ಬಹುನಿರೀಕ್ಷಿತ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಆರಂಭಕ್ಕೆ ದಿನಗಣನೆ
ಅಕ್ಟೋಬರ್ 05ರಿಂದ ಅಹಮದಾಬಾದ್‌ನಲ್ಲಿ ಟೂರ್ನಿಗೆ ಚಾಲನೆ
ಅಕ್ಟೋಬರ್ 15ರಂದು ನಡೆಯಬೇಕಿರುವ ಭಾರತ-ಪಾಕಿಸ್ತಾನ ವೇಳಾಪಟ್ಟಿಯಲ್ಲಿ ಕೊಂಚ ಬದಲಾವಣೆ
ನವದೆಹಲಿ(ಜು.26): 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಈಗಾಗಲೇ ಅಧಿಕೃತ ವೇಳಾಪಟ್ಟಿ ಪ್ರಕಟವಾಗಿದೆ. ಇನ್ನು ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಹೈವೋಲ್ಟೇಜ್ ಪಂದ್ಯವು ಅಕ್ಟೋಬರ್ 15ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಈ ಹೈವೋಲ್ಟೇಜ್ ಪಂದ್ಯವನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಇದೀಗ ಇದೀಗ ಇಂಡೋ-ಪಾಕ್ ವಿಶ್ವಕಪ್ ಪಂದ್ಯದ ಆಯೋಜನೆಯ ಕುರಿತಂತೆ ಆತಂಕದ ಕಾರ್ಮೋಡ ಕವಿದಿದ್ದು, ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆಯಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ವಿಶ್ವಕಪ್ ಫೈನಲ್ ಪಂದ್ಯದ ದಿನದಂದೇ ಗುಜರಾತ್‌ನಲ್ಲಿ ನವರಾತ್ರಿ ಹಬ್ಬ ಕೂಡಾ ಆರಂಭವಾಗಲಿದೆ. ನವರಾತ್ರಿ ಹಬ್ಬವನ್ನು ಅಹಮದಾಬಾದ್ ಸೇರಿದಂತೆ ಗುಜರಾತ್‌ನಾದ್ಯಂತ ಅದ್ದೂರಿಯಾಗಿ ಆಚರಿಸಲಾಗುತ್ತದೆ. ಹೀಗಾಗಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಭದ್ರತೆ ಒದಗಿಸುವುದು ದೊಡ್ಡ ಸವಾಲಾಗುವ ಸಾಧ್ಯತೆಯಿದೆ. ಹೀಗಾಗಿ ಆ ದಿನದಂದು ಭಾರತ ಹಾಗೂ ಪಾಕಿಸ್ತಾನ ಪಂದ್ಯವನ್ನು ಆಯೋಜಿಸುವುದರ ಕುರಿತಂತೆ ದೊಡ್ಡ ತಲೆನೋವು ಎದುರಾಗಿದೆ. ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದ ಆನ್‌ಲೈನ್ ಟಿಕೆಟ್‌ಗಳು ಈಗಾಗಲೇ ಸೋಲ್ಡೌಟ್ ಆಗಿವೆ. ಹೀಗಿರುವಾಗಲೇ, ಹೀಗಿರುವಾಗಲೇ ವಿಶ್ವಕಪ್ ಟೂರ್ನಿಯ ಆತಿಥ್ಯ ಹೊತ್ತಿರುವ ಬಿಸಿಸಿಐ, ವೇಳಾಪಟ್ಟಿಯಲ್ಲಿ ಕೊಂಚ ಮಾರ್ಪಾಡು ಮಾಡಲು ಮುಂದಾಗಿದೆ ಎಂದು ವರದಿಯಾಗಿದೆ.
ಒನ್‌ಡೇ ವಿಶ್ವಕಪ್ನಲ್ಲಿ ರೋಹಿತ್ ಜೊತೆ ಇನ್ನಿಂಗ್ಸ್ ಆರಂಭಿಸೋರು ಯಾರು.?
"ನಾವು ಬೇರೆ ಆಯ್ಕೆಗಳು ಏನಿವೆ ಎನ್ನುವುದರ ಕುರಿತಂತೆ ಸದ್ಯದಲ್ಲಿಯೇ ಸೂಕ್ತ ತೀರ್ಮಾನವನ್ನು ತೆಗೆದುಕೊಳ್ಳಲಿದ್ದೇವೆ. ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯವಾಗಿರುವುದರಿಂದ ಸಾವಿರಾರು ಸಂಖ್ಯೆಯಲ್ಲಿ ಕ್ರಿಕೆಟ್ ಅಭಿಮಾನಿಗಳು ಅಹಮದಾಬಾದ್‌ಗೆ ಬಂದಿಳಿಯುತ್ತಾರೆ ಎನ್ನುವುದನ್ನು ನಾವೀಗಾಗಲೇ ಭದ್ರತಾ ಏಜೆನ್ಸಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಇದರ ಜತೆಗೆ ನವರಾತ್ರಿ ಕೂಡಾ ಇರುವುದರಿಂದ ಈ ಕುರಿತಂತೆ ಆಲೋಚಿಸುತ್ತಿದ್ದೇವೆ" ಎಂದು ದ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಹೆಸರು ಹೇಳಲಿಚ್ಚಿಸದ ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಇನ್ನು ಪಿಟಿಐ ಮೂಲಗಳ ಪ್ರಕಾರ, ಅಕ್ಟೋಬರ್ 15ರಂದು ನಡೆಯಬೇಕಿರುವ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯವನ್ನು ಒಂದು ದಿನ ಮುಂಚಿತವಾಗಿ ಅಂದರೆ ಅಕ್ಟೋಬರ್ 14ರಂದು ಆಯೋಜಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಪಿಟಿಐ ವರದಿಯ ಪ್ರಕಾರ, ಪಂದ್ಯವನ್ನು ನರೇಂದ್ರ ಮೋದಿ ಸ್ಟೇಡಿಯಂನಿಂದ ಸ್ಥಳಾಂತರಿಸುವ ಸಾಧ್ಯತೆಯಿಲ್ಲ, ಆದರೆ ಅಭಿಮಾನಿಗಳು ತಮ್ಮ ಟ್ರಾವೆಲ್ ಪ್ಲಾನ್‌ನಲ್ಲಿ ಕೊಂಚ ಬದಲಾವಣೆ ಮಾಡಿಕೊಳ್ಳಬೇಕಾದ ಸಾಧ್ಯತೆಯಿದೆ ಎಂದು ತಿಳಿಸಿದೆ.
ಭಾರತ-ಪಾಕ್ ಪಂದ್ಯಕ್ಕಾಗಿ ಆಸ್ಪತ್ರೆಗಳಹಾಸಿಗೆ ಬುಕ್ ಮಾಡುತ್ತಿರುವ ಪ್ರೇಕ್ಷಕರು!
ಅಹಮದಾಬಾದ್: ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಅಕ್ಟೋಬರ್ 15ರಂದು ನಡೆಯಲಿರುವ ಬಹುನಿರೀಕ್ಷಿತ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಕ್ಕೆ ಹೋಟೆಲ್ ಕೋಣೆಗಳ ಬೆಲೆ ಗಗನಕ್ಕೇರಿದ್ದು, ಹೀಗಾಗಿ ಪಂದ್ಯ ವೀಕ್ಷಣೆಗೆ ಬರುವ ಅಭಿಮಾನಿಗಳು ಆಸ್ಪತ್ರೆಗಳ ಹಾಸಿಗೆ ಕಾಯ್ದಿರಿಸಿಕೊಳ್ಳುತ್ತಿದ್ದಾರೆ. ಹೈವೋಲ್ಟೇಜ್ ಪಂದ್ಯದ ದಿನ ನಗರದ ಹೋಟೆಲ್‌ಗಳ ಬೆಲೆ ಒಂದು ದಿನಕ್ಕೆ 50,000 ರು. ಗಡಿ ದಾಟಿದೆ. ಇದರಿಂದಾಗಿ ಅಭಿಮಾನಿಗಳು ದೇಹ ತಪಾಸಣೆ ಹೆಸರಿನಲ್ಲಿ ಆಸ್ಪತ್ರೆಗಳ ಹಾಸಿಗೆ ಬುಕ್ ಮಾಡುತ್ತಿದ್ದಾರೆ. "ಪೂರ್ಣ ದೇಹ ತಪಾಸಣೆ ಜೊತೆಗೆ ರಾತ್ರಿ ತಂಗಲು ಬಯಸುವ ಹಲವರು ಹಾಸಿಗೆ ಬುಕ್ ಮಾಡುತ್ತಿದ್ದಾರೆ. ಆದ್ದರಿಂದ ಅವರ ಎರಡೂ ಉದ್ದೇಶಗಳು ಈಡೇರುತ್ತವೆ" ಎಂದು ಹಿರಿಯ ವೈದ್ಯರೊಬ್ಬರು ಮಾಹಿತಿ ನೀಡಿದ್ದರು.
ಪಾಕ್ ಅಂಡರ್ 23 ಏಷ್ಯಾಕಪ್ ಗೆದ್ದ ಬೆನ್ನಲ್ಲೇ ಪಠಾಣ್ ಟ್ರೋಲ್; ಇರ್ಫಾನ್ ಒಂದೇ ಟ್ವೀಟ್‌ಗೆ ಟ್ರೋಲರ್ಸ್ ಸೈಲೆಂಟ್..!
ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯು ಅಕ್ಟೋಬರ್ 05ರಿಂದ ನವೆಂಬರ್ 19ರವರೆಗೆ ಭಾರತ 10 ಸ್ಟೇಡಿಯಂನಲ್ಲಿ ಪಂದ್ಯಾಟಗಳು ನಡೆಯಲಿವೆ. ಅಕ್ಟೋಬರ್ 05ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಉದ್ವಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಹಾಗೂ ರನ್ನರ್ ಅಪ್ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗುವ ಮೂಲಕ ಟೂರ್ನಿಗೆ ಚಾಲನೆ ಸಿಗಲಿದೆ. ಇನ್ನು ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಅಕ್ಟೋಬರ್ 08ರಂದು ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ದ ಕಣಕ್ಕಿಳಿಯುವ ಮೂಲಕ ವಿಶ್ವಕಪ್ ಟೂರ್ನಿಯಲ್ಲಿ ತನ್ನ ಅಭಿಯಾನ ಆರಂಭಿಸಲಿದೆ.
ವಿಶ್ವಕಪ್ ಟೂರ್ನಿಗೆ ಭಾರತದ ಲೀಗ್ ಹಂತದ ವೇಳಾಪಟ್ಟಿ ಹೀಗಿದೆ ನೋಡಿ: