IPL 2022 Champion ಗುಜರಾತ್ ಟೈಟಾನ್ಸ್‌ ಭರ್ಜರಿ ರೋಡ್‌ ಶೋ..!

By Naveen KodaseFirst Published May 31, 2022, 11:38 AM IST
Highlights

* ತಾನಾಡಿದ ಚೊಚ್ಚಲ ಐಪಿಎಲ್‌ನಲ್ಲೇ ಚಾಂಪಿಯನ್ ಪಟ್ಟ ಅಲಂಕರಿಸಿದ ಗುಜರಾತ್ ಟೈಟಾನ್ಸ್

* ರಾಜಸ್ಥಾನ ರಾಯಲ್ಸ್ ಎದುರು ಭರ್ಜರಿ ಗೆಲುವು ದಾಖಲಿಸಿ ಟ್ರೋಫಿಗೆ ಮುತ್ತಿಕ್ಕಿದ ಹಾರ್ದಿಕ್ ಪಾಂಡ್ಯ ಪಡೆ

* ಗೆಲುವಿನ ಬೆನ್ನಲ್ಲೇ ಭರ್ಜರಿ ಪಾರ್ಟಿ, ಅಹಮದಾಬಾದ್‌ನಲ್ಲಿ ರೋಡ್ ಶೋ ನಡೆಸಿದ ಗುಜರಾತ್ ಟೈಟಾನ್ಸ್

ಅಹಮದಾಬಾದ್‌(ಮೇ.31): ರಾಜಸ್ಥಾನ ರಾಯಲ್ಸ್‌ (Rajasthan Royals) ತಂಡವನ್ನು ಮಣಿಸಿ 15ನೇ ಆವೃತ್ತಿ ಐಪಿಎಲ್‌ ಚಾಂಪಿಯನ್‌ (IPL 2022 Champion Gujarat Titans) ಆಗಿ ಹೊರಹೊಮ್ಮಿದ ಗುಜರಾತ್‌ ಟೈಟಾನ್ಸ್‌ ಆಟಗಾರರು ಸೋಮವಾರ ಅಹಮದಾಬಾದ್‌ನಲ್ಲಿ ಭರ್ಜರಿ ರೋಡ್‌ ಶೋ (Road Show) ನಡೆಸಿದರು. ಸಂಜೆ 5 ಗಂಟೆ ಸುಮಾರಿಗೆ ಉಸ್ಮಾನ್‌ಪುರ ಎಂಬಲ್ಲಿ ಪ್ರಾರಂಭಗೊಂಡ ರೋಡ್ ಶೋ ವಿಶ್ವಕುಂಜ್‌ ಎಂಬಲ್ಲಿ ಕೊನೆಗೊಂಡಿತು.

ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (Narendra Modi Stadium) ನಡೆದ ಐಪಿಎಲ್ ಫೈನಲ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು 7 ವಿಕೆಟ್‌ಗಳಿಂದ ರೋಚಕವಾಗಿ ಮಣಿಸಿದ ಹಾರ್ದಿಕ್ ಪಾಂಡ್ಯ (Hardik Pandya) ನೇತೃತ್ವದ ಗುಜರಾತ್ ಟೈಟಾನ್ಸ್ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ. ರಾಜಸ್ಥಾನ ರಾಯಲ್ಸ್‌ ಬಳಿಕ ತಾನಾಡಿದ ಮೊದಲ ಆವೃತ್ತಿಯ ಐಪಿಎಲ್‌ನಲ್ಲೇ ಚಾಂಪಿಯನ್ ಆದ ಎರಡನೇ ತಂಡ ಎನ್ನುವ ಕೀರ್ತಿಗೆ ಗುಜರಾತ್ ಟೈಟಾನ್ಸ್ ತಂಡವು ಪಾತ್ರವಾಗಿದೆ. ಈ ಮೊದಲು 2008ರಲ್ಲಿ ನಡೆದ ಚೊಚ್ಚಲ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿತ್ತು.

Latest Videos

ರೋಡ್‌ ಶೋಗಾಗಿ ತಂಡದ ಜರ್ಸಿಯನ್ನೇ ಹೋಲುವ ವಿಶೇಷ ಬಸ್‌ ಸಿದ್ಧಪಡಿಸಲಾಗಿತ್ತು. ತೆರೆದ ಬಸ್‌ನಲ್ಲಿ ನಾಯಕ ಹಾರ್ದಿಕ್‌ ಪಾಂಡ್ಯ, ರಶೀದ್‌ ಖಾನ್‌ (Rashid Khan), ಶುಭ್‌ಮನ್‌ ಗಿಲ್‌ ಸೇರಿದಂತೆ ತಂಡದ ಆಟಗಾರರೆಲ್ಲಾ ರಸ್ತೆಯ ಎರಡೂ ಕಡೆಗಳಲ್ಲಿ ಕಿಕ್ಕಿರಿದು ತುಂಬಿದ್ದ ಸಾವಿರಾರು ಅಭಿಮಾನಿಗಳತ್ತ ಕೈ ಬೀಸುತ್ತಾ, ಟ್ರೋಫಿ ಪ್ರದರ್ಶಿಸುತ್ತಾ ಸಾಗಿದರು. ಅಭಿಮಾನಿಗಳು ತವರಿನ ತಂಡದ ಆಟಗಾರರ ಮೇಲೆ ಹೂಮಳೆಗೈದು ಸ್ವಾಗತಿಸಿದರು. ಜೈಕಾರ ಕೂಗಿ ಸಂಭ್ರಮಿಸಿದರು.

ರೋಡ್ ಶೋ ಫೋಟೋಗಳನ್ನು ಗುಜರಾತ್ ಟೈಟಾನ್ಸ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದು, ಅಭಿಮಾನಿಗಳ ಬೆಂಬಲವಿಲ್ಲದೇ ನಾವು ಕಪ್‌ ಗೆಲ್ಲಲು ಸಾಧ್ಯವಾಗುತ್ತಿರಲಿಲ್ಲ. ಹಾಗೂ ನಮ್ಮ ರೋಡ್ ಶೋ ಸುರಕ್ಷಿತವಾಗಿ ಹಾಗೂ ಯಶಸ್ವಿಯಾಗಲು ಸಹಕರಿಸಿದ ಪೊಲೀಸರಿಗೆ ಧನ್ಯವಾದಗಳು ಎಂದು ಗುಜರಾತ್ ಟೈಟಾನ್ಸ್ ಟ್ವೀಟ್ ಮಾಡಿದೆ.

We couldn’t have won this without you, 💙

We can’t thank the city police enough for ensuring our road show was a roaring success! 🙏

Love and wishes, 😍 pic.twitter.com/uQHF6bY8ad

— Gujarat Titans (@gujarat_titans)

ಗುಜರಾತ್ ಟೈಟಾನ್ಸ್ ತಂಡದ ರೋಡ್ ಶೋನಲ್ಲಿ ಆಟಗಾರರ ಜತೆಗೆ ಅವರ ಕುಟುಂಬಸ್ಥರು ಪಾಲ್ಗೊಂಡಿದ್ದರು. ಆರಂಭಿಕ ಬ್ಯಾಟರ್‌ ಶುಭ್‌ಮನ್ ಗಿಲ್ ಜತೆಗೆ ಅವರ ತಂದೆಯೂ ರೋಡ್‌ ಶೋನಲ್ಲಿ ಪಾಲ್ಗೊಂಡಿದ್ದರು. 

| Post their maiden win, the team of participate in a victory parade in Gandhinagar, Gujarat. pic.twitter.com/mj8SDuX822

— ANI (@ANI)

ತಂಡದಲ್ಲಿ ಮ್ಯಾಚ್‌ ವಿನ್ನರ್‌ಗಳ ದಂಡು!

ಗುಜರಾತ್‌ ಇಡೀ ಟೂರ್ನಿಯಲ್ಲಿ ಸೋತಿದ್ದು 4 ಪಂದ್ಯಗಳಲ್ಲಿ ಮಾತ್ರ. ಒಟ್ಟು 8 ಪಂದ್ಯಗಳಲ್ಲಿ ತಂಡ ಗುರಿ ಬೆನ್ನತ್ತಿ ಜಯಿಸಿದೆ. ಈ ಆವೃತ್ತಿಯಲ್ಲಿ ತಂಡದ ಒಟ್ಟು 8 ಆಟಗಾರರು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದು ವಿಶೇಷ. ಬ್ಯಾಟಿಂಗ್‌, ಬೌಲಿಂಗ್‌ ಎರಡರಲ್ಲೂ ಸಮನಾದ ಕೊಡುಗೆಗಳು ಮೂಡಿಬಂದಿದ್ದು ಟೈಟಾನ್ಸ್‌ ಯಶಸ್ಸಿನ ರಹಸ್ಯ.

15ನೇ ಆವೃತ್ತಿ ಐಪಿಎಲ್ ಟೂರ್ನಿ ಭರ್ಜರಿ ಸಕ್ಸಸ್‌..!

ವಿಶ್ವದ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ಎನಿಸಿಕೊಂಡಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಗುಜರಾತ್ ಟೈಟಾನ್ಸ್ ತಂಡವು ಟ್ರೋಫಿ ಗೆಲ್ಲುತ್ತಿದ್ದಂತೆಯೇ, ಮೈದಾನದಲ್ಲಿಯೇ ಗುಜರಾತ್ ಟೈಟಾನ್ಸ್ ಆಟಗಾರರು ಮುಂಜಾನೆ 3 ಗಂಟೆಯವರೆಗೂ ಪಾರ್ಟಿ ಮಾಡಿದ್ದಾರೆ. ಇದಾದ ಬಳಿಕ ಹೋಟೆಲ್‌ನಲ್ಲಿ ಬೆಳಗ್ಗೆ 6 ಗಂಟೆಯವರೆಗೆ ಮತ್ತೊಂದು ಹಂತದ ಸಂಭ್ರಮಾಚರಣೆ ಮಾಡಿದ್ದಾರೆ. ಒಟ್ಟಿನಲ್ಲಿ ಇಡೀ ರಾತ್ರಿ ಗುಜರಾತ್ ಟೈಟಾನ್ಸ್ ಆಟಗಾರರು ಸಂಭ್ರಮದ ಅಲೆಯಲ್ಲಿ ತೇಲಿದ್ದಾರೆ. ಇನ್ನು ರೋಡ್ ಶೋ ಮುಗಿಸಿದ ಬಳಿಕ ಮಂಗಳವಾರ(ಮೇ.31)ವಾದ ಇಂದು ಗುಜರಾತ್ ಟೈಟಾನ್ಸ್ ತಂಡವು ಮುಂಬೈಗೆ ತೆರಳಿಲಿದ್ದು, ಗುಜರಾತ್ ಟೈಟಾನ್ಸ್ ತಂಡದ ಮಾಲೀಕರು ತಮ್ಮ ತಂಡದ ಆಟಗಾರರಿಗೆ ಹೋಟೆಲ್‌ನಲ್ಲಿ ಪಾರ್ಟಿ ಆಯೋಜಿಸಿದ್ದಾರೆ.

click me!