
Ravindra Jadeja’s BCCI Comment Goes Viral After Agarkar Exit: ಟೀಂ ಇಂಡಿಯಾದ ಸೆಲೆಕ್ಷನ್ ಕಮಿಟಿ ಹುದ್ದೆಗೆ ಅರ್ಜಿ ಆಹ್ವಾನಿಸಿ ಬಿಸಿಸಿಐ ಹಾಕಿದ್ದ ಪೋಸ್ಟ್‌ಗೆ ಆಲ್‌ರೌಂಡರ್ ರವೀಂದ್ರ ಜಡೇಜಾ ತಮಾಷೆಯಾಗಿ ರಿಪ್ಲೈ ಮಾಡಿದ್ದಾರೆ. ಚೀಫ್ ಸೆಲೆಕ್ಟರ್ ಸ್ಥಾನದಿಂದ ಅಜಿತ್ ಅಗರ್ಕರ್ ಕೆಳಗಿಳಿದ ಬೆನ್ನಲ್ಲೇ ಜಡೇಜಾ ಮಾಡಿರುವ ಈ ಕಾಮೆಂಟ್ ಈಗ ಫ್ಯಾನ್ಸ್ ಮಧ್ಯೆ ದೊಡ್ಡ ಚರ್ಚೆ ಹುಟ್ಟುಹಾಕಿದೆ.
ಸೆಲೆಕ್ಟರ್ ಹುದ್ದೆಗೆ ಅರ್ಜಿ ಆಹ್ವಾನಿಸಿ ಬಿಸಿಸಿಐ 'ಎಕ್ಸ್' (ಹಿಂದಿನ ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಹಾಕಿತ್ತು. ಇದಕ್ಕೆ ರಿಪ್ಲೈ ಮಾಡಿರುವ ಜಡೇಜಾ, "ಅರ್ಜಿ ಹಾಕೋಕೆ ಪ್ರೊಸೀಜರ್ ಏನು? 🤣" ಎಂದು ಕೇಳಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಬೇರೆಯವರ ಪೋಸ್ಟ್‌ಗಳಿಗೆ ಜಡೇಜಾ ಕಾಮೆಂಟ್ ಮಾಡೋದು ಬಹಳ ಅಪರೂಪ. ಹೀಗಾಗಿ ಅವರು ತಮಾಷೆಗೆ ಮಾಡಿರುವ ಈ ರಿಪ್ಲೈ ಈಗ ಇಂಟರ್ನೆಟ್‌ನಲ್ಲಿ ಸಖತ್ ಸದ್ದು ಮಾಡ್ತಿದೆ.
@BCCI What the procedure?🤣
— Ravindrasinh jadeja (@imjadeja) October 7, 2026
ಅಜಿತ್ ಅಗರ್ಕರ್ ಮತ್ತು ಜಡೇಜಾ ಮಧ್ಯೆ ಬಹಿರಂಗವಾಗಿ ಯಾವುದೇ ಭಿನ್ನಾಭಿಪ್ರಾಯ ಇರಲಿಲ್ಲ. ಆದರೆ ಅಗರ್ಕರ್ ಚೀಫ್ ಸೆಲೆಕ್ಟರ್ ಆಗಿದ್ದಾಗ ಟಿ20 ಮತ್ತು ಏಕದಿನ ತಂಡಗಳಲ್ಲಿ ಯುವ ಆಟಗಾರರಿಗೆ ಹೆಚ್ಚು ಮಣೆ ಹಾಕಿದ್ದರು. 2024ರಲ್ಲಿ ಭಾರತ ಟಿ20 ವಿಶ್ವಕಪ್ ಗೆದ್ದ ಬಳಿಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಜೊತೆಗೆ ಜಡೇಜಾ ಕೂಡ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಆಮೇಲೆ 2024ರ ಶ್ರೀಲಂಕಾ ಪ್ರವಾಸ ಮತ್ತು 2025ರ ಆಸ್ಟ್ರೇಲಿಯಾ ಸರಣಿಯ ಏಕದಿನ ತಂಡಗಳಿಂದ ಅಗರ್ಕರ್ ನೇತೃತ್ವದ ಕಮಿಟಿ ಜಡೇಜಾರನ್ನು ಕೈಬಿಟ್ಟಿತ್ತು.
ಜಡೇಜಾ ನಮ್ಮ ಮುಂದಿನ ಪ್ಲಾನ್‌ಗಳಲ್ಲಿದ್ದಾರೆ ಎಂದು ಅಗರ್ಕರ್ ಹೇಳಿದ್ದರು. ಆದರೆ ಟೀಮ್ ಮ್ಯಾನೇಜ್‌ಮೆಂಟ್ ಮತ್ತು ಸೆಲೆಕ್ಟರ್‌ಗಳ ನಿರ್ಧಾರದ ಬಗ್ಗೆ ತಮಗೆ ಅಸಮಾಧಾನ ಇದೆ ಎಂದು ಜಡೇಜಾ ಈ ಹಿಂದಿನ ಸಂದರ್ಶನಗಳಲ್ಲಿ ಪರೋಕ್ಷವಾಗಿ ಹೇಳಿದ್ದರು. ಇದೀಗ ಅಗರ್ಕರ್ ರಾಜೀನಾಮೆ ಕೊಟ್ಟ ಬೆನ್ನಲ್ಲೇ ಬಿಸಿಸಿಐ ಪೋಸ್ಟ್‌ಗೆ ನಗುವ ಎಮೋಜಿ ಹಾಕಿ ಜಡೇಜಾ ಕಾಲೆಳೆದಿರುವುದು, ಸೆಲೆಕ್ಷನ್ ಕಮಿಟಿ ಮೇಲಿನ ಕೋಪದ ಹೊರಹಾಕುವಿಕೆ ಅಂತಾನೇ ಕ್ರಿಕೆಟ್ ಪಂಡಿತರು ಮತ್ತು ಫ್ಯಾನ್ಸ್ ಲೆಕ್ಕಾಚಾರ ಹಾಕ್ತಿದ್ದಾರೆ.
ಬಿಸಿಸಿಐನ ಈಗಿನ ನಿಯಮಗಳ ಪ್ರಕಾರ, ಆಕ್ಟೀವ್ ಆಗಿ ಕ್ರಿಕೆಟ್ ಆಡುತ್ತಿರುವ ಯಾವುದೇ ಆಟಗಾರ ಆಡಳಿತಾತ್ಮಕ ಅಥವಾ ಸೆಲೆಕ್ಷನ್ ಕಮಿಟಿ ಹುದ್ದೆಗಳಲ್ಲಿ ಕೂರುವಂತಿಲ್ಲ. ಚೀಫ್ ಸೆಲೆಕ್ಟರ್ ಹುದ್ದೆಗೆ ಅರ್ಜಿ ಹಾಕುವವರು ಕ್ರಿಕೆಟ್‌ನಿಂದ ನಿವೃತ್ತಿಯಾಗಿ ಕನಿಷ್ಠ ಐದು ವರ್ಷಗಳಾದರೂ ಆಗಿರಬೇಕು ಅನ್ನೋದು ಕಡ್ಡಾಯ ನಿಯಮ.
ಅಜಿತ್ ಅಗರ್ಕರ್ ನಿರ್ಗಮನದಿಂದಾಗಿ ಖಾಲಿಯಾಗಿರುವ ಭಾರತ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಸ್ಥಾನಕ್ಕೆ ಬಿಸಿಸಿಐ ಅರ್ಜಿ ಆಹ್ವಾನಿಸಿದೆ. ಅಗರ್ಕರ್ ಈವರೆಗೂ ಮುಖ್ಯಸ್ಥರಾಗಿದ್ದರು. ಅವರ ಅವಧಿ ಅ.4ಕ್ಕೆ ಕೊನೆಗೊಂಡಿದೆ. ಹೀಗಾಗಿ ಅವರ ಸ್ಥಾನಕ್ಕೆ ಬಿಸಿಸಿಐ ಸೂಕ್ತ ಅಭ್ಯರ್ಥಿಗಳ ಹುಡುಕಾಟದಲ್ಲಿದೆ. ಸದ್ಯ ಸಮಿತಿಯಲ್ಲಿ ಪ್ರಗ್ಯಾನ್ ಓಜಾ, ಶಿವಸುಂದರ್ ದಾಸ್, ಅಜಯ್ ರಾತ್ರಾ, ಆರ್.ಪಿ.ಸಿಂಗ್ ಇದ್ದಾರೆ. ಓಜಾ ಹಂಗಾಮಿ ಮುಖ್ಯಸ್ಥರಾಗಿದ್ದಾರೆ. ಪಾರ್ಥಿವ್ ಪಟೇಲ್ ಆಯ್ಕೆ ಸಮಿತಿಗೆ ಬಂದರೆ ಅವರೇ ಮುಖ್ಯಸ್ಥರಾಗಿ ನೇಮಕಗೊಳ್ಳುವ ಸಾಧ್ಯತೆಯಿದ್ದು, ಅಲ್ಲದಿದ್ದರೆ ಓಜಾ ಅವರನ್ನೇ ಮುಖ್ಯಸ್ಥರನ್ನಾಗಿ ನೇಮಿಸಲು ಬಿಸಿಸಿಐ ಚಿಂತನೆ ನಡೆಸುತ್ತಿದೆ ಎಂದು ವರದಿಯಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.