
ದುಬೈ(ಅ.03): IPL 2021 ಟೂರ್ನಿ 49ನೇ ಲೀಗ್ ಹೋರಾಟ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಟಾಸ್(Toss) ಗೆದ್ದಿರುವ ಸನ್‌ರೈಸರ್ಸ್ ಹೈದರಾಬಾದ್(sunrisers hyderabad) ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ದುಬೈ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯ ಕೆಕೆಆರ್ ಪಾಲಿಗೆ ಮಹತ್ವದ್ದಾಗಿದೆ.
ಪ್ಲೇ ಆಫ್ ಪ್ರವೇಶಕ್ಕೆ ಹೊಂಚು ಹಾಕಿರುವ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ಇಂದಿನ ಪಂದ್ಯದ ಗೆಲುವು ಅತೀ ಮುಖ್ಯವಾಗಿದೆ. ಈಗಾಗಲೇ ಪ್ಲೇ ಆಫ್(playoffs) ರೇಸ್‌ನಿಂದ ಹೊರಬಿದ್ದಿರುವ ಸನ್‌ರೈಸರ್ಸ್ ಹೈದರಾಬಾದ್(sunrisers hyderabad) ತಂಡಕ್ಕೆ ಸೋಲಿನ ಅಂತರ ಕಡಿಮೆ ಮಾಡಿಕೊಳ್ಳುವ ತವಕ. ಹೀಗಾಗಿ ಜಿದ್ದಾಜಿದ್ದಿನ ಹೋರಾಟ ಏರ್ಪಡಲಿದೆ.
IPL 2021 ಕ್ರಿಸ್ ಗೇಲ್‌ರನ್ನು ಪಂಜಾಬ್ ಕಿಂಗ್ಸ್ ಸರಿಯಾಗಿ ನಡೆಸಿಕೊಳ್ಳಲಿಲ್ಲ: ಪೀಟರ್‌ಸನ್
ಕೆಕೆಆರ್(KKR) ಹಾಗೂ ಹೈದರಾಬಾದ್ ನಡುವಿನ ಪಂದ್ಯಕ್ಕೆ ಬಳಸುವ ದುಬೈ(Dubai) ಪಿಚ್ ಸಣ್ಣ ಹುಲ್ಲಿನಿಂದ ಕವರ್ ಆಗಿದೆ. ಹೀಗಾಗಿ ವೇಗಿಗಳಿಗೆ ಹೆಚ್ಚು ನೆರವು ನೀಡಲಿದೆ. ಬ್ಯಾಟ್ಸ್‌ಮನ್‌ಗಳಿಗೆ ಅಗ್ರೆಸ್ಸೀವ್ ಜೊತೆಗೆ ತಾಳ್ಮೆಯೂ ಮುಖ್ಯಮವಾಗಿದೆ. ಎರಡು ತಂಡದಲ್ಲಿ ಮಿಸ್ಟ್ರಿ ಸ್ಪಿನ್ನರ್ ಬಲ ಹೆಚ್ಚಾಗಿದೆ. ಹೈದರಾಬಾದ್ ತಂಡದಲ್ಲಿ ರಶೀದ್ ಖಾನ್ ಮೋಡಿ ಮಾಡಲಿದ್ದಾರೆ. ಇತ್ತ ಕೆಕೆಆರ್ ತಂಡಕ್ಕೆ ವರುಣ್ ಚಕ್ರವರ್ತಿ ಹಾಗೂ ಸುನಿಲ್ ನರೈನ್ ನೆರವು ಇದೆ.
ಕೋಲ್ಕತಾ ನೈಟ್ ರೈಡರ್ಸ್ ಅಂಕಪಟ್ಟಿಯಲ್ಲಿ(Points Table) 4ನೇ ಸ್ಥಾನದಲ್ಲಿದೆ. ಆಡಿದ 12 ಪಂದ್ಯದಲ್ಲಿ 5 ಗೆಲುವು ಹಾಗೂ 7 ಸೋಲು ಕಂಡಿದೆ. ಈ ಮೂಲಕ 10 ಅಂಕ ಸಂಪಾದಿಸಿದೆ. ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡ ಕೇವಲ 2 ಗೆಲುವು ಕಂಡಿದೆ.
IPL 2021:ರುತುರಾಜ್ ಸೆಂಚುರಿ, ಚೆನ್ನೈ ಹೋರಾಟ ವ್ಯರ್ಥ; ಧೋನಿ ಸೈನ್ಯ ಮಣಿಸಿದ ರಾಜಸ್ಥಾನ!
ಅಂಕಿ ಅಂಶ ಕೂಡ ಕೋಲ್ಕತಾ ನೈಟ್ ರೈಡರ್ಸ್ ಪರವಾಗಿದೆ. ಕೆಕೆಆರ್ ಹಾಗೂ ಹೈದರಾಬಾದ್ ಮುಖಾಮುಖಿಯಲ್ಲಿ ಕೋಲ್ಕತಾ ಮೇಲುಗೈ ಸಾಧಿಸಿದೆ. ಕೆಕೆಆರ್ 13 ಗೆಲುವು ಕಂಡಿದ್ದರೆ, ಹೈದರಾಬಾದ್ 7 ಗೆಲುವು ಕಂಡಿದೆ. ಅಂತಿಮವಾಗಿ ಚೆನ್ನೈನಲ್ಲಿ ಈ ತಂಡಗಳು ಮುಖಾಮುಖಿಯಾಗಿತ್ತು. 2021ರ ಮೊದಲಾರ್ಧದಲ್ಲಿ ನಡೆದ ಈ ಪಂದ್ಯದಲ್ಲಿ ಕೆಕೆಆರ್ 10 ರನ್ ಗೆಲುವು ಕಂಡಿತ್ತು.
KKR ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಐಪಿಎಲ್ ಟೂರ್ನಿಯಲ್ಲಿ 4,000 ರನ್ ಪೂರೈಸಲು ಕೇವಲ ನಾಲ್ಕು ರನ್ ಅವಶ್ಯಕತೆ ಇದೆ. ಇಂದಿನ ಪಂದ್ಯದಲ್ಲಿ ಕಾರ್ತಿಕ್ ಈ ಸಾಧನೆ ಮಾಡುವ ಎಲ್ಲಾ ಸಾಧ್ಯತೆಗಳಿವೆ. ಯುಎಇನಲ್ಲಿ ಹೈದರಾಬಾದ್ ವಿರುದ್ಧ ಕೋಲ್ಕತಾ ನೈಟ್ ರೈಡರ್ಸ್ ಆಡಿದ 2 ಪಂದ್ಯದಲ್ಲಿ ಗೆಲುವು ಸಾಧಿಸಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.