
ಇಂದೋರ್(ಜ.14) ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿಗೆ ದೇಶ ವಿದೇಶಗಳಲ್ಲಿ ಅಭಿಮಾನಿಗಳಿದ್ದಾರೆ. ಇತರ ಕ್ರೀಡೆಗಳ ಹಲವು ದಿಗ್ಗಜರು ಕೊಹ್ಲಿ ಬ್ಯಾಟಿಂಗ್‌ಗೆ ಮಾರು ಹೋಗಿದ್ದಾರೆ. ಈ ಪೈಕಿ ಸರ್ಬಿಯಾದ ಟೆನಿಸ್ ದಿಗ್ಗದ ನೋವಾಕ್ ಜೋಕೋವಿಚ್ ಕೂಡ ಒಬ್ಬರು. ಕೊಹ್ಲಿ ಅದ್ಭುತ ಆಟವನ್ನು ಜೋಕೋವಿಚ್ ಹಲವು ಬಾರಿ ಅಭಿನಂದಿಸಿದ್ದಾರೆ. ಆದರೆ ಮೊದಲ ಬಾರಿಗೆ ಜೋಕೋವಿಚ್ ಸಂದೇಶ ನೋಡಿ ಕೊಹ್ಲಿ ಅಚ್ಚರಿಗೊಂಡಿದ್ದರು. ಇಷ್ಟೇ ಅಲ್ಲ ಫೇಕ್ ಖಾತೆಯಿಂದ ಸಂದೇಶ ಬಂದಿರುವ ಸಾಧ್ಯತೆ ಇದೆ ಎಂದು ಜೋಕೋವಿಚ್ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯನ್ನೂ ಪರಿಶೀಲಿಸಿದ್ದರು. ಈ ಕುರಿತು ವಿರಾಟ್ ಕೊಹ್ಲಿ ಹಲವು ರೋಚಕ ಮಾಹಿತಿ ಬಹಿರಂಗಪಡಿಸಿದ್ದಾರೆ.
ಬಿಸಿಸಿಐ ವಿಡಿಯೋ ಪೋಸ್ಟ್ ಮಾಡಿದ್ದು, ಕೊಹ್ಲಿ ಹಾಗೂ ಜೋಕೋವಿಚ್ ನಡುವಿನ ಆತ್ಮೀಯತೆ ಕುರಿತು ಕೆಲ ಮಾಹಿತಿಗಳು ಬಹಿರಂಗವಾಗಿದೆ. ಜೋಕೋವಿಚ್ ಹಾಗೂ ನಾನು ಸಾಮಾಜಿಕ ಮಾಧ್ಯಮಗಳ ಮೂಲಕ ಸಂದೇಶ ಹಂಚಿಕೊಂಡಿದ್ದೇವೆ. ಶುಭಾಶಯ ವಿನಿಮಯ ಮಾಡಿದ್ದೇವೆ. ಆದರೆ ಮೊದಲ ಬಾರಿಗೆ ಜೋಕೋವಿಚ್ ಸಂದೇಶ ಕಳುಹಿಸಿದ್ದರು. ಆರಂಭದಲ್ಲಿ ನಾನು ಅಚ್ಚರಿಗೊಂಡೆ. ಕಾರಣ ಜೋಕೋವಿಚ್ ನನಗೆ ಸಂದೇಶ ಕಳುಹಿಸಿದ್ದಾರೆ ಅನ್ನೋ ವಿಚಾರ ನಂಬಲು ಸಾಧ್ಯವಾಗಲಿಲ್ಲ. ಇದು ಫೇಕ್ ಖಾತೆ ಆಗಿರಬಹುದೇ ಎಂದು ಜೋಕೋವಿಚ್ ಖಾತೆಗೆ ಪರಿಶೀಲಿಸಿದ್ದೆ ಎಂದು ಕೊಹ್ಲಿ ಹೇಳಿದ್ದಾರೆ.
ವಮಿಕಾಗೆ ಅಂಥದ್ದೇನಾಗಿದೆ..? ಮಗಳ ಮುಖ ತೋರಿಸಲು ವಿರಾಟ್ ಕೊಹ್ಲಿಗೆ ಅಂಜಿಕೆಯೇಕೆ..? ಇಲ್ಲಿದೆ ಕಾರಣ!
ಖುದ್ದು ಜೋಕೋವಿಚ್ ಸಂದೇಶ ಕಳುಹಿಸಿದ್ದಾರೆ ಅನ್ನೋದು ಖಾತ್ರಿಯಾದ ಬಳಿಕ ಪ್ರತಿಕ್ರಿಯೆ ನೀಡಿದ್ದೆ. ಬಳಿಕ ನಾವಿಬ್ಬರು ಹಲವರು ಬಾರಿ ಸಂದೇಶ ವಿನಿಮಯ ಮಾಡಿಕೊಂಡಿದ್ದೇವೆ. ಜೋಕೋವಿಚ್ ಪಂದ್ಯಗಳು, ಗೆಲುವಿಗೆ ಶುಭಾಶಯ ಕೋರಿದ್ದೇನೆ. ಇದೇ ರೀತಿ ನನಗೆ ಹಲವು ಬಾರಿ ಶುಭಾಶಯ ತಿಳಿಸಿದ್ದಾರೆ ಎಂದು ಕೊಹ್ಲಿ ಹೇಳಿದ್ದಾರೆ.
ಇತ್ತ ವಿರಾಟ್ ಕೊಹ್ಲಿ ಕುರಿತು ಜೋಕೋವಿಚ್ ಕೂಡ ಮಾತನಾಡಿದ್ದಾರೆ. ವಿರಾಟ್ ಕೊಹ್ಲಿ ಹಾಗೂ ನಾನು ಹಲವು ವರ್ಷಗಳಿಂದ ಮೆಸೇಜ್ ಮಾಡುತ್ತಿದ್ದೇವೆ. ಆದರೆ ನಮಗೆ ಭೇಟಿಯಾಗುವ ಅವಕಾಶ ಸಿಕ್ಕಿಲ್ಲ. ನನ್ನ ಕುರಿತು ವಿರಾಟ್ ಕೊಹ್ಲಿ ಅತ್ಮೀಯವಾಗಿ ಹಾಗೂ ಗೌರವಯುತವಾಗಿ ಮಾತನಾಡುವುದನ್ನು ಕೇಳಲು ಸಂತೋಷವಾಗುತ್ತಿದೆ. ಕೊಹ್ಲಿ ಕರಿಯರ್, ಸಾಧನೆಗಳು ಪ್ರೇರಣೆಯಾಗಿದೆ ಎಂದು ಜೋಕೋವಿಚ್ ಹೇಳಿದ್ದಾರೆ.
ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆರಂಭಿಕರಾಗಿ ವಿರಾಟ್ ಕೊಹ್ಲಿ ಕಣಕ್ಕೆ..?
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.