ಕೊರೋನಾ ವೈರಸ್ ಹೆಚ್ಚಾದ ಕಾರಣ ದೇಶದಲ್ಲಿ ಆಕ್ಸಿಜನ್ ಕೊರತೆ ತೀವ್ರವಾಗಿ ಕಾಡುತ್ತಿದೆ. ಭಾರತೀಯರ ಸಂಕಷ್ಟಕ್ಕೆ ಆಸ್ಟ್ರೇಲಿಯಾ ಕ್ರಿಕಟಿಗನ ಹೃದಯ ಮಿಡಿದಿದೆ. ಆಕ್ಸಿಜನ್ ಕೊರತೆ ನೀಗಿಸಲು 50,000 ಅಮೇರಿಕನ್ ಡಾಲರ್ ದೇಣಿಗೆಯಾಗಿ ನೀಡಿದ್ದಾರೆ.
ನವದೆಹಲಿ(ಏ.26): ಭಾರತದಲ್ಲಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದೆ. ದೇಶದಲ್ಲಿ ಆಕ್ಸಿಜನ್ ಕೊರತೆಯಿಂದ ಹಲವು ಸೋಂಕಿತರು ಸಾವನ್ನಪ್ಪಿದ್ದಾರೆ. ಆಮ್ಲಜನಕ ಪೂರೈಕೆಗೆ ಸರ್ಕಾರ ಅವಿರತ ಪ್ರಯತ್ನ ಮಾಡುತ್ತಿದೆ. ಆದರೂ ದೇಶದ ಎಲ್ಲಾ ಭಾಗಗಳಿಗೆ ಬೇಡಿಕೆಗೆ ಅನುಗುಣವಾಗಿ ಪೂರೈಕೆಯಾಗಿಲ್ಲ. ಇದರ ನಡುವೆ ಆಸ್ಟ್ರೇಲಿಯಾ ವೇಗಿ, ಕೆಕೆರ್ ತಂಡದ ಸ್ಟಾರ್ ಪ್ಲೇಯರ್ ಪ್ಯಾಟ್ ಕಮಿನ್ಸ್ ಬರೋಬ್ಬರಿ 37 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ.
ಭಾರತದ ಆಕ್ಸಿಜನ್ ಟ್ಯಾಂಕ್ ಕೊರತೆ ನೀಗಿಸಲು ಪಾಕಿಸ್ತಾನ ಜನತೆಗೆ ಅಕ್ತರ್ ವಿಶೇಷ ಮನವಿ!
undefined
ಸದ್ಯ ಐಪಿಎಲ್ ಟೂರ್ನಿಯಲ್ಲಿ ಕೆಕೆಆರ್ ತಂಡದ ಪರ ಆಲ್ರೌಂಡರ್ ಪ್ರದರ್ಶನ ನೀಡುತ್ತಿರುವ ಪ್ಯಾಟ್ ಕಮಿನ್ಸ್, ಭಾರತದಲ್ಲಿ ಆಕ್ಸಿಜನ್ ಖರೀದಿಗಾಗಿ 50,000 ಅಮೆರಿಕನ ಡಾಲರ್ ಮೊತ್ತವನ್ನು ದೇಣಿಯಾಗಿ ನೀಡಿದ್ದಾರೆ. ಇಷ್ಟೇ ಅಲ್ಲ ಐಪಿಎಲ್ ಇತರ ಕ್ರಿಕೆಟಿಗರು ಭಾರತಕ್ಕೆ ನೆರವಾಗಬೇಕು ಎಂದು ಕಮಿನ್ಸ್ ಮನವಿ ಮಾಡಿದ್ದಾರೆ.
ಭಾರತವನ್ನು ನಾನು ಅತೀ ಹೆಚ್ಚು ಪ್ರೀತಿಸುವ ದೇಶ. ಆದರೆ ಸದ್ಯ ಕೊರೋನಾದಿಂದ ಬಳಲುತ್ತಿರುವ ಭಾರತಕ್ಕೆ ನೆರವಿನ ಅಗತ್ಯವಿದೆ. ಆತ್ಮೀಯರು, ಸ್ನೇಹಮಯಿಗಳಾಗಿರುವ ಭಾರತೀಯರಿಗೆ ಈ ರೀತಿಯ ಸಂಕಷ್ಟ ಎದುರಾಗಿರುವುದು ದುಃಖ ತಂದಿದೆ ಎಂದು ಪ್ಯಾಟ್ಸ್ ಕಮಿನ್ಸ್ ಹೇಳಿದ್ದಾರೆ.
ಭಾರತದ ಸಂಕಷ್ಟಕ್ಕೆ ಮಿಡಿದ ಬ್ರೆಟ್ ಲೀ ಹೃದಯ; ಆಕ್ಸಿಜನ್ ಪೂರೈಕೆಗೆ ಲೀ 41 ಲಕ್ಷ ರುಪಾಯಿ ದೇಣಿಗೆ!
ಪಿಎಂ ಕೇರ್ಸ್ ಫಂಡ್‌ಗೆ ದೇಣಿಗೆ ನೀಡುತ್ತಿದ್ದೇನೆ. ಇದು ಕೊರೋನಾದಿಂದ ತತ್ತರಿಸಿರುವ ದೇಶಕ್ಕೆ ನನ್ನ ಅಳಿಲು ಸೇವೆ ಎಂದು ಪ್ಯಾಟ್ ಕಮಿನ್ಸ್ ಪತ್ರದಲ್ಲಿ ಬರೆದಿದ್ದಾರೆ. ಈ ಕುರಿತು ತಮ್ಮ ಟ್ವಿಟರ್ ಖಾತೆಯಲ್ಲಿ ಸಂತಸವನ್ನು ಹಂಚಿಕೊಂಡಿದ್ದಾರೆ.