Asianet Suvarna News Asianet Suvarna News

ಫೇಕ್ ಅಕೌಂಟ್‌ನಿಂದ ಬಂದಿರಬಹುದು, ಅಚ್ಚರಿಗೊಳಿಸಿದ್ದ ಜೋಕೋವಿಚ್ ಮೆಸೇಜ್‌ ಕತೆ ಹೇಳಿದ ಕೊಹ್ಲಿ!

ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ ಹಾಗೂ ಟೆನಿಸ್ ದಿಗ್ಗಜ ನೋವಾಕ್ ಜೊಕೋವಿಚ್ ಸಾಮಾಜಿಕ ಮಾಧ್ಯಮಗಳ ಮೂಲಕ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡಿದ್ದಾರೆ. ಇದೀಗ ವಿರಾಟ್ ಕೊಹ್ಲಿ ಜೋಕೋವಿಚ್ ಮೊದಲ ಮೆಸೆಜ್ ಅಚ್ಚರಿ ಕುರಿತು ಮಾತನಾಡಿದ್ದಾರೆ.
 

Checked weather its fake Virat Kohli reveals Novak Djokovic first message and friendship ckm
Author
First Published Jan 14, 2024, 6:33 PM IST

ಇಂದೋರ್(ಜ.14) ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿಗೆ ದೇಶ ವಿದೇಶಗಳಲ್ಲಿ ಅಭಿಮಾನಿಗಳಿದ್ದಾರೆ. ಇತರ ಕ್ರೀಡೆಗಳ ಹಲವು ದಿಗ್ಗಜರು ಕೊಹ್ಲಿ ಬ್ಯಾಟಿಂಗ್‌ಗೆ ಮಾರು ಹೋಗಿದ್ದಾರೆ. ಈ ಪೈಕಿ ಸರ್ಬಿಯಾದ ಟೆನಿಸ್ ದಿಗ್ಗದ ನೋವಾಕ್ ಜೋಕೋವಿಚ್ ಕೂಡ ಒಬ್ಬರು. ಕೊಹ್ಲಿ ಅದ್ಭುತ ಆಟವನ್ನು ಜೋಕೋವಿಚ್ ಹಲವು ಬಾರಿ ಅಭಿನಂದಿಸಿದ್ದಾರೆ. ಆದರೆ ಮೊದಲ ಬಾರಿಗೆ ಜೋಕೋವಿಚ್ ಸಂದೇಶ ನೋಡಿ ಕೊಹ್ಲಿ ಅಚ್ಚರಿಗೊಂಡಿದ್ದರು. ಇಷ್ಟೇ ಅಲ್ಲ ಫೇಕ್ ಖಾತೆಯಿಂದ ಸಂದೇಶ ಬಂದಿರುವ ಸಾಧ್ಯತೆ ಇದೆ ಎಂದು ಜೋಕೋವಿಚ್ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯನ್ನೂ ಪರಿಶೀಲಿಸಿದ್ದರು. ಈ ಕುರಿತು ವಿರಾಟ್ ಕೊಹ್ಲಿ ಹಲವು ರೋಚಕ ಮಾಹಿತಿ ಬಹಿರಂಗಪಡಿಸಿದ್ದಾರೆ.

ಬಿಸಿಸಿಐ ವಿಡಿಯೋ ಪೋಸ್ಟ್ ಮಾಡಿದ್ದು, ಕೊಹ್ಲಿ ಹಾಗೂ ಜೋಕೋವಿಚ್ ನಡುವಿನ ಆತ್ಮೀಯತೆ ಕುರಿತು ಕೆಲ ಮಾಹಿತಿಗಳು ಬಹಿರಂಗವಾಗಿದೆ. ಜೋಕೋವಿಚ್ ಹಾಗೂ ನಾನು ಸಾಮಾಜಿಕ ಮಾಧ್ಯಮಗಳ ಮೂಲಕ ಸಂದೇಶ ಹಂಚಿಕೊಂಡಿದ್ದೇವೆ. ಶುಭಾಶಯ ವಿನಿಮಯ ಮಾಡಿದ್ದೇವೆ. ಆದರೆ ಮೊದಲ ಬಾರಿಗೆ ಜೋಕೋವಿಚ್ ಸಂದೇಶ ಕಳುಹಿಸಿದ್ದರು. ಆರಂಭದಲ್ಲಿ ನಾನು ಅಚ್ಚರಿಗೊಂಡೆ. ಕಾರಣ ಜೋಕೋವಿಚ್ ನನಗೆ ಸಂದೇಶ ಕಳುಹಿಸಿದ್ದಾರೆ ಅನ್ನೋ ವಿಚಾರ ನಂಬಲು ಸಾಧ್ಯವಾಗಲಿಲ್ಲ. ಇದು ಫೇಕ್ ಖಾತೆ ಆಗಿರಬಹುದೇ ಎಂದು ಜೋಕೋವಿಚ್ ಖಾತೆಗೆ ಪರಿಶೀಲಿಸಿದ್ದೆ ಎಂದು ಕೊಹ್ಲಿ ಹೇಳಿದ್ದಾರೆ.

ವಮಿಕಾಗೆ ಅಂಥದ್ದೇನಾಗಿದೆ..? ಮಗಳ ಮುಖ ತೋರಿಸಲು ವಿರಾಟ್ ಕೊಹ್ಲಿಗೆ ಅಂಜಿಕೆಯೇಕೆ..? ಇಲ್ಲಿದೆ ಕಾರಣ!

ಖುದ್ದು ಜೋಕೋವಿಚ್ ಸಂದೇಶ ಕಳುಹಿಸಿದ್ದಾರೆ ಅನ್ನೋದು ಖಾತ್ರಿಯಾದ ಬಳಿಕ ಪ್ರತಿಕ್ರಿಯೆ ನೀಡಿದ್ದೆ. ಬಳಿಕ ನಾವಿಬ್ಬರು ಹಲವರು ಬಾರಿ ಸಂದೇಶ ವಿನಿಮಯ ಮಾಡಿಕೊಂಡಿದ್ದೇವೆ. ಜೋಕೋವಿಚ್ ಪಂದ್ಯಗಳು, ಗೆಲುವಿಗೆ ಶುಭಾಶಯ ಕೋರಿದ್ದೇನೆ. ಇದೇ ರೀತಿ ನನಗೆ ಹಲವು ಬಾರಿ ಶುಭಾಶಯ ತಿಳಿಸಿದ್ದಾರೆ ಎಂದು ಕೊಹ್ಲಿ ಹೇಳಿದ್ದಾರೆ. 

 

 

ಇತ್ತ ವಿರಾಟ್ ಕೊಹ್ಲಿ ಕುರಿತು ಜೋಕೋವಿಚ್ ಕೂಡ ಮಾತನಾಡಿದ್ದಾರೆ. ವಿರಾಟ್ ಕೊಹ್ಲಿ ಹಾಗೂ ನಾನು ಹಲವು ವರ್ಷಗಳಿಂದ ಮೆಸೇಜ್ ಮಾಡುತ್ತಿದ್ದೇವೆ. ಆದರೆ ನಮಗೆ ಭೇಟಿಯಾಗುವ ಅವಕಾಶ ಸಿಕ್ಕಿಲ್ಲ. ನನ್ನ ಕುರಿತು ವಿರಾಟ್ ಕೊಹ್ಲಿ ಅತ್ಮೀಯವಾಗಿ ಹಾಗೂ ಗೌರವಯುತವಾಗಿ ಮಾತನಾಡುವುದನ್ನು ಕೇಳಲು ಸಂತೋಷವಾಗುತ್ತಿದೆ. ಕೊಹ್ಲಿ ಕರಿಯರ್, ಸಾಧನೆಗಳು ಪ್ರೇರಣೆಯಾಗಿದೆ ಎಂದು ಜೋಕೋವಿಚ್ ಹೇಳಿದ್ದಾರೆ.

ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆರಂಭಿಕರಾಗಿ ವಿರಾಟ್ ಕೊಹ್ಲಿ ಕಣಕ್ಕೆ..?
 

Follow Us:
Download App:
  • android
  • ios