IPL 2024: ಅಶುತೋಶ್‌ ಶಾಕ್‌ನಿಂದ ಪಾರಾದ ಮುಂಬೈ ಇಂಡಿಯನ್ಸ್!

By Kannadaprabha News  |  First Published Apr 19, 2024, 5:33 AM IST

ಈ ಬಾರಿ ಐಪಿಎಲ್‌ನಲ್ಲಿ ಪಂಜಾಬ್‌ ತಂಡ ಕ್ರಿಕೆಟ್‌ ಜಗತ್ತಿಗೆ ಪರಿಚಯಿಸಿದ ಹೊಸ ಸ್ಟಾರ್‌ ಅಶುತೋಶ್‌, ಗುರುವಾರವೂ ಮೋಡಿ ಮಾಡಿದರು. ಆದರೆ ತಮ್ಮ ಸ್ಫೋಟಕ ಆಟ ವ್ಯರ್ಥವಾಯಿತು. ಪಂದ್ಯದಲ್ಲಿ ಮುಂಬೈ 9 ರನ್‌ ಗೆಲುವು ದಾಖಲಿಸಿತು. ಪಂಜಾಬ್‌ 5ನೇ ಸೋಲುಂಡಿತು.


ಚಂಡೀಗಢ: ಹೀನಾಯ ಸೋಲಿನ ಭೀತಿಯಲ್ಲಿದ್ದಾಗಲೂ ಸೋಲೊಪ್ಪಲು ತಯಾರಿಲ್ಲ ಎಂಬಂತೆ ಆರ್ಭಟಿಸಿದ ಅಶುತೋಶ್‌ ಶರ್ಮಾ, ಪಂಜಾಬ್‌ಗೆ ಪಂದ್ಯವನ್ನು ಗೆಲ್ಲಿಸಿ ಕೊಡದಿದ್ದರೂ ಅಪಾರ ಪ್ರಮಾಣದ ಅಭಿಮಾನಿಗಳ ಹೃದಯ ಗೆದ್ದಿದ್ದಂತೂ ನಿಜ.

ಈ ಬಾರಿ ಐಪಿಎಲ್‌ನಲ್ಲಿ ಪಂಜಾಬ್‌ ತಂಡ ಕ್ರಿಕೆಟ್‌ ಜಗತ್ತಿಗೆ ಪರಿಚಯಿಸಿದ ಹೊಸ ಸ್ಟಾರ್‌ ಅಶುತೋಶ್‌, ಗುರುವಾರವೂ ಮೋಡಿ ಮಾಡಿದರು. ಆದರೆ ತಮ್ಮ ಸ್ಫೋಟಕ ಆಟ ವ್ಯರ್ಥವಾಯಿತು. ಪಂದ್ಯದಲ್ಲಿ ಮುಂಬೈ 9 ರನ್‌ ಗೆಲುವು ದಾಖಲಿಸಿತು. ಪಂಜಾಬ್‌ 5ನೇ ಸೋಲುಂಡಿತು.

Tap to resize

Latest Videos

IPL 2024 ತಿಲಕ ವರ್ಮಾ, ಸೂರ್ಯಕುಮಾರ್ ಅಬ್ಬರ, ಪಂಜಾಬ್‌ಗೆ 193 ರನ್ ಟಾರ್ಗೆಟ್

ಮೊದಲು ಬ್ಯಾಟ್ ಮಾಡಿದ ಮುಂಬೈ, ಸೂರ್ಯಕುಮಾರ್‌ರ ಸ್ಫೋಟಕ ಆಟದ ನೆರವಿನಿಂದ 20 ಓವರಲ್ಲಿ 7 ವಿಕೆಟ್‌ಗೆ 192 ರನ್‌ ಕಲೆಹಾಕಿತು. ದೊಡ್ಡ ಗುರಿ ಬೆನ್ನತ್ತಿದ ಪಂಜಾಬ್‌ 10ನೇ ಓವರ್‌ಗಾಗಲೇ ಸೋಲನ್ನು ಬಹುತೇಕ ಖಚಿತಪಡಿಸಿಕೊಂಡಿತ್ತು. ಆದರೆ ಶಶಾಂಕ್‌ ಸಿಂಗ್‌ ಹಾಗೂ ಅಶುತೋಶ್‌ ಶರ್ಮಾ ಅಷ್ಟು ಸುಲಭದಲ್ಲಿ ಸೋಲೊಪ್ಪಲು ತಯಾರಿರಲಿಲ್ಲ.

10ನೇ ಓವರ್‌ ವೇಳೆಗೆ 77 ರನ್‌ಗೆ 6 ವಿಕೆಟ್‌ ಕಳೆದುಕೊಂಡಿದ್ದಾಗ ಶಶಾಂಕ್ ಸಿಂಗ್‌ 25 ಎಸೆತಗಳಲ್ಲಿ 2 ಬೌಂಡರಿ, 3 ಸಿಕ್ಸರ್‌ನೊಂದಿಗೆ 41 ರನ್‌ ಚಚ್ಚಿದರು. ಅವರು ಔಟಾದ ಬಳಿಕ ಮುಂಬೈ ಬೌಲರ್‌ಗಳನ್ನು ಚೆಂಡಾಡಿದ ಅಶುತೋಶ್‌, 28 ಎಸೆತಗಳಲ್ಲಿ 2 ಬೌಂಡರಿ, 7 ಸಿಕ್ಸರ್‌ನೊಂದಿಗೆ 61 ರನ್ ಚಚ್ಚಿದರು. ಆದರೆ 18ನೇ ಓವರಲ್ಲಿ ಅಶುತೋಶ್‌ ಔಟಾಗುವುದರೊಂದಿಗೆ ಪಂಜಾಬ್‌ ಗೆಲುವಿನ ಆಸೆ ಕೈಬಿಟ್ಟಿತು. ಬೂಮ್ರಾ ಹಾಗೂ ಕೋಟ್ಜೀ ತಲಾ 3 ವಿಕೆಟ್‌ ಕಿತ್ತರು.

UPSC ಪರೀಕ್ಷೆಯಲ್ಲಿ 178ನೇ ಸ್ಥಾನ ಪಡೆದ ಬ್ಯಾಡ್ಮಿಂಟನ್‌ 'ಗ್ಲಾಮರ್‌ ಗರ್ಲ್‌' ಖುಹೂ ಗಾರ್ಗ್‌!

ಸೂರ್ಯ ಶೋ: ಇದಕ್ಕೂ ಮುನ್ನ ಮುಂಬೈಗೆ ಸೂರ್ಯಕುಮಾರ್‌ರ ಶೋ ನೆರವಾಯಿತು. ಇಶಾನ್‌(08) ಬೇಗನೇ ಔಟಾದರೂ, ರೋಹಿತ್‌ 36, ತಿಲಕ್‌ ವರ್ಮಾ 34 ರನ್‌ ಗಳಿಸಿ ತಂಡಕ್ಕೆ ಆಸರೆಯಾದರು. ಸೂರ್ಯಕುಮಾರ್‌ 53 ಎಸೆತಗಳಲ್ಲಿ 78 ರನ್‌ ಸಿಡಿಸಿದರು. ಹರ್ಷಲ್‌ ಪಟೇಲ್‌ 3 ವಿಕೆಟ್‌ ಕಿತ್ತರು.

ಸ್ಕೋರ್‌: 
ಮುಂಬೈ 20 ಓವರಲ್ಲಿ 192/7 (ಸೂರ್ಯಕುಮಾರ್‌ 78, ರೋಹಿತ್‌ 36, ಹರ್ಷಲ್‌ 3-31)

ಪಂಜಾಬ್‌ 19.1 ಓವರಲ್ಲಿ 183/10 (ಅಶುತೋಶ್‌ 61, ಶಶಾಂಕ್‌ 41, ಬೂಮ್ರಾ 3-21, ಕೋಟ್ಜೀ 3-32)
 

click me!