ಮಹಿಳಾ ಟೆಸ್ಟ್‌: ಮೊದಲ ದಿನವೇ ಟೀಂ ಇಂಡಿಯಾ ವಿಶ್ವದಾಖಲೆಯ 525 ರನ್..!

Published : Jun 29, 2024, 09:29 AM IST
ಮಹಿಳಾ ಟೆಸ್ಟ್‌: ಮೊದಲ ದಿನವೇ ಟೀಂ ಇಂಡಿಯಾ ವಿಶ್ವದಾಖಲೆಯ 525 ರನ್..!

ಸಾರಾಂಶ

147 ವರ್ಷಗಳ ಟೆಸ್ಟ್ ಇತಿಹಾಸವಿರುವ ಕ್ರಿಕೆಟ್‌ನಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡವು ಈ ಹಿಂದೆ ಯಾರೂ ಮಾಡದ ಅಪರೂಪದ ದಾಖಲೆ ನಿರ್ಮಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಚೆನ್ನೈ: ದಕ್ಷಿಣ ಆಫ್ರಿಕಾ ಮಹಿಳೆಯರ ವಿರುದ್ಧದ ಏಕೈಕ ಟೆಸ್ಟ್‌ ಪಂದ್ಯದ ಮೊದಲ ದಿನವೇ ಭಾರತ ವಿಶ್ವದಾಖಲೆ ಬರೆದಿದೆ. ಶಫಾಲಿ ವರ್ಮಾ ಸ್ಫೋಟಕ ದ್ವಿಶತಕ, ಸ್ಮೃತಿ ಮಂಧನಾ ಅತ್ಯಾಕರ್ಷಕ ಶತಕದ ನೆರವಿನಿಂದ ಟೀಂ ಇಂಡಿಯಾ ಶುಕ್ರವಾರ 4 ವಿಕೆಟ್‌ಗೆ ಬರೋಬ್ಬರಿ 525 ರನ್ ಕಲೆಹಾಕಿದೆ.

ಈ ಮೂಲಕ ಟೆಸ್ಟ್ (ಪುರುಷ ಹಾಗೂ ಮಹಿಳಾ) ಇತಿಹಾಸದಲ್ಲೇ ಮೊದಲ ದಿನ ಗರಿಷ್ಠ ರನ್ ದಾಖಲಿಸಿದ ಸಾಧನೆಯನ್ನು ಭಾರತ ತನ್ನ ಹೆಸರಿಗೆ ಬರೆದುಕೊಂಡಿತು. 2002ರಲ್ಲಿ ಬಾಂಗ್ಲಾದೇಶ ವಿರುದ್ಧ ಶ್ರೀಲಂಕಾ ಪುರುಷರ ತಂಡ 9 ವಿಕೆಟ್‌ಗೆ 509 ರನ್ ಗಳಿಸಿದ್ದು ಈ ವರೆಗೂ ಟೆಸ್ಟ್ ನಲ್ಲಿ ದಾಖಲೆಯಾಗಿತ್ತು. ಇನ್ನು, ಮಹಿಳಾ ಟೆಸ್ಟ್‌ನಲ್ಲಿ 1935ರಲ್ಲಿ ನ್ಯೂಜಿಲೆಂಡ್ ವಿರುದ್ಧ ಇಂಗ್ಲೆಂಡ್ 2 ವಿಕೆಟ್‌ಗೆ 431 ರನ್ ಗಳಿಸಿತ್ತು. ಆ ದಾಖಲೆಯನ್ನು ಭಾರತ ಅಳಿಸಿ ಹಾಕಿದೆ.

ಅಕ್ಷರ್ ಪಟೇಲ್ ಯಶಸ್ಸಿನ ಹಿಂದಿದ್ದಾರೆ ಪತ್ನಿ ಮೆಹಾ ಪಟೇಲ್‌..! ಈಕೆಯ ವೃತ್ತಿ...?

ಮೊದಲ ವಿಕೆಟ್‌ಗೆ ಜತೆಯಾದ ಸ್ಮೃತಿ ಮಂಧನಾ ಹಾಗೂ ಶಫಾಲಿ ವರ್ಮಾ 292 ರನ್ ಜೊತೆಯಾಟವಾಡಿದರು. 161 ಎಸೆತಗಳಲ್ಲಿ 27 ಬೌಂಡರಿ, 1 ಸಿಕರ್‌ನೊಂದಿಗೆ 149 ರನ್ ಸಿಡಿಸಿ ಸ್ಮೃತಿ, ಡೆಲ್ಮಿ ಟಕರ್‌ಗೆ ವಿಕೆಟ್ ಒಪ್ಪಿಸಿದರೆ, ಕರ್ನಾಟಕದ ಶುಭಾ ಸತೀಶ್ 15 ರನ್‌ಗೆ ನಿರ್ಗಮಿಸಿದರು. ಮತ್ತೊಂದೆಡೆ ಅಬ್ಬರಿಸುತ್ತಲೇ ಇದ್ದ ಶಫಾಲಿ 197 ಎಸೆತಗಳಲ್ಲಿ 23 ಬೌಂಡರಿ, 8 ಸಿಕರ್‌ನೊಂದಿಗೆ 205 ರನ್ ಸಿಡಿಸಿ ಔಟಾದರು. ಜೆಮಿಮಾ ರೋಡ್ರಿಗ್ಸ್ 55 ರನ್ ಕೊಡುಗೆ ನೀಡಿದ್ದು, ಹರ್ಮನ್ ಪ್ರೀತ್ ಕೌರ್ (ಔಟಾಗದೆ 42), ರಿಚಾ ಘೋಷ್ (ಔಟಾಗದೆ 43) ಕ್ರೀಸ್ ಕಾಯ್ದುಕೊಂಡಿದ್ದಾರೆ.

ಸ್ಕೋರ್: ಭಾರತ (ಮೊದಲ ದಿನದಂತ್ಯಕ್ಕೆ 98 ಓವರಲ್ಲಿ 525/4 (ಶಫಾಲಿ 205, ಸ್ಮೃತಿ 149, 32-141)

ಮಹಿಳಾ ಟೆಸ್ಟ್‌ನಲ್ಲಿ ಶಫಾಲಿ ವರ್ಮಾ ಅತಿವೇಗದ ದ್ವಿಶತಕ

ಶಫಾಲಿ 194 ಎಸೆತದಲ್ಲೇ 200 ರನ್ ಪೂರ್ಣಗೊಳಿಸುವ ಮೂಲಕ ಮಹಿಳಾ ಟೆಸ್ಟ್‌ನಲ್ಲಿ ಅತಿವೇಗದ ದ್ವಿಶತಕ ದಾಖಲೆ ಬರೆದರು. ಇತ್ತೀಚೆಗೆ ದ.ಆಫ್ರಿಕಾ ವಿರುದ್ಧ 248 ಎಸೆತದಲ್ಲಿ ದ್ವಿಶತಕ ಬಾರಿಸಿದ್ದ ಆಸ್ಟ್ರೇಲಿಯಾದ ಆ್ಯನಾಬೆಲ್ ಸದರ್‌ಲೆಂಡ್‌ರ ದಾಖಲೆಯನ್ನು 20 ವರ್ಷದ ಶಫಾಲಿ ವರ್ಮಾ ಮುರಿದರು.

ಕೊನೆಯ ಬಾರಿಗೆ ಟಿ20 ವಿಶ್ವಕಪ್ ಫೈನಲ್‌ನಲ್ಲಾದ್ರೂ ಅಬ್ಬರಿಸುತ್ತಾರಾ ವಿರಾಟ್ ಕೊಹ್ಲಿ..?

292 ರನ್ ಜೊತೆಯಾಟ: ಸ್ಮೃತಿ-ಶಫಾಲಿ ವರ್ಮಾ ದಾಖಲೆ

ಸ್ಮೃತಿ-ಶಫಾಲಿ 292 ರನ್ ಜೊತೆಯಾಟವಾಡಿದರು. ಇದು ಮಹಿಳಾ ಟೆಸ್ಟ್‌ನಲ್ಲಿ ಮೊದಲ ವಿಕೆಟ್‌ಗೆ ದಾಖಲಾದ ಅತಿ ದೊಡ್ಡ ಹಾಗೂ ಯಾವುದೇ ವಿಕೆಟ್‌ಗೆ ದಾಖಲಾದ 2ನೇ ಗರಿಷ್ಠ ರನ್ ಜೊತೆಯಾಟ. 1987ರಲ್ಲಿ ಆಸ್ಟ್ರೇಲಿಯಾದ ಡೆನಿಸ್ ಆನೆಟ್ಸ್-ಲಿಂಡೈ ರೀಲರ್ ಇಂಗ್ಲೆಂಡ್ ವಿರುದ್ಧ 3ನೇ ವಿಕೆಟ್‌ಗೆ 309 ರನ್ ಜೊತೆಯಾಟವಾಡಿದ್ದು ಈಗಲೂ ದಾಖಲೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಡಿಕಾಕ್‌ ಡ್ಯಾಶಿಂಗ್‌ ಆಟದ ಮುಂದೆ ಥಂಡಾ ಹೊಡೆದ ಟೀಮ್‌ ಇಂಡಿಯಾ!
ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟ ಆರಂಭ, 450 ರೂಗೆ ಬುಕಿಂಗ್ ಹೇಗೆ?