ಜೈಸ್ವಾಲ್-ದುಬೆ ಸ್ಫೋಟಕ ಬ್ಯಾಟಿಂಗ್, 6 ವಿಕೆಟ್ ಭರ್ಜರಿ ಗೆಲುವಿನ ಮೂಲಕ ಸರಣಿ ಕೈವಶ!

By Suvarna News  |  First Published Jan 14, 2024, 10:11 PM IST

ಆಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಯ ದ್ವಿತೀಯ ಪಂದ್ಯದಲ್ಲಿ ಭಾರತ 6 ವಿಕೆಟ್ ಗೆಲುವು ಕಂಡಿದೆ. ಯಶಸ್ವಿ ಜೈಸ್ವಾಲ್ ಹಾಗೂ ಶಿವಂ ದುಬೆ ಸ್ಫೋಟಕ ಬ್ಯಾಟಿಂಗ್ ನರೆವಿನಿಂದ ಭಾರತ ಅಭೂತಪೂರ್ವ ಗೆಲುವು ಸಾಧಿಸಿದೆ. ಇಷ್ಟೇ ಅಲ್ಲ 1 ಪಂದ್ಯ ಬಾಕಿ ಇರುವಂತೆ ಸರಣಿ ವಶಪಡಿಸಿಕೊಂಡಿದೆ.


ಇಂದೋರ್(ಜ.14) ಯಶಸ್ವಿ ಜೈಸ್ವಾಲ್ ಯಶಸ್ವಿ ಆಟ, ಶಿವಂ ದುಬೆ  ಸ್ಫೋಟಕ ಬ್ಯಾಟಿಂಗ್ ಹಾಗೂ ವಿರಾಟ್ ಕೊಹ್ಲಿಯ ಉಪಯುಕ್ತ ಕಾಣಿಕೆಯಿಂದ ಭಾರತ, ಆಫ್ಘಾನಿಸ್ತಾನ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ 6 ವಿಕೆಟ್ ಗೆಲುವು ಕಂಡಿದೆ. 173 ರನ್ ಟಾರ್ಗೆಟ್ ಪಡೆದ ಟೀಂ ಇಂಡಿಯಾ 15.4 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿದೆ. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ 2-0 ಅಂತರದಲ್ಲಿ ಮುನ್ನಡೆ ಸಾಧಿಸಿರುವ ಭಾರತ ಸರಣಿ ಕೈವಶ ಮಾಡಿದೆ.

ಆಫ್ಘಾನಿಸ್ತಾನ ವಿರುದ್ಧ ಗರಿಷ್ಠ ಟಾರ್ಗೆಟ್ ಯಶಸ್ವಿ ಚೇಸ್ ಮಾಡಿದ ತಂಡ
176 ರನ್,  ಶ್ರೀಲಂಕಾ (2022)
173 ರನ್, ಭಾರತ (2024)
169 ರನ್ ಐರ್ಲೆಂಡ್(2022)
163 ರನ್ ಹಾಂಕಾಂಗ್ (2015)

Latest Videos

undefined

ಫೇಕ್ ಅಕೌಂಟ್‌ನಿಂದ ಬಂದಿರಬಹುದು, ಅಚ್ಚರಿಗೊಳಿಸಿದ್ದ ಜೋಕೋವಿಚ್ ಮೆಸೇಜ್‌ ಕತೆ ಹೇಳಿದ ಕೊಹ್ಲಿ!

2019ರ ಬಳಿಕ ತವರಿನಲ್ಲಿ ಭಾರತದ ಟಿ20 ಸರಣಿ ದಾಖಲೆ
ಪಂದ್ಯ 15
ಗೆಲುವು 13
ಡ್ರಾ 2
ಸೋಲು 0 

ಚೇಸಿಂಗ್ ಆರಂಭದಲ್ಲೇ ಭಾರತ ನಾಯಕ ರೋಹಿತ್ ಶರ್ಮಾ ವಿಕೆಟ್ ಕಳೆದುಕೊಂಡಿತು. ಆದರೆ ಜೈಸ್ವಾಲ್ ಹಾಗೂ ವಿರಾಟ್ ಕೊಹ್ಲಿ ಹೋರಾಟದಿಂದ ಅಷ್ಚೇ ವೇಹದಲ್ಲಿ ಭಾರತ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಕೊಹ್ಲಿ 16 ಎಸೆತದಲ್ಲಿ 29 ರನ್ ಸಿಡಿಸಿ ಔಟಾದರು. ಜೈಸ್ವಾಲ್ ಹಾಗೂ ಶಿವಂ ದುಬೆ ಹೋರಾಟ ಭಾರತದ ಗೆಲುವು ಖಚಿತಪಡಿಸಿದೆ. ಉಭಯ ಆಟಾಗಾರರು ಹಾಫ್ ಸೆಂಚುರಿ ಸಿಡಿಸಿ ಅಬ್ಬರಿಸಿದರು. 

ನಿಮ್ಮ ಧೈರ್ಯಕ್ಕೆ ಸೆಲ್ಯೂಟ್‌ ಎಂದ ಗೌತಮ್ ಅದಾನಿ: ಜಮ್ಮು ಕಾಶ್ಮೀರ ವಿಕಲಚೇತನ ಕ್ರಿಕೆಟಿಗನಿಗೆ ಉದ್ಯಮಿ ನೆರವು!

ಜೈಸ್ವಾಲ್ 34 ಎಸೆತದಲ್ಲಿ 68 ರನ್ ಸಿಡಿಸಿ ಮಿಂಚಿದರು. ಜಿತೇಶ್ ಶರ್ಮಾ ಡಕೌಟ್ ಆದರು. ಆದರೆ ಶಿವಂ ದುಬೆ 32 ಎಸೆತದಲ್ಲಿ ಅಜೇಯ 63 ರನ್ ಸಿಡಿಸಿದರು. ಈ ಮೂಲಕ ಭಾರತ 15.4 ಓವರ್‌ಗಳಲ್ಲಿ 173 ರನ್ ಸಿಡಿಸಿ ಗುರಿ ತಲುಪಿತು.

click me!