ಜಾಮ್ ನಗರ ಸಿಂಹಾಸನದ ನೂತನ ಉತ್ತರಾಧಿಕಾರಿಯಾಗಿ ಅಧಿಕಾರಕ್ಕೇರಿದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಜಡೇಜಾ!

Published : Oct 12, 2024, 04:33 PM IST
ಜಾಮ್ ನಗರ ಸಿಂಹಾಸನದ ನೂತನ ಉತ್ತರಾಧಿಕಾರಿಯಾಗಿ ಅಧಿಕಾರಕ್ಕೇರಿದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಜಡೇಜಾ!

ಸಾರಾಂಶ

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ ಜಾಮ್ ನಗರದ ನೂತನ ಸಿಂಹಾಸನಾಧಿಕಾರಿಯಾಗಿ ನೇಮಕವಾಗಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ

ಗಾಂಧಿನಗರ: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ ಇದೀಗ ಜಾಮ್‌ ನಗರ/ನವ್‌ ನಗರದ ಮುಂದಿನ ಜಾಮ್ ಸಾಹೇಬ್‌(ಸಿಂಹಾಸನದ ಉತ್ತರಾಧಿಕಾರಿ)ಯಾಗಿ ನೇಮಕವಾಗಿದ್ದಾರೆ. ಅಜಯ್ ಜಡೇಜಾ ಜಾಮ್ ನಗರದ ರಾಜಮನೆತನಕ್ಕೆ ಸೇರಿದವರಾಗಿದ್ದು, ಇದೀಗ ಗುಜರಾತ್‌ನ ಜಾಮ್‌ ನಗರದ ಜಾಮ್ ಸಾಹೇಬ್ ಆಗಿರುವ ಶತ್ರುಶಲ್ಯಸಿನ್‌ ಜೀ ಅವರು ದಸರದ ವಿಜಯದಶಮಿಯಂದು ಜಡೇಜಾ ಅವರನ್ನು ಜಾಮ್ ನಗರದ ನೂತನ ಸಿಂಹಾಸನಾಧಿಕಾರಿಯಾಗಿ ಘೋಷಿಸಿದ್ದಾರೆ. 

ಈ ಕುರಿತಂತೆ ಜಾಮ್‌ ನಗರದ ಜಾಮ್ ಸಾಹೇಬ್ ಆಗಿರುವ ಶತ್ರುಶಲ್ಯಸಿನ್‌ ಜೀ ಅವರು ಪತ್ರ ಬರೆದಿದ್ದು, ಅಜಯ್ ಜಡೇಜಾ ಅವರನ್ನು ನನ್ನ ಉತ್ತರಾಧಿಕಾರಿಯನ್ನಾಗಿ ಮಾಡಲು ತೀರ್ಮಾನಿಸಿದ್ದೇನೆ. ಅವರು ಜಾಮ್ ನಗರದ ಜನರ ಆಶೀರ್ವಾದ ಹಾಗೂ ವಿಶ್ವಾಸವನ್ನು ಗಳಿಸಲಿದ್ದಾರೆ. ಇದರ ಜತೆಗೆ ಜನರ ಸೇವೆಗಾಗಿ ಸಂಪೂರ್ಣ ಭಕ್ತಿಯಿಂದ ಕರ್ತವ್ಯ ನಿರ್ವಹಿಸುತ್ತಾರೆ ಎನ್ನುವ ವಿಶ್ವಾಸವಿದೆ" ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಹಾಂಕಾಂಗ್ ಸಿಕ್ಸ್‌ ಟೂರ್ನಿಗೆ ಭಾರತ ತಂಡ ಪ್ರಕಟ; ಕನ್ನಡಿಗ ಕ್ಯಾಪ್ಟನ್, ಆರ್‌ಸಿಬಿ ಆಟಗಾರರದ್ದೇ ಸಿಂಹಪಾಲು!

ಅಜಯ್ ಜಡೇಜಾ 1992ರಿಂದ 2000ನೇ ಇಸವಿಯವರೆಗೆ ಭಾರತ ಕ್ರಿಕೆಟ್ ತಂಡದ ಪ್ರಮುಖ ಆಟಗಾರರಾಗಿ ಗುರುತಿಸಿಕೊಂಡಿದ್ದರು. ಈ ಅವಧಿಯಲ್ಲಿ ಅಜಯ್ ಜಡೇಜಾ, ಭಾರತ ಪರ 15 ಟೆಸ್ಟ್ ಹಾಗೂ 196 ಏಕದಿನ ಪಂದ್ಯಗಳನ್ನು ಆಡಿದ್ದಾರೆ.  ಇನ್ನು 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಸಂದರ್ಭದಲ್ಲಿ ಅಜಯ್ ಜಡೇಜಾ, ಆಫ್ಘಾನಿಸ್ತಾನ ಕ್ರಿಕೆಟ್ ತಂಡದ ಮೆಂಟರ್ ಆಗಿ ಗಮನ ಸೆಳೆದಿದ್ದರು. 

ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿ: ಭಾರತ ತಂಡ ಪ್ರಕಟ, ಬುಮ್ರಾ ಉಪನಾಯಕ!

ಅಜಯ್ ಜಡೇಜಾ ಕೇವಲ ರಾಜಮನೆತನದಿಂದಷ್ಟೇ ಪ್ರಖ್ಯಾತರಾದವರಲ್ಲ. ಅವರ ಕುಟುಂಬದಲ್ಲಿ ಸಾಕಷ್ಟು ದಿಗ್ಗಜ ಕ್ರಿಕೆಟಿಗರನ್ನು ಕೊಡುಗೆಯಾಗಿ ಈ ದೇಶಕ್ಕೆ ನೀಡಿದೆ. ಅವರ ಕುಟುಂಬದಿಂದಲೇ ರಣಜಿತ್‌ ಸಿಂಗ್‌ಜಿ ಜಡೇಜಾ ಹಾಗೂ ದುಲೀಪ್‌ ಸಿಂಗ್‌ಜಿ ಜಡೇಜಾ ಅವರಂತಹ ದಿಗ್ಗಜ ಆಟಗಾರರು ಜನಿಸಿದ್ದರು. ಅವರು ಕ್ರಿಕೆಟ್‌ಗೆ ನೀಡಿದ ಕೊಡುಗೆಯನ್ನು ಪರಿಗಣಿಸಿಯೇ ರಣಜಿತ್‌ ಸಿಂಗ್‌ಜಿ ಜಡೇಜಾ ಅವರ ಸ್ಮರಣಾರ್ಥ ರಣಜಿ ಟ್ರೋಫಿ ಹಾಗೂ ದುಲೀಪ್‌ ಸಿಂಗ್‌ಜಿ ಜಡೇಜಾ ಅವರ ಸ್ಮರಣಾರ್ಥ ದುಲೀಪ್ ಟ್ರೋಫಿ ಟೂರ್ನಿಯನ್ನು ನಡೆಸಲಾಗುತ್ತದೆ. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಫೋಟೋ ಹಂಚಿಕೊಂಡು 'ಡಾರ್ಲಿಂಗ್‌..' ಎಂದು ಬರೆದ ಸಾರಾ ತೆಂಡುಲ್ಕರ್‌
ಕುಲ್ದೀಪ್-ಪ್ರಸಿದ್ದ್ ಮಾರಕ ದಾಳಿ; ಏಕದಿನ ಸರಣಿ ಗೆಲ್ಲಲು ಭಾರತಕ್ಕೆ ಸ್ಪರ್ಧಾತ್ಮಕ ಗುರಿ