India vs West Indies: ವಿಂಡೀಸ್ ವಿರುದ್ಧದ 2ನೇ ಟಿ20 ಪಂದ್ಯಕ್ಕೆ ಟೀಂ ಇಂಡಿಯಾ ಆಯ್ಕೆ ಮಾಡಿದ ಚೇತೇಶ್ವರ್ ಪೂಜಾರ! ಒಂದು ಅಚ್ಚರಿ ಬದಲಾವಣೆ

Published : Oct 08, 2026, 03:51 PM IST
Team India

ಸಾರಾಂಶ

ರಾಂಚಿಯಲ್ಲಿ ನಡೆಯಲಿರುವ ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟಿ20 ಪಂದ್ಯಕ್ಕೆ ಚೇತೇಶ್ವರ್ ಪೂಜಾರ ಟೀಂ ಇಂಡಿಯಾದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಪ್ರಕಟಿಸಿದ್ದಾರೆ. ಕಳಪೆ ಪ್ರದರ್ಶನ ನೀಡಿದ್ದ ಮಯಾಂಕ್ ಯಾದವ್ ಬದಲಿಗೆ ಪ್ರಿನ್ಸ್ ಯಾದವ್‌ಗೆ ಅವಕಾಶ ಸಿಗುವ ಸಾಧ್ಯತೆಯ ಬಗ್ಗೆ ಅವರು ಚರ್ಚಿಸಿದ್ದಾರೆ. ಆದರೂ, ಬ್ಯಾಟಿಂಗ್ ಕ್ರಮಾಂಕದಲ್ಲಿ ಯಾವುದೇ ಬದಲಾವಣೆ ಬೇಡ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

India vs West Indies 2nd T20I: Pujara Picks India XI: ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯ ಶುಕ್ರವಾರ ರಾಂಚಿಯಲ್ಲಿ ನಡೆಯಲಿದೆ. ಈ ಪಂದ್ಯಕ್ಕಾಗಿ ಟೀಂ ಇಂಡಿಯಾದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಅನ್ನು ಮಾಜಿ ಆಟಗಾರ ಚೇತೇಶ್ವರ್ ಪೂಜಾರ ಆಯ್ಕೆ ಮಾಡಿದ್ದಾರೆ. ತಂಡದಲ್ಲಿ ದೊಡ್ಡ ಬದಲಾವಣೆಗಳಾಗುವ ಸಾಧ್ಯತೆಯಿಲ್ಲ, ಆದರೆ ವೇಗಿ ಮಯಾಂಕ್ ಯಾದವ್ ಬದಲಿಗೆ ಪ್ರಿನ್ಸ್ ಯಾದವ್‌ಗೆ ಅವಕಾಶ ಸಿಗಬಹುದು ಎಂದು ಪೂಜಾರ ಹೇಳಿದ್ದಾರೆ.

ಲಕ್ನೋದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಭಾರತ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿ, ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಆದರೆ, ಆ ಪಂದ್ಯದಲ್ಲಿ 4 ಓವರ್‌ಗಳಲ್ಲಿ 40 ರನ್ ನೀಡಿ ಕೇವಲ 1 ವಿಕೆಟ್ ಪಡೆದಿದ್ದ ಮಯಾಂಕ್ ಯಾದವ್ ನಿರಾಸೆ ಮೂಡಿಸಿದ್ದರು. ಜಿಯೋ ಹಾಟ್‌ಸ್ಟಾರ್‌ನ 'ಗೇಮ್ ಪ್ಲಾನ್' ಕಾರ್ಯಕ್ರಮದಲ್ಲಿ ಪೂಜಾರ ಈ ಪ್ಲೇಯಿಂಗ್ ಇಲೆವೆನ್ ಪ್ರಕಟಿಸಿದ್ದಾರೆ.

ಬ್ಯಾಟಿಂಗ್‌ನಲ್ಲಿ ಯಾವುದೇ ಬದಲಾವಣೆ ಇಲ್ಲ:

ಬ್ಯಾಟಿಂಗ್ ಕ್ರಮಾಂಕದಲ್ಲಿ ಯಾವುದೇ ಬದಲಾವಣೆ ಬೇಡ. ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಓಪನಿಂಗ್ ಮಾಡಬೇಕು. ಇಶಾನ್ ಕಿಶನ್ ಮೂರನೇ ಕ್ರಮಾಂಕದಲ್ಲಿ ಹಾಗೂ ಶ್ರೇಯಸ್ ಅಯ್ಯರ್ ನಾಲ್ಕನೇ ಕ್ರಮಾಂಕದಲ್ಲಿ ಆಡಲಿ. ಪಂದ್ಯದ ಪರಿಸ್ಥಿತಿಗೆ ತಕ್ಕಂತೆ ತಿಲಕ್ ವರ್ಮಾ, ನಮನ್ ಧೀರ್ ಮತ್ತು ಶಿವಂ ದುಬೆ 5, 6 ಮತ್ತು 7ನೇ ಕ್ರಮಾಂಕದಲ್ಲಿ ಕಣಕ್ಕಿಳಿಯಬಹುದು. ಅಕ್ಷರ್ ಪಟೇಲ್, ಕುಲದೀಪ್ ಯಾದವ್ ಮತ್ತು ಅರ್ಷದೀಪ್ ಸಿಂಗ್ ಸ್ಥಾನ ಖಚಿತ. ಮಯಾಂಕ್ ಯಾದವ್ ಬದಲಿಗೆ ಪ್ರಿನ್ಸ್ ಯಾದವ್ ಅವರನ್ನು ತರಬೇಕೇ ಎಂಬುದು ಮಾತ್ರ ಆಯ್ಕೆಗಾರರ ಮುಂದಿರುವ ಏಕೈಕ ಪ್ರಶ್ನೆ. ಆದರೆ ಕೇವಲ ಒಂದು ಪಂದ್ಯದ ಆಧಾರದ ಮೇಲೆ ಯಾವುದೇ ಆಟಗಾರನನ್ನು ಕೈಬಿಡಬಾರದು. ಹಾಗಾಗಿ ಮಯಾಂಕ್‌ಗೆ ಮತ್ತೊಂದು ಅವಕಾಶ ನೀಡಬೇಕು ಎಂಬುದು ಪೂಜಾರ ಅವರ ಅಭಿಪ್ರಾಯ.

ಮೊದಲ ಪಂದ್ಯದ ಪವರ್‌ಪ್ಲೇನಲ್ಲಿ ಅರ್ಷದೀಪ್ ಸಿಂಗ್ 3 ಓವರ್ ಬೌಲ್ ಮಾಡಿದ್ದನ್ನು ಪೂಜಾರ ಸಮರ್ಥಿಸಿಕೊಂಡಿದ್ದಾರೆ. ಮಯಾಂಕ್ ಯಾದವ್ ರನ್ ನಿಯಂತ್ರಿಸಲು ವಿಫಲರಾದ ಕಾರಣ ಶ್ರೇಯಸ್ ಅಯ್ಯರ್ ಅನಿವಾರ್ಯವಾಗಿ ಅರ್ಷದೀಪ್‌ಗೆ ಹೆಚ್ಚು ಓವರ್ ನೀಡಬೇಕಾಯಿತು. ಕೇವಲ ಇಬ್ಬರು ಪ್ರಮುಖ ವೇಗಿಗಳಿರುವ ತಂಡದಲ್ಲಿ, ಒಬ್ಬರ ಕೈಯಲ್ಲೇ ಪವರ್‌ಪ್ಲೇನಲ್ಲಿ 3 ಓವರ್ ಮಾಡಿಸುವುದು ದೀರ್ಘಾವಧಿಯಲ್ಲಿ ಒಳ್ಳೆಯದಲ್ಲ. ಇತರ ಬೌಲರ್‌ಗಳು ಅರ್ಷದೀಪ್‌ಗೆ ಉತ್ತಮ ಬೆಂಬಲ ನೀಡಬೇಕು ಎಂದು ಪೂಜಾರ ಹೇಳಿದ್ದಾರೆ.

ಪೂಜಾರ ಆಯ್ಕೆ ಮಾಡಿದ ಟೀಂ ಇಂಡಿಯಾ:

ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ನಮನ್ ಧೀರ್, ಶಿವಂ ದುಬೆ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ಮಯಾಂಕ್ ಯಾದವ್.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

5/54, 5/18, 7/57... ವಿಶ್ವಕಪ್‌ನಲ್ಲಿ ಅಬ್ಬರಿಸಿದ್ದ ಶಮಿ ಈಗ ತಂಡದಿಂದ ದೂರ! ಬಿಸಿಸಿಐಗೆ ಮಾಜಿ ಕ್ರಿಕೆಟಿಗನ ಖಡಕ್ ಸಂದೇಶ!
ಅಜಿತ್ ಅಗರ್ಕರ್ ಹೊರಬೀಳುತ್ತಿದ್ದಂತೆಯೇ ಮಾಜಿ ಚೀಫ್ ಸೆಲೆಕ್ಟರ್ ಕಾಲೆಳೆದ ರವೀಂದ್ರ ಜಡೇಜಾ..! BCCI ಪೋಸ್ಟ್‌ಗೆ ಜಡ್ಡು ವೈರಲ್‌ ರಿಪ್ಲೈ