ಇಂದು ಭಾರತ-ಆಸೀಸ್‌ ಮಹಿಳೆಯರ ಟೆಸ್ಟ್‌ ಶುರು; ಟಾಸ್ ಗೆದ್ದ ಆಸೀಸ್ ಬ್ಯಾಟಿಂಗ್ ಆಯ್ಕೆ

By Naveen Kodase  |  First Published Dec 21, 2023, 9:20 AM IST

ಭಾರತ ಮಹಿಳಾ ಟೆಸ್ಟ್‌ ತಂಡಕ್ಕೆ 94ನೇ ಆಟಗಾರ್ತಿಯಾಗಿ ರಿಚಾ ಘೋಷ್ ಪದಾರ್ಪಣೆ ಮಾಡಿದ್ದಾರೆ. ಇನ್ನು ಮುಂಬೈ ಇಲೆವನ್ ಎದುರು 19 ರನ್ ನೀಡಿ 4 ವಿಕೆಟ್ ಕಬಳಿಸಿದ್ದ ಲೌರೆನ್ ಚೆಟ್ಲೇ ಕೂಡಾ ಆಸ್ಟ್ರೇಲಿಯಾ ಮಹಿಳಾ ಟೆಸ್ಟ್ ತಂಡಕ್ಕೆ ಪಾದಾರ್ಪಣೆ ಮಾಡಿದ್ದಾರೆ. 


ಮುಂಬೈ(ಡಿ.21): ಇಂಗ್ಲೆಂಡ್‌ ವಿರುದ್ಧ ವಿಶ್ವದಾಖಲೆಯ ಗೆಲುವಿನ ಹುಮ್ಮಸ್ಸಿನಲ್ಲಿರುವ ಭಾರತ ಮಹಿಳಾ ತಂಡ, ತವರಿನಲ್ಲಿ ಗೆಲುವಿನ ಓಟ ಮುಂದುವರಿಸುವ ನಿರೀಕ್ಷೆಯಲ್ಲಿದ್ದು, ಗುರುವಾರದಿಂದ ಆರಂಭಗೊಂಡ ಆಸ್ಟ್ರೇಲಿಯಾ ವಿರುದ್ಧದ ಏಕೈಕ ಟೆಸ್ಟ್‌ ಪಂದ್ಯದಲ್ಲಿ ಕಣಕ್ಕಿಳಿದಿದೆ. ಪಂದ್ಯಕ್ಕೆ ವಾಂಖೇಡೆ ಕ್ರೀಡಾಂಗಣ ಆತಿಥ್ಯ ವಹಿಸಿದ್ದು, ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದೆ.

ಭಾರತ ಮಹಿಳಾ ಟೆಸ್ಟ್‌ ತಂಡಕ್ಕೆ 94ನೇ ಆಟಗಾರ್ತಿಯಾಗಿ ರಿಚಾ ಘೋಷ್ ಪದಾರ್ಪಣೆ ಮಾಡಿದ್ದಾರೆ. ಇನ್ನು ಮುಂಬೈ ಇಲೆವನ್ ಎದುರು 19 ರನ್ ನೀಡಿ 4 ವಿಕೆಟ್ ಕಬಳಿಸಿದ್ದ ಲೌರೆನ್ ಚೆಟ್ಲೇ ಕೂಡಾ ಆಸ್ಟ್ರೇಲಿಯಾ ಮಹಿಳಾ ಟೆಸ್ಟ್ ತಂಡಕ್ಕೆ ಪಾದಾರ್ಪಣೆ ಮಾಡಿದ್ದಾರೆ. 

Tap to resize

Latest Videos

ಮಹಿಳಾ ಟೀಂ ಇಂಡಿಯಾ ಈ ವರೆಗೆ 46 ವರ್ಷಗಳಲ್ಲಿ ಆಸೀಸ್ ವಿರುದ್ಧ 10 ಟೆಸ್ಟ್‌ ಪಂದ್ಯಗಳನ್ನಾಡಿದ್ದು, ಒಂದೂ ಪಂದ್ಯ ಗೆದ್ದಿಲ್ಲ. ಕೊನೆ ಬಾರಿ ಇತ್ತಂಡಗಳು 2021ರಲ್ಲಿ ಟೆಸ್ಟ್‌ ಆಡಿದ್ದು, ಪಂದ್ಯ ಡ್ರಾಗೊಂಡಿತ್ತು. ಈ ಬಾರಿ ಹರ್ಮನ್‌ಪ್ರೀತ್‌ ಕೌರ್‌ ನಾಯಕತ್ವದ ಮೊದಲ ಗೆಲುವಿನ ನಿರೀಕ್ಷೆಯಲ್ಲಿದ್ದು, ಅನುಭವಿ ಬ್ಯಾಟರ್‌ಗಳು ಹಾಗೂ ಸ್ಪಿನ್ನರ್‌ಗಳ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದೆ. ಸ್ಮೃತಿ ಮಂಧನಾ, ಹರ್ಮನ್‌ಪ್ರೀತ್‌, ಜೆಮಿಮಾ ರೋಡ್ರಿಗ್ಸ್‌, ಯಸ್ತಿಕಾ ಭಾಟಿಯಾ, ಆಲ್ರೌಂಡರ್‌ ದೀಪ್ತಿ ಶರ್ಮಾ ಭಾರತ ಪರ ಪ್ರಮುಖ ಆಕರ್ಷಣೆ ಎನಿಸಿಕೊಂಡಿದ್ದಾರೆ.

ಉಭಯ ತಂಡಗಳ ಆಟಗಾರ್ತಿಯರ ಪಟ್ಟಿ

ಆಸ್ಟ್ರೇಲಿಯಾ:
ಬೆಥ್ ಮೂನಿ, ಪೋಬೆ ಲಿಚ್‌ಫೀಲ್ಡ್, ಎಲೈಸಿ ಪೆರ್ರಿ. ತಾಹಿಲಾ ಮೆಗ್ರಾಥ್,ಅಲೈಸಾ ಹೀಲಿ(ನಾಯಕಿ&ವಿಕೆಟ್ ಕೀಪರ್), ಅನಬೆಲ್ಲಾ ಸದರ್‌ಲೆಂಡ್, ಆಶ್ಲೆ ಗಾರ್ಡ್ನರ್, ಜೆಸ್ ಜೋನಸ್ಸನ್, ಅಲಾನ ಕಿಂಗ್, ಕಿಮ್ ಗೆರಾಥ್. ಲೌರೆನ್ ಚೇಟ್ಲೆ.

ಭಾರತ:
ಸ್ಮೃತಿ ಮಂಧನಾ, ಶಫಾಲಿ ವರ್ಮಾ, ಜೆಮಿಯಾ ರೋಡ್ರಿಗಸ್, ಹರ್ಮನ್‌ಪ್ರೀತ್ ಕೌರ್(ನಾಯಕಿ), ಯಾಸ್ತಿಕಾ ಭಾಟಿಯಾ(ವಿಕೆಟ್ ಕೀಪರ್), ರಿಚಾ ಘೋಷ್, ದೀಪ್ತಿ ಶರ್ಮಾ, ಸ್ನೆಹ್ ರಾಣಾ, ಪೂಜಾ ವಸ್ತ್ರಾಕರ್, ರೇಣುಕಾ ಸಿಂಗ್ ಠಾಕೂರ್, ರಾಜೇಶ್ವರಿ ಗಾಯಕ್ವಾಡ್.

ಪಂದ್ಯ ಆರಂಭ: ಬೆಳಗ್ಗೆ 9.30ಕ್ಕೆ
 

click me!