ಪಂಜಾಬ್ ನೀಡಿದ ಬೃಹತ್ ಮೊತ್ತ ಚೇಸ್ ಮಾಡಿದ ಡೆಲ್ಲಿ; 6 ವಿಕೆಟ್ ರೋಚಕ ಗೆಲುವು!

Published : Apr 18, 2021, 11:17 PM ISTUpdated : Apr 18, 2021, 11:21 PM IST
ಪಂಜಾಬ್ ನೀಡಿದ ಬೃಹತ್ ಮೊತ್ತ ಚೇಸ್ ಮಾಡಿದ ಡೆಲ್ಲಿ; 6 ವಿಕೆಟ್ ರೋಚಕ ಗೆಲುವು!

ಸಾರಾಂಶ

ಶಿಖರ್ ಧವನ್ ಅಬ್ಬರದ ಬ್ಯಾಟಿಂಗ್ ಮುಂದೆ  ಪಂಜಾಬ್ ಕಿಂಗ್ಸ್ ನೀಡಿದ ಬೃಹತ್ ಮೊತ್ತ ಹೆಚ್ಚಿನ ಸವಾಲು ನೀಡಲಿಲ್ಲ. ಅಂತಿಮ ಹಂತದಲ್ಲಿ ನಾಯಕ ಪಂತ್ ಹಾಗೂ ಸ್ಟೊಯ್ನಿಸ್ ಜೊತೆಯಾಟ ಡೆಲ್ಲಿ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟಿತು.

ಮುಂಬೈ(ಏ.18):  ಪಂಜಾಬ್ ಕಿಂಗ್ಸ್ ವಿರುದ್ಧವೂ ಅಬ್ಬರಿಸಿದ ಶಿಖರ್ ಧವನ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ಮುಂದುವರಿದಿದೆ. ಜೊತೆಗೆ ಇತರ ಬ್ಯಾಟ್ಸ್‌ಮನ್‌ಗಳ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ 6 ವಿಕೆಟ್ ರೋಚಕ ಗೆಲುವು ದಾಖಲಿಸಿದೆ

IPL 2021: ಕೆಕೆಆರ್‌ ವಿರುದ್ದದ ಅರ್‌ಸಿಬಿಗೆ ಹ್ಯಾಟ್ರಿಕ್ ಜಯ

196 ರನ್ ಟಾರ್ಗೆಟ್ ಪಡೆದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಪೃಥ್ವಿ ಶಾ ಹಾಗೂ ಶಿಖರ್ ಧವನ್ ಸ್ಫೋಟಕ ಆರಂಭ ನೀಡಿದರು. ಪೃಥ್ವಿ 17 ಎಸೆತದಲ್ಲಿ 32 ರನ್ ಸಿಡಿಸಿ ಔಟಾದರು. ಆದರೆ ಧವನ್ ಅಬ್ಬರ ಮುಂದುವರಿಯಿತು. ಇನ್ನು ಸ್ಟಿವ್ ಸ್ಮಿತ್ ಕೇವಲ 9 ರನ್ ಸಿಡಿಸಿ ಔಟಾದರು. 

ಅಬ್ಬರಿಸಿದ ಧವನ್ ಹಾಫ್ ಸೆಂಚುರಿ ಸಿಡಿಸಿದರು. ಧವನ್ ಬ್ಯಾಟಿಂಗ್ ಪ್ರದರ್ಶನದಿಂದ ಡೆಲ್ಲಿ ತಂಡದ ಗೆಲುವಿನ ಹಾದಿ ಸುಗಮಗೊಂಡಿತು. ಧವನ್ 49 ಎಸೆತದಲ್ಲಿ 92 ರನ್ ಸಿಡಿಸಿ ಔಟಾದರು. 8 ರನ್‌ಗಳಿಂದ ಧವನ್ ಶತಕ ವಂಚಿತರಾದರು.  

ಧವನ್ ವಿಕೆಟ್ ಪತನದ ಬಳಿಕ ಜವಾಬ್ದಾರಿ ಹೊತ್ತು ಕೊಂಡ ನಾಯಕ ರಿಷಬ್ ಪಂತ್ ಹಾಗೂ ಮಾರ್ಕಸ್ ಸ್ಟೊಯ್ನಿಸ್ ಜೊತೆಯಾಟ ಡೆಲ್ಲಿ ತಂಡದ ಸಂಕಷ್ಟ ದೂರ ಮಾಡಿತು. ಪಂತ್ 15 ರನ್ ಸಿಡಿಸಿ ಔಟಾದರು. ಅಷ್ಟರಲ್ಲೇ ಡೆಲ್ಲಿ ತಂಡದ ಆತಂಕ ಹೆಚ್ಚಾಯಿತು. ಗೆಲುವಿನ ಹಾದಿ ಕಠಿಣಗೊಂಡಿತು. 

ಸ್ಟೊಯ್ನಿಸ್ ಅಜೇಯ 27 ರನ್ ಹಾಗೂ ಲಲಿತ್ ಯಾದವ್ ಅಜೇಯ 12 ರನ್ ಸಿಡಿಸಿದರು. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ 18.2 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡಿತು. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ 6 ವಿಕೆಟ್ ಗೆಲುವು ದಾಖಲಿಸಿತು. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

IND vs SL; ಮೊದಲ ಹೆಜ್ಜೆಯಲ್ಲೇ ಎಡವಿದ್ರಾ ಕ್ಯಾಪ್ಟನ್‌ ? ತಿಲಕ್ ವರ್ಮಾ ಲೆಕ್ಕಾಚಾರ ಉಲ್ಟಾ ಆಗಿದ್ದೇಗೆ?
IND vs SL; ಭಾರತದ ಹೊಸ 'ಸಂಕಟಮೋಚಕ' ಇವರೇ! 10 ವರ್ಷಗಳ ಹಿಂದೆಯೇ ಈ ಪ್ರತಿಭೆ ಗುರುತಿಸಿದ್ದ ಸೌರವ್ ಗಂಗೂಲಿ!