IPL 2021: ಸಂಜು ಸ್ಯಾಮ್ಸನ್ ಅಬ್ಬರ, ಹೈದರಾಬಾದ್‌ಗೆ ಬೃಹತ್ ಟಾರ್ಗೆಟ್!

Published : Sep 27, 2021, 09:15 PM IST
IPL 2021: ಸಂಜು ಸ್ಯಾಮ್ಸನ್ ಅಬ್ಬರ, ಹೈದರಾಬಾದ್‌ಗೆ ಬೃಹತ್ ಟಾರ್ಗೆಟ್!

ಸಾರಾಂಶ

ಸಂಜು ಸ್ಯಾಮ್ಸನ್ ದಿಟ್ಟ ಹೋರಾಟ, ಜೈಸ್ವಾಲ್ ಉತ್ತಮ ಸಾಥ್ ಹೈದರಾಬಾದ್‌ಗೆ 165 ರನ್ ಟಾರ್ಗೆಟ್ ನೀಡಿದ RR ದುಬೈನಲ್ಲಿ ನಡೆಯುತ್ತಿರುವ ಮಹತ್ವದ ಪಂದ್ಯ

ದುಬೈ(ಸೆ.27); ಸಂಜು ಸ್ಯಾಮ್ಸನ್(Sanju Samson) ಹಾಫ್ ಸೆಂಚುರಿ, ಯಶಸ್ವಿ ಜೈಸ್ವಾಲ್ ಸಿಡಿಸಿದ 38 ರನ್ ನೆರವಿನಿಂದ ರಾಜಸ್ಥಾನ ರಾಯಲ್ಸ್(Rajasthan Royals), ಹೈದರಾಬಾದ್(SRH) ತಂಡಕ್ಕೆ 165 ರನ್ ಟಾರ್ಗೆಟ್ ನೀಡಿದೆ. ದುಬೈ(Dubai) ಕ್ರೀಡಾಂಗಣದಲ್ಲಿ ನಡೆಯುತ್ತಿರುವ IPL 2021 ಟೂರ್ನಿಯ 40ನೇ ಲೀಗ್ ಪಂದ್ಯ ಇದೀಗ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

 

IPL 2021: ದಿಟ್ಟ ಹೋರಾಟ ನಡೆಸಿದ ರಾಜಸ್ಥಾನ ರಾಯಲ್ಸ್‌ ನಾಯಕ ಸಂಜು ಸ್ಯಾಮ್ಸನ್‌ಗೀಗ ನಿಷೇಧದ ಭೀತಿ..!

ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ರಾಜಸ್ಥಾನ ರಾಯಲ್ಸ್ ತಂಡದ ಆರಂಭ ಉತ್ತಮವಾಗಿರಲಿಲ್ಲ. ಇವಿನ್ ಲಿವಿಸ್ ಕೇವಲ 6 ರನ್ ಸಿಡಿಸಿ ಔಟಾದರು. 11 ರನ್‌ಗೆ ರಾಜಸ್ಥಾನ ತಂಡದ ಮೊದಲ ವಿಕೆಟ್ ಪತನಗೊಂಡಿತು. ಯಶಸ್ವಿ ಜೈಸ್ವಾಲ್ ಹಾಗೂ ನಾಯಕ ಸಂಜು ಸ್ಯಾಮ್ಸನ್ ಜೊತೆಯಾಟ ರಾಜಸ್ಥಾನ ರಾಯಲ್ಸ್ ತಂಡಕ್ಕೆ ನೆರವಾಯಿತು.

IPL 2021: ಹರ್ಷಲ್ ಪಟೇಲ್‌ಗೆ ಹ್ಯಾಟ್ರಿಕ್ ವಿಕೆಟ್, ಮುಂಬೈ ವಿರುದ್ಧ RCBಗೆ 54 ರನ್ ಗೆಲುವು!

ಜೈಸ್ವಾಲ್ ಹಾಗೂ ಸ್ಯಾಮ್ಸನ್ ಹೋರಾಟ ಹೈದರಾಬಾದ್(Sunrisers Hyderabad) ತಂಡದಲ್ಲಿ ಆತಂಕ ಮೂಡಿಸಿತು. ಆದರೆ ಸಂದೀಪ್ ಶರ್ಮಾ ಅದ್ಭುತ ಬೌಲಿಂಗ್ ಮೂಲಕ ಈ ಜೊತೆಯಾಟಕ್ಕೆ ಬ್ರೇಕ್ ಹಾಕಿದರು. ಜೈಸ್ವಾಲ್ 36 ರನ್ ಸಿಡಿಸಿ ಔಟಾದರು. ಆದರೆ ಸ್ಯಾಮ್ಸನ್ ಹೋರಾಟ ಮುಂದುವರಿಸಿದರು.

ಈ ಕಾರಣದಿಂದ ಅಥಿಯಾ ಶೆಟ್ಟಿ ಮೇಲೆ ಅಸಮಾಧಾನಗೊಂಡಿರುವ ಕೆಎಲ್‌ ರಾಹುಲ್‌!

ಜೈಸ್ವಾಲ್ ವಿಕೆಟ್ ಪತನದ ಬೆನ್ನಲ್ಲೇ ಲಿಯಾಮ್ ಲಿವಿಂಗ್‌ಸ್ಟೋನ್ ವಿಕೆಟ್ ಪತನಗೊಂಡಿತು. ರಶೀದ್ ಖಾನ್ ಸ್ಪಿನ್ ಮೋಡಿಗೆ ಬಲಿಯಾದ ಲಿಯಾಮ್ ಕೇವಲ 4 ರನ್ ಕಾಣಿಕೆ ನೀಡಿದರು. ಮಹಿಪಾಲ್ ಲೊಮ್ರೊರ್ ಜೊತೆ ಇನ್ನಿಂಗ್ಸ್ ಮುಂದುವರಿಸಿದ ಸ್ಯಾಮ್ಸನ್ ರನ್ ವೇಗ ಹೆಚ್ಚಿಸುವ ಪ್ರಯತ್ನ ಮಾಡಿದರು. ಆಕರ್ಷಕ ಅರ್ಧಶತಕ ಸಿಡಿಸಿದರು.

IPL 2021: ಸುಲಭ ಟಾರ್ಗೆಟ್ ಪಡೆದ ಹೈದರಾಬಾದ್‌ಗೆ ಶಾಕ್, ಪಂಜಾಬ್‌ ಕಿಂಗ್ಸ್‌ಗೆ 5 ರನ್ ಗೆಲುವು!

ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್ ರಾಜಸ್ಥಾನ ತಂಡದ ಬೃಹತ್ ಮೊತ್ತವನ್ನು ಖಚಿತಪಡಿಸಿತು.  ಸ್ಯಾಮ್ಸನ್ 57 ಎಸೆತದಲ್ಲಿ 7 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಂದ 82 ರನ್ ಸಿಡಿಸಿದರು. ಅಬ್ಬರದ ಬ್ಯಾಟಿಂಗ್ ಪ್ರದರ್ಶನದಿಂದ ಸಂಜು ಸಾಮ್ಸನ್ ಐಪಿಎಲ್ 2021ರಲ್ಲಿ ಗರಿಷ್ಠ ರನ್ ಸಿಡಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.  

ಲೊಮ್ರೊರ್ ಅಜೇಯ 29 ರನ್ ಸಿಡಿಸಿದರು. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 5 ವಿಕೆಟ್ ನಷ್ಟಕ್ಕೆ 164 ರನ್ ಸಿಡಿಸಿತು. 

IPL 2021 ಚೆಂದಕ್ಕಿಂತ ಚೆಂದ : ಇಲ್ಲಿವೆ ನೋಡಿ ಟಾಪ್‌ 10 CSK ಕ್ರಿಕೆಟಿಗರ ಸುಂದರ ಮಡದಿಯರು..!

ರಾಜಸ್ಥಾನ ರಾಯಲ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಹೋರಾಟ ಹಲವು ಕುತೂಹಲಕ್ಕೆ ಎಡೆಮಾಡಿದೆ. ಈ ಪಂದ್ಯದಲ್ಲಿ ಯಾರು ಗೆಲುವು ಸಾಧಿಸುತ್ತಾರೆ? ಕಾರಣ ಸನ್‌ರೈಸರ್ಸ್ ಹೈದರಾಬಾದ್ ತಂಡ ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸುತ್ತಿದೆ. ಹೀಗಾಗಿ ಈ ಮೊತ್ತವನ್ನು ಹೈದರಾಬಾದ್ ಚೇಸ್ ಮಾಡಲು ಕಠಿಣ ಸವಾಲು ಎದುರಿಸಬೇಕಿದೆ. 

ಆಡಿರುವ 9 ಪಂದ್ಯದಲ್ಲಿ ಗೆದ್ದಿರುವುದು ಕೇವಲ 1 ಪಂದ್ಯ ಮಾತ್ರ. 2 ಅಂಕ ಸಂಪಾದಿಸಿರುವ ಸೈನ್‌ರೈಸರ್ಸ್ ಹೈದರಾಬಾದ್ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.  ಇತ್ತ ರಾಜಸ್ಥಾನ ರಾಯಲ್ಸ್ ತಂಡಕ್ಕೂ ಗೆಲುವು ಅನಿವಾರ್ಯವಾಗಿದೆ. ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿರುವ ರಾಜಸ್ಥಾನ ರಾಯಲ್ಸ್ 8 ಅಂಕ ಸಂಪಾದಿಸಿದೆ. 
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ ಮತ್ತಷ್ಟು ಪಾತಾಳಕ್ಕೆ ಕುಸಿದ ಟೀಂ ಇಂಡಿಯಾ!
ವಿರಾಟ್ ಕೊಹ್ಲಿಯಲ್ಲ, ಈ ಆಟಗಾರ ಹೆಚ್ಚು ಹಾರ್ಡ್‌ ವರ್ಕ್ ಮಾಡುವ ಆಟಗಾರ ಎಂದ ಯಶಸ್ವಿ ಜೈಸ್ವಾಲ್!