Dinesh Karthik Birthday ಆರ್ ಸಿಬಿ ತಂಡದ ಸುಪ್ರೀಂ ಫಿನಿಶರ್ ದಿನೇಶ್ ಕಾರ್ತಿಕ್ ಗೆ ಇಂದು ಜನ್ಮದಿನದ ಸಂಭ್ರಮ!

By Santosh NaikFirst Published Jun 1, 2022, 11:39 AM IST
Highlights

ಪ್ರಸ್ತುತ ತಮಿಳುನಾಡು ಕ್ರಿಕೆಟ್ ತಂಡದ ನಾಯಕರಾಗಿರುವ ಕಾರ್ತಿಕ್ ಅವರು 2004 ರಲ್ಲಿ ಭಾರತೀಯ ಕ್ರಿಕೆಟ್ ತಂಡಕ್ಕೆ ಪಾದಾರ್ಪಣೆ ಮಾಡಿದ್ದರು. ಅವರು 300 T20 ಪಂದ್ಯಗಳನ್ನು ಆಡಿದ 4 ನೇ ಭಾರತೀಯ ಬ್ಯಾಟ್ಸ್‌ಮನ್ ಆಗಿದ್ದಾರೆ.

ಬೆಂಗಳೂರು (ಜೂ.1): ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ (Dinesh Karthik), ಬುಧವಾರ 37 ನೇ ವರ್ಷಕ್ಕೆ ಕಾಲಿಟ್ಟರು, ಇತ್ತೀಚೆಗೆ ಐಪಿಎಲ್ ನಲ್ಲಿ (IPL) ಆರ್ ಸಿಬಿ (RCB) ತಂಡದ ಪರವಾಗಿ ಅವರ ಅದ್ಭುತ ಪ್ರದರ್ಶನದ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾ  (South Africa) ವಿರುದ್ಧ ಮುಂಬರುವ ಐದು ಪಂದ್ಯಗಳ ಟಿ20 ಸರಣಿಗೆ ಭಾರತೀಯ ತಂಡಕ್ಕೂ ಅಯ್ಕೆಯಾಗಿದ್ದಾರೆ.

ಪ್ರಸ್ತುತ ತಮಿಳುನಾಡು ಕ್ರಿಕೆಟ್ ತಂಡದ ನಾಯಕರಾಗಿರುವ ಕಾರ್ತಿಕ್ ಅವರು 2004 ರಲ್ಲಿ ಭಾರತೀಯ ಕ್ರಿಕೆಟ್ ತಂಡಕ್ಕೆ (Indian Cricket Team) ಪಾದಾರ್ಪಣೆ ಮಾಡಿದರು. ಅವರು 300 T20 ಪಂದ್ಯಗಳನ್ನು ಆಡಿದ 4 ನೇ ಭಾರತೀಯ ಬ್ಯಾಟ್ಸ್‌ಮನ್ ಆಗಿದ್ದಾರೆ.

ಬಲಗೈ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಬಾಂಗ್ಲಾದೇಶದ ವಿರುದ್ಧ ತಮ್ಮ ಚೊಚ್ಚಲ ಟೆಸ್ಟ್ ಶತಕವನ್ನು ಬಾರಿಸುವ ಮೂಲಕ ಗಮನಸೆಳೆದಿದ್ದರು. ಇಂಗ್ಲೆಂಡ್‌ ಪ್ರವಾಸದ ಟೆಸ್ಟ್ ಸರಣಿಯಲ್ಲಿ ಭಾರತದ ಪ್ರಮುಖ ಸ್ಕೋರರ್ ಆಗಿದ್ದ ದಿನೇಶ್ ಕಾರ್ತಿಕ್,  21 ವರ್ಷಗಳಲ್ಲಿ ಇಂಗ್ಲೆಂಡ್‌ನಲ್ಲಿ ತಮ್ಮ ಮೊದಲ ಸರಣಿಯನ್ನು ಗೆಲ್ಲಲು ಭಾರತಕ್ಕೆ ಸಹಾಯ ಮಾಡಿದ್ದರು.

2007ರಲ್ಲಿ ಕಳಪೆ ಫಾರ್ಮ್ ಕಂಡಿದ್ದ ದಿನೇಶ್ ಕಾರ್ತಿಕ್ ಅವರನ್ನು ಟೆಸ್ಟ್ ತಂಡದಿಂದ ಕೈಬಿಡಲಾಗಿತ್ತು. ದೀರ್ಘ ಹೋರಾಟದ ಬಳಿಕ ತಂಡಕ್ಕೆ ವಾಪಾಸಾಗಲು ಯಶಸ್ವಿಯಾಗಿದ್ದ ದಿನೇಶ್ ಕಾರ್ತಿಕ್, ಕ್ರಿಕೆಟ್ ದಿನದ ಬಹುಕಾಲ ಎಂಎಸ್ ಧೋನಿ ಅವರ ಡೆಪ್ಯುಟಿಯಾಗಿ ಮಾತ್ರವೇ ಉಳಿದುಕೊಂಡಿದ್ದರು. ಈ ನಡುವೆ 2018 ರಿಂದ 2020ರ ನಡುವೆ ಐಪಿಎಲ್ ನಲ್ಲಿ ಕೆಕೆಆರ್ ತಂಡದ ನಾಯಕರಾಗಿ ಗಮನಸೆಳೆಯಯುವ ನಿರ್ವಹಣೆ ತೋರಿದ್ದರು. 2021-22ರಲ್ಲಿ ಭಾರತದ ಇಂಗ್ಲೆಂಡ್ ಪ್ರವಾಸದ ಸಮಯದಲ್ಲಿ ಬಲಗೈ ಬ್ಯಾಟ್ಸ್‌ಮನ್ ಬ್ರಿಟಿಷ್ ಚಾನೆಲ್ ಸ್ಕೈ ಸ್ಪೋರ್ಟ್ಸ್‌ಗೆ ನಿರೂಪಕರಾಗಿಯೂ ಕೆಲಸ ಮಾಡಿದ್ದರು.

ಮೋಸ, ಸೋಲು, ಅವಮಾನಗಳ ಹಾದಿಯಲ್ಲಿ ಎದ್ದು ಬಂದ ಸಾಹಸಿ ದಿನೇಶ್ ಕಾರ್ತಿಕ್!

ವೈಯಕ್ತಿಕ ವಿಚಾರಗಳ ಬಗ್ಗೆ ಹೇಳುವುದಾದರೆ, ಕಾರ್ತಿಕ್ 2007 ರಲ್ಲಿ ನಿಕಿತಾ ವಂಜಾರಾ ಅವರನ್ನು ವಿವಾಹವಾಗಿದ್ದರು. ಆದರೆ, ಸಂಬಂಧದಲ್ಲಿ ಬಿರುಕು ಕಂಡ ಕಾರಣಕ್ಕಾಗಿ 2012ರಲ್ಲಿ ವಿಚ್ಛೇದನ ಪಡೆದುಕೊಂಡಿದ್ದರು. 2008ರಲ್ಲಿ ಏಕ್ ಕಿಲಾಡಿ ಏಕ್ ಹಸೀನಾ ಡಾನ್ಸ್ ರಿಯಾಲಿಟಿ ಶೋ ನಲ್ಲಿ ನಿಗರ್ ಖಾನ್ ಅವರ ಜೊತೆ ಪಾಲ್ಗೊಂಡಿದ್ದರು.

ICC T20 World Cup: ಮ್ಯಾಚ್‌ ಫಿನಿಶರ್‌ ಪಾತ್ರಕ್ಕೆ ಯಾರು ಹಿತವರು ಈ ನಾಲ್ವರಲ್ಲಿ..?

2013 ರಲ್ಲಿ, ಕಾರ್ತಿಕ್, ಭಾರತೀಯ ಸ್ಕ್ವಾಷ್ ಆಟಗಾರ್ತಿ ದೀಪಿಕಾ ಪಲ್ಲಿಕಲ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡು, 2015 ರಲ್ಲಿ ಸಾಂಪ್ರದಾಯಿಕ ಕ್ರಿಶ್ಚಿಯನ್ ಮತ್ತು ಹಿಂದೂ ರೀತಿಯಲ್ಲಿ ವಿವಾಹವಾದರು. ದಂಪತಿಗಳು 2021 ರಲ್ಲಿ ಅವಳಿ ಗಂಡು ಮಕ್ಕಳಾದ ಕಬೀರ್ ಮತ್ತು ಜಿಯಾನ್‌ಗೆ ಪೋಷಕರಾದರು.

ದಿನೇಶ್ ಕಾರ್ತಿಕ್ ಅವರ ಸ್ಮರಣೀಯ ಐಪಿಎಲ್ ಇನ್ನಿಂಗ್ಸ್ ಗಳು

23 ಎಸೆತಗಳಲ್ಲಿ 44 ರನ್ :
ದಿನೇಶ್ ಕಾರ್ತಿಕ್ ಈ ವರ್ಷದ ಐಪಿಎಲ್ ಅಭಿಯಾನವನ್ನು ನಾಲ್ಕು ಅಜೇಯ ಇನ್ನಿಂಗ್ಸ್ ಗಳ ಮೂಲಕ ಆರಂಭಿಸಿದರು. ರಾಜಸ್ಥಾನ ರಾಯಲ್ಸ್ ವಿರುದ್ಧ ಐಪಿಎಲ್‌ನ 13 ನೇ ಪಂದ್ಯದಲ್ಲಿ ಅದ್ಬುತ ಇನ್ನಿಂಗ್ಸ್ ಆಡಿದ್ದ ಡಿಕೆ, 23 ಎಸೆತಗಳಲ್ಲಿ 44 ರನ್ ಸಿಡಿಸಿ ತಂಡಕ್ಕೆ ಗೆಲುವು ನೀಡಿದ್ದರು.
 

34 ಎಸೆತಗಳಲ್ಲಿ 66 ರನ್: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಐಪಿಎಲ್ 2022ಅಲ್ಲಿ 34 ಎಸೆತಗಳಲ್ಲಿ 66 ರನ್ ಸಿಡಿಸಿದ ದಿನೇಶ್ ಕಾರ್ತಿಕ್ ಆರ್ ಸಿಬಿ ಗೆಲುವಿಗೆ ಕಾರಣರಾಗಿದ್ದರು. ಈ ಸಾಹಸಕ್ಕಾಗಿ ಪಂದ್ಯಶ್ರೇಷ್ಠ ಗೌರವವನ್ನೂ ಪಡೆದುಕೊಂಡಿದ್ದರು.

32 ಎಸೆತಗಳಲ್ಲಿ 56 ರನ್ : 2008ರ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 32 ಎಸೆತಗಳಲ್ಲಿ 56 ರನ್ ಸಿಡಿಸಿದ್ದರು. ಇದರಲ್ಲಿ ನಾಲ್ಕು ಬೌಂಡರಿ ಹಾಗೂ ಮೂರು ಸಿಕ್ಸರ್ ಸೇರಿದ್ದವು.

48 ಎಸೆತಗಳಲ್ಲಿ86 ರನ್: ಡೆಲ್ಲಿ ಡೇರ್ ಡೆವಿಲ್ಸ್ ತಂಡದ ವಿರುದ್ದ 2013ರ ಐಪಿಎಲ್ ನಲ್ಲಿ ಕೇವಲ 48 ಎಸೆತಗಳಲ್ಲಿ 86 ರನ್ ಬಾರಿಸಿದ್ದರು. ಇದರಲ್ಲಿ 14 ಬೌಂಡರಿ ಹಾಗೂ 2 ಸಿಕ್ಸರ್ ಸೇರಿದ್ದವು. ಈ ಸಾಲಿನಲ್ಲಿ ಅವರು 510 ರನ್ ಬಾರಿಸಿ ಮಿಂಚಿದ್ದರು.

57 ಎಸೆತಗಳಲ್ಲಿ 84 ರನ್: 2018ರಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ದಿನೇಶ್ ಕಾರ್ತಿಕ್ 57 ಎಸೆತಗಳಲ್ಲಿ 84 ರನ್ ಬಾರಿಸಿದ್ದರು. ಈ ವೇಳೆ ಅವರು ಕೆಕೆಆರ್ ತಂಡದ ನಾಯಕರಾಗಿದ್ದರು. ಇವರ ಇನ್ನಿಂಗ್ಸ್ ನ ಸಾಹಸದಿಂದಾಗಿ ಕೆಕೆಆರ್ ಪ್ಲೇ ಅಫ್ ಗೆ ಅರ್ಹತೆ ಪಡೆದುಕೊಂಡಿತ್ತು.

Latest Videos

click me!