2021ರ IPLಗಾಗಿ ಚೆನ್ನೈನಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ಕೊನೆಗೊಂಡಿದೆ. ಎಂಟು ಫ್ರಾಂಚೈಸಿಗಳು ಸಕ್ರಿಯವಾಗಿ ಭಾಗವಹಿಸಿ, ತೀವ್ರ ಪೈಪೋಟಿಯೊಡ್ಡಿ ಆಟಗಾರರನ್ನು ಖರೀದಿಸಿದ್ದಾರೆ. ಇನ್ನು ಹರಾಜು ಪ್ರಕ್ರಿಯೆಯಲ್ಲಿ ಐಪಿಎಲ್ ಇತಿಹಾಸದಲ್ಲೇ ಅತೀ ಹೆಚ್ಚು ಮೊತ್ತಕ್ಕೆ ಹರಾಜಾಗುವ ಮೂಲಕ ಕ್ರಿಸ್ ಮೊರಿಸ್ ಹೊಸ ದಾಖಲೆ ಬರೆದಿದ್ದಾರೆ. ಇವರು ಬರೋಬ್ಬರಿ 16.25 ಕೋಟಿ ರೂಪಾಯಿ ರಾಜಸ್ಥಾನ್ ರಾಯಲ್ಸ್ ಖರೀದಿಸಿದೆ. ದುಬಾರಿ ಮೊತ್ತಕ್ಕೆ ಸೇಲಾದವರಲ್ಲಿ ಜೇಯ್ ರಿಚ್ಚರ್ಡ್‌ಸನ್ ಎರಡನೇ ಸ್ಥಾನದಲ್ಲಿದ್ದಾರೆ. ಕನ್ನಡಿಗ ಗೌತಮ್ ಕೂಡಾ 9.25 ಕೋಟಿ ಮೊತ್ತಕ್ಕೆ ಸಿಎಸ್‌ಕೆ ಪಡೆ ಸೇರ್ಪಡೆಗೊಂಡಿದ್ದಾರೆ. ಇನ್ನು ಹರ್ಭಜನ್ ಸಿಂಗ್ ಮೊದಲ ಸುತ್ತಿನಲ್ಲಿ ಅನ್‌ಸೋಲ್ಡ್ ಆಗಿದ್ದರೂ, ಎರಡನೇ ಸುತ್ತಿನಲ್ಲಿ 2 ಕೋಟಿ ಮೊತ್ತಕ್ಕೆ ಕೆಕೆಆರ್ ಸೇರ್ಪಡೆಗೊಂಡಿದ್ದಾರೆ. ಇಷ್ಟೇ ಅಲ್ಲದೇ ನಿಮ್ಮಿಷ್ಟದ ಆಟಗಾರ ಯಾವ ತಂಡ ಸೇರಿದ್ದಾರೆ? ಎಲ್ಲಾ ವಿವರ ಇಲ್ಲಿದೆ ನೋಡಿ.

08:40 PM (IST) Feb 18
ಶಾರುಖ್ ಖಾನ್ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಸೇರಿಕೊಂಡಿದ್ದಾರೆ. ಗೊಂದಲಕ್ಕೀಡಾಗಬೇಡಿ. ಇದು ಕೆಕೆಆರ್ ಮಾಲೀಕ, ಬಾಲಿವುಡ್ ನಟ ಶಾರುಖ್ ಖಾನ್ ಅಲ್ಲ. ಇದು ಯುವ ಕ್ರಿಕೆಟಿಗ ಶಾರುಖ್ ಖಾನ್. ಈ ಕ್ರಿಕೆಟಿಗರ ಖರೀದಿಗೆ ಪಂಜಾಬ್ ಕಿಂಗ್ಸ್ ಜಿದ್ದಿಗೆ ಬಿದ್ದಿತ್ತು.
ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಪಂಜಾಬ್ ಕಿಂಗ್ಸ್ ತಂಡಕ್ಕೆ ಶಾರುಖ್ ಖಾನ್ ಸೇರ್ಪಡೆ; ಕುಣಿದು ಕುಪ್ಪಳಿಸಿದ ಪ್ರೀತಿ ಜಿಂಟಾ!
08:39 PM (IST) Feb 18
14ನೇ ಆವೃತ್ತಿಯ ಐಪಿಎಲ್ ಆಟಗಾರರ ಹರಾಜಿನಲ್ಲಿ ಆಸ್ಟ್ರೇಲಿಯಾದ ಸ್ಟಾರ್ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ನಿರೀಕ್ಷೆಯಂತೆಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಲಾಗಿದ್ದಾರೆ. ಚೆನ್ನೈನಲ್ಲಿ ನಡೆದ ಆಟಗಾರರ ಹರಾಜಿನಲ್ಲಿ ಬೆಂಗಳೂರು ಮೂಲದ ಫ್ರಾಂಚೈಸಿ ಬರೋಬ್ಬರಿ 14.25 ಕೋಟಿ ರುಪಾಯಿ ನೀಡಿ ಮ್ಯಾಕ್ಸ್‌ವೆಲ್‌ರನ್ನು ಖರೀದಿಸಿದೆ
ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಆರ್‌ಸಿಬಿಗೆ ಬ್ರಹ್ಮಾಸ್ತ್ರ ಎಂಟ್ರಿ; ಮ್ಯಾಕ್ಸಿ ಸೇರ್ಪಡೆಗೆ ಜೈ ಹೋ ಎಂದ ಫ್ಯಾನ್ಸ್..!
08:38 PM (IST) Feb 18
ಐಪಿಎಲ್ ಹರಾಜಿನಲ್ಲಿನ 8 ಫ್ರಾಂಚೈಸಿಗಳು ಪ್ರಮುಖ ಆಟಗಾರರನ್ನು ಖರೀದಿಸಿದೆ. ಆರಂಭದಲ್ಲೇ ಸೇಲಾಗದೆ ಉಳಿದಿದ್ದ ಆಟಗಾರರು ಇದೀಗ ಬಿಕರಿಯಾಗಿದ್ದಾರೆ. ಕರ್ನಾಟಕ ಕ್ರಿಕೆಟಿಗ ಕರುಣ್ ನಾಯರ್ ಆರಂಭದಲ್ಲಿ ಅನ್‌ಸೋಲ್ಡ್ ಆಗಿದ್ದರು. ಆದರೆ ಅಂತಿಮ ಹಂತದಲ್ಲಿ ಕೆಕೆಆರ್ ತಂಡ ಕರುಣ್ ನಾಯರ್ ಅವರನ್ನು ಖರೀದಿಸಿದೆ.
ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಅನ್‌ಸೋಲ್ಡ್ ಆಗಿದ್ದ ಹರ್ಭಜನ್, ಕರುಣ್ ನಾಯರ್ ಸೇಲ್!
08:17 PM (IST) Feb 18
20 ಲಕ್ಷಕ್ಕೆ ಹರಾಜಾದ ಅರ್ಜುನ್ ತೆಂಡೂಲ್ಕರ್
08:16 PM (IST) Feb 18
ರಾಜಾಸ್ತಾನ್ ಪಡೆಗೆ ಆಕಾಶ್ ಸಿಂಗ್!
08:13 PM (IST) Feb 18
20 ಲಕ್ಷಕ್ಕೆ ವೆಂಕಟೇಶ್ ಅಯ್ಯರ್ ಖರೀದಿಸಿದ ಕೆಕೆಆರ್
ಪವನ್ ನೇಗಿ ಕೂಡಾ 20 ಲಕ್ಷಕ್ಕೆ ಕೆಕೆಆರ್ ಪಾಲು
08:01 PM (IST) Feb 18
ಬೆನ್ ಕಟ್ಟಿಂಗ್ ಖರೀದಿಸಿದ ಕೆಕೆಆರ್
75 ಲಕ್ಷ ಮೊತ್ತಕ್ಕೆ ಹರಾಜಾದ ಬೆನ್ ಕಟ್ಟಿಂಗ್
08:00 PM (IST) Feb 18
50 ಲಕ್ಷ ಮೊತ್ತಕ್ಕೆ ಹರಾಜಾದ ಕರುಣ್ ನಾಯರ್
ಕೆಕೆಆರ್ ಪರ ಆಡಲಿದ್ದಾರೆ ಕರುಣ್ ನಾಯರ್
07:59 PM (IST) Feb 18
1.50 ಕೋಟಿ ಮೊತ್ತಕ್ಕೆ ರಹಮಾನ್ ಹರಾಜು
ಸನ್‌ರೈಸರ್ಸ್ ಪಡೆ ಸೇರ್ಪಡೆಯಾದ ರಹಮಾನ್
07:57 PM (IST) Feb 18
20 ಲಕ್ಷ ಮೊತ್ತಕ್ಕೆ ಹರಿ ನಿಶಾಂತ್ ಖರೀದಿಸಿದ ಸಿಎಸ್‌ಕೆ
07:55 PM (IST) Feb 18
ಎರಡನೇ ಸುತ್ತಿನ್ಲಲಿ ಹರ್ಭಜನ್ ಸಿಂಗ್ ಹರಾಜು!
2 ಕೊಟಿ ಮೊತ್ತಕ್ಕೆ ಹರ್ಭಜನ್ ಸಿಂಗ್ ಖರೀದಿಸಿದ
07:54 PM (IST) Feb 18
2 ಕೋಟಿ ಮೊತ್ತಕ್ಕೆ ಸ್ಯಾಮ್ ಖರೀದಿಸಿದ ಡೆಲ್ಲಿ ಕ್ಯಾಪಿಟಲ್ಸ್
ಡೆಲ್ಲಿಗೆ ಹಾರಿದ ಸ್ಯಾಮ್
07:53 PM (IST) Feb 18
2 ಕೋಟಿ ಮೊತ್ತ ನೀಡಿ ಕೇದಾರ್ ಖರೀದಿಸಿದ ಸನ್ ರೈಸರ್ಸ್
ಎರಡನೇ ಸುತ್ತಿನಲ್ಲಿ ಕೇದಾರ್ ಸೋಲ್ಡ್
07:50 PM (IST) Feb 18
ಭಗತ್ ಖರೀದಿಸಿದ ಚೆನ್ನೈ ಸೂಪರ್ ಕಿಂಗ್ಸ್
20 ಲಕ್ಷ ರೂಪಾಯಿಗೆ ಭಗತ್ ವರ್ಮಾ ಖರೀದಿಸಿದ ಸಿಎಸ್‌ಕೆ
07:49 PM (IST) Feb 18
20 ಲಕ್ಷ ಮೊತ್ತಕ್ಕೆ ಸೌರಭ್ ಕುಮಾರ್ ಖರೀದಿಸಿದ ಪಂಜಾಬ್ ಕಿಂಗ್ಸ್
07:48 PM (IST) Feb 18
ಮಾರ್ಕೋ ಜಾನ್ಸೆನ್ ಖರೀದಿಸಿದ ಮುಂಬೈ ಇಂಡಿಯನ್ಸ್
20 ಲಕ್ಷ ಮೊತ್ತಕ್ಕೆ ಮಾರ್ಕೋ ಜಾನ್ಸೆನ್ ಖರೀದಿಸಿದ ಮುಂಬೈ ಇಂಡಿಯನ್ಸ್
07:46 PM (IST) Feb 18
ಮುಂಬೈ ಪಡೆಗೆ ಯದುವೀರ್
20 ಲಕ್ಷ ಮೊತ್ತಕ್ಕೆ ಮುಂಬೈ ಇಂಡಿಯನ್ಸ್ ಪಾಲಾದ ಯದುವೀರ್ ಚಾರಕ್
07:44 PM (IST) Feb 18
50 ಲಕ್ಷ ಮೊತ್ತಕ್ಕೆ ಹರಾಜಾದ ಜೇಮ್ಸ್ ನೀಶಂ
ಮುಂಬೈ ಇಂಡಿಯನ್ಸ್ ಪಡೆ ಸೇರಿಕೊಂಡ ಜೇಮ್ಸ್
07:43 PM (IST) Feb 18
20 ಲಕ್ಷ ಮೊತ್ತಕ್ಕೆ ಕುಲ್ದೀಪ್ ಯಾದವ್ ಖರೀದಿಸಿದ ರಾಜಸ್ಥಾನ್ ರಾಯಲ್ಸ್
07:42 PM (IST) Feb 18
ಎಂ ಹರಿಶಂಕರ್ ರೆಡ್ಡಿ ಸಿಎಸ್‌ಕೆ ಪಡೆಗೆ
20 ಲಕ್ಷಕ್ಕೆ ರೆಡ್ಡಿ ಖರೀದಿಸಿದ ಚೆಬ್ಬೈ ಸೂಪರ್ ಕಿಂಗ್ಸ್
07:39 PM (IST) Feb 18
ಸುಯಾಶ್ ಪ್ರಭುದೇಸಾಯಿ ಹಾಗೂ ಕೆ. ಎಸ್ ಭರತ್ ಆರ್‌ಸಿಬಿಗೆ
ತಲಾ 20 ಲಕ್ಷಕ್ಕೆ ಇಬ್ಬರು ಆಟಗಾರರನ್ನು ಖರೀದಿಸಿದ ಆರ್‌ಸಿಬಿ
07:34 PM (IST) Feb 18
75 ಲಕ್ಷ ಮೊತ್ತಕ್ಕೆ ಲಿಯಾಂ ಲಿವವಿಂಗ್‌ಸ್ಟೋನ್ ಖರೀದಿಸಿದ ರಾಜಸ್ಥಾನ್ ರಾಯಲ್ಸ್
07:30 PM (IST) Feb 18
ಮೂಲ ಬೆಲೆ 75 ಲಕ್ಷ ಹೊಂದಿರುವ ಡೇನಿಯಲ್
ಡೇನಿಯಲ್ ಖರೀದಿಸಲು ಆರ್‌ಸಿಬಿ, ಕೆಕೆಆರ್ ಫೈಟ್
4.80 ಕೋಟಿಗೆ ಡೇನಿಯಲ್ ಖರೀದಿಸಿದ ಆರ್‌ಸಿಬಿ
07:29 PM (IST) Feb 18
75 ಲಕ್ಷ ಮೊತ್ತಕ್ಕೆ ಪಂಜಾಬ್ ಪಾಲಾದ ಫಬಿಯನ್ ಆಲನ್
ಆರಂಭದಲ್ಲೇ ಪಂಜಾಬ್ ಪಾಲಾದ ಆಲನ್
07:27 PM (IST) Feb 18
ವೈಭವ್ ಅರೋರಾ ಖರೀದಿಸಿದ ಕೆಕೆಆರ್
20 ಲಕ್ಷ ಮೊತ್ತಕ್ಕೆ ವೈಭವ್ ಖರೀದಿಸಿದ ಕೆಕೆಆರ್
07:26 PM (IST) Feb 18
ಮೂಲ ಬೆಲೆ 20 ಲಕ್ಷ ಹೊಂದಿದ್ದ ಉತ್ಕರ್ಷ್ ಸಿಂಗ್ ಪಂಜಾಬ್ ಪಾಲು
20 ಲಕ್ಷಕ್ಕೆ ಪಂಜಾಬ್ ಪಾಲಾದ ಆಲ್ ರೌಂಡರ್ ಉತ್ಕರ್ಷ್!
07:24 PM (IST) Feb 18
30 ಲಕ್ಷ ಮೊತ್ತಕ್ಕೆ ಸೇಲ್ ಆದ ಜಲಜ್ ಸಕ್ಸೇನಾ
ಜಲಜ್ ಸಕ್ಸೇನಾ ಖರೀದಿಸಿದ ಪಂಜಾಬ್ ಕಿಂಗ್ಸ್
06:32 PM (IST) Feb 18
ಐಪಿಎಲ್ ಟೂರ್ನಿಯ ಹರಾಜು ಕುತೂಹಲ ಹೆಚ್ಚಿಸಿದೆ. ಕಳೆದ ಬಾರಿ ಐಪಿಎಲ್ ಟೂರ್ನಿಯಿಂದ ಹಿಂದೆ ಸರಿದ ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ಖರೀದಿಸಲು ಈ ಬಾರಿ ಯಾರೂ ಆಸಕ್ತಿ ತೋರಲಿಲ್ಲ. ಆದರೆ ಅನ್‌ಸೋಲ್ಡ್ ಆಟಗಾರರಿಗೆ ಮತ್ತೊಂದು ಅವಕಾಶವಿದ್ದು, ಅದೃಷ್ಠ ಖುಲಾಯಿಸುತ್ತಾ ಅನ್ನೋ ಕುತೂಹಲ ಮನೆ ಮಾಡಿದೆ.
ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಹರ್ಭಜನ್ ಸಿಂಗ್ ಈ ಬಾರಿ ಅನ್‌ಸೋಲ್ಡ್
06:28 PM (IST) Feb 18
ಮೊದಲ ಹಂತದ ಆಟಗಾರರ ಐಪಿಎಲ್ ಆಟಗಾರರ ಹರಾಜು ಮುಕ್ತಾಯ
06:23 PM (IST) Feb 18
ಮೊಯ್ಸೆಸ್ ಹೆನ್ಸಿಕ್ಸ್ ಖರೀದಿಸಲು ಆರ್‌ಸಿಬಿ, ಪಂಜಾಬ್ ನಡುವೆ ತೀವ್ರ ಪೈಪೋಟಿ
4.20 ಕೋಟಿಗೆ ಹೆನ್ರಿಕ್ಸ್ ಖರೀದಿಸಿದ ಪಂಜಾಬ್ ಕಿಂಗ್ಸ್
06:17 PM (IST) Feb 18
1 ಕೋಟಿ ರುಪಾಯಿ ಮೂಲ ಬೆಲೆ ಹೊಂದಿದ್ದ ಮಾರ್ನಸ್ ಲಬುಶೇನ್ ಅನ್‌ಸೋಲ್ಡ್
06:17 PM (IST) Feb 18
1.50 ಕೋಟಿ ರುಪಾಯಿ ಮೂಲ ಬೆಲೆ ಹೊಂದಿದ್ದ ಇಂಗ್ಲೆಂಡ್ ಆಲ್ರೌಂಡರ್ ಟಾಮ್ ಕರ್ರನ್‌ರನ್ನು ಖರೀದಿಸಲು ಡೆಲ್ಲಿ ಹಾಗೂ ಹೈದ್ರಾಬಾದ್ ಫ್ರಾಂಚೈಸಿಗಳ ನಡುವೆ ಪೈಪೋಟಿ
ಕಳೆದ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ಪ್ರತಿನಿಧಿಸಿದ್ದ ಟಾಮ್ ಕರ್ರನ್ 5.25 ಕೋಟಿ ರುಪಾಯಿಗೆ ಡೆಲ್ಲಿ ಪಾಲು
06:14 PM (IST) Feb 18
ಜಿದ್ದಾಜಿದ್ದಿನ ಫೈಟ್ ಬಳಿಕ ಕೊನೆಗೂ ಕೈಲ್ ಜಾಮಿಸನ್ ಖರೀದಿಸುವಲ್ಲಿ ಆರ್‌ಸಿಬಿ ಯಶಸ್ವಿಯಾಗಿದೆ.
15 ಕೋಟಿ ಮೊತ್ತಕ್ಕೆ ಜಾಮಿಸನ್ ಖರೀದಿಸಿದ ಆರ್‌ಸಿಬಿ
75 ಲಕ್ಷ ರುಪಾಯಿ ಮೂಲ ಬೆಲೆ ಹೊಂದಿದ್ದ ನ್ಯೂಜಿಲೆಂಡ್ ವೇಗಿ ಕೈಲ್ ಜಾಮಿಸನ್
06:08 PM (IST) Feb 18
ನ್ಯೂಜಿಲೆಂಡ್ ವೇಗಿ ಕೈಲ್ ಜಾಮಿಸನ್ ಖರೀದಿಸಲು ಆರ್‌ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಜಿದ್ದಾಜಿದ್ದಿ ಪೈಟ್
06:04 PM (IST) Feb 18
50 ಲಕ್ಷ ರುಪಾಯಿ ಮೂಲ ಬೆಲೆ ಹೊಂದಿದ್ದ ಚೇತೇಶ್ವರ್ ಪೂಜಾರರನ್ನು ಖರೀದಿಸಿದ ಚೆನ್ನೈ ಸೂಪರ್ ಕಿಂಗ್ಸ್
2014ರ ಬಳಿಕ ಐಪಿಎಲ್‌ಗೆ ತಂಡ ಕೂಡಿಕೊಂಡ ಟೀಂ ಇಂಡಿಯಾ ಟೆಸ್ಟ್ ಸ್ಪೆಷಲಿಸ್ಟ್ ಪೂಜಾರ
05:43 PM (IST) Feb 18
ರಾಜಸ್ಥಾನ್ ಪಾಲಾದ ಕರಿಯಪ್ಪ
20 ಲಕ್ಷ ಮೊತ್ತಕ್ಕೆ ರಾಜಸ್ಥಾನ ತಂಡ ಸೇರ್ಪಡೆಗೊಂಡ ಕರಿಯಪ್ಪ
05:42 PM (IST) Feb 18
ಸುಚಿತ್ ಖರೀದಿಸಿದ ಸನ್ ರೈಸರ್ಸ್
30 ಲಕ್ಷ ರೂಪಾಯಿ ಮೊತ್ತಕ್ಕೆ ಸುಚಿತ್ ಸನ್ ರೈಸರ್ಸ್ ಪಾಲು
ಕರ್ನಾಟಕದ ಪ್ರತಿಭಾನ್ವಿತ ಸ್ಪಿನ್ನರ್ ಜೆ ಸುಚಿತ್
05:41 PM (IST) Feb 18
20 ಲಕ್ಷ ರೂಪಾಯಿ ಮೊತ್ತಕ್ಕೆ ಡಎಂ ಸಿದ್ಧಾರ್ಥ್ ಖರೀದಿಸಿದ ಡೆಲ್ಲಿ ಕ್ಯಾಪಿಟಲ್ಸ್
05:38 PM (IST) Feb 18
ರಿಲೇ ಮ್ಯಾಡ್ರಿತ್ 8 ಕೋಟಿ ರುಪಾಯಿಗೆ ಪಂಜಾಬ್ ಕಿಂಗ್ಸ್ ಪಾಲು
05:37 PM (IST) Feb 18