Ranji Trophy: ಚೊಚ್ಚಲ ರಣಜಿ ಪಂದ್ಯದಲ್ಲೇ ಯಶ್ ಧುಳ್ ಆಕರ್ಷಕ ಶತಕ

Suvarna News   | Asianet News
Published : Feb 18, 2022, 09:20 AM ISTUpdated : Feb 18, 2022, 09:33 AM IST
Ranji Trophy: ಚೊಚ್ಚಲ ರಣಜಿ ಪಂದ್ಯದಲ್ಲೇ ಯಶ್ ಧುಳ್ ಆಕರ್ಷಕ ಶತಕ

ಸಾರಾಂಶ

* ರಣಜಿ ಟ್ರೋಫಿ ಪಾದಾರ್ಪಣೆ ಪಂದ್ಯವನ್ನು ಸ್ಮರಣೀಯವಾಗಿಸಿಕೊಂಡ ಯಶ್‌ ಧುಳ್ * ಯಶ್ ಧುಳ್‌ ಭಾರತ ಅಂಡರ್ -19 ವಿಶ್ವಕಪ್ ವಿಜೇತ ತಂಡದ ನಾಯಕ * ಮುಂಬೈ ಕ್ರಿಕೆಟಿಗ ಅಜಿಂಕ್ಯ ರಹಾನೆ ಕೂಡಾ ಆಕರ್ಷಕ ಶತಕ

ನವದೆಹಲಿ(ಫೆ.18): ಅಂಡರ್‌-19 ವಿಶ್ವಕಪ್‌ (ICC U-19 World Cup) ವಿಜೇತ ಭಾರತ ತಂಡದ ನಾಯಕ ಯಶ್‌ ಧುಳ್‌ (Yash Dhull) ರಣಜಿ ಟ್ರೋಪಿ ಕ್ರಿಕೆಟ್‌ನ (Ranji Trophy Cricket) ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿ ಗಮನ ಸೆಳೆದಿದ್ದಾರೆ. ಗುರುವಾರ ಆರಂಭವಾದ ತಮಿಳುನಾಡು ವಿರುದ್ಧದ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಧುಳ್‌, 150 ಎಸೆತಗಳಲ್ಲಿ 113 ರನ್‌ ಸಿಡಿಸಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಆಡುತ್ತಿದ್ದ ಧುಳ್‌ ಆರಂಭಿಕನಾಗಿ ಆಡಲು ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ.

ಇತ್ತೀಚೆಗೆ ಅಂಡರ್‌-19 ಏಷ್ಯಕಪ್‌ನಲ್ಲಿ ಪ್ರಶಸ್ತಿ ಗೆದ್ದ ಭಾರತ ತಂಡವನ್ನು ಧುಳ್‌ ಮುನ್ನಡೆಸಿದ್ದರು. ಬಳಿಕ ವಿಶ್ವಕಪ್‌ನಲ್ಲೂ ತಂಡವನ್ನು ಚಾಂಪಿಯನ್‌ ಪಟ್ಟಕ್ಕೇರಿಸಿದ ಧುಳ್‌, ಕಳೆದ ವಾರ ನಡೆದ ಐಪಿಎಲ್‌ ಹರಾಜಿನಲ್ಲಿ (IPL Auction) ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ತಂಡಕ್ಕೆ ಸೇರ್ಪಡೆಗೊಂಡಿದ್ದರು. ಅಂಡರ್‌-19 ಕೂಚ್‌ ಬಿಹಾರ್‌ ಟ್ರೋಫಿಯಲ್ಲಿ ಕೂಡಾ ಆಡದೆ ನೇರವಾಗಿ ಭಾರತ ಅಂಡರ್‌-19 ತಂಡಕ್ಕೆ ಆಯ್ಕೆಯಾಗಿದ್ದ ಧುಳ್‌, ತಮ್ಮ ಆಯ್ಕೆಯನ್ನು ಸಮರ್ಥಿಸುವ ರೀತಿಯಲ್ಲೇ ಪ್ರದರ್ಶನ ನೀಡುತ್ತಿದ್ದು, ಭವಿಷ್ಯದ ತಾರೆ ಎಂದೇ ಹಲವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಬಿಡುವಿಲ್ಲದ ಓಟ:

ಏಷ್ಯಾ ಕಪ್‌ ಹಾಗೂ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಲು ಸುಮಾರು 4 ತಿಂಗಳುಗಳ ಕಾಲ ಬಯೋಬಬಲ್‌ನಲ್ಲೇ ಕಳೆದ ಧುಳ್‌, ಬಳಿಕ ಆ್ಯಂಟಿಗಾದಿಂದ ಬೆಂಗಳೂರಿಗೆ ಆಗಮಿಸಿದ್ದರು. ಅಲ್ಲಿಂದ ಬಿಸಿಸಿಐ ಸನ್ಮಾನ ಕಾರ‍್ಯಕ್ರಮಕ್ಕಾಗಿ ಅಹಮದಾಬಾದ್‌ಗೆ ತೆರಳಿದ ಅವರು, ಬಳಿಕ ಡೆಲ್ಲಿಗೆ ಅರ್ಧದಿನದ ಮಟ್ಟಿಗೆ ಭೇಟಿ ನೀಡಿ ಅಲ್ಲಿಂದ ಗುವಾಹಟಿಗೆ ತೆರಳಿ ದೆಹಲಿ ರಣಜಿ ತಂಡ ಕೂಡಿಕೊಂಡಿದ್ದರು. ಬಿಡುವಿಲ್ಲದ ಓಟದ ನಡುವೆಯೂ ಧುಳ್‌ ಅತ್ಯುತ್ತಮ ಪ್ರದರ್ಶನದ ಮೂಲಕ ಗಮನ ಸೆಳೆಯುತ್ತಿದ್ದಾರೆ.

ರಣಜಿ ಟ್ರೋಫಿ: ತಮಿಳುನಾಡು ವಿರುದ್ಧ ರಹಾನೆ ಶತಕ

ಅಹಮದಾಬಾದ್‌: ಭಾರತ ಟೆಸ್ಟ್‌ ತಂಡದಿಂದ ಹೊರಬೀಳುವ ಭೀತಿಯಲ್ಲಿರುವ ಅಜಿಂಕ್ಯ ರಹಾನೆ(Ajinkya Rahane), ರಣಜಿ ಟೋಫಿಯನ್ನು ಶತಕದೊಂದಿಗೆ ಆರಂಭಿಸಿದ್ದು ಶ್ರೀಲಂಕಾ ವಿರುದ್ಧದ ಟೆಸ್ಟ್‌ ಸರಣಿಗೆ ಟೀಂ ಇಂಡಿಯಾದಲ್ಲಿ ಸ್ಥಾನ ಉಳಸಿಕೊಳ್ಳಲು ಹೋರಾಟ ನಡೆಸಿದ್ದಾರೆ. ಗುರುವಾರ ಆರಂಭಗೊಂಡ ತಮಿಳುನಾಡು ವಿರುದ್ಧದ ಪಂದ್ಯದಲ್ಲಿ ರಹಾನೆ 250 ಎಸೆತಗಳಲ್ಲಿ 108 ರನ್‌ ಗಳಿಸಿ ಔಟಾಗದೆ ಉಳಿದಿದ್ದಾರೆ.

Ranji Trophy : ರೈಲ್ವೇಸ್ ವಿರುದ್ಧ ಮನೀಷ್ ಪಾಂಡೆ, ಕೆವಿ ಸಿದ್ಧಾರ್ಥ್ ಸೂಪರ್ ಶತಕ

ಟೀಂ ಇಂಡಿಯಾ (Team India) ಟೆಸ್ಟ್‌ ತಂಡದ ಮಾಜಿ ಉಪನಾಯಕರಾಗಿದ್ದ ಅಜಿಂಕ್ಯ ರಹಾನೆ ಅವರನ್ನು ದಕ್ಷಿಣ ಆಫ್ರಿಕಾ ವಿರುದ್ದದ ಟೆಸ್ಟ್ ಸರಣಿಗೂ ಮುನ್ನ ಟೆಸ್ಟ್ ಉಪನಾಯತ್ವದಿಂದ ಕೆಳಗಿಳಿಸಲಾಗಿತ್ತು. ಕಳೆದ ಕೆಲ ವರ್ಷಗಳಿಂದ ರಹಾನೆ ಟೆಸ್ಟ್ ಕ್ರಿಕೆಟ್‌ನಲ್ಲಿ ಶತಕ ಬಾರಿಸಲು ಪರದಾಡುತ್ತಿದ್ದರು. ಇದೀಗ ರಣಜಿ ಟೂರ್ನಿಯಲ್ಲಿ ಶತಕ ಬಾರಿಸುವ ಮೂಲಕ ಭಾರತ ತಂಡದ ಆಯ್ಕೆ ಸಮಿತಿಯ ಗಮನ ಸೆಳೆಯುವತ್ತ ದಿಟ್ಟ ಹೆಜ್ಜೆಯಿಟ್ಟಿದ್ದಾರೆ.

ಟೆಸ್ಟ್‌: ದಕ್ಷಿಣ ಆಫ್ರಿಕಾ 95 ರನ್‌ಗೆ ಆಲೌಟ್‌

ಕ್ರೈಸ್ಟ್‌ಚರ್ಚ್‌‍: ಮ್ಯಾಟ್‌ ಹೆನ್ರಿ ಮಾರಕ ದಾಳಿಗೆ ಸಿಲುಕಿದ ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್‌ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಕೇವಲ 95 ರನ್‌ಗೆ ಆಲೌಟಾಗಿದೆ. 1932ರ ಬಳಿಕ ಟೆಸ್ಟ್‌ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಇದೇ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾ 100 ರನ್‌ಗಳೊಳಗೆ ಆಲೌಟ್‌ ಆಗಿದೆ. 1932ರಲ್ಲಿ ಆಸ್ಪ್ರೇಲಿಯಾ ವಿರುದ್ಧ ಮೆಲ್ಬರ್ನ್‌ ಟೆಸ್ಟ್‌ನಲ್ಲಿ 36 ರನ್‌ಗೆ ಆಲೌಟ್‌ ಆಗಿತ್ತು. 

ಗುರುವಾರ ಟಾಸ್‌ ಸೋತು ಬ್ಯಾಟಿಂಗ್‌ಗಿಳಿದ ದ.ಆಫ್ರಿಕಾವನ್ನು ಮ್ಯಾಟ್ ಹೆನ್ರಿ ಕಾಡಿದರು. ಕೇವಲ 23 ರನ್‌ಗೆ 7 ವಿಕೆಟ್‌ ಕಿತ್ತ ಹೆನ್ರಿ ಜೀವನ ಶ್ರೇಷ್ಠ ಸಾಧನೆ ಮಾಡಿದರು. ಮೊದಲ ಇನ್ನಿಂಗ್ಸ್‌ ಆರಂಭಿಸಿರುವ ನ್ಯೂಜಿಲೆಂಡ್‌ ಮೊದಲ ದಿನದಂತ್ಯಕ್ಕೆ 3 ವಿಕೆಟ್‌ಗೆ 116 ರನ್‌ ಗಳಿಸಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಡಿಕಾಕ್‌ ಡ್ಯಾಶಿಂಗ್‌ ಆಟದ ಮುಂದೆ ಥಂಡಾ ಹೊಡೆದ ಟೀಮ್‌ ಇಂಡಿಯಾ!
ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟ ಆರಂಭ, 450 ರೂಗೆ ಬುಕಿಂಗ್ ಹೇಗೆ?