IPL 2021: ಕೋಲ್ಕತಾ ವಿರುದ್ಧ ಅಲ್ಪಮೊತ್ತಕ್ಕೆ ಕುಸಿದ ಹೈದರಾಬಾದ್, 116 ರನ್ ಟಾರ್ಗೆಟ್!

By Suvarna NewsFirst Published Oct 3, 2021, 9:08 PM IST
Highlights
  • KKR ವಿರುದ್ಧ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಹೈದರಾಬಾದ್
  • ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ಸುಲಭ ಗುರಿ ನೀಡಿದ SRH
  • ಗೆಲುವಿನ ವಿಶ್ವಾಸದಲ್ಲಿ ಕೋಲ್ಕತಾ ನೈಟ್ ರೈಡರ್ಸ್

ದುಬೈ(ಅ.03): ಸತತ ಸೋಲುಗಳಿಂದ ಕಂಗೆಟ್ಟಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡದ ಆತ್ಮವಿಶ್ವಾಸ ಕುಗ್ಗಿ ಹೋಗಿದೆ. ಇದೀಗ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧವೂ ಬ್ಯಾಟಿಂಗ್ ವೈಫಲ್ಯ ಅನುಭವಿಸಿದೆ. ಪ್ಲೇ ಆಫ್ ರೇಸ್‌ನಿಂದ ಹೊರಬಿದ್ದಿರುವ ಹೈದರಾಬಾದ್ 8 ವಿಕೆಟ್ ನಷ್ಟಕ್ಕೆ 115 ರನ್ ಸಿಡಿಸಿದೆ. ಈ ಮೂಲಕ ಕೆಕೆಆರ್‌ಗೆ 116 ರನ್ ಟಾರ್ಗೆಟ್ ನೀಡಿದೆ.

IPL 2021: ಪಂಜಾಬ್‌ ಮಣಿಸಿ ಪ್ಲೇ ಆಫ್‌ಗೆ ಲಗ್ಗೆಯಿಟ್ಟ ನಮ್ಮ ಆರ್‌ಸಿಬಿ

ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಟಾಸ್ ಗೆದ್ದ ಖುಷಿ ಮಾತ್ರ ಉಳಿಯಿತು. ಬ್ಯಾಟಿಂಗ್‌ನಲ್ಲಿ ಯಾವುದೇ ಸಂತಸ ಘಳಿಗೆ ಇರಲಿಲ್ಲ. ಪಂದ್ಯದ ಆರಂಭದಲ್ಲೇ ವೃದ್ಧಿಮಾನ್ ಸಾಹ ಡಕೌಟ್ ಆದರು. ಇತ್ತ ಮತ್ತೊರ್ವ ಆರಂಭಿಕ ಜೇಸನ್ ರಾಯ್ 10 ರನ್ ಸಿಡಿಸಿ ಔಟಾದರು. 16 ರನ್‌ ಗಳಿಸುವಷ್ಟರಲ್ಲಿ ಹೈದರಾಬಾದ್ 2 ವಿಕೆಟ್ ಕಳೆದುಕೊಂಡಿತು.

ನಾಯಕ ಕೇನ್ ವಿಲಿಯಮ್ಸನ್ ಹಾಗೂ ಪ್ರಿಯಂ ಗರ್ಗ್ ಹೋರಾಟ ನೀಡಿದರು. ಆದರೆ ಈ ಹೋರಾಟ ಹೆಚ್ಚು ಹೊತ್ತು ಇರಲಿಲ್ಲ. ಕೇನ್ ವಿಲಿಯಮ್ಸನ್ 26 ರನ್ ಸಿಡಿಸಿ ಔಟಾದರು. ಇದರ ಬೆನ್ನಲ್ಲೇ ಅಭಿಶೇಕ್ ಶರ್ಮಾ ವಿಕೆಟ್ ಪತನಗೊಂಡಿತು. ಶರ್ಮಾ ಕೇವಲ 6 ರನ್ ಸಿಡಿಸಿ ಔಟಾದರು.  51 ರನ್‌ಗೆ 4 ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತು.

 

ICYMI: Bull's eye 🎯 's fielding brilliance 👌 👌

The all-rounder pulled off a stunning run-out to dismiss Kane Williamson 👏 👏

Watch it here 🎥 👇https://t.co/zAdAdLybah

— IndianPremierLeague (@IPL)

IPL 2021: RCB vs PBKS ಇದು ನಿಮ್ಮ ಪ್ರಕಾರ out/Not out?

ಪ್ರಿಯಂ ಗರ್ಗ್ 21 ರನ್ ಸಿಡಿಸಿ ಔಟಾದರು. ಅಬ್ದುಲ್ ಸಮಾದ್ ಹೋರಾಟ ಮುಂದುವರಿಸಿದರೆ, ಇತ್ತ ಜೇಸನ್ ಹೋಲ್ಡರ್ ಕೇವಲ 2 ರನ್ ಸಿಡಿಸಿ ಔಟಾದರು. ಅಬ್ದುಲ್ ಸಮಾದ್ 25 ರನ್ ಕಾಣಿಕೆ ನೀಡಿದರು. ಕೆಕೆಆರ್ ಕರಾರುವಕ್ ದಾಳಿಗೆ ಹೈದರಾಬಾದ್ ರನ್ ಗಳಿಸಲಿಲ್ಲ, ಇತ್ತ ವಿಕೆಟ್ ಕೂಡ ಉಳಿಸಲಿಲ್ಲ.

IPL 2021:ರುತುರಾಜ್ ಸೆಂಚುರಿ, ಚೆನ್ನೈ ಹೋರಾಟ ವ್ಯರ್ಥ; ಧೋನಿ ಸೈನ್ಯ ಮಣಿಸಿದ ರಾಜಸ್ಥಾನ!

ರಶೀದ್ ಖಾನ್ ಕೇವಲ 8 ರನ್ ಸಿಡಿಸಿ ಔಟಾದರು. ಬುವನೇಶ್ವರ್ ಕುಮಾರ್ ಅಜೇಯ 7 ರನ್ ಹಾಗೂ ಸಿದ್ದಾರ್ಥ್ ಕೌಲ್ ಅಜೇಯ 7 ರನ್ ಸಿಡಿಸಿದರು. ಈ ಮೂಲಕ ಸನ್‌ರೈಸರ್ಸ್ ಹೈದರಾಬಾದ್ ತಂಡ 8 ವಿಕೆಟ್ ನಷ್ಟಕ್ಕೆ 115 ರನ್ ಸಿಡಿಸಿತು. ಕೆಕೆಆರ್ ಪರ ಟಿಮ್ ಸೌಥಿ 2, ಶಿವಂ ಮಾವಿ 2  ಹಾಗೂ ವರುಣ್ ಚಕ್ರವರ್ತಿ 2 ವಿಕೆಟ್ ಕಬಳಿಸಿದರು. ಶಕೀಬ್ ಅಲ್ ಹಸನ್ 1 ವಿಕೆಟ್ ಕಬಳಿಸಿದರು.

IPL 2021: ರಾಹುಲ್ ಹಾಫ್ ಸೆಂಚುರಿ, ಶಾರುಖ್ ಭರ್ಜರಿ ಸಿಕ್ಸರ್‌ನಿಂದ ಪಂಜಾಬ್‌ಗೆ 5 ವಿಕೆಟ್ ಗೆಲುವು 

ಅಂಕಪಟ್ಟಿ:
ಐಪಿಎಲ್ 2021ರ ಅಂಕಪಟ್ಟಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ 4ನೇ ಸ್ಥಾನದಲ್ಲಿದೆ. 12 ಪಂದ್ಯದಲ್ಲಿ ಕೆಕೆಆರ್ 5 ಗೆಲುವು ಹಾಗೂ 7 ಸೋಲು ಕಂಡಿದೆ. 10 ಅಂಕ ಸಂಪಾದಿಸಿರುವ ಕೆಕೆಆರ್ ಪ್ಲೇ ಆಫ್ ಪ್ರವೇಶದ ಕನಸಿನಲ್ಲಿದೆ. ಇಂದಿನ ಪಂದ್ಯದ ಗೆಲುವು ಕೆಕೆಆರ್ ತಂಡದ ಅಂಕವನ್ನು 12ಕ್ಕೆ ಏರಿಸಲಿದೆ. ಇತ್ತ ಹೈದರಾಬಾದ್ ತಂಡ 11 ಪಂದ್ಯದಲ್ಲಿ ಕೇವಲ 2 ಗೆಲುವು ಕಂಡಿದೆ. 9 ಪಂದ್ಯದಲ್ಲಿ ಸೋಲು ಕಂಡಿದೆ. ಈ ಮೂಲಕ ಈಗಾಗಲೇ ಪ್ಲೇ ಆಫ್ ರೇಸ್‌ನಿಂದ ಹೊರಬಿದ್ದಿದೆ.

click me!