ಇಂಡೋ-ಆಸೀಸ್ ಬೆಂಗಳೂರು ಟಿ20 ಪಂದ್ಯದ ಟಿಕೆಟ್ ಮಾರಾಟ ಗೊಂದಲ..!

By Kannadaprabha News  |  First Published Dec 1, 2023, 9:57 AM IST

ಪಂದ್ಯಕ್ಕೆ ಆನ್‌ಲೈನ್‌ನಲ್ಲಿ ಮಾತ್ರ ಟಿಕೆಟ್‌ ಮಾರಾಟ ಮಾಡಲಾಗುತ್ತಿದ್ದು, ಕ್ರೀಡಾಂಗಣದ ಕೌಂಟರ್‌ನಲ್ಲಿ ಮಾರಾಟಕ್ಕಿಟ್ಟಿಲ್ಲ. ಆನ್‌ಲೈನ್‌ ಟಿಕೆಟ್‌ ಬೆಲೆ 4ರಿಂದ 20 ಸಾವಿರ ವರೆಗೂ ಇದ್ದು, ಅಭಿಮಾನಿಗಳು ದಂಗಾಗಿದ್ದಾರೆ. ಅಲ್ಲದೆ ಆನ್‌ಲೈನ್‌ ಟಿಕೆಟ್‌ನ ಪ್ರತಿಯನ್ನು ಕ್ರೀಡಾಂಗಣದ ಕೌಂಟರ್‌ಗಳಲ್ಲಿ ಪಡೆಯುವಂತೆ ಸೂಚಿಸಲಾಗಿತ್ತು.


ಬೆಂಗಳೂರು(ಡಿ.01): ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಡಿ.3(ಭಾನುವಾರ)ರಂದು ನಡೆಯಲಿರುವ ಭಾರತ-ಆಸ್ಟ್ರೇಲಿಯಾ 5ನೇ ಟಿ20 ಪಂದ್ಯದ ಟಿಕೆಟ್‌ ಮಾರಾಟ ವಿಚಾರದಲ್ಲಿ ಭಾರಿ ಗೊಂದಲ ಉಂಟಾಗಿದ್ದು, ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಮತ್ತೆ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿದೆ.

ಪಂದ್ಯಕ್ಕೆ ಆನ್‌ಲೈನ್‌ನಲ್ಲಿ ಮಾತ್ರ ಟಿಕೆಟ್‌ ಮಾರಾಟ ಮಾಡಲಾಗುತ್ತಿದ್ದು, ಕ್ರೀಡಾಂಗಣದ ಕೌಂಟರ್‌ನಲ್ಲಿ ಮಾರಾಟಕ್ಕಿಟ್ಟಿಲ್ಲ. ಆನ್‌ಲೈನ್‌ ಟಿಕೆಟ್‌ ಬೆಲೆ 4ರಿಂದ 20 ಸಾವಿರ ವರೆಗೂ ಇದ್ದು, ಅಭಿಮಾನಿಗಳು ದಂಗಾಗಿದ್ದಾರೆ. ಅಲ್ಲದೆ ಆನ್‌ಲೈನ್‌ ಟಿಕೆಟ್‌ನ ಪ್ರತಿಯನ್ನು ಕ್ರೀಡಾಂಗಣದ ಕೌಂಟರ್‌ಗಳಲ್ಲಿ ಪಡೆಯುವಂತೆ ಸೂಚಿಸಲಾಗಿತ್ತು. ಇದರ ಬಗ್ಗೆ ಹಲವರಿಗೆ ಮಾಹಿತಿಯಿರಲಿಲ್ಲ. ಹೀಗಾಗಿ ಸಾವಿರಾರು ಮಂದಿ ಗುರುವಾರ ಕ್ರೀಡಾಂಗಣದ ಬಳಿ ಜಮಾಯಿಸಿದ್ದಾರೆ.

Latest Videos

undefined

ಇಂದು ಭಾರತ-ಆಸೀಸ್‌ 4ನೇ ಟಿ20; ಕಾಂಗರೂ ಪಡೆ ಗೆದ್ದರಷ್ಟೇ ಸರಣಿ ಕನಸು ಜೀವಂತ

ಕೌಂಟರ್‌ ಟಿಕೆಟ್‌ ನಿರೀಕ್ಷೆಯಲ್ಲಿ ಬಂದಿದ್ದ ಹಲವರು ನಿರಾಸೆಯಿಂದ ಹಿಂದಿರುಗಿದರೆ, ಆನ್‌ಲೈನ್‌ ಟಿಕೆಟ್‌ನ ಪ್ರತಿಗೆ ಬಂದ ಹಲವರು ಗಂಟೆಗಟ್ಟಲೆ ಸರತಿಸಾಲಿನಲ್ಲಿ ನಿಲ್ಲಬೇಕಾಯಿತು. ದುಬಾರಿ ಬೆಲೆಗೆ ಟಿಕೆಟ್‌ ಪಡೆದರೂ, ಮತ್ತೆ ಕ್ರೀಡಾಂಗಣದ ಬಳಿ ಬಿಸಿಲಲ್ಲಿ ಕ್ಯೂ ನಿಲ್ಲಬೇಕಾಗಿದ್ದಕ್ಕೆ ಸಾಮಾಜಿಕ ತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆಎಸ್‌ಸಿಎ ಅಧ್ಯಕ್ಷರಿಗೇ ಇಲ್ಲ ಟಿಕೆಟ್‌ ಮಾಹಿತಿ!

ಟಿಕೆಟ್‌ ಗೊಂದಲದ ಬಗ್ಗೆ ಪ್ರಶ್ನಿಸಲು ಕೆಎಸ್‌ಸಿಎ ಅಧ್ಯಕ್ಷ ರಘುರಾಮ್‌ ಭಟ್‌ರನ್ನು ‘ಕನ್ನಡಪ್ರಭ’ ಸಂಪರ್ಕಿಸಿದಾಗ ಅಚ್ಚರಿ ಕಾದಿತ್ತು. ಸ್ವತಃ ಅಧ್ಯಕ್ಷರಿಗೇ ಟಿಕೆಟ್‌ ಮಾರಾಟ ಬಗ್ಗೆ ಮಾಹಿತಿ ಇರಲಿಲ್ಲ. ಕೌಂಟರ್‌ನಲ್ಲಿ ಟಿಕೆಟ್‌ ಮಾರಾಟವಾಗುತ್ತಿದೆ ಎಂದು ಮೊದಲಿಗೆ ತಿಳಿಸಿದ ಅವರು, ಬಳಿಕ ಕೆಎಸ್‌ಸಿಎ ಕಾರ್ಯದರ್ಶಿಯನ್ನು ಸಂಪರ್ಕಿಸುವಂತೆ ಸೂಚಿಸಿದರು. ಕಾರ್ಯದರ್ಶಿ ಕರೆ ಸ್ವೀಕರಿಸಲಿಲ್ಲ. ಕೆಎಸ್‌ಸಿಎನ ಯಾವೊಬ್ಬ ಅಧಿಕಾರಿಯೂ ಸರಿಯಾದ ಮಾಹಿತಿ ನೀಡಲಿಲ್ಲ.

ವಿಜಯ್‌ ಹಜಾರೆ: ಇಂದು ಕರ್ನಾಟಕ vs ಚಂಡೀಗಢ

ಅಹಮದಾಬಾದ್‌: 2023ರ ವಿಜಯ್‌ ಹಜಾರೆ ಏಕದಿನ ಟೂರ್ನಿಯಲ್ಲಿ ನೇರವಾಗಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಲು ಎದುರು ನೋಡುತ್ತಿರುವ 4 ಬಾರಿ ಚಾಂಪಿಯನ್‌ ಕರ್ನಾಟಕ, ಶುಕ್ರವಾರ ಚಂಡೀಗಢ ವಿರುದ್ಧ ಸೆಣಸಾಡಲಿದೆ.

‘ಸಿ’ ಗುಂಪಿನಲ್ಲಿ ಆಡಿರುವ 4 ಪಂದ್ಯಗಳಲ್ಲೂ ರಾಜ್ಯ ತಂಡ ಗೆಲುವು ಸಾಧಿಸಿದ್ದು, ಇದರ ಹೊರತಾಗಿಯೂ ಅಂಕಪಟ್ಟಿಯಲ್ಲಿ 12 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದೆ. 4 ಗೆಲುವು ಸಾಧಿಸಿರುವ ಹರ್ಯಾಣ ನೆಟ್‌ ರನ್‌ರೇಟ್‌ ಆಧಾರದ ಮೇಲೆ ಮೊದಲ ಸ್ಥಾನ ಪಡೆದಿದೆ. ರಾಜ್ಯ ಶುಕ್ರವಾರದ ಪಂದ್ಯ ಹೊರತುಪಡಿಸಿ ಮತ್ತೆರಡು ಪಂದ್ಯಗಳನ್ನು ಆಡಲಿದ್ದು, ಗುಂಪಿನಲ್ಲಿ ಅಗ್ರಸ್ಥಾನ ಪಡೆದರೆ ನೇರವಾಗಿ ಕ್ವಾರ್ಟರ್‌ಗೇರುವ ಅವಕಾಶವಿದೆ.

ಇನ್ನೂ ಯಾವುದೇ ಒಪ್ಪಂದಕ್ಕೆ ಸಹಿ ಹಾಕಿಲ್ಲ, ಕೋಚ್ ಮುಂದುವರಿಕೆಗೆ ಟ್ವಿಸ್ಟ್ ನೀಡಿದ ದ್ರಾವಿಡ್!

ಅತ್ತ ಚಂಡೀಗಢ ಆಡಿರುವ 4 ಪಂದ್ಯಗಳಲ್ಲಿ 2ರಲ್ಲಿ ಗೆದ್ದಿದ್ದು, ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಮೊದಲೆರಡು ಪಂದ್ಯ ಗೆದ್ದಿದ್ದರೂ ಕಳೆದೆರಡು ಪಂದ್ಯಗಳ ಸೋಲು ತಂಡವನ್ನು ಕುಗ್ಗಿಸಿದ್ದು, ಹ್ಯಾಟ್ರಿಕ್‌ ಸೋಲು ತಪ್ಪಿಸಲು ಎದುರು ನೋಡುತ್ತಿದೆ.

ಪಂದ್ಯ: ಬೆಳಗ್ಗೆ 9ಕ್ಕೆ
 

click me!