ಭಾರತ vs ಬಾಂಗ್ಲಾದೇಶ ಡೇ & ಟೆಸ್ಟ್ ಪಂದ್ಯಕ್ಕೆ ಮೋದಿ, ಸಚಿನ್?

By Chethan Kumar  |  First Published Nov 1, 2019, 4:07 PM IST

ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಡೇ ಅಂಡ್ ನೈಟ್ ಟೆಸ್ಟ್ ಪಂದ್ಯ ಸ್ಮರಣೀಯವಾಗಿಸಲು ಬಿಸಿಸಿಐ ಹಲವು ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಪಂದ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ, ಬಾಂಗ್ಲಾದೇಶ ಪ್ರಧಾನಿ ಶೇಕ್ ಹಸೀನಾ, ಸಚಿನ್ ತೆಂಡುಲ್ಕರ್‌ಗೆ ಆಹ್ವಾನ ನೀಡಲಾಗಿದೆ. ಇದರ ಜೊತೆ ಕೆಲ ಕ್ರೀಡಾಪಟುಗಳಿಗೆ ಸನ್ಮಾನ ಕಾರ್ಯಕ್ರಮವೂ ನಡೆಯಲಿದೆ.
 


ಮುಂಬೈ(ನ.01): ಭಾರತ ಹಾಗೂ ಬಾಂಗ್ಲಾದೇಶ ನಡುವಿನ 2ನೇ ಟೆಸ್ಟ್ ಪಂದ್ಯ ಹಗಲು ರಾತ್ರಿ ನಡೆಯಲಿದೆ. ಬಿಸಿಸಿಐ ನೂತನ ಅಧ್ಯಕ್ಷ ಸೌರವ್ ಗಂಗೂಲಿ ಪ್ರಯತ್ನದಿಂದ ಇದೀಗ ಡೇ ಅಂಡ್ ನೈಟ್ ಟೆಸ್ಟ್ ಪಂದ್ಯಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ವಿಶೇಷ ಪಂದ್ಯವನ್ನು ಸ್ಮರಣೀಯವಾಗಿಸಲು ಸೌರವ್ ಗಂಗೂಲಿ ಮುಂದಾಗಿದ್ದಾರೆ. ಮಹತ್ವದ ಪಂದ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್‌ಗೆ ಆಹ್ವಾನ ನೀಡಲಾಗಿದೆ.

ಇದನ್ನೂ ಓದಿ: ಡೇ & ನೈಟ್ ಟೆಸ್ಟ್ ಪಂದ್ಯಕ್ಕೆ 72 ಪಿಂಕ್‌ ಬಾಲ್‌!

Tap to resize

Latest Videos

ಕೋಲ್ಕತಾದಲ್ಲಿ ನವೆಂಬರ್ 22 ರಿಂದ 26ರ ವರೆಗೆ ನಡೆಯಲಿರುವ 2ನೇ ಟೆಸ್ಟ್ ಪಂದ್ಯ ಹಗಲು ರಾತ್ರಿ ನಡೆಯಲಿದೆ. ಇದೇ ಮೊದಲ ಭಾರಿಗೆ ಬಿಸಿಸಿಐ ಡೇ ಅಂಡ್ ನೈಟ್ ಟೆಸ್ಟ್ ಪಂದ್ಯ ಆಯೋಜಿಸುತ್ತಿದೆ. ಹೀಗಾಗಿ ಹಲವು ಗಣ್ಯರಿಗೆ ಬಿಸಿಸಿಐ ಆಹ್ವಾನ ನೀಡಿದೆ. ಈ ಪಂದ್ಯಕ್ಕೆ ಬಾಂಗ್ಲಾದೇಶ ಪ್ರಧಾನಿ ಶೇಕ್ ಹಸೀನಾ, ಬಿಸಿಸಿಐ ಆಹ್ವಾನ ಸ್ವೀಕರಿಸಿದ್ದಾರೆ. ಇಷ್ಟೇ ಅಲ್ಲ ಡೇ ಅಂಡ್ ನೈಟ್ ಟೆಸ್ಟ್ ಪಂದ್ಯದ ವೇಳೆ ಹಾಜರಿರುವುದಾಗಿ ಸ್ಪಷ್ಟಪಡಿಸಿದ್ದಾರೆ. 

ಇದನ್ನೂ ಓದಿ: ಡೇ ಅಂಡ್ ನೈಟ್ ಟೆಸ್ಟ್ ಮ್ಯಾಚ್: ಏನು? ಎತ್ತ..? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್

ಭಾರತದ ಪ್ರಧಾನಿ ನರೇಂದ್ರ ಮೋದಿಗೂ ಆಹ್ವಾನ ನೀಡಲಾಗಿದೆ. ಆದರೆ ಐತಿಹಾಸಿಕ ಪಂದ್ಯ ವೀಕ್ಷಣೆಗೆ ಮೋದಿ ಲಭ್ಯತೆ ಖಚಿತವಾಗಿಲ್ಲ. ಈ ಪಂದ್ಯಕ್ಕೆ ಮಾಜಿ ಕ್ರಿಕೆಟಿಗ ಸಚಿನ್ ತೆಂಡುಲ್ಕರ್‌ಗೂ ಆಹ್ವಾನ ನೀಡಲಾಗಿದೆ.  ಇನ್ನು ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಹಾಗೂ ಬಾಂಗ್ಲಾದೇಶ ಕ್ರಿಕೆಟಿಗರಿಗೆ ಸನ್ಮಾನ ಮಾಡಲಾಗುವುದು. ಇದರ ಜೊತೆಗೆ ಭಾರತದ ಚಾಂಪಿಯನ್ ಮಹಿಳಾ ಬಾಕ್ಸರ್ ಮೇರಿ ಕೋಮ್, ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಶೂಟರ್ ಅಭಿನವ್ ಬಿಂದ್ರಾಗೆ ಸನ್ಮಾನ ಮಾಡಲು ಬಂಗಾಳ ಕ್ರಿಕೆಟ್ ಸಂಸ್ಥೆ ತಯಾರಿ ಮಾಡಿಕೊಂಡಿದೆ.

ಡೇ ಅಂಡ್ ನೈಟ್ ಟೆಸ್ಟ್ ಪಂದ್ಯಕ್ಕೆ ಹೆಚ್ಚು ಅಭಿಮಾನಿಗಳನ್ನು ಆಕರ್ಷಿಸುವ ನಿಟ್ಟಿನಲ್ಲಿ ಪ್ರತಿ ದಿನದ ಟಿಕೆಟ್ ಮೊತ್ತವನ್ನು ಇಳಿಸಲಾಗಿದೆ. ಪ್ರತಿ ದಿನ 50 ರೂಪಾಯಿಗೆ ಟೆಸ್ಟ್ ಟಿಕೆಟ್ ದರ ನಿಗಧಿ ಪಡಿಸಲಾಗಿದೆ. 

click me!