ವೆಸ್ಟ್ ಇಂಡೀಸ್ ಎದುರಿನ ಟಿ20 ಸರಣಿಗೆ ಭಾರತ ತಂಡ ಪ್ರಕಟ
ಐಪಿಎಲ್‌ನಲ್ಲಿ ಮಿಂದಿದ್ದ 5 ತಾರಾ ಆಟಗಾರರಿಗೆ ನಿರಾಸೆ
ಜುಲೈ 12ರಿಂದ ಆರಂಭವಾಗಲಿರುವ ವೆಸ್ಟ್ ಇಂಡೀಸ್ ಎದುರಿನ ಸರಣಿ
ಬೆಂಗಳೂರು(ಜು.07) ವೆಸ್ಟ್ ಇಂಡೀಸ್ ವಿರುದ್ಧ ಮೂರು ಮಾದರಿ ಸರಣಿಗಳನ್ನಾಡಲು ಟೀಂ ಇಂಡಿಯಾ, ಈಗಾಗಲೇ ಕೆರಿಬಿಯನ್ ನಾಡಿಗೆ ಹೋಗಿದೆ. ಮೊದಲು ಟೆಸ್ಟ್, ಬಳಿಕ ಒನ್ಡೇ, ಕೊನೆಯಲ್ಲಿ ಟಿ20 ಸರಣಿ. ಜುಲೈ 12ರಿಂದ ಆರಂಭವಾಗುವ ಟೆಸ್ಟ್ ಸರಣಿಗೆ ಭಾರತೀಯರು ಆಗ್ಲೇ ಅಭ್ಯಾಸವನ್ನೂ ಆರಂಭಿಸಿದ್ದಾರೆ. ಮೊನ್ನೆ ವಿಂಡೀಸ್ ಟಿ20 ಸರಣಿಗೆ ಟೀಂ ಇಂಡಿಯಾವನ್ನ ಬಿಸಿಸಿಐ ಆನೌನ್ಸ್ ಮಾಡಿದೆ. ಐಪಿಎಲ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ ನಾಲ್ವರು ಬೌಲರ್ಸ್ಗೆ ಸ್ಥಾನ ಸಿಕ್ಕಿದೆ. ಆದ್ರೆ ಉತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ಮಾತ್ರ ನಿರಾಸೆಯಾಗಿದೆ. ಯಂಗ್ ಇಂಡಿಯಾವನ್ನ ಸೆಲೆಕ್ಟ್ ಮಾಡಿದ್ದರೂ ಕೆಲವರಿಗೆ ಮೋಸವಾಗಿದೆ.
ಫಿನಿಶರ್ ರಿಂಕೂ ಸಿಂಗ್‌ಗೆ ವಿಂಡೀಸ್ ಫ್ಲೈಟ್ ಮಿಸ್:
undefined
ಗುಜರಾತ್ ಟೈಟನ್ಸ್ ವಿರುದ್ಧ ಕೊನೆ ಐದು ಬಾಲ್ನಲ್ಲಿ ಸತತ ಐದು ಸಿಕ್ಸ್ ಸಿಡಿಸಿ ಕೆಕೆಆರ್ ತಂಡವನ್ನ ರೋಚಕವಾಗಿ ಗೆಲ್ಲಿಸಿದ್ದು ರಿಂಕು ಸಿಂಗ್. ಆ ಪಂದ್ಯದ ನಂತರ ಕೆಕೆಆರ್ ಪರ ಫಿನಿಶರ್ ಆದ ರಿಂಕು, ಪ್ರತಿ ಪಂದ್ಯದಲ್ಲೂ ಸಿಕ್ಸರ್ಗಳ ಮೂಲ್ಕ ಮಿಂಚುತ್ತಿದ್ದರು. ಲೋ ಆರ್ಡರ್ನಲ್ಲಿ ಅದ್ಭುತ ಬ್ಯಾಟರ್. ಒಳ್ಳೆ ಫೀಲ್ಡರ್. ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ರಿಂಕು ಸಿಂಗ್, ಭಾರತ ಟಿ20 ತಂಡಕ್ಕೆ ಆಯ್ಕೆಯಾಗುವ ನಿರೀಕ್ಷೆಗಳಿದ್ದವು. ಆದ್ರೆ ಅವರ ನಿರೀಕ್ಷೆಗಳೆಲ್ಲಾ ಈಗ ಸುಳ್ಳಾಗಿವೆ.
ರಾಹುಲ್ ತೆವಾಟಿಯಾಗೂ ಸಿಕ್ಕಿಲ್ಲ ಸ್ಥಾನ..!
ರಿಂಕು ಸಿಂಗ್ ಹಾಗೆಯೇ ರಾಹುಲ್ ತೆವಾಟಿಯಾ ಸಹ ಉತ್ತಮ ಫಿನಿಶರ್. ಗುಜರಾತ್ ಟೈಟನ್ಸ್ ತಂಡ, 2022ರಲ್ಲಿ ಚಾಂಪಿಯನ್ ಆಗಲು ತೆವಾಟಿಯಾ ಸಹ ಕಾರಣ. ಬ್ಯಾಟಿಂಗ್ ಜೊತೆ ಬೌಲಿಂಗ್ ಸಹ ಮಾಡಬಲ್ಲರು. ಆದ್ರೆ ಅವರಿಗೂ ವಿಂಡೀಸ್ ಟಿ20 ಸರಣಿಗೆ ಚಾನ್ಸ್ ಸಿಕ್ಕಿಲ್ಲ. ವಿಂಡೀಸ್ ಫ್ಲೈಟ್ ಮಿಸ್ ಮಾಡಿಕೊಂಡಿರೋ ತೆವಾಟಿಯಾಗೆ ಭಾರಿ ನಿರಾಸೆಯಾಗಿದೆ.
ಮೋಹಿತ್ ಕಮ್ಬ್ಯಾಕ್ ಕನಸು ನುಚ್ಚುನೂರು:
34 ವರ್ಷದ ಮೋಹಿತ್ ಶರ್ಮಾ, ಈ ಸಲದ ಐಪಿಎಲ್‌ನಲ್ಲಿ ಗುಜರಾತ್ ಟೈಟನ್ಸ್ ಪರ ಅದ್ಭುತವಾಗಿ ಬೌಲಿಂಗ್ ಮಾಡಿ, 14 ಮ್ಯಾಚ್ನಲ್ಲಿ 27 ವಿಕೆಟ್ ಪಡೆದು, 2ನೇ ಗರಿಷ್ಠ ವಿಕೆಟ್ ಟೇಕರ್ ಎನಿಸಿಕೊಂಡಿದ್ದರು. ಲಖನೌ ಮತ್ತು ಹೈದ್ರಾಬಾದ್ ವಿರುದ್ಧ ತಲಾ 4 ವಿಕೆಟ್, ಮುಂಬೈ ಇಂಡಿಯನ್ಸ್ ವಿರುದ್ಧ ಐದು ವಿಕೆಟ್ ಸಹ ಪಡೆದಿದ್ದರು. ಫೈನಲ್ನಲ್ಲಿ 3 ವಿಕೆಟ್ ಉರುಳಿಸಿ ಧೋನಿ ಹುಡುಗರನ್ನ ಕಾಡಿದ್ದರು. 2015ರಲ್ಲಿ ಟೀಂ ಇಂಡಿಯಾದಿಂದ ಡ್ರಾಪ್ ಆಗಿದ್ದ ಮೋಹಿತ್ ಶರ್ಮಾ 8 ವರ್ಷಗಳ ಬಳಿಕ ಕಮ್ಬ್ಯಾಕ್ ಮಾಡೋ ಕನಸು ಕಂಡಿದ್ದರು. ಆದ್ರೆ ಅವರ ಕನಸು ನುಚ್ಚುನೂರಾಗಿದೆ.
ಪ್ರತಿ ವಿಶ್ವಕಪ್ ಟೂರ್ನಿಯಲ್ಲೂ ಕೊಹ್ಲಿಯ ಬ್ಯಾಟಿಂಗ್ ಗ್ರಾಫ್ ಏರಿಕೆ..! ಎದುರಾಳಿ ತಂಡಗಳಿಗೆ ವಾರ್ನಿಂಗ್..!
ಟೆಸ್ಟ್-ಒನ್ಡೇಗೆ ಸೀಮಿತವಾದ ಋತುರಾಜ್ ಗಾಯಕ್ವಾಡ್
ಐಪಿಎಲ್‌ನಲ್ಲಿ ಸಿಎಸ್ಕೆ ಪರ ಅದ್ಬುತ ಪ್ರದರ್ಶನ ನೀಡಿದ್ದರೂ ಋತುರಾಜ್ ಗಾಯಕ್ವಾಡ್‌ಗೆ ಟಿ20 ತಂಡದಲ್ಲಿ ಯಾಕೆ ಅವಕಾಶ ದೊರೆತಿಲ್ಲ ಎಂಬುದು ಬಹುತೇಕರಿಗೆ ಅಚ್ಚರಿ ಮೂಡಿಸಿದೆ. ಋತುರಾಜ್ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಟೆಸ್ಟ್ ಮತ್ತು ಏಕದಿನ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ ಚುಟುಕು ಮಾದರಿಯಲ್ಲಿ ಅವರಿಗೆ ಅವಕಾಶ ಸಿಕ್ಕಲ್ಲ. ಐಪಿಎಲ್‌ನಲ್ಲಿ 590 ರನ್ ಬಾರಿಸಿದ್ದರೂ ನಿರಾಸೆಯಾಗಿದೆ.
ಮಿಸ್ಟ್ರಿ ಸ್ಪಿನ್ನರ್ ವರುಣ್ ಕನಸು ನನಸಾಗಲಿಲ್ಲ..!
ವರುಣ್ ಚಕ್ರವರ್ತಿ ಈ ಸಲದ ಐಪಿಎಲ್‌ನಲ್ಲಿ ಕೆಕೆಆರ್ ಪರ 14 ಮ್ಯಾಚ್ನಿಂದ 20 ವಿಕೆಟ್ ಪಡೆದಿದ್ದಾರೆ. 2021ರಲ್ಲಿ ಟಿ20 ವಿಶ್ವಕಪ್ ಬಳಿಕ ಟೀಂ ಇಂಡಿಯಾದಿಂದ ಡ್ರಾಪ್ ಆಗಿದ್ದ ಮಿಸ್ಟ್ರಿ ಸ್ಪಿನ್ನರ್ ಕಮ್ಬ್ಯಾಕ್ ಮಾಡಲು ತುದಿಗಾಲಲ್ಲಿ ನಿಂತಿದ್ದರು. ಆದ್ರೆ 31 ವರ್ಷದ ಸ್ಪಿನ್ನರ್ಗೆ ಅವಕಾಶ ಸಿಕ್ಕಿಲ್ಲ. 2021ರಲ್ಲಿ ಅವರಿಗೆ ಸಿಕ್ಕ ಅವಕಾಶವನ್ನ ಸದ್ಭಳಕೆ ಮಾಡಿಕೊಳ್ಳಲಿಲ್ಲ ಅನ್ನೋದೇ ಇದಕ್ಕೆ ಕಾರಣ.