ಬೆಂಗಳೂರಿನಲ್ಲಿ ಧೋನಿ ಪ್ರತ್ಯಕ್ಷ; ಎಕ್ಸಾನ್ ವಸ್ತು ಪ್ರದರ್ಶನ ಉದ್ಘಾಟಿಸಿದ ಕ್ರಿಕೆಟಿಗ!

Published : Dec 13, 2019, 05:32 PM ISTUpdated : Dec 13, 2019, 06:33 PM IST
ಬೆಂಗಳೂರಿನಲ್ಲಿ ಧೋನಿ ಪ್ರತ್ಯಕ್ಷ; ಎಕ್ಸಾನ್ ವಸ್ತು ಪ್ರದರ್ಶನ ಉದ್ಘಾಟಿಸಿದ ಕ್ರಿಕೆಟಿಗ!

ಸಾರಾಂಶ

ಕ್ರಿಕೆಟ್‌ನಿಂದ ದೂರ ಉಳಿದಿರುವ ಕ್ರಿಕೆಟಿಗ ಎಂ.ಎಸ್.ಧೋನಿ ದಿಢೀರ್ ಬೆಂಗಳೂರಿನಲ್ಲಿ ಪ್ರತ್ಯಕ್ಷವಾಗಿದ್ದಾರೆ. ಧೋನಿಯನ್ನು ನೋಡಿ ಅಭಿಮಾನಿಗಳ ಸಂತಸಕ್ಕೆ ಪಾರವೇ ಇರಲಿಲ್ಲ.

ನೆಲಮಂಗಲ(ಡಿ.13):  ವಿಶ್ವಕಪ್ ಟೂರ್ನಿ ಬಳಿಕ ಟೀಂ ಇಂಡಿಯಾದಿಂದ ದೂರ ಉಳಿದಿರುವ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ, ಸುದೀರ್ಘ ವಿಶ್ರಾಂತಿಗೆ ಜಾರಿದ್ದಾರೆ. ಧೋನಿ ಆಟವನ್ನು ಮತ್ತೆ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇದರ ಬೆನ್ನಲ್ಲೇ ಧೋನಿ, ಬೆಂಗಳೂರು ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ. ನೆಲಮಂಗಲದಲ್ಲಿ ನಡೆಯುತ್ತಿರುವ ಎಕ್ಸಾನ್ ವಸ್ತು ಪ್ರದರ್ಶನವನ್ನು ಉದ್ಘಾಟಿಸಿದ್ದಾರೆ. 

ಇದನ್ನೂ ಓದಿ: ವಿಶ್ರಾಂತಿಯಲ್ಲಿರುವ ಧೋನಿಯಿಂದ ಆರ್ಕೆಸ್ಟ್ರಾ; ಬಾಲಿವುಡ್ ಹಾಡಿನ ಮೂಲಕ ಶೈನ್!.

ನೆಲಮಂಗಲದ ಮಾದವಾರ ಬಳಿಯ ಬೆಂಗಳೂರು ಇಂಟರ್‌ನ್ಯಾಷನಲ್ ವಸ್ತು ಪ್ರದರ್ಶನ ಕೇಂದ್ರದಲ್ಲಿ  10ನೇ ಆವೃತ್ತಿ ಎಕ್ಸಾನ್ ವಸ್ತು ಪ್ರದರ್ಶನ ನಡೆಯುತ್ತಿದೆ. 5 ದಿನಗಳ ಕಾಲ ನಡೆಯಲಿರುವ ವಸ್ತು ಪ್ರದರ್ಶವನ್ನು ಎಂ.ಎಸ್.ಧೋನಿ ಉದ್ಘಾಟಿಸಿದರು. 

ಇದನ್ನೂ ಓದಿ: ಧೋನಿ ನಿವೃತ್ತಿ ಸದ್ಯಕ್ಕಿಲ್ಲ; 2021ರ ಐಪಿಎಲ್ ಆಡ್ತಾರೆ ಸಿಎಸ್‌ಕೆ ನಾಯಕ?

ವಸ್ತು ಪ್ರದರ್ಶನದಲ್ಲಿ ಉದ್ಯಮಿಗಳ ಹಾಗೂ ಗ್ರಾಹಕರ ಜೊತೆ ಧೋನಿ ಭಾಗಿಯಾದರು. ಕ್ರಿಕೆಟ್ ಮೈದಾನದಲ್ಲಿ ಧೋನಿ ನೋಡಲು ಕಾತರಗೊಂಡಿದ್ದ ಅಭಿಮಾನಿಗಳಿಗೆ, ಹತ್ತಿರದಲ್ಲೇ ನೋಡಿ ಸಂಭ್ರಮಿಸಿದರು.ಧೋನಿಯನ್ನು ನೋಡಿದ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದರು. 

ಎಕ್ಸಾನ್ ವಸ್ತು ಪ್ರದರ್ಶನದಲ್ಲಿ ದಕ್ಷಿಣ ಏಷ್ಯಾ ಹಾಗೂ ದಕ್ಷಿಣ ಭಾರತದ ಅತೀ ದೊಡ್ಡ ಕಟ್ಟಡ ನಿರ್ಮಾಣ ಹಾಗೂ ಯಂತ್ರೋಪಕರಣಗಳ ವಸ್ತು ಪ್ರದರ್ಶನ ನಡೆಯುತ್ತಿದೆ. ಇಂದು(ಡಿ.13) ಆರಂಭಗೊಂಡಿರುವ ವಸ್ತು ಪ್ರದರ್ಶನ,  ಡಿಸೆಂಬರ್ 17ರ ವರೆಗೆ ನಡೆಯಲಿದೆ. 

ಡಿಸೆಂಬರ್ 13ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?