
ದುಬೈ(ಡಿ.06): ಪುರುಷರ ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ಕಾರ್ಯನಿರ್ವಹಿಸಲಿರುವ ಮೊದಲ ಮಹಿಳಾ ರೆಫ್ರಿ ಎನ್ನುವ ಹಿರಿಮೆಗೆ ಭಾರತದ ಜಿ.ಎಸ್.ಲಕ್ಷ್ಮಿ ಪಾತ್ರರಾಗಲಿದ್ದಾರೆ.
ಇಂಡೋ-ವಿಂಡೀಸ್ ಮೊದಲ ಟಿ20ಗೆ ಕ್ಷಣಗಣನೆ ಆರಂಭ
ಭಾನುವಾರ ಯುಎಇನಲ್ಲಿ ನಡೆಯಲಿರುವ ವಿಶ್ವಕಪ್ ಲೀಗ್ 2 ಟೂರ್ನಿಯ ಯುಇಎ ಹಾಗೂ ಅಮೆರಿಕ ನಡುವಿನ ಪಂದ್ಯದಲ್ಲಿ ಅವರು ಕಾರ್ಯನಿರ್ವಹಿಸಲಿರುವ ಮೂಲಕ ದಾಖಲೆ ಬರೆಯಲಿದ್ದಾರೆ. ಇದೇ ವರ್ಷ ಮೇ ತಿಂಗಳಲ್ಲಿ ಲಕ್ಷ್ಮಿ, ಐಸಿಸಿ ಮ್ಯಾಚ್ ರೆಫ್ರಿಗಳ ಸಮಿತಿಗೆ ಆಯ್ಕೆಯಾಗಿದ್ದರು.
ಟಿ20 ವಿಶ್ವಕಪ್ಗೆ ಮೂವರು ವೇಗಿಗಳು ಫಿಕ್ಸ್, ಮತ್ತೊಬ್ಬ ಯಾರು..?
51 ವರ್ಷದ ಲಕ್ಷ್ಮಿ ಮೊದಲ ಬಾರಿಗೆ 2008-09ರಲ್ಲಿ ಮಹಿಳಾ ದೇಸಿ ಪಂದ್ಯಗಳಲ್ಲಿ ರೆಫ್ರಿಯಾಗಿ ಕಾರ್ಯನಿರ್ವಹಿಸಿದ್ದರು. ಅವರು ಈವರೆಗೂ 3 ಅಂತಾರಾಷ್ಟ್ರೀಯ ಮಹಿಳಾ ಏಕದಿನ, 16 ಪುರುಷರ ಅಂತಾರಾಷ್ಟ್ರೀಯ ಟಿ20, 7 ಮಹಿಳಾ ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಮ್ಯಾಚ್ ರೆಫ್ರಿಯಾಗಿ ಕೆಲಸ ಮಾಡಿದ್ದಾರೆ. ತಮ್ಮ ನೇಮಕಾತಿ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಲಕ್ಷ್ಮಿ, ‘ಬಹಳ ಹೆಮ್ಮೆ ಎನಿಸುತ್ತದೆ. ಐಸಿಸಿಯ ಮಹತ್ವದ ಟೂರ್ನಿಯಲ್ಲಿ ಕಾರ್ಯನಿರ್ವಹಿಸಲು ಉತ್ಸುಕಳಾಗಿದ್ದೇನೆ’ ಎಂದರು. ಆಂಧ್ರದ ಗಂಡಿಕೋಟ ಮೂಲದವರಾದ ಲಕ್ಷ್ಮಿ, ತಮ್ಮ ರಾಜ್ಯದ ಪರ 18 ವರ್ಷಗಳ ಕಾಲ ದೇಸಿ ಕ್ರಿಕೆಟ್ ಆಡಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.