IPL 2021 DC vs RR: ರಾಯಲ್ಸ್‌ಗೆ ಸ್ಪರ್ಧಾತ್ಮಕ ಗುರಿ ನೀಡಿದ ಡೆಲ್ಲಿ ಕ್ಯಾಪಿಟಲ್ಸ್‌

Suvarna News   | Asianet News
Published : Sep 25, 2021, 05:23 PM ISTUpdated : Sep 25, 2021, 05:29 PM IST
IPL 2021 DC vs RR: ರಾಯಲ್ಸ್‌ಗೆ ಸ್ಪರ್ಧಾತ್ಮಕ ಗುರಿ ನೀಡಿದ ಡೆಲ್ಲಿ ಕ್ಯಾಪಿಟಲ್ಸ್‌

ಸಾರಾಂಶ

* ರಾಜಸ್ಥಾನ ರಾಯಲ್ಸ್‌ ಗೆಲ್ಲಲು ಸ್ಪರ್ಧಾತ್ಮಕ ಗುರಿ ನೀಡಿದ ಡೆಲ್ಲಿ ಕ್ಯಾಪಿಟಲ್ಸ್‌ * ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ ಶ್ರೇಯಸ್‌ ಅಯ್ಯರ್, ಶಿಮ್ರೊನ್ ಹೆಟ್ಮೇಯರ್ * ಬಲಿಷ್ಠ ಡೆಲ್ಲಿ ಬ್ಯಾಟ್ಸ್‌ಮನ್‌ಗಳು ಅಬ್ಬರಿಸಲು ಅವಕಾಶ ನೀಡಿದ ರಾಯಲ್ಸ್ ಬೌಲರ್‌ಗಳು

ಅಬುಧಾಬಿ(ಸೆ.25): ಆರಂಭಿಕ ಬ್ಯಾಟ್ಸ್‌ಮನ್‌ಗಳ ವೈಫಲ್ಯದ ಹೊರತಾಗಿಯೂ ಶ್ರೇಯಸ್‌ ಅಯ್ಯರ್(Shreyas Iyer) ಹಾಗೂ ಶಿಮ್ರೊನ್ ಹೆಟ್ಮೇಯರ್ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್(Delhi Capitals) ತಂಡವು 6 ವಿಕೆಟ್ ಕಳೆದುಕೊಂಡು 155 ರನ್‌ ಕಲೆಹಾಕಿದ್ದು, ರಾಜಸ್ಥಾನ ರಾಯಲ್ಸ್‌(Rajasthan Royals) ತಂಡಕ್ಕೆ ಸ್ಪರ್ಧಾತ್ಮಕ ಗುರಿ ನೀಡಿದೆ.

ಹೌದು, ಇಲ್ಲಿನ ಶೇಕ್ ಜಾಯೆದ್ ಮೈದಾನದಲ್ಲಿ ಟಾಸ್ ಗೆದ್ದ ರಾಯಲ್ಸ್‌ ತಂಡದ ನಾಯಕ ಸಂಜು ಸ್ಯಾಮ್ಸನ್‌(Sanju Samson) ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಬೌಲಿಂಗ್‌ ಮಾಡಿದ ರಾಜಸ್ಥಾನ ವೇಗಿಗಳು, ಫಾರ್ಮ್‌ನಲ್ಲಿರುವ ಶಿಖರ್ ಧವನ್‌ ಹಾಗೂ ಪೃಥ್ವಿ ಶಾ ಅವರನ್ನು ಆರಂಭದಲ್ಲೇ ಪೆವಿಲಿಯನ್ನಿಗಟ್ಟುವಲ್ಲಿ ಯಶಸ್ವಿಯಾದರು. ಕಳೆದ ಪಂದ್ಯದ ಹೀರೋ ಕಾರ್ತಿಕ್ ತ್ಯಾಗಿ ತಾವೆಸೆದ ಮೊದಲ ಎಸೆತದಲ್ಲೇ 8 ರನ್‌ ಗಳಿಸಿದ್ದ ಶಿಖರ್ ಧವನ್(Shikhar Dhawan) ಅವರನ್ನು ಕ್ಲೀನ್ ಬೌಲ್ಡ್ ಮಾಡಿ ಪೆವಿಲಿಯನ್ ಹಾದಿ ತೋರಿಸಿದರು. ಇದರ ಬೆನ್ನಲ್ಲೇ ಚೇತನ್ ಸಕಾರಿಯಾ 10 ರನ್ ಬಾರಿಸಿದ್ದ ಪೃಥ್ವಿ ವಿಕೆಟ್ ಕಬಳಿಸಿ ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಂಡರು. ಈ ವೇಳೆ ಡೆಲ್ಲಿ ಕ್ಯಾಪಿಟಲ್ಸ್‌ 4.1 ಓವರ್‌ಗಳಲ್ಲಿ 21 ರನ್‌ಗಳಿಸಿ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

IPL 2021 DC vs RR: ಟಾಸ್ ಗೆದ್ದ ರಾಯಲ್ಸ್‌ ಬೌಲಿಂಗ್ ಆಯ್ಕೆ; ಉಭಯ ತಂಡದಲ್ಲಿ ಮಹತ್ವದ ಬದಲಾವಣೆ

ಆಸರೆಯಾದ ಪಂತ್-ಅಯ್ಯರ್: ಆರಂಭಿಕರನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಡೆಲ್ಲಿ ತಂಡಕ್ಕೆ ಮಾಜಿ ನಾಯಕ ಶ್ರೇಯಸ್ ಅಯ್ಯರ್ ಹಾಗೂ ಹಾಲಿ ನಾಯಕ ರಿಷಭ್ ಪಂತ್ ಅರ್ಧಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಈ ಜೋಡಿ ಮೂರನೇ ವಿಕೆಟ್‌ಗೆ 45 ಎಸೆತಗಳಲ್ಲಿ 62 ರನ್‌ ಬಾರಿಸುವ ಮೂಲಕ ತಂಡದ ಮೊತ್ತವನ್ನು 80ರ ಗಡಿ ದಾಟಿಸಿದರು. ಈ ಜೋಡಿ ಅಪಾಯಕಾರಿಯಾಗುತ್ತಿದೆ ಎನ್ನುವುದನ್ನು ಅರಿತ ಸ್ಯಾಮ್ಸನ್‌ ಮಾರಕ ವೇಗಿ ಮುಷ್ತಾಫಿಜುರ್ ಅವರನ್ನು ದಾಳಿಗಿಳಿಸಿದರು. ನಾಯಕನ ನಿರೀಕ್ಷೆಗೆ ತಕ್ಕಂತೆ ಬೌಲಿಂಗ್ ಮಾಡಿದ ಮುಷ್ತಾಫಿಜುರ್ 24 ರನ್ ಬಾರಿಸಿ ಪಂತ್ ಅವರನ್ನು ಬೌಲ್ಡ್‌ ಮಾಡಿ ಪೆವಿಲಿಯನ್ನಿಗಟ್ಟಿದರು. ಇದರ ಬೆನ್ನಲ್ಲೇ ತೆವಾಟಿಯಾ ಬೌಲಿಂಗ್‌ನಲ್ಲಿ ದೊಡ್ಡ ಹೊಡೆತಕ್ಕೆ ಯತ್ನಿಸಿ ಅಯ್ಯರ್ ಸ್ಟಂಪೌಟ್‌ ಆಗಿ ಪೆವಿಲಿಯನ್ ಸೇರಿದರು. ಅಯ್ಯರ್ ವಿಕೆಟ್ ಒಪ್ಪಿಸುವ ಮುನ್ನ 32 ಎಸೆತಗಳನ್ನು ಎದುರಿಸಿ 1 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 43 ರನ್‌ ಬಾರಿಸಿ ಪೆವಿಲಿಯನ್ ಹಾದಿ ಹಿಡಿದರು.

ಇನ್ನು ಕೊನೆಯಲ್ಲಿ ಶಿಮ್ರೊನ್ ಹೆಟ್ಮೇಯರ್ 16 ಎಸೆತಗಳನ್ನು ಎದುರಿಸಿ 5 ಬೌಂಡರಿಗಳ ನೆರವಿನಿಂದ 28 ರನ್‌ ಚಚ್ಚಿದರು. ಮತ್ತೊಮ್ಮೆ ಮಿಂಚಿನ ದಾಳಿ ನಡೆಸಿದ ಮುಷ್ತಾಫಿಜುರ್ ಅಪಾಯಕಾರಿ ಎನಿಸಿದ್ದ ಹೆಟ್ಮೇಯರ್ ವಿಕೆಟ್ ಕಬಳಿಸಿ ಡೆಲ್ಲಿ ರನ್‌ ವೇಗಕ್ಕೆ ಕಡಿವಾಣ ಹಾಕಿದರು. 

ರಾಜಸ್ಥಾನ ರಾಯಲ್ಸ್‌ ಪರ ಮುಷ್ತಾಫಿಜುರ್, ಚೇತನ್ ಸಕಾರಿಯಾ ತಲಾ 2 ವಿಕೆಟ್ ಕಬಳಿಸಿದರೆ, ರಾಹುಲ್ ತೆವಾಟಿಯಾ, ಕಾರ್ತಿಕ್‌ ತ್ಯಾಗಿ ತಲಾ ಒಂದೊಂದು ವಿಕೆಟ್ ಕಬಳಿಸಿದರು.

ಸಂಕ್ಷಿಪ್ತ ಸ್ಕೋರ್

ಡೆಲ್ಲಿ ಕ್ಯಾಪಿಟಲ್ಸ್‌: 154/6

ಶ್ರೇಯಸ್ ಅಯ್ಯರ್: 43

ಮುಷ್ತಾಫಿಜುರ್: 22/2
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಐಪಿಎಲ್ ಹರಾಜಿನಲ್ಲಿ ₹25.20 ಕೋಟಿ ಪಡೆದ ಕ್ಯಾಮರೂನ್ ಗ್ರೀನ್‌ಗೆ ಕೊಡುವ ಮೊತ್ತ ₹18 ಕೋಟಿ ಮಾತ್ರ
ಕೇವಲ 30 ಲಕ್ಷ ಮೂಲ ಬೆಲೆ ಹೊಂದಿದ್ದ ಮಂಗೇಶ್ ಯಾದವ್ 5.2 ಕೋಟಿಗೆ ಆರ್‌ಸಿಬಿ ಪಾಲು? ಅಷ್ಟಕ್ಕೂ ಯಾರು ಈ ಎಡಗೈ ವೇಗಿ?