
ಮುಂಬೈ(ನ.06): ಭಾರತೀಯ ದೇಸಿ ಕ್ರಿಕೆಟ್ ಟೂರ್ನಿಗಳಲ್ಲಿ ಮಾತ್ರವಲ್ಲದೆ ವಿಶ್ವದ ಶ್ರೀಮಂತ ಟಿ20 ಲೀಗ್ ಐಪಿಎಲ್ನಲ್ಲೂ ಅಂಪೈರ್‌ಗಳಿಂದ ಪದೇ ಪದೇ ಎಡವಟ್ಟು ಆದ ಕಾರಣ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಭಾರೀ ಮುಜುಗರಕ್ಕೆ ಒಳಗಾಗಿತ್ತು. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಬಿಸಿಸಿಐ ಹೊಸ ಯೋಜನೆ ರೂಪಿಸಿದೆ.
ಮಂಗಳವಾರ ಇಲ್ಲಿ ನಡೆದ ಐಪಿಎಲ್ ಆಡಳಿತ ಸಮಿತಿ ಸಭೆಯಲ್ಲಿ, 2020ರ ಆವೃತ್ತಿಯಿಂದ ನೋಬಾಲ್ ಗಮನಿಸಲೆಂದೇ ಪ್ರತ್ಯೇಕ ಅಂಪೈರ್ ನಿಯೋಜಿಸಲು ನಿರ್ಧರಿಸಲಾಯಿತು. ಬ್ರಿಜೇಶ್ ಪಟೇಲ್ ನೇತೃತ್ವದ ಐಪಿಎಲ್ ಆಡಳಿತ ಸಮಿತಿ ನಡೆಸಿದ ಸಭೆಯಲ್ಲಿ ನೋಬಾಲ್ ಅಂಪೈರ್ ಬಗ್ಗೆ ಚರ್ಚೆ ನಡೆಯಿತು.
ನೋಬಾಲ್ ಅಂಪೈರ್ ಏಕೆ?
ಕಳೆದ ಆವೃತ್ತಿಯಲ್ಲಿ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ನ ಲಸಿತ್ ಮಾಲಿಂಗ ನೋಬಾಲ್ ಎಸೆದಿದ್ದರೂ ಅಂಪೈರ್ ಅದನ್ನು ಗಮನಿಸಿರಲಿಲ್ಲ. ಆರ್‌ಸಿಬಿ ಪಂದ್ಯ ಸೋಲಿನಲ್ಲಿ ಈ ಘಟನೆ ಪ್ರಮುಖ ಕಾರಣವೆನಿಸಿತು. ಅಂಪೈರ್ ಜತೆ ನಾಯಕ ವಿರಾಟ್ ಕೊಹ್ಲಿ ವಾಗ್ವಾದ ನಡೆಸಿದ್ದರು. ರಾಜಸ್ಥಾನ ರಾಯಲ್ಸ್-ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದಲ್ಲೂ ಇದೇ ರೀತಿ ಪ್ರಸಂಗವೊಂದು ನಡೆದಿತ್ತು. ಚೆನ್ನೈ ನಾಯಕ ಎಂ.ಎಸ್.ಧೋನಿ, ಮೈದಾನಕ್ಕೆ ಪ್ರವೇಶಿಸಿ ಅಂಪೈರ್‌ಗಳ ಜತೆ ಜಗಳವಾಡಿದ್ದರು. ಇಂತಹ ಪ್ರಸಂಗಗಳನ್ನು ತಡೆಯಲು ಬಿಸಿಸಿಐ, ನೋಬಾಲ್ ಗಮನಿಸಲೆಂದೇ ಪ್ರತ್ಯೇಕ ಅಂಪೈರ್ ನಿಯೋಜಿಸಲು ನಿರ್ಧರಿಸಿದೆ.
IPL 2020: ರಾಜಸ್ಥಾನಕ್ಕೆ RCB ಮಾಜಿ ಕ್ರಿಕೆಟಿಗ ಕೋಚ್..!
‘ನೋಬಾಲ್ ನೋಡಲು ಪ್ರತ್ಯೇಕ ಅಂಪೈರ್ ನೇಮಿಸುವುದು ವಿಚಿತ್ರ ಎನಿಸಬಹುದು. ಆದರೆ ಇದರ ಅಗತ್ಯ ತುಂಬಾ ಇದೆ. ನಾವು ತಂತ್ರಜ್ಞಾನದ ಸಹಾಯ ಪಡೆಯಲು ಬಯಸಿದ್ದೇವೆ. 3ನೇ ಹಾಗೂ 4ನೇ ಅಂಪೈರ್ ಜತೆ ಮತ್ತೊಬ್ಬರು ಕಾರ್ಯನಿರ್ವಹಿಸಲಿದ್ದಾರೆ’ ಎಂದು ಆಡಳಿತ ಸಮಿತಿ ಸದಸ್ಯರೊಬ್ಬರು ತಿಳಿಸಿದ್ದಾರೆ.ನೋಬಾಲ್ ಅಂಪೈರ್ ಅನ್ನು ಐಪಿಎಲ್‌ನಲ್ಲಿ ಪರಿಚಯಿಸುವ ಮೊದಲು ದೇಸಿ ಟೂರ್ನಿಗಳಲ್ಲಿ ಪ್ರಯೋಗಿಸಲು ಬಿಸಿಸಿಐ ಚಿಂತನೆ ನಡೆಸಿದೆ. ರಣಜಿ ಟ್ರೋಫಿಯಲ್ಲಿ ನೋಬಾಲ್ ಅಂಪೈರ್ ಅನ್ನು ನೋಡಬಹುದು ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
IPL ಇತಿಹಾಸದಲ್ಲೇ ಹೊಸ ಪ್ರಯೋಗ: ಇನ್ಮುಂದೆ ಪವರ್ ಪ್ಲೇಯರ್ ಆಟ..?
ಪವರ್ ಪ್ಲೇಯರ್‌ಗೆ ತಡೆ!
ಐಪಿಎಲ್‌ನಲ್ಲಿ ಪವರ್ ಪ್ಲೇಯರ್ ಪರಿಕಲ್ಪನೆಯನ್ನು ಪರಿಚಯಿಸಬಹುದು ಎನ್ನುವ ಸುದ್ದಿ ಹಬ್ಬಿತ್ತು. ಈ ಬಗ್ಗೆ ಮಂಗಳವಾರದ ಸಭೆಯಲ್ಲಿ ಚರ್ಚೆಯಾಯಿತಾದರೂ, ಸಮಯದ ಅಭಾವದಿಂದ ಅಳವಡಿಕೆ ಕಷ್ಟಎನ್ನುವ ಕಾರಣ ಪ್ರಸ್ತಾಪ ಕೈಬಿಡಲಾಗಿದೆ. ಐಪಿಎಲ್ಗೂ ಮುನ್ನ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಈ ಪ್ರಯೋಗ ನಡೆಸಲು ಚಿಂತಿಸಲಾಗಿತ್ತು. ಆದರೆ ಟೂರ್ನಿ ಆರಂಭಗೊಳ್ಳಲು ಕೇವಲ 3 ದಿನ ಬಾಕಿ ಇರುವ ಕಾರಣ, ಪವರ್ ಪ್ಲೇಯರ್ ಪರಿಚಯಿಸುವುದು ಕಷ್ಟ ಎಂಬ ನಿರ್ಧಾರಕ್ಕೆ ಐಪಿಎಲ್ ಆಡಳಿತ ಸಮಿತಿ ಬಂದಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.