿಗೆ ಗುಡ್‌ ನ್ಯೂಸ್ * ಅಹಮದಾಬಾದ್‌ ಫ್ರಾಂಚೈಸಿ ಪರ ಬಿಸಿಸಿಐ ಕ್ಲೀನ್ ಚಿಟ್‌? * ಆದರೆ ಮೆಗಾ ಹರಾಜು ಕೊಂಚ ತಡವಾಗಿ ನಡೆಯುವ ಸಾಧ್ಯತೆ

ನವದೆಹಲಿ(ಡಿ.06): ಸಿವಿಸಿ ಕ್ಯಾಪಿಟಲ್ಸ್‌ (CVC Capitals) ಸಂಸ್ಥೆ ಐಪಿಎಲ್‌ನ ಅಹಮದಾಬಾದ್‌ ತಂಡದ ಮಾಲಿಕರಾಗಿ ಉಳಿಯಲು ಬಿಸಿಸಿಐ (BCCI) ಹಸಿರು ನಿಶಾನೆ ತೋರಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದು, ಮುಂದಿನ ವಾರ ಅಧಿಕೃತ ಘೋಷಣೆಯಾಗಲಿದೆ ಎನ್ನಲಾಗಿದೆ. ಎರಡು ಬೆಟ್ಟಿಂಗ್‌ ಸಂಸ್ಥೆಗಳಲ್ಲಿ ಹಣ ಹೂಡಿಕೆ ಮಾಡಿರುವ ಕಾರಣ ಲುಕ್ಸೆಂಬರ್ಗ್‌ ಮೂಲದ ಸಂಸ್ಥೆಗೆ ಮಾಲಿಕತ್ವ ನೀಡಬಾರದು ಎಂದು ಐಪಿಎಲ್‌ನ ಮಾಜಿ ಮುಖ್ಯಸ್ಥ ಲಲಿತ್‌ ಮೋದಿ ಸೇರಿ ಹಲವರು ವಿರೋಧಿಸಿದ್ದರು. ಈ ಕಾರಣ ಬಿಸಿಸಿಐ ಮಾಲಿಕತ್ವ ಪತ್ರ ವಿತರಣೆಯನ್ನು ತಡೆಹಿಡಿದಿತ್ತು.

ಇತ್ತೀಚೆಗೆ ನಡೆದ ಐಪಿಎಲ್‌ (IPL) ಆಡಳಿತ ಮಂಡಳಿ ಸಭೆಯಲ್ಲಿ ನಾಲ್ವರ ಸದಸ್ಯರ ಸಮಿತಿಯನ್ನು ರಚಿಸಿ ವಿಚಾರಣೆ ನಡೆಸುವಂತೆ ಬಿಸಿಸಿಐ ಸೂಚಿಸಿತ್ತು. ಆ ಸಮಿತಿಯು ವರದಿ ಸಲ್ಲಿಸಿದೆ ಎನ್ನಲಾಗಿದ್ದು, ಅದರಲ್ಲಿ ಸಿವಿಸಿ ಕ್ಯಾಪಿಟಲ್ಸ್‌ಗೆ ಕ್ಲೀನ್‌ ಚಿಟ್‌ ಸಿಕ್ಕಿದೆ ಎಂದು ವರದಿಯಾಗಿದೆ. ಹೀಗಾದಲ್ಲಿ 15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಒಟ್ಟು 10 ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ. 15ನೇ ಆವೃತ್ತಿಯ ಐಪಿಎಲ್ (IPL 2022) ಟೂರ್ನಿಯು ಭಾರತದಲ್ಲೇ ನಡೆಯಲಿದೆ ಎಂದು ಈಗಾಗಲೇ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ (Jay Shah) ಖಚಿತಪಡಿಸಿದ್ದಾರೆ.

ಸಿವಿಸಿ ಕ್ಯಾಪಿಟಲ್ಸ್‌ ಯುರೋಪ್‌ ಹಾಗೂ ಏಷ್ಯಾದಲ್ಲಿ ಪ್ರತ್ಯೇಕ ಬಂಡವಾಳ ಹೂಡಿಕೆ ವ್ಯವಸ್ಥೆಯನ್ನು ಹೊಂದಿದ್ದು, ಯುರೋಪ್‌ ಬೆಟ್ಟಿಂಗ್‌ ಸಂಸ್ಥೆಗಳಲ್ಲಿ ಹೂಡಿಕೆ ಮಾಡಿದೆ. ಆದರೆ ಏಷ್ಯಾದಲ್ಲಿ ಸಂಸ್ಥೆಯು ಬೆಟ್ಟಿಂಗ್‌ ವ್ಯವಹಾರದಲ್ಲಿ ತೊಡಗಿಲ್ಲ ಎಂದು ನಾಲ್ವರು ಸದಸ್ಯರ ಸಮಿತಿ ಬಿಸಿಸಿಐಗೆ ವರದಿ ನೀಡಿದೆ ಎನ್ನಲಾಗಿದೆ. ಅಹಮದಾಬಾದ್‌ ತಂಡಕ್ಕೆ ಮಾಲಿಕತ್ವ ಹಸ್ತಾಂತರಿಸುವ ಪ್ರಕ್ರಿಯೆ ವಿಳಂಬವಾಗುತ್ತಿರುವ ಕಾರಣ, ಆಟಗಾರರ ಮೆಗಾ ಹರಾಜು (IPL Mega Auction) ಪ್ರಕ್ರಿಯೆ ಜನವರಿ ಮೊದಲ ವಾರದ ಬದಲು 2ನೇ ವಾರದಲ್ಲಿ ನಡೆಯಲಿದೆ ಎನ್ನಲಾಗಿದೆ.

ಆಟಗಾರರ ಮೆಗಾ ಹರಾಜು ಪ್ರಕ್ರಿಯೆ 1 ವಾರ ವಿಳಂಬ?

ಅಹಮದಾಬಾದ್‌ ತಂಡಕ್ಕೆ ಮಾಲಿಕತ್ವ ಹಸ್ತಾಂತರಿಸುವ ಪ್ರಕ್ರಿಯೆ ವಿಳಂಬವಾಗುತ್ತಿರುವ ಕಾರಣ, ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ಒಂದು ವಾರ ವಿಳಂಬವಾಗುವ ಸಾಧ್ಯತೆ ಇದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ಮೊದಲು ಜನವರಿ ಮೊದಲ ವಾರದಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ ಎನ್ನಲಾಗಿತ್ತು. ಆದರೆ ಜನವರಿ 2ನೇ ವಾರಕ್ಕೆ ಮುಂದೂಡಿಕೆ ಆಗುವ ಸಾಧ್ಯತೆ ಇದೆ.

IPL 2022: ಅಹಮದಾಬಾದ್‌ ತಂಡದ ಭವಿಷ್ಯ ಇಂದು ನಿರ್ಧಾರ..?

ಹರಾಜಿಗೂ ಮೊದಲು ಅಹಮದಾಬಾದ್‌ (Ahmedabad IPL franchise) ಹಾಗೂ ಲಖನೌ (Lucknow IPL franchise) ತಂಡಗಳಿಗೆ ತಲಾ 3 ಆಟಗಾರರನ್ನು ಆಯ್ಕೆ ಮಾಡಿಕೊಳ್ಳಲು ಬಿಸಿಸಿಐ ಅವಕಾಶ ನೀಡಿದೆ. ಹರಾಜಿಗೂ ಲಭ್ಯವಿರುವ ಆಟಗಾರರ ಪೈಕಿ ತಲಾ ಮೂವರೊಂದಿಗೆ ಚರ್ಚಿಸಿ, ಆಟಗಾರರು ಒಪ್ಪಿಗೆ ಸೂಚಿಸಿದ ಬಳಿಕ ಅವರೊಂದಿಗೆ ಒಪ್ಪಂದಕ್ಕೆ ಸಹಿ ಹಾಕಬಹುದಾಗಿದೆ. ಈ ಪ್ರಕ್ರಿಯೆಯು ಡಿ.1ರಿಂದ ಆರಂಭಗೊಂಡಿದ್ದು, ಡಿಸೆಂಬರ್ 25ರ ಗಡುವು ನೀಡಲಾಗಿದೆ. ತಂಡದ ಮಾಲಿಕತ್ವ ಹಸ್ತಾಂತರ ವಿಳಂಬಗೊಳ್ಳುತ್ತಿರುವ ಕಾರಣ ಆಟಗಾರರ ಆಯ್ಕೆಗೆ ಡಿ.31ರ ವರೆಗೂ ಕಾಲಾವಕಾಶ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಲಖನೌ ತಂಡ ಕೆ.ಎಲ್‌.ರಾಹುಲ್‌ (KL Rahul), ಅಹಮದಾಬಾದ್‌ ತಂಡ ಶ್ರೇಯಸ್‌ ಅಯ್ಯರ್‌ರನ್ನು (Shreyas) ನಾಯಕನನ್ನಾಗಿ ಆಯ್ಕೆ ಮಾಡಿಕೊಳ್ಳಲಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಜೊತೆಗೆ ರಶೀದ್‌ ಖಾನ್‌ (Rashid Khan), ಹಾರ್ದಿಕ್‌ ಪಾಂಡ್ಯ (Hardik Pandya), ಡೇವಿಡ್‌ ವಾರ್ನರ್‌ (David Warner), ಯಜುವೇಂದ್ರ ಚಹಲ್‌ (Yuzvendra Chahal) ಸಹ ಹರಾಜಿಗೂ ಮೊದಲೇ ಈ ಎರಡು ತಂಡಗಳ ಪಾಲಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕಿವೀಸ್ ಸರಣಿ: ಶ್ರೇಯಸ್ ಅಯ್ಯರ್ ಕಮ್‌ಬ್ಯಾಕ್ ಮತ್ತಷ್ಟು ತಡ; ಈ ಆಟಗಾರನಿಗೆ ಚಾನ್ಸ್?
2025ರಲ್ಲಿ ಅತೀ ಹೆಚ್ಚು ಗೂಗಲ್‌ ಹುಡುಕಾಟದಲ್ಲಿ ಇವರೇ ಟಾಪ್! ಕ್ರಿಕೆಟ್ ಲೋಕದ ಅಚ್ಚರಿಯ ಮುಖಗಳಿವು