ಕೆಕೆಆರ್‌ - ಪಂಜಾಬ್ ಕದನ : ಸೋಲು ತಪ್ಪಿಸಿಕೊಳ್ಳುವ ಒತ್ತಡ

Kannadaprabha News   | Asianet News
Published : Apr 26, 2021, 10:07 AM IST
ಕೆಕೆಆರ್‌ - ಪಂಜಾಬ್ ಕದನ :   ಸೋಲು ತಪ್ಪಿಸಿಕೊಳ್ಳುವ ಒತ್ತಡ

ಸಾರಾಂಶ

KKR ಇಂದು ಪಂಜಾಬ್‌ ಕಿಂಗ್ಸ್‌ ವಿರುದ್ಧ ಸೆಣಸಲಿದ್ದು, ಸತತ 5ನೇ ಸೋಲು ತಪ್ಪಿಸಿಕೊಳ್ಳಲು ಹೋರಾಡಲಿದೆ.ಪಂಜಾಬ್‌, ಕಳೆದ ಪಂದ್ಯದಲ್ಲಿ ಜಯದ ಲಯ ಕಂಡುಕೊಂಡಿದ್ದು, ಅದನ್ನು ಮುಂದುವರಿಸಲು ಎದುರು ನೋಡುತ್ತಿದೆ. 

ಅಹಮದಾಬಾದ್‌ (ಏ.26) : ಐಪಿಎಲ್‌ 14ನೇ ಆವೃತ್ತಿಯಲ್ಲಿ ಕೆಕೆಆರ್‌ ತೀರಾ ಕಳಪೆ ಪ್ರದರ್ಶನ ತೋರುತ್ತಿದ್ದು, ಸತತ 4 ಸೋಲು ಕಂಡಿದೆ. ತಂಡ ಸೋಮವಾರ ಪಂಜಾಬ್‌ ಕಿಂಗ್ಸ್‌ ವಿರುದ್ಧ ಸೆಣಸಲಿದ್ದು, ಸತತ 5ನೇ ಸೋಲು ತಪ್ಪಿಸಿಕೊಳ್ಳಲು ಹೋರಾಡಲಿದೆ. ಮತ್ತೊಂದೆಡೆ ಪಂಜಾಬ್‌, ಕಳೆದ ಪಂದ್ಯದಲ್ಲಿ ಜಯದ ಲಯ ಕಂಡುಕೊಂಡಿದ್ದು, ಅದನ್ನು ಮುಂದುವರಿಸಲು ಎದುರು ನೋಡುತ್ತಿದೆ. ಸೋಮವಾರದಿಂದ ಅಹಮದಾಬಾದ್‌ ಚರಣ ಆರಂಭಗೊಳ್ಳಲಿದೆ.

ಒಟ್ಟು ಮುಖಾಮುಖಿ: 27

ಪಂಜಾಬ್‌: 09

ಕೆಕೆಆರ್‌: 18

ಸಂಭವನೀಯ ಆಟಗಾರರ ಪಟ್ಟಿ

ಪಂಜಾಬ್‌: ಮಯಾಂಕ್‌, ರಾಹುಲ್‌(ನಾಯಕ), ಗೇಲ್‌, ಪೂರನ್‌, ಹೂಡಾ, ಶಾರುಖ್‌, ಆ್ಯಲೆನ್‌, ಸಕ್ಸೇನಾ, ಬಿಷ್ಣೋಯ್‌, ಅಶ್‌ರ್‍ದೀಪ್‌, ಶಮಿ.

ಜಡೇಜಾ ದಾಳಿಗೆ ತತ್ತರಿಸಿದ ಕೊಹ್ಲಿ ಸೈನ್ಯ;ಗೆಲುವಿನ ಸರದಾರ RCBಗೆ ಮೊದಲ ಸೋಲು! .

ಕೆಕೆಆರ್‌: ಗಿಲ್‌, ನಿತೀಶ್‌ ರಾಣಾ, ತ್ರಿಪಾಠಿ, ಮೊರ್ಗನ್‌(ನಾಯಕ), ಕಾರ್ತಿಕ್‌, ರಸೆಲ್‌, ನರೈನ್‌, ಕಮಿನ್ಸ್‌, ಶಿವಂ ಮಾವಿ, ಪ್ರಸಿದ್‌್ಧ, ವರುಣ್‌.

ಸ್ಥಳ: ಅಹಮದಾಬಾದ್‌, ಪಂದ್ಯ ಆರಂಭ: ಸಂಜೆ 7.30ಕ್ಕೆ, ನೇರ ಪ್ರಸಾರ: ಸ್ಟಾರ್‌ ಸ್ಪೋಟ್ಸ್‌ರ್‍

ಪಿಚ್‌ ರಿಪೋರ್ಟ್‌ :  ಮೋದಿ ಕ್ರೀಡಾಂಗಣದಲ್ಲಿ ಹಲವು ಪಿಚ್‌ಗಳಿದ್ದು, ಕೆಂಪು ಮಣ್ಣಿನ ಪಿಚ್‌ಗಳು ಸ್ಪಿನ್‌ ಸ್ನೇಹಿಯಾಗಿದ್ದರೆ, ಕಪ್ಪು ಮಣ್ಣಿನ ಪಿಚ್‌ಗಳು ವೇಗಿಗಳಿಗೆ ನೆರವು ನೀಡಲಿದೆ. ಎಲ್ಲಾ ಪಿಚ್‌ಗಳು ಸ್ಪರ್ಧಾತ್ಮಕ ಪಿಚ್‌ಗಳಾಗಿದ್ದು, ಉತ್ತಮ ಪೈಪೋಟಿ ನಿರೀಕ್ಷಿಸಬಹುದು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಕಷ್ಟ ನಿವಾರಣೆಗೆ ಸಿಂಹಾಚಲಂ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ವಿರಾಟ್ ಕೊಹ್ಲಿ
ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಗೆ ವೆಂಕಟೇಶ್ ಪ್ರಸಾದ್ ಅಧ್ಯಕ್ಷ, ಚುನಾವಣಾ ಫಲಿತಾಂಶ ಪ್ರಕಟ