ಅಫ್ಘಾನಿಸ್ತಾನ ಸರಣಿಗೆ ಟೀಮ್ ಇಂಡಿಯಾ ಪ್ರಕಟ: ಟೆಸ್ಟ್‌ ತಂಡದಲ್ಲಿ ಮೂವರು ಕನ್ನಡಿಗರು; 3 ವರ್ಷಗಳ ಬಳಿಕ ಏಕದಿನಕ್ಕೆ ಇಶಾನ್‌!

Published : May 19, 2026, 05:15 PM IST
Team India

ಸಾರಾಂಶ

ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್ ಮತ್ತು ಏಕದಿನ ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಶುಭಮನ್ ಗಿಲ್ ನಾಯಕತ್ವದಲ್ಲಿ, ಹಿರಿಯ ಆಟಗಾರರಾದ ಬುಮ್ರಾ ಮತ್ತು ಜಡೇಜಾಗೆ ವಿಶ್ರಾಂತಿ ನೀಡಲಾಗಿದ್ದು, ಇಶಾನ್ ಕಿಶನ್ ಪುನರಾಗಮನ ಮಾಡಿದ್ದಾರೆ.

ನವದೆಹಲಿ (ಮೇ.19): ಭಾರತ ಪ್ರವಾಸ ಕೈಗೊಳ್ಳಲಿರುವ ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ವಿರುದ್ಧದ ಏಕೈಕ ಟೆಸ್ಟ್ ಹಾಗೂ ಮೂರು ಪಂದ್ಯಗಳ ಏಕದಿನ (ODI) ಸರಣಿಗೆ ಬಲಿಷ್ಠ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಹಿರಿಯ ಆಟಗಾರರ ವರ್ಕ್‌ಲೋಡ್ ಮ್ಯಾನೇಜ್‌ಮೆಂಟ್ ಗಮನದಲ್ಲಿಟ್ಟುಕೊಂಡು ಸ್ಟಾರ್ ವೇಗಿ ಜಸ್ಪ್ರಿತ್ ಬುಮ್ರಾ ಮತ್ತು ಆಲ್‌ರೌಂಡರ್ ರವೀಂದ್ರ ಜಡೇಜಾ ಅವರಿಗೆ ಟೆಸ್ಟ್ ಹಾಗೂ ಏಕದಿನ ಎರಡೂ ಸರಣಿಗಳಿಂದ ವಿಶ್ರಾಂತಿ ನೀಡಲಾಗಿದೆ. ಮತ್ತೊಂದೆಡೆ, ಯುವ ವಿಕೆಟ್‌ಕೀಪರ್ ಬ್ಯಾಟರ್ ಇಶಾನ್ ಕಿಶನ್ ಭರ್ಜರಿಯಾಗಿ ಏಕದಿನ ತಂಡಕ್ಕೆ ಮರಳಿದ್ದಾರೆ. ಇದರೊಂದಿಗೆ ದೇಶಿ ಕ್ರಿಕೆಟ್‌ನಲ್ಲಿ ಅಬ್ಬರಿಸಿದ ಯುವ ಪ್ರತಿಭೆಗಳಾದ ಮಾನವ್ ಸುತಾರ್, ಗುರ್ನೂರ್ ಬ್ರಾರ್ ಮತ್ತು ಹರ್ಷ್ ದುಬೆ ಅವರಿಗೆ ಮೊದಲ ಬಾರಿಗೆ ಭಾರತೀಯ ತಂಡದಲ್ಲಿ ಸ್ಥಾನ ಕಲ್ಪಿಸಲಾಗಿದೆ.

ಜೂನ್ 6 ರಿಂದ ಅಫ್ಘಾನ್ ಸರಣಿ ಆರಂಭ

ಅಫ್ಘಾನಿಸ್ತಾನ ತಂಡವು ಜೂನ್ 6 ರಿಂದ ಭಾರತ ಪ್ರವಾಸವನ್ನು ಆರಂಭಿಸಲಿದೆ. ಇಲ್ಲಿ ಉಭಯ ತಂಡಗಳು ಏಕೈಕ ಟೆಸ್ಟ್ ಪಂದ್ಯ ಹಾಗೂ 3 ಏಕದಿನ ಪಂದ್ಯಗಳನ್ನಾಡಲಿವೆ. ಏಕದಿನ ಪಂದ್ಯಗಳು ಜೂನ್ 14, 17 ಮತ್ತು 20 ರಂದು ಕ್ರಮವಾಗಿ ಧರ್ಮಶಾಲಾ, ಲಕ್ನೋ ಮತ್ತು ಚೆನ್ನೈ ಮೈದಾನಗಳಲ್ಲಿ ನಡೆಯಲಿದೆ. ಏಕದಿನ ತಂಡದಲ್ಲಿ ಹಿರಿಯ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇರಲಿದ್ದಾರೆ. ಯುವ ಆಟಗಾರ ಶುಭಮನ್ ಗಿಲ್ ಟೆಸ್ಟ್ ಮತ್ತು ಏಕದಿನ ಎರಡೂ ತಂಡಗಳಿಗೆ ನಾಯಕರಾಗಿ ಜವಾಬ್ದಾರಿ ಹೊರಲಿದ್ದಾರೆ.

ಟೆಸ್ಟ್ ತಂಡದಿಂದ ಬುಮ್ರಾ-ಜಡೇಜಾಗೆ ರೆಸ್ಟ್; ಪಡಿಕ್ಕಲ್ ವಾಪಸ್

ಸತತ ಕ್ರಿಕೆಟ್‌ನಿಂದಾಗಿ ಜಸ್ಪ್ರಿತ್ ಬುಮ್ರಾ ಮತ್ತು ರವೀಂದ್ರ ಜಡೇಜಾಗೆ ವಿಶ್ರಾಂತಿ ನೀಡಲಾಗಿದ್ದು, ವಿಕೆಟ್‌ಕೀಪರ್‌ಗಳಾಗಿ ರಿಷಭ್ ಪಂತ್ ಮತ್ತು ಧ್ರುವ್ ಜುರೆಲ್ ಆಯ್ಕೆಯಾಗಿದ್ದಾರೆ. ಇನ್ನು ಕರ್ನಾಟಕದ ದೇವದತ್ ಪಡಿಕ್ಕಲ್ ನಂಬರ್-3 ಬ್ಯಾಟಿಂಗ್ ಸ್ಥಾನಕ್ಕೆ ಮರಳಿದ್ದು, ಅವರೊಂದಿಗೆ ಸಾಯಿ ಸುದರ್ಶನ್ ಕೂಡ ತಂಡದಲ್ಲಿದ್ದಾರೆ. ಪಡಿಕ್ಕಲ್ ಇದುವರೆಗೆ ಎರಡು ಟೆಸ್ಟ್ ಪಂದ್ಯಗಳನ್ನಾಡಿದ್ದು, ಕೊನೆಯದಾಗಿ 2024 ರಲ್ಲಿ ಪರ್ತ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಆಡಿದ್ದರು.

3 ವರ್ಷಗಳ ಬಳಿಕ ಇಶಾನ್ ಕಿಶನ್ ಭರ್ಜರಿ ಕಮ್‌ಬ್ಯಾಕ್

ವಿಕೆಟ್‌ಕೀಪರ್ ಬ್ಯಾಟರ್ ಇಶಾನ್ ಕಿಶನ್ ಬರೋಬ್ಬರಿ 3 ವರ್ಷಗಳ ಸುದೀರ್ಘ ಅವಧಿಯ ನಂತರ ಭಾರತ ಏಕದಿನ ತಂಡಕ್ಕೆ ಪುನರಾಗಮನ ಮಾಡಿದ್ದಾರೆ. ಅವರು ಕೊನೆಯದಾಗಿ 2023 ರ ಅಕ್ಟೋಬರ್ 11 ರಂದು ದೆಹಲಿಯಲ್ಲಿ ಇದೇ ಅಫ್ಘಾನಿಸ್ತಾನ ವಿರುದ್ಧ ಕೊನೆಯ ಏಕದಿನ ಪಂದ್ಯ ಆಡಿದ್ದರು. ಇಶಾನ್ ಭಾರತದ ಪರ ಇದುವರೆಗೆ 27 ಏಕದಿನ ಪಂದ್ಯಗಳನ್ನಾಡಿದ್ದು, 42.40 ರ ಸರಾಸರಿ ಹಾಗೂ 102.19 ರ ಸ್ಟ್ರೈಕ್ ರೇಟ್‌ನಲ್ಲಿ ಒಂದು ದ್ವಿಶತಕ ಮತ್ತು 7 ಅರ್ಧಶತಕಗಳ ನೆರವಿನಿಂದ ಒಟ್ಟು 933 ರನ್ ಬಾರಿಸಿದ್ದಾರೆ.

ಟೀಮ್ ಇಂಡಿಯಾಕ್ಕೆ ಮೂವರು ಹೊಸಬರ ಎಂಟ್ರಿ!

ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕೆ ಗುರ್ನೂರ್ ಬ್ರಾರ್, ಮಾನವ್ ಸುತಾರ್ ಮತ್ತು ಹರ್ಷ್ ದುಬೆ ಎಂಬ ಮೂವರು ಹೊಸ ಮುಖಗಳನ್ನು ಭಾರತ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ದೇಶಿ ಕ್ರಿಕೆಟ್‌ನಲ್ಲಿ ತೋರಿದ ಅಪ್ರತಿಮ ಪ್ರದರ್ಶನ ಇವರಿಗೆ ರಾಷ್ಟ್ರೀಯ ತಂಡದ ಬಾಗಿಲು ತೆರೆಯುವಂತೆ ಮಾಡಿದೆ.

ಗುರ್ನೂರ್ ಬ್ರಾರ್: ಪಂಜಾಬ್ ಮೂಲದ ಈ ವೇಗಿ 2024-25ರ ರಣಜಿ ಟ್ರೋಫಿ ಸೀಸನ್‌ನ 7 ಪಂದ್ಯಗಳಲ್ಲಿ ಅತಿ ಹೆಚ್ಚು ಅಂದರೆ 26 ವಿಕೆಟ್ ಕಿತ್ತು ಮಿಂಚಿದ್ದರು. 6 ಅಡಿ 4 ಇಂಚು ಎತ್ತರವಿರುವ ಗುರ್ನೂರ್ ತಮ್ಮ ವೇಗ ಮತ್ತು ಎಕ್ಸ್‌ಟ್ರಾ ಬೌನ್ಸ್‌ಗೆ ಹೆಸರುವಾಸಿಯಾಗಿದ್ದಾರೆ. ಐಪಿಎಲ್‌ನಲ್ಲಿ ಇವರು ಗುಜರಾತ್ ಟೈಟನ್ಸ್ ತಂಡದ ಭಾಗವಾಗಿದ್ದಾರೆ.

ಮಾನವ್ ಸುತಾರ್: ರಾಜಸ್ಥಾನದ ಎಡಗೈ ಸ್ಪಿನ್ನರ್ ಆಗಿರುವ ಇವರು ದೇಶಿ ಕ್ರಿಕೆಟ್‌ನಲ್ಲಿ ಸತತ ಸ್ಥಿರ ಪ್ರದರ್ಶನ ನೀಡಿದ್ದಾರೆ. 2022-23ರ ರಣಜಿಯಲ್ಲಿ 39 ವಿಕೆಟ್ ಪಡೆದು ರಾಜಸ್ಥಾನದ ಯಶಸ್ವಿ ಬೌಲರ್ ಎನಿಸಿಕೊಂಡಿದ್ದರು. ಇಂಡಿಯಾ-ಎ ಪರ ಆಡಿರುವ ಇವರು ಐಪಿಎಲ್‌ನಲ್ಲಿ ಗುಜರಾತ್ ಟೈಟನ್ಸ್ ತಂಡದಲ್ಲಿದ್ದಾರೆ.

ಹರ್ಷ್ ದುಬೆ: ವಿದರ್ಭ ತಂಡದ ಆಲ್‌ರೌಂಡರ್ ಆಗಿರುವ ಹರ್ಷ್ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಕಮಾಲ್ ಮಾಡಿದ್ದಾರೆ. ಎಡಗೈ ಸ್ಪಿನ್ನರ್ ಆಗಿರುವ ಇವರು ರೆಡ್-ಬಾಲ್ ಕ್ರಿಕೆಟ್‌ನಲ್ಲಿ ನಿರಂತರ ವಿಕೆಟ್ ಬೇಟೆಯಾಡಿದ್ದಾರೆ. ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ಆಡುವ ಇವರು ಆಯ್ಕೆಗಾರರ ಗಮನ ಸೆಳೆದಿದ್ದಾರೆ.

ಭಾರತೀಯ ಟೆಸ್ಟ್ ತಂಡ

ಶುಭಮನ್ ಗಿಲ್ (ನಾಯಕ), ಕೆ.ಎಲ್. ರಾಹುಲ್ (ಉಪನಾಯಕ), ಯಶಸ್ವಿ ಜೈಸ್ವಾಲ್, ಸಾಯಿ ಸುದರ್ಶನ್, ರಿಷಭ್ ಪಂತ್ (ವಿಕೆಟ್ ಕೀಪರ್), ದೇವದತ್ ಪಡಿಕ್ಕಲ್, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಮಾನವ್ ಸುತಾರ್, ಗುರ್ನೂರ್ ಬ್ರಾರ್, ಹರ್ಷ್ ದುಬೆ ಮತ್ತು ಧ್ರುವ್ ಜುರೆಲ್ (ವಿಕೆಟ್ ಕೀಪರ್).

ಭಾರತೀಯ ಏಕದಿನ (ODI) ತಂಡ

ಶುಭಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ (ಉಪನಾಯಕ), ಕೆ.ಎಲ್. ರಾಹುಲ್ (ವಿಕೆಟ್ ಕೀಪರ್), ಅರ್ಶ್‌ದೀಪ್ ಸಿಂಗ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಪ್ರಸಿದ್ಧ್ ಕೃಷ್ಣ, ಪ್ರಿನ್ಸ್ ಯಾದವ್, ಗುರ್ನೂರ್ ಬ್ರಾರ್ ಮತ್ತು ಹರ್ಷ್ ದುಬೆ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

IPL 2026: ಸಾಕ್ರೀ.. ಆಟ ಆಡಿದ್ದು..ರಿಟೈರ್‌ ಆಗಲಿರುವ ಐವರು ಸ್ಟಾರ್‌ ಕ್ರಿಕೆಟರ್ಸ್‌!
"ಮನೆಗೆ ಹೋಗಿ ವಿಸಿಲ್ ಹೊಡೆಯಿರಿ" ಚೆಪಾಕ್ ಮೈದಾನದಲ್ಲೇ ಚೆನ್ನೈ ಫ್ಯಾನ್ಸ್ ಕಾಲೆಳೆದ ಇಶಾನ್ ಕಿಶನ್! ವಿಡಿಯೋ ವೈರಲ್