ಜಿಂಬಾಬ್ವೆ ವಿರುದ್ಧ ಪಾಕ್‌ ಟೆಸ್ಟ್ ಸರಣಿ ಕ್ಲೀನ್‌ ಸ್ವೀಪ್‌

By Suvarna NewsFirst Published May 11, 2021, 9:31 AM IST
Highlights

* ಜಿಂಬಾಬ್ವೆ ವಿರುದ್ದ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದ ಪಾಕಿಸ್ತಾನ

* ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 2-0 ಅಂತರದಲ್ಲಿ ಪಾಕ್ ಕೈವಶ

* ಎರಡನೇ ಟೆಸ್ಟ್‌ ಪಂದ್ಯದಲ್ಲಿ ಮಾರಕ ದಾಳಿ ನಡೆಸಿದ ಪಾಕ್‌ ವೇಗಿಗಳು.

ಹರಾರೆ(ಮೇ.11): ಜಿಂಬಾಬ್ವೆ ವಿರುದ್ಧದ 2ನೇ ಟೆಸ್ಟ್‌ನಲ್ಲಿ ಇನ್ನಿಂಗ್ಸ್‌ ಹಾಗೂ 147 ರನ್‌ಗಳ ಗೆಲುವು ಸಾಧಿಸಿದ ಪಾಕಿಸ್ತಾನ, 2 ಪಂದ್ಯಗಳ ಸರಣಿಯನ್ನು 2-0 ಅಂತರದಲ್ಲಿ ಕ್ಲೀನ್‌ ಸ್ವೀಪ್‌ ಮಾಡಿದೆ. ಪಾಕಿಸ್ತಾನದ ವೇಗಿಗಳಾದ ಹಸನ್‌ ಅಲಿ ಹಾಗೂ ನೂಮನ್ ಅಲಿ ಮೊದಲೆರಡು ಇನಿಂಗ್ಸ್‌ಗಳಲ್ಲಿ ಕ್ರಮವಾಗಿ ತಲಾ 5 ವಿಕೆಟ್ ಕಬಳಿಸುವ ಮೂಲಕ ಜಿಂಬಾಬ್ವೆ ವಿರುದ್ದ ಪಾಕಿಸ್ತಾನ ಅನಾಯಾಸವಾಗಿ ಗೆಲುವಿನ ನಗೆ ಬೀರಿದೆ.

ಎರಡನೇ ಟೆಸ್ಟ್‌ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ 510 ರನ್‌ ಬಾರಿಸಿ ಇನಿಂಗ್ಸ್‌ ಡಿಕ್ಲೇರ್ ಮಾಡಿಕೊಂಡಿತು. ಇದಕ್ಕುತ್ತರವಾಗಿ ಜಿಂಬಾಬ್ವೆ ಮೊದಲ ಇನಿಂಗ್ಸ್‌ನಲ್ಲಿ ಕೇವಲ 132 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಫಾಲೋ ಆನ್‌ಗೆ ಸಿಲುಕಿತು. ಇನ್ನು ಎರಡನೇ  ಇನಿಂಗ್ಸ್‌ನಲ್ಲಿ ಜಿಂಬಾಬ್ವೆ ಕೊಂಚ ಪ್ರತಿರೋಧ ತೋರಿತಾದರೂ ಕನಿಷ್ಟ ಪಕ್ಷ ಡ್ರಾ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಎರಡನೇ ಇನಿಂಗ್ಸ್‌ನಲ್ಲಿ ಜಿಂಬಾಬ್ವೆ 231 ರನ್‌ಗಳಿಗೆ ಆಲೌಟ್ ಆಗಿ ಸರಣಿ ಕೈಚೆಲ್ಲಿತು.

Pakistan win the series 2-0 🎉

They pick up the final wicket of Luke Jongwe to register a victory by an innings and 147 runs against Zimbabwe in the second Test.

📸 | | https://t.co/8hH4EMRnA8 pic.twitter.com/c46ToBrB5B

— ICC (@ICC)

ಇಂಗ್ಲೆಂಡ್ ಎದುರು ಭಾರತ 3-2ರಲ್ಲಿ ಟೆಸ್ಟ್‌ ಸರಣಿ ಗೆಲ್ಲಲಿದೆ: ದ್ರಾವಿಡ್ ಭವಿಷ್ಯ

ಮೊದಲ ಟೆಸ್ಟ್‌ನಲ್ಲಿ ಪಾಕಿಸ್ತಾನ ಇನ್ನಿಂಗ್ಸ್‌ ಹಾಗೂ 116 ರನ್‌ಗಳ ಗೆಲುವು ಸಾಧಿಸಿತ್ತು. ಇದರೊಂದಿಗೆ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಪಾಕಿಸ್ತಾನ ಕ್ಲೀನ್‌ ಸ್ವೀಪ್ ಮಾಡಿದೆ.

ಸ್ಕೋರ್‌: 
ಪಾಕಿಸ್ತಾನ 510/8 ಡಿ.
ಜಿಂಬಾಬ್ವೆ 132 ಹಾಗೂ 231
 

click me!