ನವೆಂಬರ್ 03ರಿಂದ ಆರಂಭವಾಗಲಿರುವ ಬಾಂಗ್ಲಾ ವಿರುದ್ಧ ಟಿ20 ಸರಣಿ ಹಾಗೂ 2 ಪಂದ್ಯಗಳ ಟೆಸ್ಟ್ ಚಾಂಪಿಯನ್’ಶಿಪ್ ಇದೀಗ ನಡೆಯುವುದು ಅನುಮಾನ ಎನಿಸತೊಡಗಿದೆ. ಯಾಕೆ ಹೀಗೆ ಎನ್ನುವ ನಿಮ್ಮ ಕುತೂಹಲಕ್ಕೆಇಲ್ಲಿದೆ ನೋಡಿ ಉತ್ತರ...
ಢಾಕಾ[ಅ.22]: ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಮುಕ್ತಾಯಗೊಳ್ಳುತ್ತಿದ್ದಂತೆ ಭಾರತ, ಬಾಂಗ್ಲಾದೇಶಕ್ಕೆ ಆತಿಥ್ಯ ವಹಿಸಲಿದೆ. 3 ಟಿ20 ಹಾಗೂ 2 ಟೆಸ್ಟ್ ಪಂದ್ಯಗಳ ಸರಣಿಯನ್ನಾಡಲು ತಂಡ, ಭಾರತಕ್ಕೆ ಆಗಮಿಸಬೇಕಿದೆ.
ಬಾಂಗ್ಲಾ ಟಿ20 ಸರಣಿ: ಕೊಹ್ಲಿಗೆ ವಿಶ್ರಾಂತಿ?
undefined
ಆದರೆ ಸೋಮವಾರ ತಂಡದ ಪ್ರಮುಖ ಆಟಗಾರರಾದ ಶಕೀಬ್ ಅಲ್ ಹಸನ್, ಮುಷ್ಫಿಕರ್ ರಹೀಮ್, ತಮೀಮ್ ಇಕ್ಬಾಲ್, ಮಹಮದ್ದುಲ್ಲಾ ಸೇರಿದಂತೆ ಬಹುತೇಕ ಎಲ್ಲಾ ಆಟಗಾರರು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ವಿರುದ್ಧ ಪ್ರತಿಭಟನೆ ಆರಂಭಿಸಿದ್ದಾರೆ. ವೇತನ ಹೆಚ್ಚಳ ಸೇರಿದಂತೆ ಒಟ್ಟು 11 ಷರತ್ತುಗಳನ್ನು ಬಿಸಿಬಿ ಮುಂದಿಟ್ಟಿರುವ ಆಟಗಾರರು, ಸಮಸ್ಯೆ ಬಗೆಹರಿಸುವ ವರೆಗೂ ಎಲ್ಲಾ ಕ್ರಿಕೆಟ್ ಚಟುವಟಿಕೆಗಳಿಂದ ದೂರವಿರುವುದಾಗಿ ಘೋಷಿಸಿದ್ದಾರೆ.
ಟೀಂ ಇಂಡಿಯಾ ಎದುರಿನ ಟಿ20 ಸರಣಿಗೆ ಬಾಂಗ್ಲಾದೇಶ ತಂಡ ಪ್ರಕಟ
ಸೋಮವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಂತಾರಾಷ್ಟ್ರೀಯ ಆಟಗಾರರು ಸೇರಿದಂತೆ 50ಕ್ಕೂ ಹೆಚ್ಚು ಕ್ರಿಕೆಟಿಗರು ಪಾಲ್ಗೊಂಡಿದ್ದರು. ದೇಸಿ ಆಟಗಾರರ ಸಂಭಾವನೆ ಏರಿಕೆ, 2ಕ್ಕಿಂತ ಹೆಚ್ಚು ವಿದೇಶಿ ಲೀಗ್‌ಗಳಲ್ಲಿ ಆಡಲು ಅವಕಾಶ ನೀಡಬೇಕು, ಬಾಂಗ್ಲಾದೇಶ ಪ್ರೀಮಿಯರ್ ಲೀಗ್ (ಬಿಪಿಎಲ್) ಟಿ20 ಟೂರ್ನಿಯಲ್ಲಿ ಆಟಗಾರರನ್ನು ಹೆಚ್ಚಿನ ಮೊತ್ತಕ್ಕೆ ಖರೀದಿಸಬೇಕು ಎನ್ನುವುದು ಪ್ರಮುಖ ಷರತ್ತುಗಳಾಗಿವೆ.
ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿರುವ ಬಿಸಿಸಿಐ, ‘ಇದು ಬಾಂಗ್ಲಾದೇಶದ ಆಂತರಿಕ ಸಮಸ್ಯೆ. ಬಿಸಿಬಿ ಯಾವುದೇ ಅಧಿಕೃತ ಮಾಹಿತಿ ರವಾನಿಸಿಲ್ಲ. ಸರಣಿ ರದ್ದುಗೊಳಿಸುವ ಬಗ್ಗೆ ಈಗಲೇ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ’ ಎಂದಿದೆ.