ಟಿ20 ವಿಶ್ವಕಪ್‌ನಲ್ಲಿ ಭಾರತದ ಹೊಸ ಮುಖಗಳಿಗೆ ಮಣೆಯಿಲ್ಲ? ಯಾರಿಗೆಲ್ಲಾ ಸಿಗಲಿದೆ ಸ್ಥಾನ?

By Kannadaprabha News  |  First Published Apr 19, 2024, 8:21 AM IST

ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ, ಜಸ್ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ, ರಿಷಭ್‌ ಪಂತ್, ಸೂರ್ಯಕುಮಾರ್‌ ಯಾದವ್, ಅರ್ಶ್‌ದೀಪ್‌ ಸಿಂಗ್, ಮೊಹಮ್ಮದ್ ಸಿರಾಜ್‌, ಕುಲ್ದೀಪ್‌ ಯಾದವ್ ಹಾಗೂ ಹಾರ್ದಿಕ್‌ ಪಾಂಡ್ಯ ಆಯ್ಕೆಯಾಗುವುದು ಬಹುತೇಕ ಖಚಿತ. ಇನ್ನು, ಆರಂಭಿಕ ಸ್ಥಾನಕ್ಕೆ ಶುಭ್‌ಮನ್ ಗಿಲ್‌ ಹಾಗೂ ಯಶಸ್ವಿ ಜೈಸ್ವಾಲ್‌, ಫಿನಿಶರ್‌ ಸ್ಥಾನಕ್ಕೆ ರಿಂಕು ಸಿಂಗ್‌-ಶಿವಂ ದುಬೆ ನಡುವೆ ಪೈಪೋಟಿ ಇದೆ.


ನವದೆಹಲಿ: ಜೂ.1ರಿಂದ ಆರಂಭಗೊಳ್ಳಲಿರುವ ಟಿ20 ವಿಶ್ವಕಪ್‌ಗೆ ಈಗಾಗಲೇ ಬಿಸಿಸಿಐ ಭಾರತ ತಂಡದ ಆಯ್ಕೆ ಪ್ರಕ್ರಿಯೆ ಆರಂಭಿಸಿದ್ದು, ಯಾವುದೇ ಹೊಸ ಮುಖಗಳಿಗೆ ಮಣೆ ಹಾಕದಿರಲು ನಿರ್ಧರಿಸಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಕಳೆದ ವಾರವೇ ಪ್ರಧಾನ ಆಯ್ಕೆಗಾರ ಅಜಿತ್‌ ಅಗರ್ಕರ್‌, ಪ್ರಧಾನ ಕೋಚ್‌ ರಾಹುಲ್‌ ದ್ರಾವಿಡ್‌, ನಾಯಕ ರೋಹಿತ್‌ ಶರ್ಮಾ ಸಭೆ ನಡೆಸಿದ್ದಾರೆ. ಭಾರತ ಪರ ಟಿ20 ಹಾಗೂ ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ಆಟಗಾರರನ್ನೇ ತಂಡಕ್ಕೆ ಆಯ್ಕೆ ಮಾಡಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಹೀಗಾಗಿ ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ, ಜಸ್ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ, ರಿಷಭ್‌ ಪಂತ್, ಸೂರ್ಯಕುಮಾರ್‌ ಯಾದವ್, ಅರ್ಶ್‌ದೀಪ್‌ ಸಿಂಗ್, ಮೊಹಮ್ಮದ್ ಸಿರಾಜ್‌, ಕುಲ್ದೀಪ್‌ ಯಾದವ್ ಹಾಗೂ ಹಾರ್ದಿಕ್‌ ಪಾಂಡ್ಯ ಆಯ್ಕೆಯಾಗುವುದು ಬಹುತೇಕ ಖಚಿತ. ಇನ್ನು, ಆರಂಭಿಕ ಸ್ಥಾನಕ್ಕೆ ಶುಭ್‌ಮನ್ ಗಿಲ್‌ ಹಾಗೂ ಯಶಸ್ವಿ ಜೈಸ್ವಾಲ್‌, ಫಿನಿಶರ್‌ ಸ್ಥಾನಕ್ಕೆ ರಿಂಕು ಸಿಂಗ್‌-ಶಿವಂ ದುಬೆ ನಡುವೆ ಪೈಪೋಟಿ ಇದೆ.

Tap to resize

Latest Videos

IPL 2024: ಅಶುತೋಶ್‌ ಶಾಕ್‌ನಿಂದ ಪಾರಾದ ಮುಂಬೈ ಇಂಡಿಯನ್ಸ್!

2ನೇ ವಿಕೆಟ್‌ ಕೀಪರ್‌ಗಾಗಿ ಕೆ.ಎಲ್‌.ರಾಹುಲ್‌, ಸಂಜು ಸ್ಯಾಮ್ಸನ್‌, ಜಿತೇಶ್‌ ಶರ್ಮಾ, ಇಶಾನ್‌ ಕಿಶನ್‌ ನಡುವೆ ಸ್ಪರ್ಧೆಯಿದೆ ಎಂದು ತಿಳಿದುಬಂದಿದೆ. ಯುಜುವೇಂದ್ರ ಚಹಲ್‌, ರವಿ ಬಿಷ್ಣೋಯ್‌, ಅಕ್ಷರ್ ಪಟೇಲ್‌, ಆವೇಶ್‌ ಖಾನ್‌ ಕೂಡಾ ಆಯ್ಕೆ ರೇಸ್‌ನಲ್ಲಿದ್ದಾರೆ. ಇನ್ನು, ವೇಗಿಗಳಾದ ಮಯಾಂಕ್‌ ಯಾದವ್‌, ಹರ್ಷಿತ್‌ ರಾಣಾ, ಆಕಾಶ್‌, ಮಧ್ವಾಲ್‌ ಮೀಸಲು ಆಟಗಾರರಾಗಿ ತಂಡದ ಜೊತೆ ಪ್ರಯಾಣಿಸುವ ನಿರೀಕ್ಷೆಯಿದೆ.

ಈ ಬಾರಿ ಐಪಿಎಲ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ರಿಯಾನ್‌ ಪರಾಗ್‌, ಅಭಿಷೇಕ್‌ ಶರ್ಮಾ, ವೇಗಿಗಳಾದ ಮಯಾಂಕ್‌ ಯಾದವ್‌, ಹರ್ಷಿತ್ ರಾಣಾ ಅವರನ್ನು ಬಿಸಿಸಿಐ ವಿಶ್ವಕಪ್‌ಗೆ ಪರಿಗಣಿಸಲಿದೆ ಎಂದು ಹೇಳಲಾಗುತ್ತಿತ್ತು. ಆದರೆ ಯುವ ಪ್ರತಿಭೆಗಳನ್ನು ನೇರವಾಗಿ ವಿಶ್ವಕಪ್‌ಗೆ ಆಯ್ಕೆ ಮಾಡದೆ ದ್ವಿಪಕ್ಷೀಯ ಸರಣಿಗಳಲ್ಲಿ ಆಡಿಸಲು ಆಯ್ಕೆ ಸಮಿತಿ ನಿರ್ಧರಿಸಿದೆ ಎಂದು ವರದಿಯಾಗಿದೆ.

ಮ್ಯಾಚ್‌ ಫಿನಿಶಿಂಗ್‌ಗೆ ಕೊಹ್ಲಿ, ಧೋನಿಯೇ ಸ್ಫೂರ್ತಿ: ಜೋಸ್ ಬಟ್ಲರ್‌

ಕೋಲ್ಕತಾ: ಕೋಲ್ಕತಾ ವಿರುದ್ಧ ಸೋಲಿನ ಸಿಲುಕಿದ್ದರೂ ತಮ್ಮ ಹೋರಾಟದಿಂದಾಗಿ ರಾಜಸ್ಥಾನಕ್ಕೆ ಗೆಲುವು ತಂದುಕೊಟ್ಟ ಜೋಸ್‌ ಬಟ್ಲರ್‌, ‘ಕೊನೆವರೆಗೂ ಕ್ರೀಸ್‌ನಲ್ಲಿ ನೆಲೆಯೂರಿ ಪಂದ್ಯ ಗೆಲ್ಲಿಸಲು ಕೊಹ್ಲಿ, ಧೋನಿ ಸ್ಫೂರ್ತಿ’ ಎಂದು ಹೇಳಿದ್ದಾರೆ. 

ಈ ಬಗ್ಗೆ ಪಂದ್ಯದ ಬಳಿಕ ಮಾತನಾಡಿದ ಅವರು, ‘ಧೋನಿ, ಕೊಹ್ಲಿ ಕೊನೆವರೆಗೂ ಕ್ರೀಸ್‌ನಲ್ಲಿ ನಿಂತು ಪಂದ್ಯ ಗೆಲ್ಲಿಸಿದ್ದನ್ನು ನೋಡಿದ್ದೇನೆ. ಅದನ್ನೇ ಈಗ ನಾನು ಮಾಡಿದ್ದೇನೆ. ಯಾವುದೇ ಕ್ಷಣದಲ್ಲೂ ಒತ್ತಡಕ್ಕೊಳಗಾಗದೆ ಕ್ರೀಸ್‌ನಲ್ಲಿ ನಿಲ್ಲುವುದು ಅನಿವಾರ್ಯ’ ಎಂದು ಹೇಳಿದ್ದಾರೆ.

UPSC ಪರೀಕ್ಷೆಯಲ್ಲಿ 178ನೇ ಸ್ಥಾನ ಪಡೆದ ಬ್ಯಾಡ್ಮಿಂಟನ್‌ 'ಗ್ಲಾಮರ್‌ ಗರ್ಲ್‌' ಖುಹೂ ಗಾರ್ಗ್‌!

ಮಂಗಳವಾರದ ಪಂದ್ಯದಲ್ಲಿ 224 ರನ್‌ ಗುರಿ ಬೆನ್ನತ್ತಿದ್ದ ರಾಜಸ್ಥಾನ, 13ನೇ ಓವರಲ್ಲಿ 6 ವಿಕೆಟ್‌ಗೆ 121 ರನ್‌ ಗಳಿಸಿ ಸಂಕಷ್ಟದಲ್ಲಿತ್ತು. ಆದರೆ ಬಟ್ಲರ್‌ 60 ಎಸೆತಗಳಲ್ಲಿ ಔಟಾಗದೆ 107 ರನ್‌ ಸಿಡಿಸಿ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟಿದ್ದರು.
 

click me!