ಬಾಂಗ್ಲಾದೇಶ ವಿರುದ್ಧ 3ನೇ ಟಿ20 ಪಂದ್ಯದಲ್ಲಿ ಭಾರತ ಸಿಕ್ಸರ್ ಸುರಿಮಳೆಗೈದಿದೆ. ಸಂಜು ಸ್ಯಾಮ್ಸನ್ ಶತಕ, ಭಾರತದ ಗರಿಷ್ಠ ರನ್ ಸೇರಿದಂತೆ ಹಲವು ದಾಖಲೆ ನಿರ್ಮಾಣವಾಗಿದೆ. ಬಾಂಗ್ಲಾಗೆ 298 ರನ್ ಟಾರ್ಗೆಟ್ ನೀಡಲಾಗಿದೆ.
ಹೈದರಾಬಾದ್(ಅ.12) ಬಾಂಗ್ಲಾದೇಶ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಭಾರತ ಹೊಸ ದಾಖಲೆ ನಿರ್ಮಿಸಿದೆ. ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತ ಗರಿಷ್ಠ ರನ್ ಸಿಡಿಸಿದ ದಾಖಲೆ ಬರೆದಿದೆ. ಬಾಂಗ್ಲಾ ವಿರುದ್ದ 297 ರನ್ ಸಿಡಿಸುವ ಮೂಲಕ ಟಿ20ಯಲ್ಲಿ ಗರಿಷ್ಠ ರನ್ ಸಿಡಿಸಿದ 2ನೇ ತಂಡ ಅನ್ನೋ ದಾಖಲೆ ಬರೆದಿದೆ. ಸಂಜು ಸ್ಯಾಮ್ಸನ್ ಶತಕ, ನಾಯಕ ಸೂರ್ಯಕುಮಾರ್ ಯಾದವ್ ಸಿಡಿಸಿದ 75 ರನ್ ಹಾಗೂ ಇತರರ ಸ್ಫೋಟಕ ಬ್ಯಾಟಿಂಗ್ ನರೆವಿನಿಂದ ಭಾರತ 6 ವಿಕೆಟ್ ನಷ್ಟಕ್ಕೆ 297 ರನ್ ಸಿಡಿಸಿದೆ.
297 ರನ್ ಭಾರತದ ಗರಿಷ್ಠ ಟಿ20 ರನ್ ಸ್ಕೋರ್ ಆಗಿದೆ. ಇದಕ್ಕೂ ಮೊದಲು ಭಾರತ ಶ್ರೀಲಂಕಾ ವಿರುದ್ಧ 2017ರಲ್ಲಿ 260 ರನ್ ಸಿಡಿಸಿತ್ತು. ಟಿ20 ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಸಿಡಿಸಿ ಮೊದಲ ಸ್ಥಾನದಲ್ಲಿ ನೇಪಾಳ ವಿರಾಜಮಾನವಾಗಿದೆ. 2023ರಲ್ಲ ನೇಪಾಳ ತಂಡ ಮಂಗೋಲಿಯಾ ವಿರುದ್ಧ 314 ರನ್ ಸಿಡಿಸಿದೆ.
undefined
ಹೊಸ ಲುಕ್‌ನಲ್ಲಿ ಕ್ಯಾಪ್ಟನ್ ಕೂಲ್! ಹೊಸ ಹೇರ್‌ಸ್ಟೈಲ್‌ನಲ್ಲಿ 10 ವರ್ಷ ಯಂಗ್ ಆಗಿ ಕಾಣಿಸಿಕೊಂಡ ಧೋನಿ
ಬಾಂಗ್ಲಾ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿದ ಭಾರತ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿತು. ಸಂಜು ಸ್ಯಾಮ್ಸನ್ 47 ಎಸೆತದಲ್ಲಿ 111 ರನ್ ಸಿಡಿಸಿದರು. ಸಂಜು 8 ಸಿಕ್ಸರ್ ಹಾಗೂ 11 ಬೌಂಡರಿ ಸಿಡಿಸಿದ್ದರು. ಸೂರ್ಯಕುಮಾರ್ ಯಾದವ್ 5 ಸಿಕ್ಸರ್ ಮೂಲಕ 35 ಎಸೆದಲ್ಲಿ 75 ರನ್ ಸಿಡಿಸಿದ್ದರು. ರಿಯಾನ್ ಪರಾಗ್ 13 ಎಸೆತದಲ್ಲಿ 34ರನ್ ಸಿಡಿಸಿದರೆ, ಹಾರ್ದಿಕ್ ಪಾಂಡ್ಯ 18 ಎಸೆತದಲ್ಲಿ 47 ರನ್ ಸಿಡಿಸಿದರು. ರಿಂಕು ಸಿಂಗ್ 8 ರನ್ ಸಿಡಿಸಿದರು. ಈ ಮೂಲಕ ಭಾರತ 6 ವಿಕೆಟ್ ಕಳೆದುಕೊಂಡು 297 ರನ್ ಸಿಡಿಸಿತು.
ಈ ಪಂದ್ಯದಲ್ಲಿ ಭಾರತ ಒಟ್ಟು 22 ಸಿಕ್ಸರ್ ಸಿಡಿಸಿದೆ. ಇಷ್ಟೇ ಅಲ್ಲ 47 ಬೌಂಡರಿ ಸಿಡಿಸುವ ಮೂಲಕ ಟಿ20 ಇನ್ನಿಂಗ್ಸ್‌ನಲ್ಲಿ ಗರಿಷ್ಠ ಬೌಂಡರಿ ಸಿಡಿಸಿದ ಮೊದಲ ತಂಡ ಅನ್ನೋ ದಾಖಲೆ ಬರೆದಿದೆ.
ಟಿ20ಯಲ್ಲಿ ಗರಿಷ್ಠ ಟೋಟಲ್
314/3 - ನೇಪಾಳ VS ಮಂಗೋಲಿಯಾ
297/6 - ಭಾರತ VS ಬಾಂಗ್ಲಾದೇಶ
278/3 - ಅಫ್ಘಾನಿಸ್ತಾನ VS ಐರ್ಲೆಂಡ್
ಭಾರತ ಸ್ಫೋಟಕ ಬ್ಯಾಟಿಂಗ್‌ಗೆ ಬಾಂಗ್ಲಾದೇಶ ಕಂಗಾಲಾಗಿದೆ. ಬರೋಬ್ಬರಿ 298 ರನ್ ಟಾರ್ಗೆಟ್ ಚೇಸ್ ಮಾಡುವುದೇ ಬಾಂಗ್ಲಾದೇಶಕ್ಕೆ ದೊಡ್ಡ ಸವಾಲಾಗಿದೆ.
T20 World Cup : ರೋಹಿತ್ ಶರ್ಮಾ ಹೇಳಿದ ಪಂತ್ ಸುಳ್ಳು ಗಾಯದ ನಾಟಕದ ಬಗ್ಗೆ ಮೊದಲ ಬಾರಿಗೆ ತುಟಿಬಿಚ್ಚಿದ ರಿಷಭ್!