IPL 2021: ಪಂಜಾಬ್ ವಿರುದ್ಧ ಟಾಸ್ ಗೆದ್ದ ಹೈದರಾಬಾದ್, ಕ್ರಿಸ್ ಗೇಲ್‌ಗೆ ಸ್ಥಾನ!

By Suvarna NewsFirst Published Sep 25, 2021, 7:04 PM IST
Highlights
  • IPL 2021 ಟೂರ್ನಿಯ 37ನೇ ಲೀಗ್ ಪಂದ್ಯ
  • ಟಾಸ್ ಗದ್ದ ಹೈದರಾಬಾದ್, ಬೌಲಿಂಗ್ ಆಯ್ಕೆ
  • ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯ
     

ಶಾರ್ಜಾ(ಸೆ.25): ಅಂಕಪಟ್ಟಿಯಲ್ಲಿ ಕೊನೆಯ ಎರಡು ಸ್ಥಾನದಲ್ಲಿರುವ ಪಂಜಾಬ್ ಕಿಂಗ್ಸ್(Punjab Kings) ಹಾಗೂ ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಹೋರಾಟಕ್ಕೆ ವೇದಿಕೆ ಸಜ್ಜಾಗಿದೆ. ಈ ಪಂದ್ಯದಲ್ಲಿ ಟಾಸ್(Toss) ಗೆದ್ದ ಸನ್‌ರೈಸರ್ಸ್ ಹೈದರಾಬಾದ್(Sunrisers Hyderabad) ಬೌಲಿಂಗ್ ಆಯ್ಕೆ ಮಾಿಕೊಂಡಿದೆ.

 

Toss Update from Sharjah! have elected to bowl against .

Follow the match 👉 https://t.co/B6ITrxUyyF pic.twitter.com/Wt5B3W5yoF

— IndianPremierLeague (@IPL)
IPL 2021 ಚೆಂದಕ್ಕಿಂತ ಚೆಂದ : ಇಲ್ಲಿವೆ ನೋಡಿ ಟಾಪ್‌ 10 CSK ಕ್ರಿಕೆಟಿಗರ ಸುಂದರ ಮಡದಿಯರು..!

ಹೈದರಾಬಾದ್ ಪ್ಲೇಯಿಂಗ್ 11:
ಡೇವಿಡ್ ವಾರ್ನರ್, ವೃದ್ಧಿಮಾನ್ ಸಾಹ, ಕೇನ್ ವಿಲಿಯಮ್ಸನ್, ಮನೀಶ್ ಪಾಂಡೆ, ಕೇದಾರ್ ಜಾಧವ್, ಅಬ್ದುಲ್ ಸಮಾದ್, ಜೇಸನ್ ಹೋಲ್ಡರ್, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಸಂದೀಪ್ ಶರ್ಮಾ, ಖಲೀಲ್ ಅಹ್ಮಮ್ಮದ್

ಪಂಜಾಬ್ ತಂಡದಲ್ಲಿ ಮಹತ್ವದ ಮೂರು ಬದಲಾವಣೆ ಮಾಡಲಾಗಿದೆ. ಫ್ಯಾಬಿಯನ್ ಅಲೆನ್, ಪೊರೆಲ್ ಹಾಗೂ ಆದಿಲ್ ರಶೀದ್ ತಂಡದಿಂದ ಔಟ್ ಆಗಿದ್ದಾರೆ. ಈ ಮೂವರ ಬದಲು ಎಲ್ಲಿಸ್, ಕ್ರಿಸ್ ಗೇಲ್ ಹಾಗೂ ರವಿ ಬಿಶ್ನೋಯ್ ಸ್ಥಾನ ಪಡೆದಿದ್ದಾರೆ. ಕಳೆದ ಪಂದ್ಯದಲ್ಲಿ ಕ್ರಿಸ್ ಗೇಲ್ ಹಾಗೂ ಬಿಶ್ನೋಯ್ ಸ್ಥಾನ ನೀಡದ ಪಂಜಾಬ್ ಮ್ಯಾನೇಜ್ಮೆಂಟ್ ವಿರುದ್ಧ ಆಕ್ರೋಶ ಕೇಳಿಬಂದಿತ್ತು.

IPL 2021 ಎಂದೆಂದಿಗೂ ನಮ್ದು ಆರ್‌ಸಿಬಿಗೆ ಸಪೋರ್ಟ್ ಎಂದ ಕಿಚ್ಚ ಸುದೀಪ್..!

ಪಂಜಾಬ್ ಪ್ಲೇಯಿಂಗ್ 11:
ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಕ್ರಿಸ್ ಗೇಲ್, ಆ್ಯಡಿನ್ ಮರ್ಕ್ರಾಮ್, ನಿಕೋಲಸ್ ಪೂರನ್, ದೀಪಕ್ ಹೂಡ, ರವಿ ಬಿಶ್ನೋಯಿ, ಮೊಹಮ್ಮದ್ ಶಮಿ, ಹರ್ಪ್ರೀತ್ ಬ್ರಾರ್, ಅರ್ಶದೀಪ್ ಸಿಂಗ್, ನಥನ್ ಎಲ್ಲಿಸ್

ಪಂಜಾಬ್ ಕಿಂಗ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡದ ಪ್ಲೇ ಆಫ್ ಹಾದಿ ಅತ್ಯಂತ ಕಠಿಣವಾಗಿದೆ. ಇನ್ನುಳಿದ ಪಂದ್ಯ ಗೆದ್ದರೆ ಮಾತ್ರಲ ಸಾಲದು, ಉಳಿದ ತಂಡಗಳ ಫಲಿತಾಂಶ ಕೂಡ ಅಷ್ಟೇ ಮುಖ್ಯವಾಗಿದೆ. ಪಂಜಾಬ್ ಹಾಗೂ ಹೈದರಾಬಾದ್ ನಡುವಿನ ಮುಖಾಮುಖಿಯಲ್ಲಿ ಹೈದರಾಬಾದ್ ಹೆಚ್ಚು ಗೆಲುವಿನ ಇತಿಹಾಸ ಹೊಂದಿದೆ.

IPL 2021: ಅಬ್ಬರಿಸಿದರೂ ಸಿಗಲಿಲ್ಲ ಗೆಲುವು, ಧೋನಿ ಮುಂದೆ ಶರಣಾದ ಕೊಹ್ಲಿ ಬಾಯ್ಸ್

ಪಂಜಾಬ್ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್  12 ಪಂದ್ಯ ಗೆಲುವು ಸಾಧಿಸಿದ್ದರೆ, ಕೇವಲ 5 ಪಂದ್ಯದಲ್ಲಿ ಸೋಲು ಕಂಡಿದೆ. ಅಂತಿಮ 3 ಮುಖಾಮುಖಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ 3 ಗೆಲುವು ಹಾಗೂ ಒಂದು ಸೋಲು ಕಂಡಿದೆ. ಅಂಕಿ ಅಂಶಗಳು ಸನ್‌ರೈಸರ್ಸ್ ತಂಡದ ಪರವಾಗಿದೆ. ಇತ್ತ ಪಂಜಾಬ್ ತಂಡ ಅಂತಿಮ ಹಂತದಲ್ಲಿ ಪಂದ್ಯ ಕೈಚೆಲ್ಲುವ ಕೆಟ್ಟ ಚಾಳಿ ಹೊಂದಿದೆ. 

ಅಂಕಪಟ್ಟಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಪಂಜಾಬ್ ಕಿಂಗ್ಸ್ ಅಂತಿಮ ಸ್ಥಾನದಲ್ಲಿದೆ. ಪಂಜಾಬ್ 7 ಮತ್ತು ಹೈದರಾಬಾದ್ 8ನೇ ಸ್ಥಾನದಲ್ಲಿದೆ. ಪಂಜಾಬ್ ಆಡಿದ 9 ಪಂದ್ಯದಲ್ಲಿ 3 ಗೆಲುವು ಹಾಗೂ 6 ಸೋಲು ಕಂಡಿದೆ. ಈ ಮೂಲಕ 7ನೇ ಸ್ಥಾನದಲ್ಲಿದೆ. ಇತ್ತ ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿರುವ ಹೈದರಾಬಾದ್ ತಂಡ ಆಡಿದ 8 ಪಂದ್ಯದಲ್ಲಿ ಕೇವಲ 1 ಗೆಲುವು ಹಾಗೂ 7 ಸೋಲು ಕಂಡಿದೆ.

 

🚨 ATTENTION 🚨

The schedule for the UAE leg of the is out.

Mark your calendars 🗓 pic.twitter.com/KPFfN6UHy7

— SunRisers Hyderabad (@SunRisers)
click me!