ಐಪಿಎಲ್‌ ಹರಾಜಿನಲ್ಲಿ ಕರ್ನಾಟಕದ 13 ಆಟಗಾರರು!

Published : Dec 14, 2019, 10:22 AM IST
ಐಪಿಎಲ್‌ ಹರಾಜಿನಲ್ಲಿ ಕರ್ನಾಟಕದ 13 ಆಟಗಾರರು!

ಸಾರಾಂಶ

ಐಪಿಎಲ್ ಆಟಾಗಾರರ ಹರಾಜಿಗೆ ಕಲವೇ ದಿನಗಳು ಮಾತ್ರ ಬಾಕಿ. ಈಗಾಗಲೇ ಫ್ರಾಂಚೈಸಿಗಳು ಯಾರನ್ನು ಖರೀದಿಸಬೇಕು ಅನ್ನೋ ಲೆಕ್ಕಾಚಾರದಲ್ಲಿ ಮುಳುಗಿದೆ. ಈ ಬಾರಿಯ ಹರಾಜಿನಲ್ಲಿ ಕರ್ನಾಟಕ 13 ಆಟಗಾರರು ಕಣದಲ್ಲಿದ್ದಾರೆ. ಯಾರ್ಯಾರು ಅನ್ನೋ ವಿವರ ಇಲ್ಲಿದೆ. 

ಬೆಂಗಳೂರು(ಡಿ.14): 2020ರ ಆಟಗಾರರ ಹರಾಜಿನಲ್ಲಿ ಕರ್ನಾಟಕ ಒಟ್ಟು 13 ಆಟಗಾರರು ಪಾಲ್ಗೊಳ್ಳಲಿದ್ದಾರೆ. ಡಿ.19ರಂದು ಕೋಲ್ಕತಾದಲ್ಲಿ ನಡೆಯಲಿರುವ ಹರಾಜು ಪ್ರಕ್ರಿಯೆಯಲ್ಲಿ ಒಟ್ಟಯ 332 ಆಟಗಾರರು ಅದೃಷ್ಟಪರೀಕ್ಷೆಗಿಳಿಯಲಿದ್ದಾರೆ. ದೇಸಿ ಟೂರ್ನಿಗಳಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸುವ 13 ಆಟಗಾರರು ಈ ಬಾರಿಯ ಹರಾಜಿನಲ್ಲಿದ್ದಾರೆ.

ಇದನ್ನೂ ಓದಿ: IPL ಹರಾಜಿಗೆ 971 ಆಟಗಾರರ ಪೈಕಿ 332 ಕ್ರಿಕೆಟಿಗರ ಅಂತಿಮ ಪಟ್ಟಿ ಪ್ರಕಟ

ಕರ್ನಾಟಕ ಆಟಗಾರರು:
 ಕೆ.ವಿ.ಸಿದ್ಧಾರ್ಥ್, ಶಿವಿಲ್‌ ಕೌಶಿಕ್‌, ಲುವ್ನಿತ್‌ ಸಿಸೋಡಿಯಾ, ಶುಭಾಂಗ್‌ ಹೆಗ್ಡೆ, ಕೆ.ಸಿ.ಕಾರ್ಯಪ್ಪ, ಪವನ್‌ ದೇಶಪಾಂಡೆ, ಆರ್‌.ಸಮರ್ಥ್, ಅನಿರುದ್ಧ ಜೋಶಿ, ರೋಹನ್‌ ಕದಂ, ಪ್ರವೀಣ್‌ ದುಬೆ ಜತೆ ಕೇರಳ ತಂಡಕ್ಕೆ ವಲಸೆ ಹೋಗಿರುವ ರಾಬಿನ್‌ ಉತ್ತಪ್ಪ, ನಾಗಾಲ್ಯಾಂಡ್‌ಗೆ ವಲಸೆ ಹೋಗಿರುವ ಸ್ಟುವರ್ಟ್‌ ಬಿನ್ನಿ ಹಾಗೂ ರೈಲ್ವೇಸ್‌ ಪರ ಆಡುವ ಪ್ರದೀಪ್‌ ತಿಪ್ಪೇಸ್ವಾಮಿ ಹರಾಜಿನಲ್ಲಿ ಭಾಗವಹಿಸಲಿದ್ದಾರೆ.

ಇದನ್ನೂ ಓದಿ: IPL ಹರಾಜಿನಿಂದ ಹಿಂದೆ ಸರಿದ RCB ಮಾಜಿ ವೇಗಿ!.

ರಾಜ್ಯದ ಆಟಗಾರರಾದ ಕೆ.ಎಲ್‌.ರಾಹುಲ್‌, ಮಯಾಂಕ್‌ ಅಗರ್‌ವಾಲ್‌, ಮನೀಶ್‌ ಪಾಂಡೆ, ಕರುಣ್‌ ನಾಯರ್‌, ಕೆ.ಗೌತಮ್‌, ಶ್ರೇಯಸ್‌ ಗೋಪಾಲ್‌, ದೇವದತ್‌ ಪಡಿಕ್ಕಲ್‌, ಪ್ರಸಿದ್ಧ್ ಕೃಷ್ಣ ಐಪಿಎಲ್‌ ತಂಡಗಳಲ್ಲಿ ಉಳಿದುಕೊಂಡಿದ್ದಾರೆ.

ಹರಾಜಿನಲ್ಲಿ 186 ಭಾರತೀಯರು
ಹರಾಜಿಗೆ ನೋಂದಾಯಿಸಿಕೊಂಡಿರುವ ಒಟ್ಟು 322 ಆಟಗಾರರ ಪೈಕಿ 186 ಭಾರತೀಯ ಆಟಗಾರರು, 143 ವಿದೇಶಿ ಆಟಗಾರರು, ಮೂವರು ಐಸಿಸಿ ಸಹಾಯಕ ರಾಷ್ಟ್ರಗಳ ಆಟಗಾರರು ಇದ್ದಾರೆ. 7 ಆಟಗಾರರು ತಮ್ಮ ಮೂಲೆಬೆಲೆಯನ್ನು .2 ಕೋಟಿಗೆ ನಿಗದಿಪಡಿಸಿಕೊಂಡರೆ, 10 ಆಟಗಾರರು .1.5 ಕೋಟಿ, 23 ಆಟಗಾರರು .1 ಕೋಟಿ ಮೂಲಬೆಲೆ ಹೊಂದಿದ್ದಾರೆ. ರಾಷ್ಟ್ರೀಯ ತಂಡಗಳ ಪರ ಆಡದ ಆಟಗಾರರ ಪೈಕಿ ಒಟ್ಟು 183 ಆಟಗಾರರು .20 ಲಕ್ಷ ಮೂಲಬೆಲೆ ಹೊಂದಿದ್ದರೆ, 7 ಆಟಗಾರರು .40 ಲಕ್ಷ ಹಾಗೂ 8 ಆಟಗಾರರು .30 ಲಕ್ಷ ಮೂಲೆಬೆಲೆ ಹೊಂದಿದ್ದಾರೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

2025ರಲ್ಲಿ ಪಾಕಿಸ್ತಾನಿಯರು ಗೂಗಲ್‌ ಸರ್ಚ್‌ನಲ್ಲಿ ಹುಡುಕಿದ್ದು ಟೀಂ ಇಂಡಿಯಾದ ಈ ಆಟಗಾರನನ್ನು! ಆದ್ರೆ ಅದು ಕೊಹ್ಲಿ, ರೋಹಿತ್ ಅಲ್ಲ!
IPL Mini Auction 2026: 1355 ಆಟಗಾರರಲ್ಲಿ 350 ಪ್ಲೇಯರ್ಸ್ ಶಾರ್ಟ್‌ಲಿಸ್ಟ್! ಇಲ್ಲಿದೆ ಹರಾಜಿನ ಕಂಪ್ಲೀಟ್ ಡೀಟೈಲ್ಸ್