Pat Cummins: ಐಪಿಎಲ್‌ನಿಂದ ಹೊರಬಿದ್ದ ಕೆಕೆಆರ್ ಸ್ಟಾರ್ ಆಟಗಾರ..!

By Naveen Kodase  |  First Published May 14, 2022, 9:23 AM IST

* ಕೋಲ್ಕತಾ ನೈಟ್ ರೈಡರ್ಸ್ ತಂಡದಿಂದ ಹೊರಬಿದ್ದ ಪ್ಯಾಟ್ ಕಮಿನ್ಸ್

* ಸೊಂಟದ ಭಾಗದಲ್ಲಿ ನೋವು ಕಾಣಿಸಿಕೊಂಡ ಕಾರಣ ಕಮಿನ್ಸ್‌ 2 ವಾರಗಳ ವಿಶ್ರಾಂತಿ

* ಕೆಕೆಆರ್ ತಂಡವು ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ


ಮುಂಬೈ(ಮೇ.14): ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಕೋಲ್ಕತಾ ನೈಟ್‌ ರೈಡ​ರ್ಸ್ (Kolkata Knight Riders) ವೇಗಿ ಪ್ಯಾಟ್‌ ಕಮಿನ್ಸ್‌ (Pat Cummins) 15ನೇ ಆವೃತ್ತಿ ಐಪಿಎಲ್‌ನಿಂದ (IPL 2022) ಹೊರಬಿದ್ದಿದ್ದಾರೆ. ‘ಸೊಂಟದ ಭಾಗದಲ್ಲಿ ನೋವು ಕಾಣಿಸಿಕೊಂಡ ಕಾರಣ ಕಮಿನ್ಸ್‌ 2 ವಾರಗಳ ವಿಶ್ರಾಂತಿಗಾಗಿ ಆಸ್ಪ್ರೇಲಿಯಾಕ್ಕೆ ಮರಳಿದ್ದಾರೆ’ ಎಂದು ಫ್ರಾಂಚೈಸಿಯು ಶುಕ್ರವಾರ ಖಚಿತಪಡಿಸಿದೆ. ಪ್ಯಾಟ್ ಕಮಿನ್ಸ್ ಈಗಾಗಲೇ ಬಯೋಬಬಲ್‌ ತೊರೆದು ಸಿಡ್ನಿಗೆ ಬಂದಿಳಿದಿದ್ದು, ಅಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ಶ್ರೀಲಂಕಾ ಪ್ರವಾಸಕ್ಕೂ ಮುನ್ನ ಪುನಸ್ಚೇತನ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ.

ಮೆಗಾ ಹರಾಜಿನಲ್ಲಿ 7.25 ಕೋಟಿ ರು.ಗೆ ಕೋಲ್ಕತಾ ನೈಟ್ ರೈಡರ್ಸ್ ಪಾಲಾಗಿದ್ದ ಆಸ್ಪ್ರೇಲಿಯಾ ಟೆಸ್ಟ್‌ ನಾಯಕ ಪ್ಯಾಟ್ ಕಮಿನ್ಸ್‌ ಈ ಬಾರಿ ತಂಡದ ಪರ ಕೇವಲ 5 ಪಂದ್ಯಗಳನ್ನಾಡಿದ್ದು, 7 ವಿಕೆಟ್‌ ಪಡೆದಿದ್ದಾರೆ. ಮುಂಬೈ ವಿರುದ್ಧ ಕೇವಲ 14 ಎಸೆತಗಳಲ್ಲಿ 50 ಬಾರಿಸಿದ್ದು ಐಪಿಎಲ್‌ ಇತಿಹಾಸದ ಜಂಟಿ ವೇಗದ ಅರ್ಧಶತಕ ಎನಿಸಿಕೊಂಡಿದೆ.

Tap to resize

Latest Videos

ಪ್ಯಾಟ್ ಕಮಿನ್ಸ್‌, ಕೋಲ್ಕತಾ ನೈಟ್ ರೈಡರ್ಸ್ ತೊರೆಯುವ ಮುನ್ನ, ನನಗೆ ಈ ಬಾರಿ ಭಾರತದಲ್ಲಿ ಹಲವು ಸುಮದುರ ಕ್ಷಣಗಳು ದೊರಕಿವೆ, ನನ್ನ ಹಾಗೂ ನನ್ನ ಕುಟುಂಬದ ಬಗ್ಗೆ ಕಾಳಜಿ ವಹಿಸಿದ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ. ಟೂರ್ನಿಯ ಇನ್ನುಳಿದ ಪಂದ್ಯಗಳಿಗೆ ನಮ್ಮ ತಂಡದ ಆಟಗಾರರಿಗೆ ಶುಭ ಹಾರೈಸುತ್ತಿದ್ದೇನೆ. ನಾನು ಉಳಿದ ಪಂದ್ಯಗಳನ್ನು ವೀಕ್ಷಿಸುತ್ತೇನೆ ಹಾಗೂ ಚಿಯರ್ ಅಪ್ ಮಾಡುತ್ತೇನೆ ಎಂದು ಪ್ಯಾಟ್ ಕಮಿನ್ಸ್ ಹೇಳಿದ್ದಾರೆ.

IPL 2022: ಪೃಥ್ವಿ ಶಾಗೆ ಟೈಫಾಯ್ಡ್‌ ಜ್ವರ, ಟೂರ್ನಿಯಿಂದಲೇ ಔಟ್..?

ಸದ್ಯ ಶ್ರೇಯಸ್ ಅಯ್ಯರ್ (Shreyas Iyer) ನೇತೃತ್ವದ ಕೋಲ್ಕತಾ ನೈಟ್ ರೈಡರ್ಸ್‌ ತಂಡವು 12 ಪಂದ್ಯಗಳನ್ನಾಡಿ 5 ಗೆಲುವು ಹಾಗೂ 7 ಸೋಲುಗಳೊಂದಿಗೆ 10 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದ್ದು, ಲೀಗ್ ಹಂತದಲ್ಲಿ ಇನ್ನೆರಡು ಪಂದ್ಯಗಳನ್ನು ಆಡಲಿದೆ. ಇಂದು ಕೋಲ್ಕತಾ ನೈಟ್ ರೈಡರ್ಸ್ ತಂಡವು, ಕೇನ್ ವಿಲಿಯಮ್ಸನ್ ನೇತೃತ್ವದ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಇಂದಿನ ಪಂದ್ಯದಲ್ಲಿ ಕೆಕೆಆರ್ ಮುಗ್ಗರಿಸಿದರೆ ಅಧಿಕೃತವಾಗಿ ಪ್ಲೇ ಆಫ್‌ ರೇಸ್‌ನಿಂದ ಹೊರಬೀಳಲಿದೆ. ಇನ್ನು ಕೆಕೆಆರ್ ಪಾಲಿಗೆ ಕೇವಲ ಎರಡು ಪಂದ್ಯಗಳು ಮಾತ್ರ ಬಾಕಿ ಇರುವುದರಿಂದ ಪ್ಯಾಟ್ ಕಮಿನ್ಸ್ ಅವರ ಸ್ಥಾನಕ್ಕೆ ಬದಲಿ ಆಟಗಾರರನ್ನು ಆಯ್ಕೆ ಮಾಡಿಕೊಂಡಿಲ್ಲ.

ಮೆಕಲಮ್‌ ಇಂಗ್ಲೆಂಡ್‌ ಟೆಸ್ಟ್‌ ತಂಡಕ್ಕೆ ಕೋಚ್‌

ಲಂಡನ್‌: ನ್ಯೂಜಿಲೆಂಡ್‌ ಮಾಜಿ ನಾಯಕ ಬ್ರೆಂಡನ್‌ ಮೆಕಲಮ್‌ (Brendon Mccullum) ಇಂಗ್ಲೆಂಡ್‌ ಟೆಸ್ಟ್‌ ತಂಡದ ನೂತನ ಕೋಚ್‌ ಆಗಿ ನೇಮಕಗೊಂಡಿದ್ದಾರೆ. ಸದ್ಯ ಅವರು ಐಪಿಎಲ್‌ನ ಕೋಲ್ಕತಾ ತಂಡದ ಪ್ರಧಾನ ಕೋಚ್‌ ಆಗಿದ್ದು, ಈ ಆವೃತ್ತಿ ಬಳಿಕ ಕೋಚ್‌ ಹುದ್ದೆ ತೊರೆಯಲಿದ್ದಾರೆ. ಬಳಿಕ ಜೂನ್‌ನಲ್ಲಿ ನ್ಯೂಜಿಲೆಂಡ್‌ ವಿರುದ್ಧದ ಸರಣಿ ಮೂಲಕ ಇಂಗ್ಲೆಂಡ್‌ನ ಕೋಚ್‌ ಆಗಿ ಕಾರಾರ‍ಯರಂಭಿಸಲಿದ್ದಾರೆ. 

40 ವರ್ಷದ ಮೆಕಲಮ್‌ 2019ರಲ್ಲಿ ಅಂ.ರಾ. ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದು, ಮೊದಲ ಬಾರಿ ಟೆಸ್ಟ್‌ ತಂಡಕ್ಕೆ ಕೋಚ್‌ ಆಗಲಿದ್ದಾರೆ. 4 ವರ್ಷ ಅವಧಿಗೆ ಇಸಿಬಿ ಜೊತೆ ಒಪ್ಪಂದಕ್ಕೆ ಸಹಿ ಹಾಕಿದ್ದು, ವರ್ಷಕ್ಕೆ ಅಂದಾಜು 4.7 ಕೋಟಿ ರು. ಸಂಭಾವನೆ ಪಡೆಯಲಿದ್ದಾರೆ.
 

click me!