ಆಫ್ಘಾನಿಸ್ತಾನ ಸ್ಫೋಟಕ ಬ್ಯಾಟಿಂಗ್, ಭಾರತಕ್ಕೆ 173 ರನ್ ಟಾರ್ಗೆಟ್!

By Suvarna News  |  First Published Jan 14, 2024, 8:38 PM IST

2ನೇ ಟಿ20 ಪಂದ್ಯದಲ್ಲಿ ಆಫ್ಘಾನಿಸ್ತಾನ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದೆ. ಆರಂಭದಲ್ಲಿ ತತ್ತರಿಸಿದರೂ ಆಫ್ಘಾನಿಸ್ತಾನ ದಿಟ್ಟ ಹೋರಾಟ ನೀಡುವಲ್ಲಿ ಯಶಸ್ವಿಯಾಗಿದೆ. ಇದೀಗ ಭಾರತಕ್ಕೆ 173 ರನ್ ಟಾರ್ಗೆಟ್ ನೀಡಿದೆ. 
 


ಇಂದೋರ್(ಜ.14)ಭಾರತ ಹಾಗೂ ಆಫ್ಘಾನಿಸ್ತಾನ ನಡುವಿನ ದ್ವಿತೀಯ ಟಿ20 ಪಂದ್ಯ ರೋಚಕ ಘಟ್ಟ ತಲುಪಿದೆ. ಗುಲ್ಬಾದಿನ್ ನೈಬ್ ಸ್ಫೋಟಕ ಹಾಫ್ ಸೆಂಚುರಿ, ಅಂತಿಮ ಹಂತದಲ್ಲಿ ದಿಟ್ಟ ಹೋರಾಟದಿಂದ ಆಫ್ಘಾನಿಸ್ತಾನ ವಿಕೆಟ್ ನಷ್ಟಕ್ಕೆ 172 ರನ್ ಸಿಡಿಸಿ ಆಲೌಟ್ ಆಗಿದೆ.  ಆಫ್ಘಾನಿಸ್ತಾನ ವಿರುದ್ದದ 2ನೇ ಟಿ20 ಪಂದ್ಯ ಹಾಗೂ ಸರಣಿ ಕೈವಶಪಡಿಸಲು ಭಾರತಕ್ಕೆ 172 ರನ್ ಟಾರ್ಗೆಟ್ ನೀಡಲಾಗಿದೆ. 

ಇಂದೋರ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಇಳಿದ ಆಫ್ಘಾನಿಸ್ತಾನ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. 9 ಎಸೆತದಲ್ಲಿ 14 ರನ್ ಸಿಡಿಸಿದ ರಹಮಾನುಲ್ಲಾ ಗುರ್ಬಾಜ್ ವಿಕೆಟ್ ಪತನ ಭಾರತಕ್ಕೆ ಮೇಲುಗೈ ತಂದುಕೊಟ್ಟಿತು. ನಾಯಕ ಇಬ್ರಾಹಿಂ ಜರ್ದಾನ್ ಕೇವಲ 8 ರನ್ ಸಿಡಿಸಿ ಔಟಾದರು. ಆದರೆ ಗುಲ್ಬಾದಿನ್ ನೈಬ್ ಸ್ಫೋಟಕ ಬ್ಯಾಟಿಂಗ್ ಆಫ್ಘಾನಿಸ್ತಾನ ತಂಡಕ್ಕೆ ಚೇತರಿಕೆ ನೀಡಿತು.

Latest Videos

undefined

ನಿಮ್ಮ ಧೈರ್ಯಕ್ಕೆ ಸೆಲ್ಯೂಟ್‌ ಎಂದ ಗೌತಮ್ ಅದಾನಿ: ಜಮ್ಮು ಕಾಶ್ಮೀರ ವಿಕಲಚೇತನ ಕ್ರಿಕೆಟಿಗನಿಗೆ ಉದ್ಯಮಿ ನೆರವು!

ಅಜ್ಮಾತುಲ್ಹಾ ಒಮರಾಜಿ ಕೇವಲ 2 ರನ್ ಸಿಡಿಸಿ ಔಟಾದರು. ಗುಲ್ಬಾದಿನ್ ನೈಬ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ನೈಬ್ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು. ನೈಬ್ ಕೇವಲ 35 ಎಸೆತದಲ್ಲಿ 57 ರನ್ ಸಿಡಿಸಿ ಔಟಾದರು. ಇತ್ತ ಮೊಹಮ್ಮದ್ ನಬಿ 23 ರನ್ ಸಿಡಿಸಿ ನಿರ್ಗಮಿಸಿದರು. ಒಂದೆಡೆ ರನ್ ಬಂದರೂ ಮತ್ತೊಂದೆಡೆ ವಿಕೆಟ್ ಪತನ ಆಫ್ಘಾನಿಸ್ತಾನ ತಂಡದ ಬೃಹತ್ ಮೊತ್ತಕ್ಕೆ ಕಡಿವಾಣ ಹಾಕಿತು.

ನಜೀಬುಲ್ಹಾ, ಕರೀಮ್ ಜನತ್ ಹಾಗೂ ಮುಜೀಬ್ ಹೋರಾಟದಿಂದ ಆಫ್ಘಾನಿಸ್ತಾನದ ಕೈಹಿಡಿಯಿತು. ನಜೀಬುಲ್ಹಾ 21 ಎಸೆತದಲ್ಲಿ 23 ರನ್ ಸಿಡಿಸಿದರು. ಕರಿಮ್ ಜನತ್ ಕೇವಲ 10 ಎಸೆತದಲ್ಲಿ 20 ರನ್ ಸಿಡಿಸಿದರೆ, ಮುಜೀಬ್ ಕೇವಲ 9 ಎಸೆತದಲ್ಲಿ 21 ರನ್ ಕಾಣಿಕೆ ನೀಡಿದರು. ನೂರ್ ಅಹಮ್ಮದ್, ನವೀನ್ ಉಲ್ ಹಕ್ ಹಾಗೂ ಫಜಲ್ಹಾಕ್ ಫಾರೂಖಿಯಿಂದ ರನ್ ಹರಿದು ಬರಲಿಲ್ಲ. ಅಂತಿಮ ಹಂತದಲ್ಲಿ ಆಫ್ಘಾನಿಸ್ತಾನ 172 ರನ್ ಸಿಡಿಸಿ ಆಲೌಟ್ ಆಯಿತು. 

ಮೈಮೇಲಿನ ಚಿನ್ನ ಅಡವಿಟ್ಟು ಮಗನಿಗೆ ಕ್ರಿಕೆಟ್ ಕಿಟ್ ಕೊಡಿಸಿದ ತಾಯಿ..! ಈತನೇ ಈಗ ಟೀಂ ಇಂಡಿಯಾದ ಭರವಸೆ

click me!