IPL 2022: ಈ ಬಾರಿಯ ಐಪಿಎಲ್ ನಲ್ಲಿ ರಬಾಡ ಎಸೆಯುವ ಒಂದೊಂದು ಎಸೆತಕ್ಕೂ ಇಷ್ಟೊಂದು ದುಡ್ಡಾ?

By Suvarna NewsFirst Published Feb 17, 2022, 4:56 PM IST
Highlights

ಪಂಜಾಬ್ ಕಿಂಗ್ಸ್ ತಂಡಕ್ಕೆ ದಾಖಲೆಯ ಮೊತ್ತಕ್ಕೆ ಸೇರಿರುವ ಕಗಿಸೋ ರಬಾಡ
ಹರಾಜಿನಲ್ಲಿ ದಕ್ಷಿಣ ಆಫ್ರಿಕಾದ  ಅತ್ಯಂತ ದುಬಾರಿ ಆಟಗಾರ ರಬಾಡ
ಐಪಿಎಲ್ ನಲ್ಲಿ ತಮ್ಮ 2ನೇ ತಂಡವನ್ನು ಪ್ರತಿನಿಧಿಸಲಿದ್ದಾರೆ ವೇಗದ ಬೌಲರ್

ನವದೆಹಲಿ (ಫೆ.17): ಪಂಜಾಬ್ ಕಿಂಗ್ಸ್ (PBKS) ದಕ್ಷಿಣ ಆಫ್ರಿಕಾದ (South Africa) ಸ್ಟಾರ್ ವೇಗದ ಬೌಲರ್ ಕಗೀಸೋ ರಬಾಡ (Kagiso Rabada) ಅವರ ಸೇವೆಯನ್ನು ಪಡೆಯಲು  9.25 ಕೋಟಿ ರೂಪಾಯಿ ಖರ್ಚು ಮಾಡಿದೆ. ಇದು 2022ರ ಐಪಿಎಲ್ ಹರಾಜಿನಲ್ಲಿ (IPL Auction) ಪಂಜಾಬ್ ಕಿಂಗ್ಸ್ ( PUNJAB KINGS) ಫ್ರಾಂಚೈಸಿಯ ಅತ್ಯಂತ ದುಬಾರಿ ಖರೀದಿ ಎನಿಸಿತ್ತು. ಹೊಸ ತಂಡ ಗುಜರಾತ್ ಜೈಂಟ್ಸ್ (Gujrath Gaints) ಕೂಡ ರಬಾಡರನ್ನು ಖರೀದಿಸಲು ಆಸಕ್ತಿ ಹೊಂದಿತ್ತಾದರೂ, ಪಂಜಾಬ್ ಕಿಂಗ್ಸ್ ತಂಡ ರಬಾಡಗಾಗಿ ತನ್ನ ಹೆಚ್ಚಿನ ಹಣ ವಿನಿಯೋಗ ಮಾಡುವ ಮೂಲಕ ಖರೀದಿಸಲು ಯಶಸ್ವಿಯಾಗಿತ್ತು. ಕಗಿಸೋ ರಬಾಡ ಅವರು ವಿಶ್ವ ಕ್ರಿಕೆಟ್ ನಲ್ಲಿ ಅತ್ಯುತ್ತಮ ವೇಗದ ಬೌಲರ್ ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದು, ಐಪಿಎಲ್ ನಲ್ಲಿ ಈವರೆಗಿನ ತಮ್ಮ 2ನೇ ತಂಡವನ್ನು ಅವರು ಸೇರಿಕೊಳ್ಳಲಿದ್ದಾರೆ.

2017ರ ಐಪಿಎಲ್ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಇವರನ್ನು ಖರೀದಿ ಮಾಡಿತ್ತು. ಆದರೆ, ಬೆನ್ನುನೋವಿನ ಕಾರಣದಿಂದಾಗಿ 2018ರ ಐಪಿಎಲ್ ನಿಂದ ಹೊರಗುಳಿದಿದ್ದ ಅವರು, 2019ರ ಐಪಿಎಲ್ ನಿಂದ ತಂಡದ ಅವಿಭಾಜ್ಯ ಅಂಗವಾಗಿದ್ದರು. 2019 ಹಾಗೂ 2021ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡ ಪ್ಲೇ ಆಫ್ ಸಾಧನೆ ಮಾಡುವಲ್ಲಿ ರಬಾಡ ಉರುಳಿಸಿದ ವಿಕೆಟ್ ಗಳು ಕಾರಣರಾಗಿದ್ದರು. 2020ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಐಪಿಎಲ್ ಫೈನಲ್ ಗೇರಿದ ಸಾಧನೆ ಮಾಡಿದ್ದ ವೇಳೆ, ಗರಿಷ್ಠ ವಿಕೆಟ್ ಉರುಳಿಸಿದ ಬೌಲರ್ ಎನಿಸಿಕೊಂಡಿದ್ದರು.

ಇನ್ನು 2022ರ ಐಪಿಎಲ್ ಮೆಗಾ ಹರಾಜಿನ ಬಗ್ಗೆ ಮಾತನಾಡುವುದಾದರೆ, 26 ವರ್ಷ ವಯಸ್ಸಿನ ವೇಗದ ಬೌಲರ್ 2 ಕೋಟಿ ರೂಪಾಯಿ ಮೂಲ ಬೆಲೆಯನ್ನು ಹೊಂದಿದ್ದರು. ಆದರೆ, ಅವರನ್ನು ದಾಖಲೆಯ ಮೊತ್ತಕ್ಕೆ ಪಂಜಾಬ್ ಕಿಂಗ್ಸ್ ತಂಡ ಖರೀದಿ ಮಾಡುವ ಮೂಲಕ ಅವರ ಮೌಲ್ಯ 462.5% ಹೆಚ್ಚಳದೊಂದಿಗೆ 4.625 ಪಟ್ಟು ಹೆಚ್ಚಾಗಿದೆ. ಡೆಲ್ಲಿ ಪರವಾಗಿ 50 ಐಪಿಎಲ್ ಪಂದ್ಯಗಳನ್ನು ಆಡಿರುವ ರಬಾಡ, 20.53ರ ಸರಾಸರಿಯಲ್ಲಿ 76 ವಿಕೆಟ್ ಗಳನ್ನು ಉರುಳಿಸಿದ್ದಾರೆ. ಅವರ ಎಕಾನಮಿ 8.21 ಆಗಿದ್ದು, 21 ರನ್ ಗೆ 4 ವಿಕೆಟ್ ಅವರ ಶ್ರೇಷ್ಠ ನಿರ್ವಹಣೆ ಎನಿಸಿದೆ.

IND vs WI T20 ರೋಹಿತ್ ಅಬ್ಬರ, ವಿಂಡೀಸ್ ವಿರುದ್ಧ ಟೀಂ ಇಂಡಿಯಾಗೆ 6 ವಿಕೆಟ್ ಗೆಲುವು!
ಕಗಿಸೊ ರಬಾಡ ಮೆಗಾ ಹರಾಜಿನಲ್ಲಿ ದಕ್ಷಿಣ ಆಫ್ರಿಕಾದ ಅತ್ಯಂತ ದುಬಾರಿ ಆಟಗಾರ: ಕೆಜಿ ಎನ್ನುವ ನಿಕ್ ನೇಮ್ ಅನ್ನೂ ಹೊಂದಿರುವ ರಬಾಡ, ಹರಾಜಿನಲ್ಲಿ ದಕ್ಷಿಣ ಆಫ್ರಿಕಾದ ಅತ್ಯಂತ ದುಬಾರಿ ಆಟಗಾರ ಎನಿಸಿದರು. ರಬಾಡ ಅವರ ನಂತರದ ಸ್ಥಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಫಾಫ್ ಡು ಪ್ಲೆಸಿಸ್ ಇದ್ದು 7 ಕೋಟಿಯ ಒಪ್ಪಂದ ಪಡೆದುಕೊಂಡಿದ್ದಾರೆ. ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಕ್ವಿಂಟನ್ ಡಿ ಕಾಕ್ ಹೊಸ ತಂಡ ಲಕ್ನೋ ಸೂಪರ್ ಜೈಂಟ್ (LSG) ತಂಡಕ್ಕೆ 6.75 ಕೋಟಿ ರೂಪಾಯಿಗೆ ಮಾರಾಟವಾದರು. ಸನ್‌ರೈಸರ್ಸ್ ಹೈದರಾಬಾದ್ (SRH) ತಂಡ, ಮುಂಬೈ ಇಂಡಿಯನ್ಸ್ (MI) ಮಾಜಿ ವೇಗಿ ಮಾರ್ಕೊ ಜಾನ್ಸೆನ್‌ಗೆ INR 4.2 ಕೋಟಿಗಳನ್ನು ಚೆಲ್ಲುವ ಮೂಲಕ ನಾಲ್ಕನೇ ಅತ್ಯಂತ ದುಬಾರಿ ದಕ್ಷಿಣ ಆಫ್ರಿಕಾದ ಆಟಗಾರ ಎನಿಸಿದರು. ಅಂಡರ್ 19 ವಿಶ್ವಕಪ್ ಸೆನ್ಸೇಷನ್ "ಬೇಬಿ ಎಬಿ' ಎಂದು ಕರೆಯಲ್ಪಡುವ ಡೆವಾಲ್ಡ್ ಬ್ರೇವಿಸ್ ಅವರನ್ನು ಮುಂಬೈ ಇಂಡಿಯನ್ಸ್ ತಂಡ 3 ಕೋಟಿ ರೂಪಾಯಿಗೆ ಖರೀದಿ ಮಾಡಿದೆ.

Yuzvendra Chahal : "ಪಾಜಿ, ನಿಂಬು ಕಟ್ಟಾ ಹೇ" ರೀಲ್ ಗೆ ಸಖತ್ ರೆಸ್ಪಾನ್ಸ್!
ಪ್ರತಿ ತಂಡವು ಲೀಗ್ ಹಂತದಲ್ಲಿಆಡುವ ಪಂದ್ಯಗಳು ಫೈನಲ್ ಸೇರಿದಂತೆ ಮೂರು ಪ್ಲೇ ಆಫ್ ಪಂದ್ಯಗಳ ಲೆಕ್ಕಾಚಾರವನ್ನು ಸೇರಿಸಿಕೊಂಡರೆ, 2022ರ ಐಪಿಎಲ್ ನಲ್ಲಿ ರಬಾಡ ಗರಿಷ್ಠ 408 ಎಸೆತಗಳನ್ನು ಎಸೆಯಲಿದ್ದಾರೆ. ಇದರ ಅರ್ಥ ಅವರು 2022ರ ಐಪಿಎಲ್ ನಲ್ಲಿ ಎಸೆಯಲಿರುವ ಪ್ರತಿ ಎಸೆತಕ್ಕೆ 2.27 ಲಕ್ಷ ರೂಪಾಯಿ ಅಥವಾ 3 ಸಾವಿರ ಯುಎಸ್ ಡಾಲರ್ ಪಡೆದುಕೊಳ್ಳಲಿದ್ದಾರೆ ಎಂದರೆ ಅಚ್ಚರಿಯಾಗದೇ ಇರದು. ಡೆತ್ ಓವರ್ ಗಳ ಸ್ಪೆಷಲಿಸ್ಟ್ ಆಗಿರುವ ರಬಾಡ ಸೂಪರ್ ಓವರ್ ಗಳಲ್ಲಿಯೂ ಬೌಲಿಂಗ್ ಮಾಡಬಹುದು. 

click me!