T20 World Cup 2024: ಭಾರತ-ಐರ್ಲೆಂಡ್ ಮೊದಲ ಮುಖಾಮುಖಿಗೆ ವೇದಿಕೆ ಸಜ್ಜು, ಇಲ್ಲಿದೆ ಈ ಪಂದ್ಯ ಉಪಯುಕ್ತ ಮಾಹಿತಿ

By Naveen Kodase  |  First Published Jun 5, 2024, 9:30 AM IST

ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಜೂನ್ 01ರಂದು ನಡೆದ ಅಭ್ಯಾಸ ಪಂದ್ಯದಲ್ಲಿ ಬಾಂಗ್ಲಾದೇಶ ಎದುರು 60 ರನ್ ಅಂತರದ ಗೆಲುವು ಸಾಧಿಸಿದೆ. ಇದೀಗ ರೋಹಿತ್ ಶರ್ಮಾ ಪಡೆ ಅದೇ ಲಯವನ್ನು ಮುಂದುವರೆಸುವ ವಿಶ್ವಾಸದಲ್ಲಿದೆ.  


ನ್ಯೂಯಾರ್ಕ್‌: 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಜೂನ್ 05ರಂದು ತನ್ನ ಮೊದಲ ಪಂದ್ಯವನ್ನಾಡಲು ಸಜ್ಜಾಗಿದೆ. ಗ್ರೂಪ್ 'ಎ'ನಲ್ಲಿ ಭಾರತ ಕ್ರಿಕೆಟ್ ತಂಡ ಐರ್ಲೆಂಡ್ ಕ್ರಿಕೆಟ್ ತಂಡವನ್ನು ಎದುರಿಸಲಿದೆ. ಈ ಪಂದ್ಯಕ್ಕೆ ಇಲ್ಲಿನ ನಾಸೌ ಕೌಂಟಿ ಇಂಟರ್‌ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ ಆತಿಥ್ಯ ವಹಿಸಿದೆ. 

ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಜೂನ್ 01ರಂದು ನಡೆದ ಅಭ್ಯಾಸ ಪಂದ್ಯದಲ್ಲಿ ಬಾಂಗ್ಲಾದೇಶ ಎದುರು 60 ರನ್ ಅಂತರದ ಗೆಲುವು ಸಾಧಿಸಿದೆ. ಇದೀಗ ರೋಹಿತ್ ಶರ್ಮಾ ಪಡೆ ಅದೇ ಲಯವನ್ನು ಮುಂದುವರೆಸುವ ವಿಶ್ವಾಸದಲ್ಲಿದೆ.  ಟಿ20 ಕ್ರಿಕೆಟ್ ಇತಿಹಾಸದಲ್ಲಿ ಭಾರತ ಹಾಗೂ ಐರ್ಲೆಂಡ್ ತಂಡಗಳು 7 ಬಾರಿ ಮುಖಾಮುಖಿಯಾಗಿವೆ. 7 ಬಾರಿಯೂ ಐರ್ಲೆಂಡ್ ಎದುರು ಭಾರತ ಗೆಲುವಿನ ನಗೆ ಬೀರಿದೆ. ಇದೀಗ ರೋಹಿತ್ ಶರ್ಮಾ ಪಡೆ ಐರ್ಲೆಂಡ್ ತಂಡವನ್ನು ಮಣಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಶುಭಾರಂಭ ಮಾಡುವುದರ ಜತೆಗೆ ವೈಯುಕ್ತಿಕವಾಗಿಯೂ ಹೊಸ ಮೈಲಿಗಲ್ಲು ನೆಡಲು ಹಿಟ್‌ಮ್ಯಾನ್ ರೆಡಿಯಾಗಿದ್ದಾರೆ.

Latest Videos

undefined

'ನಾನು ಇನ್ನಷ್ಟೇ ಪ್ರೀತಿ ಹುಡುಕಬೇಕು': ಮಲಿಕ್ ಜತೆಗಿನ ವಿಚ್ಛೇದನದ ಬಳಿಕ ಸಾನಿಯಾ ಮಿರ್ಜಾ ಅಚ್ಚರಿ ಮಾತು..!

ಹೌದು, ಸದ್ಯ ಎಂ ಎಸ್ ಧೋನಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ ಇತಿಹಾಸದಲ್ಲಿ 41 ಪಂದ್ಯಗಳನ್ನು ಜಯಿಸುವ ಮೂಲಕ ಅತ್ಯಂತ ಯಶಸ್ವಿ ನಾಯಕರೆನಿಸಿಕೊಂಡಿದ್ದರು. ಇನ್ನು ರೋಹಿತ್ ಶರ್ಮಾ ನಾಯಕತ್ವದಲ್ಲೂ ಟೀಂ ಇಂಡಿಯಾ 41 ಬಾರಿ ಟಿ20 ಪಂದ್ಯ ಜಯಿಸಿದೆ. ಇದೀಗ ಐರ್ಲೆಂಡ್ ಎದುರು ಗೆಲುವು ಸಾಧಿಸಿದರೆ, ಧೋನಿ ಹಿಂದಿಕ್ಕಿ ರೋಹಿತ್ ಶರ್ಮಾ, ಭಾರತ ಪರ ಅತಿಹೆಚ್ಚು ಟಿ20 ಪಂದ್ಯ ಜಯಿಸಿದ ನಾಯಕ ಎನಿಸಿಕೊಳ್ಳಲಿದ್ದಾರೆ.

ಇನ್ನು ಐರ್ಲೆಂಡ್ ಎದುರಿನ ಮೊದಲ ಪಂದ್ಯಕ್ಕೆ ಭಾರತದ ಆಡುವ ಹನ್ನೊಂದರ ಬಳಗ ಹೇಗಿರಲಿದೆ ಎನ್ನುವುದರ ಬಗ್ಗೆ ಇನ್ನೂ ಸ್ಪಷ್ಟ ಚಿತ್ರಣವಿಲ್ಲ. ಟೀಂ ಇಂಡಿಯಾ ಆರಂಭಿಕರಾಗಿ ಯಾರು ಕಣಕ್ಕಿಳಿಯಲಿದ್ದಾರೆ ಎಂದು ಇನ್ನೂ ಟೀಂ ಇಂಡಿಯಾ ಗುಟ್ಟು ಬಿಟ್ಟುಕೊಟ್ಟಿಲ್ಲ. ಹಲವು ವರದಿಗಳ ಪ್ರಕಾರ, ರೋಹಿತ್ ಶರ್ಮಾ ಜತೆ ವಿರಾಟ್ ಕೊಹ್ಲಿಯೇ ಇನಿಂಗ್ಸ್ ಆರಂಭಿಸಲಿದ್ದಾರೆ ಎನ್ನಲಾಗುತ್ತಿದೆ.

ಇನ್ನು ಈ ಪಂದ್ಯದ ಕುರಿತಾದ ಕೆಲವೊಂದು ಉಪಯುಕ್ತ ಮಾಹಿತಿ ಇಲ್ಲಿದೆ ನೋಡಿ:

ಪಂದ್ಯ ಆರಂಭ:

ಜೂನ್ 05ರ ಬುಧವಾರ ಭಾರತೀಯ ಕಾಲಮಾನ ಸಂಜೆ 8 ಗಂಟೆಗೆ ಪಂದ್ಯ ಆರಂಭವಾಗಲಿದೆ. 

ನೇರ ಪ್ರಸಾರ:

ಭಾರತ ಹಾಗೂ ಐರ್ಲೆಂಡ್ ನಡುವಿನ ಪಂದ್ಯದ ನೇರ ಪ್ರಸಾರ ಸ್ಟಾರ್ ಸ್ಪೋರ್ಟ್ಸ್‌ ಹಾಗೂ ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗಲಿದೆ.

ಉಭಯ ತಂಡಗಳು ಹೀಗಿವೆ ನೋಡಿ:

ಭಾರತ:

ರೋಹಿತ್ ಶರ್ಮಾ(ನಾಯಕ), ಯಶಸ್ವಿ ಜೈಸ್ವಾಲ್, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್(ವಿಕೆಟ್ ಕೀಪರ್), ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಆರ್ಶದೀಪ್ ಸಿಂಗ್, ಯುಜುವೇಂದ್ರ ಚಹಲ್.

ಐರ್ಲೆಂಡ್:

ಪೌಲ್ ಸ್ಟೆರ್ಲಿಂಗ್(ನಾಯಕ), ಲಾರ್ಕನ್ ಟಕರ್(ವಿಕೆಟ್ ಕೀಪರ್), ಆಂಡ್ರ್ಯೂ ಬಲ್ಬ್ರೈನ್, ರಾಸ್ ಅಡೈರ್, ನೈಲ್ ರಾಕ್, ಕ್ರೇಗ್ ಯಂಗ್, ಜಾರ್ಜ್ ಡಾಕ್ರೆಲ್, ಕುರ್ಟಿಸ್ ಕ್ಯಾಂಪರ್, ಬ್ಯಾರಿ ಮೆಕಾರ್ಥಿ, ಬೆಂಜಮಿನ್ ವೈಟ್, ಜೋಶ್ವಾ ಲಿಟ್ಲ್, ಗೆರಾತ್ ಡೆಲ್ನೆ, ಗ್ರಾಹಂ ಹ್ಯೂಮ್.

click me!