2ನೇ ಟಿ20: ಪಾಕಿ​ಸ್ತಾನ ವಿರುದ್ಧ ಆಸಿಸ್‌ಗೆ ಜಯ

By Web Desk  |  First Published Nov 6, 2019, 9:48 AM IST

ಟಿ20 ನಂ.1 ಶ್ರೇಯಾಂಕಿತ ಪಾಕಿಸ್ತಾನ ತಂಡವು ಮತ್ತೊಂದು ಆಘಾತಕಾರಿ ಸೋಲು ಕಂಡಿದೆ. ತವರಿನಲ್ಲೇ ಲಂಕಾ ಎದರು ಸರಣಿ ಕೈಚೆಲ್ಲಿದ್ದ ಪಾಕ್, ಇದೀಗ ಆಸಿಸ್ ನೆಲದಲ್ಲಿ ಎರಡನೆ ಟಿ20 ಪಂದ್ಯದಲ್ಲಿ ಮುಗ್ಗರಿಸಿದೆ. ಸ್ಟೀವ್ ಸ್ಮಿತ್ ಆಸ್ಟ್ರೇಲಿಯಾ ತಂಡದ ಗೆಲುವಿನ ರೂವಾರಿ ಎನಿಸಿದರು. ಈ ಕುರಿತಾದ ವರದಿ ಇಲ್ಲಿದೆ ನೋಡಿ...


ಕ್ಯಾನ್‌ಬೆರಾ[ನ.06]: ಸ್ಟೀವ್‌ ಸ್ಮಿತ್‌ ಆಕ​ರ್ಷಕ ಬ್ಯಾಟಿಂಗ್‌ ನೆರವಿ​ನಿಂದ ಪಾಕಿ​ಸ್ತಾನ ವಿರು​ದ್ಧ ಮಂಗ​ಳವಾರ ಇಲ್ಲಿ ನಡೆದ 2ನೇ ಟಿ20 ಪಂದ್ಯ​ದಲ್ಲಿ ಆಸ್ಪ್ರೇ​ಲಿಯಾ 7 ವಿಕೆಟ್‌ ಗೆಲುವು ಸಾಧಿ​ಸಿತು. ಇದ​ರೊಂದಿ​ಗೆ 3 ಪಂದ್ಯ​ಗಳ ಸರ​ಣಿ​ಯಲ್ಲಿ 1-0 ಮುನ್ನಡೆ ಪಡೆ​ಯಿತು. ಮೊದಲ ಪಂದ್ಯ ಮಳೆಗೆ ಬಲಿ​ಯಾ​ಗಿತ್ತು.

ಆಸಿಸ್‌-ಪಾಕ್‌ ಮೊದಲ ಟಿ20 ಮಳೆಗೆ ಬಲಿ!

Latest Videos

ಪಂದ್ಯ​ದಲ್ಲಿ ಮೊದಲು ಬ್ಯಾಟ್‌ ಮಾಡಿದ ಪಾಕಿಸ್ತಾನ ಆರಂಭಿಕ ಆಘಾತದ ಹೊರತಾಗಿಯೂ ಇಫ್ತಿ​ಖಾರ್‌ (62) ಹಾಗೂ ನಾಯಕ ಬಾಬರ್‌ ಆಜಂ (50) ಅರ್ಧ​ಶ​ತ​ಕ​ಗಳ ನೆರ​ವಿ​ನಿಂದ 20 ಓವ​ರಲ್ಲಿ 6 ವಿಕೆಟ್‌ಗೆ 150 ರನ್‌ ಗಳಿ​ಸಿತು. ಆಸ್ಟ್ರೇಲಿಯಾ ಪರ ಆಸ್ಟನ್ ಅಗರ್ 2 ವಿಕೆಟ್ ಪಡೆದರೆ, ಪ್ಯಾಟ್ ಕಮಿನ್ಸ್ ಹಾಗೂ ಕೇನ್ ರಿಚರ್ಡ್’ಸನ್ ತಲಾ ಒಂದೊಂದು ವಿಕೆಟ್ ಪಡೆದರು.

ಆಸೀಸ್‌ ಟಿ20 ತಂಡ​ಕ್ಕೆ ಸ್ಟೀವ್‌ ಸ್ಮಿತ್‌, ವಾರ್ನರ್‌

ಸಾಧಾ​ರಣ ಗುರಿ ಬೆನ್ನತ್ತಿದ ಆಸೀಸ್‌, ಸ್ಫೋಟಕ ಆರಂಭ ಪಡೆಯಿತು. ಕಳೆದ 4 ಟಿ20 ಪಂದ್ಯಗಳಲ್ಲಿ ಅಜೇಯ ಬ್ಯಾಟಿಂಗ್ ನಡೆಸಿದ್ದ ಡೇವಿಡ್ ವಾರ್ನರ್ ಬಲಿ ಪಡೆಯುವಲ್ಲಿ ಮೊಹಮ್ಮದ್ ಆಮೀರ್ ಯಶಸ್ವಿಯಾದರು. 11 ಎಸೆತಗಳಲ್ಲಿ 20 ರನ್ ಬಾರಿಸಿ ವಾರ್ನರ್ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ನಾಯಕ ಫಿಂಚ್ 17 ರನ್ ಗಳಿಸಿ ಮೊಹಮ್ಮದ್ ಇರ್ಫಾನ್’ಗೆ ವಿಕೆಟ್ ಒಪ್ಪಿಸಿದರು. ಆ ಬಳಿಕ ಸ್ಟೀವ್ ಸ್ಮಿತ್ 51 ಎಸೆತಗಳಲ್ಲಿ 11 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ ಅಜೇಯ 80 ರನ್ ಗಳಿಸುವುದರೊಂದಿಗೆ ತಂಡವನ್ನು ಗೆಲುವಿನ ದಡ ಸೇರಿಸಿದರು. ಸ್ಮಿತ್’ಗೆ ಬೆನ್ ಮೆಕ್’ಡರ್ಮೋಟ್[21] ಉತ್ತಮ ಸಾಥ್ ನೀಡಿದರು.

ಇದೀಗ ಮೂರನೇ ಹಾಗೂ ನಿರ್ಣಾಯಕ ಪಂದ್ಯ ಪರ್ತ್ ಮೈದಾನದಲ್ಲಿ ನವೆಂಬರ್ 8ರಂದು ನಡೆಯಲಿದೆ. ಈ ಪಂದ್ಯದಲ್ಲಿ ಪಾಕಿಸ್ತಾನ ಗೆದ್ದರೆ ಸರಣಿ ಸಮಬಲವಾಗಲಿದೆ. ಒಂದು ವೇಳೆ ಆಸಿಸ್ ಗೆದ್ದರೆ, ಟಿ20 ಸರಣಿ ಕೈವಶವಾಗಲಿದೆ. ಹೀಗಾಗಿ ಕೊನೆಯ ಪಂದ್ಯ ಸಾಕಷ್ಟು ರೋಚಕತೆಯನ್ನು ಹುಟ್ಟುಹಾಕಿದೆ.

ಸ್ಕೋರ್‌:
ಪಾಕಿಸ್ತಾನ 150/6
ಆಸ್ಪ್ರೇಲಿಯಾ 151/3

 

click me!