ಕ್ರಿಕೆಟ್‌ ಆಟಗಾರನ ನಿವೃತ್ತಿ ನಿರ್ಧಾರ ವಾಪಾಸ್‌ ಪಡೆಯಲು ಮಧ್ಯಪ್ರವೇಶಿಸಿದ ಪ್ರಧಾನಿ

By Santosh NaikFirst Published Jul 7, 2023, 7:32 PM IST
Highlights

ಪ್ರಸ್ತುತ ಗಾಯದ ಕಾರಣದಿಂದಾಗಿ ತಂಡದಿಂದ ಹೊರಗುಳಿದಿರುವ ಆರಂಭಿಕ ಆಟಗಾರ ತಮೀಮ್‌ ಇಕ್ಬಾಲ್‌ ಆರು ವಾರಗಳ ವಿಶ್ರಾಂತಿಯ ಬಳಿಕ ಮತ್ತೆ ಕ್ರಿಕೆಟ್‌ಗೆ ಮರಳಲಿದ್ದಾರೆ.
 

ಢಾಕಾ (ಜು.7): ಒಂದು ದಿನದ ಹಿಂದೆಯಷ್ಟೇ ಚಟ್ಟೋಗ್ರಾಮದಲ್ಲಿ ಭಾವುಕವಾಗಿ ಮಾತನಾಡಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದ ಬಾಂಗ್ಲಾದೇಶದ ಸ್ಟಾರ್‌ ಆರಂಭಿಕ ಆಟಗಾರ ತಮೀಮ್‌ ಇಕ್ಬಾಲ್‌, ಶುಕ್ರವಾರ ಇದನ್ನು ವಾಪಾಸ್‌ ಪಡೆದುಕೊಂಡಿದ್ದಾರೆ. ಅದಕ್ಕೆ ಕಾರಣ ಬಾಂಗ್ಲಾದೇಶದ ಪ್ರಧಾನಿ ಶೇಖ್‌ ಹಸೀನಾ ಮಧ್ಯಪ್ರವೇಶ. ಪ್ರಧಾನಿ ಶೇಖ್‌ ಹಸೀನಾ ಅವರನ್ನು ಅಧಿಕೃತ ನಿವಾಸದಲ್ಲಿ ಇಡೀ ಕುಟುಂಬದೊಂದಿಗೆ ತಮೀಮ್‌ ಇಕ್ಬಾಲ್‌ ಭೇಟಿಯಾಗಿದ್ದರು. ಶುಕ್ರವಾರ ಮಧ್ಯಾಹ್ನ ಢಾಕಾದಲ್ಲಿರುವ ಅವರ ನಿವಾಸದಲ್ಲಿ ಸಭೆ ನಡೆದಿತ್ತು. ತಮೀಮ್ ತನ್ನ ಪತ್ನಿಯೊಂದಿಗೆ ಮಾಜಿ ನಾಯಕ ಮಶ್ರಫೆ ಮೊರ್ತಜಾ ಮತ್ತು ಬಿಸಿಬಿ ಅಧ್ಯಕ್ಷ ನಜ್ಮುಲ್ ಹಸನ್ ಅವರೊಂದಿಗೆ ಹಸೀನಾ ಅವರನ್ನು ಭೇಟಿಯಾದರು. ಈ ಸಭೆಯ ಬಳಿಕ ತಮೀಮ್‌ ಇಕ್ಬಾಲ್‌ ನಿವೃತ್ತಿ ನಿರ್ಧಾರವನ್ನು ವಾಪಾಸ್‌ ಪಡೆದುಕೊಂಡಿದ್ದಾರೆ. ಮೂಲಗಳ ಪ್ರಕಾರ ಗುರುವಾರ ಸಂಜೆಯೇ ಈ ಸಭೆ ನಡೆದಿದೆ ಎನ್ನಲಾಗಿದೆ. ಆದರೆ, ಇದರ ಮಾಹಿತಿ ಶುಕ್ರವಾರ ಮಧ್ಯಾಹ್ನದ ವೇಳೆಗೆ ಸಿಕ್ಕಿದೆ. ಈಗ ಸಂಸದರಾಗಿರುವ ಬಾಂಗ್ಲಾದೇಶದ ಮಾಜಿ ನಾಯಕ ಮುಶ್ರಫೆ ಮೊರ್ತಜ, ಈ ವಿಚಾರದಲ್ಲಿ ಪ್ರಧಾನಿಯೇ ಮಧ್ಯಪ್ರವೇಶ ಮಾಡಬೇಕು ಎಂದು ಒತ್ತಾಗಿಸಿತ್ತು. ಅಲ್ಲಿಯವರೆಗೂ ತಮೀಮ್‌ ಇಕ್ಬಾಲ್‌ ನಿವೃತ್ತಿ ವಿಚಾರವಾಗಿ ಬಿಸಿಬಿ ಅಧ್ಯಕ್ಷ ನಜ್ಮುಲ್‌ ಹುಸೇನ್‌ ಜೊತೆ ಯಾವುದೇ ಮಾತನ್ನೂ ಆಡೋದಿಲ್ಲ ಎಂದಿದ್ದರು.

ಗುರುವಾರ ಮಧ್ಯಾಹ್ನ ತಮೀಮ್‌ ಇಕ್ಬಾಲ್‌ ನಿವೃತ್ತಿ ನಿರ್ಧಾರವನ್ನು ಘೋಷಣೆ ಮಾಡಿದ್ದರು. ಟಿವಿ ಲೈವ್‌ನಲ್ಲಿಯೇ ಅವರು ಈ ನಿರ್ಧಾರ ಹೇಳುವ ವೇಳೆ ಸಾಕಷ್ಟು ಬಾರಿ ಕಣ್ಣೀರು ಇಟ್ಟಿದ್ದರು. 13 ನಿಮಿಷದ ಅವರ ಮಾತಿನ ವೇಳೆ ಸಾಕಷ್ಟು ಬಾರಿ ಕಣ್ಣಿರು ಹಾಕಿದ್ದರು. ಇದು ಇಡೀ ದಿನ ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಆದರೆ, ಶುಕ್ರವಾರ ಪ್ರಧಾನಮಂತ್ರಿ ನಿವಾಸದ ಹೊರಗೆ ಭಿನ್ನವಾದ ತಮೀಮ್‌ ಇಕ್ಬಾಲ್‌ ಕಾಣಿಸಿದರು. ಸ್ವತಃ ಪ್ರಧಾನಿ ಸಂಧಾನ ಮಾಡಿದ ಬಳಿಕ ನಿರ್ಧಾರವನ್ನು ವಾಪಾಸ್‌ ತೆಗೆದುಕೊಂಡರು. ಗಾಯದಿಂದ ಚೇತರಿಸಿಕೊಂಡು ಕ್ರಿಕೆಟ್‌ ಮೈದಾನಕ್ಕೆ ಇಳಿಯಲು ಆರು ವಾರಗಳ ಸಮಯವಿದೆ ಎಂದು ತಮೀಮ್‌ ಹೇಳಿದ್ದಾರೆ.

ಪ್ರಧಾನಮಂತ್ರಿಗಳು ಇಂದು ಮಧ್ಯಾಹ್ನ ತಮ್ಮ ನಿವಾಸಕ್ಕೆ ನನ್ನನ್ನು ಬರಮಾಡಿಕೊಂಡರು. ಈ ವೇಳೆ ದೀರ್ಘ ಚರ್ಚೆ ನಡೆಯಿತು. ಆ ಬಳಿಕ ನಾನು ಕ್ರಿಕೆಟ್‌ಗೆ ಮರಳುವ ನಿರ್ಧಾರ ಮಾಡಿದ್ದೇನೆ. ನನ್ನ ನಿವೃತ್ತಿ ನಿರ್ಧಾರ ವಾಪಾಸ್‌ ಪಡೆದುಕೊಂಡಿದ್ದೇನೆ ಎಂದಿದ್ದಾರೆ. ನಾನು ಯಾರಿಗೂ ಕೂಡ ಇಲ್ಲ ಎಂದು ಹೇಳುವುದಿಲ್ಲ. ಇದರ ನಡುವೆ ದೇಶದ ಅತ್ಯಂತ ಪ್ರಮುಖ ವ್ಯಕ್ತಿಗೆ ನಾನು ಇಲ್ಲ ಎಂದು ಹೇಳಲು ಹೇಗೆ ಸಾಧ್ಯ?. ನಜ್ಮುಲ್‌ ಹಸನ್‌ ಇದ್ದಾಗಲೇ ಮುಶ್ರಫೆ ಮೊರ್ತಜ ನನಗೆ ಕರೆ ಮಾಡಿದ್ದರು. ಇವರಿಂದಲೇ ನಾನು ನನ್ನ ನಿರ್ಧಾರವನ್ನು ವಾಪಾಸ್‌ ಪಡೆಯುತ್ತಿದ್ದೇನೆ. ಪ್ರಧಾನಿ ಕೂಡ ನನಗೆ ಒಂದೂವರೆ ತಿಂಗಳ ಬ್ರೇಕ್‌ ತೆಗೆದುಕೊಳ್ಳುವಂತೆ ಹೇಳಿದ್ದಾರೆ. ಈ ಅವಧಿಯಲ್ಲಿ ನನ್ನ ಚಿಕಿತ್ಸೆ ಪಡೆದುಕೊಂಡು ಮೈದಾನಕ್ಕೆ ವಾಪಾಸಾಗಲಿದ್ದೇವೆ ಎಂದು ತಿಳಿಸಿದ್ದಾರೆ.

 

ವಿಶ್ವಕಪ್‌ಗೆ 3 ತಿಂಗಳಿರುವಾಗಲೇ ಕಣ್ಣೀರಿಟ್ಟು ಕ್ರಿಕೆಟ್‌ಗೆ ವಿದಾಯ ಘೋಷಿಸಿದ ಬಾಂಗ್ಲಾ ನಾಯಕ ತಮೀಮ್ ಇಕ್ಬಾಲ್‌..!

'ಅಫ್ಘಾನಿಸ್ತಾನ ವಿರುದ್ಧ ಬಾಂಗ್ಲಾದೇಶ ತಂಡವನ್ನು ಮೊದಲ ಏಕದಿನ ಪಂದ್ಯದಲ್ಲಿ ಮುನ್ನಡೆಸಿದ ಒಂದು ದಿನದ ಬಳಿಕ ತಮೀಮ್‌ ಇಕ್ಬಾಲ್‌ ತಮ್ಮ ನಿವೃತ್ತಿ ನಿರ್ಧಾರವನ್ನು ಘೋಷಣೆ ಮಾಡಿದ್ದಲ್ಲದೆ, ಸರಣಿಯ ಉಳಿದ ಪಂದ್ಯಕ್ಕೆ ತಾವು ಲಭ್ಯರಿಲ್ಲ ಎಂದಿದ್ದರು. ಈ ವೇಳೆ ಜುಲೈ 8 ಹಾಗೂ 11 ರಂದು ನಡೆಯಲಿರುವ ಪಂದ್ಯಗಳಿಗೆ ಲಿಟನ್‌ ದಾಸ್‌ ಅವರನ್ನು ಬಾಂಗ್ಲಾದೇಶ ತಂಡದ ನಾಯಕರನ್ನಾಗಿ ನೇಮಿಸಲಾಗಿತ್ತು.

ಒಂದೊಳ್ಳೆಯ ಕಾರಣಕ್ಕಾಗಿ ಟಿ20 ವಿಶ್ವಕಪ್‌ನಿಂದ ಹೊರಗುಳಿಯಲು ತೀರ್ಮಾನಿಸಿದ ತಮೀಮ್ ಇಕ್ಬಾಲ್‌..!

click me!