ವಿದೇಶಿ ಕ್ರಿಕೆಟ್‌ ಲೀಗ್‌ಗಳಲ್ಲಿ ಶಫಾಲಿ ವರ್ಮಾಗೆ ಭಾರೀ ಬೇಡಿಕೆ!

By Suvarna NewsFirst Published May 11, 2021, 10:54 AM IST
Highlights

* ಭಾರತ ಮಹಿಳಾ ಕ್ರಿಕೆಟ್‌ ತಂಡದ ಬ್ಯಾಟರ್‌ ಶಫಾಲಿ ವರ್ಮಾಗೆ ವಿದೇಶಿ ಟೂರ್ನಿಯಲ್ಲಿ ಪಾಲ್ಗೊಳ್ಳಲು ಭಾರೀ ಬೇಡಿಕೆ

* ‘ದಿ ಹಂಡ್ರೆಡ್‌’ ಟೂರ್ನಿಯಲ್ಲಿ ಶಫಾಲಿ ವರ್ಮಾ, ಬರ್ಮಿಂಗ್‌ಹ್ಯಾಮ್‌ ತಂಡವನ್ನು ಪ್ರತಿನಿಧಿಸಲಿದ್ದಾರೆ.

*  ಶಫಾಲಿ ವರ್ಮಾ ಇದುವರೆಗೂ 22 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದು, 148.31ರ ಸ್ಟ್ರೈಕ್‌ರೇಟ್‌ನಲ್ಲಿ 617 ರನ್‌ ಬಾರಿಸಿದ್ದಾರೆ.

ನವದೆಹಲಿ(ಮೇ.11): ಭಾರತದ ಸ್ಫೋಟಕ ಬ್ಯಾಟರ್‌ 17 ವರ್ಷದ ಶಫಾಲಿ ವರ್ಮಾಗೆ ವಿದೇಶಿ ಕ್ರಿಕೆಟ್‌ ಲೀಗ್‌ಗಳಲ್ಲಿ ಭಾರೀ ಬೇಡಿಕೆ ಶುರುವಾಗಿದೆ. ಇಂಗ್ಲೆಂಡ್‌ನ ಚೊಚ್ಚಲ ಆವೃತ್ತಿಯ ‘ದಿ ಹಂಡ್ರೆಡ್‌’ ಟೂರ್ನಿಯಲ್ಲಿ ಶಫಾಲಿ ವರ್ಮಾ, ಬರ್ಮಿಂಗ್‌ಹ್ಯಾಮ್‌ ತಂಡವನ್ನು ಪ್ರತಿನಿಧಿಸಲಿದ್ದಾರೆ.

ಕಳೆದ ವರ್ಷ ನಡೆಯಬೇಕಿದ್ದ ಚೊಚ್ಚಲ ಆವೃತ್ತಿಯ ದಿ ಹಂಡ್ರೆಡ್ ಕ್ರಿಕೆಟ್ ಟೂರ್ನಿಯು ಕೋವಿಡ್‌ ಕಾರಣದಿಂದಾಗಿ ಮುಂದೂಡಲ್ಪಟ್ಟಿತ್ತು. ಇದೀಗ ಜುಲೈ 21ರಿಂದ ಮಹಿಳಾ ದಿ ಹಂಡ್ರೆಡ್ ಟೂರ್ನಿಯು ಲಂಡನ್‌ನ ಓವಲ್‌ ಹಾಗೂ ಮ್ಯಾಂಚೆಸ್ಟರ್‌ನಲ್ಲಿ ನಡೆಯಲಿದೆ. ದ ನಾಯಕಿ ಹರ್ಮನ್‌ಪ್ರೀತ್ ಕೌರ್, ಸ್ಮೃತಿ ಮಂಧನಾ, ಜೆಮಿಯಾ ರೋಡ್ರಿಗಸ್‌ ಹಾಗೂ ದೀಪ್ತಿ ಶರ್ಮಾ ಜತೆ ಇದೀಗ ಶಫಾಲಿ ವರ್ಮಾ ಸಹಾ ದಿ ಹಂಡ್ರೆಡ್ ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ. 

ಕಾಮನ್‌ವೆಲ್ತ್‌ ಗೇಮ್ಸ್‌‌ 2022: ಭಾರತ ಸೇರಿ 8 ಕ್ರಿಕೆಟ್ ತಂಡಗಳು ಕಣಕ್ಕೆ

ಶಫಾಲಿಯ ಜತೆ ಬರ್ಮಿಂಗ್‌ಹ್ಯಾಮ್‌ ಫ್ರಾಂಚೈಸಿ ಮಾತುಕತೆ ನಡೆಸಿ ಒಪ್ಪಂದ ಮಾಡಿಕೊಂಡಿದೆ. ಇದೀಗ ಶಫಾಲಿ ವರ್ಮಾ ನ್ಯೂಜಿಲೆಂಡ್‌ನ ಸೋಫಿಯಾ ಡಿವೈನ್‌ ಬದಲಿಗೆ ಬರ್ಮಿಂಗ್‌ಹ್ಯಾಮ್ ತಂಡವನ್ನು ಪ್ರತಿನಿಧಿಸಲಿದ್ದಾರೆ ಎಂದು ಬಿಸಿಸಿಐ ಮೂಲಗಳು ಪಿಟಿಐಗೆ ಖಚಿತಪಡಿಸಿವೆ.

ಐಸಿಸಿ ಮಹಿಳೆಯರ ಟಿ20 ಬ್ಯಾಟರ್‌ಗಳ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಶಫಾಲಿಯನ್ನು ಬಿಗ್‌ ಬ್ಯಾಶ್‌ ಲೀಗ್‌ನಲ್ಲಿ ತಮ್ಮ ತಂಡದ ಪರ ಆಡುವಂತೆ ಸಿಡ್ನಿ ತಂಡ ಆಹ್ವಾನಿಸಿದೆ. ಶಫಾಲಿ ವರ್ಮಾ ಇದುವರೆಗೂ 22 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದು, 148.31ರ ಸ್ಟ್ರೈಕ್‌ರೇಟ್‌ನಲ್ಲಿ 617 ರನ್‌ ಬಾರಿಸಿದ್ದಾರೆ.
 

click me!