
ಮುಂಬೈ(ಏ.18): ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಮಹತ್ವದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ದಿಟ್ಟ ಹೋರಾಟ ನೀಡಿದೆ. ನಾಯಕ ಕೆಎಲ್ ರಾಹುಲ್ ಹಾಗೂ ಮಯಾಂಗ್ ಅಗರ್ವಾಲ್ ಸಿಡಿಸಿದ ಅರ್ಧಶತಕ, ಅಂತಿಮ ಹಂತದಲ್ಲಿ ದೀಪಕ್ ಹೂಡ ಹೊಡಿ ಬಡಿ ಬ್ಯಾಟಿಂಗ್‌ನಿಂದ ಪಂಜಾಬ್ ಕಿಂಗ್ಸ್, ವಿಕೆಟ್ ನಷ್ಟಕ್ಕೆ ರನ್ ಸಿಡಿಸಿದೆ.
ಐಪಿಎಲ್ ಪಂದ್ಯ, ರೋಚಕ ಸ್ಟೋರಿ, ಸ್ಕೋರ್, ಕ್ಷಣ ಕ್ಷಣದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ:
ಟಾಸ್ ಸೋತು ಬ್ಯಾಟಿಂಗ್ ಇಳಿದ ಪಂಜಾಬ್ ಕಿಂಗ್ಸ್,ಗೆ ಉತ್ತಮ ಆರಂಭ ಪಡೆದಿದೆ. ನಾಯಕ ಕೆಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು. ಇಬ್ಬರು ಕನ್ನಡಿಗರ ಪ್ರದರ್ಶನ ಪಂಜಾಬ್ ಕಿಂಗ್ಸ್ ತಂಡಕ್ಕೆ ನೆರವಾಯಿತು. ಮಯಾಂಕ್ ಅಗರ್ವಾಲ್ 36 ಎಸೆತದಲ್ಲಿ 69 ರನ್ ಸಿಡಿಸಿ ಔಟಾದರು.
IPL 2021: ಕೆಕೆಆರ್ ವಿರುದ್ದದ ಅರ್‌ಸಿಬಿಗೆ ಹ್ಯಾಟ್ರಿಕ್ ಜಯ.
ಕೆಎಲ್ ರಾಹುಲ್ 61 ರನ್ ಕಾಣಿಕೆ ನೀಡಿದರು. ಆದರೆ ಕ್ರಿಸ್ ಗೇಲ್ 11 ರನ್ ಸಿಡಿಸಿ ಔಟಾದರು. ನಿಕೋಲಸ್ ಪೂರನ್ 9 ರನ್ ಸಿಡಿಸಿ ಔಟಾದರು. ಆದರೆ ದೀಪಕ್ ಹೂಡ ಹಾದೂ ಶಾರೂಖ್ ಖಾನ್ ಹೊಡಿ ಬಡಿ ಪಂಜಾಬ್ ತಂಡದ ಸ್ಕೋರ್ ಹೆಚ್ಚಿಸಿತು. ದೀಪಕ್ ಹೂಡ ಅಜೇಯ 22 ರನ್ ಹಾಗೂ ಶಾರೂಖ್ ಖಾನ್ ಅಜೇಯ 15 ರನ್ ಸಿಡಿಸಿದರು.
ಪಂಜಾಬ್ ಬ್ಯಾಟ್ಸ್‌ಮನ್‌ಗಳ ಅಬ್ಬರದಿಂದ 4 ವಿಕೆಟ್ ನಷ್ಟಕ್ಕೆ 195 ರನ್ ಸಿಡಿಸಿತು. ಇದೀಗ ಡೆಲ್ಲಿ ಗೆಲುವಿಗೆ 196 ರನ್ ಟಾರ್ಗೆಟ್ ನೀಡಲಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.