ಅತ್ಯಂತ ಹಿರಿಯರ ವಿಶ್ವಕಪ್: 16 ಸದಸ್ಯರ ಭಾರತ ತಂಡ ಪ್ರಕಟ!

Published : Dec 27, 2019, 06:15 PM IST
ಅತ್ಯಂತ ಹಿರಿಯರ ವಿಶ್ವಕಪ್: 16 ಸದಸ್ಯರ ಭಾರತ ತಂಡ ಪ್ರಕಟ!

ಸಾರಾಂಶ

50+ ವಯಸ್ಸಿನ ವಿಶ್ವಕಪ್ ಟೂರ್ನಿಗೆ ಭಾರತ ತಯಾರಿ ಆರಂಭಿಸಿ ಕೆಲ ದಿನಗಳು ಉರುಳಿವೆ. ಇದೀಗ 16 ಸದಸ್ಯರ ತಂಡ ಪ್ರಕಟಿಸಲಾಗಿದೆ. ಮುಂಬೈನಲ್ಲಿ ನಡೆದ ಆಯ್ಕೆಯಲ್ಲಿ 50ರ ಹರೆಯದಲ್ಲೂ ಫಿಟ್ ಹಾಗೂ ಫಾರ್ಮ್‌ನಲ್ಲಿರುವು ಕ್ರಿಕೆಟಿಗರನ್ನು ವಿಶ್ವಕಪ್‌ಗೆ ಆಯ್ಕೆಯಾಗಿದೆ. ಭಾರತ ತಂಡದ ವಿವರ ಇಲ್ಲಿದೆ.

ಮುಂಬೈ(ಡಿ.27): ಸೌತ್ ಆಫ್ರಿಕಾದಲ್ಲಿ ನಡೆಯಲಿರುವ 50 ವರ್ಷಕ್ಕಿಂತ ಮೇಲ್ಪಟ್ಟವರ ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ ಭಾರತ ತಂಡ ಪ್ರಕಟಿಸಲಾಗಿದೆ. ಮುಂಬೈನಲ್ಲಿ ನಡೆದ ಆಯ್ಕೆಯಲ್ಲಿ ಮಾಜಿ ರಣಜಿ ಕ್ರಿಕೆಟಿಗರು, ಮಾಜಿ ಅಂತಾರಾಷ್ಟ್ರೀಯ ಕ್ರಿಕೆಟಿಗರು ಹಾಗೂ ಕ್ಲಬ್ ಕ್ರಿಕೆಟಿಗರು ಸೇರಿದಂತೆ 16 ಸದಸ್ಯರ ತಂಡವನ್ನ ಪ್ರಕಟಿಸಲಾಗಿದೆ. ತಂಡದ ಪ್ರಕಟಣವೇಳೆ ಬಾಲಿವುಡ್ ಹಿರಿಯ ನಟ ಸುನೀಲ್ ಶೆಟ್ಟಿ ಹಾಜರಿದ್ದರು.

ಇದನ್ನೂ ಓದಿ: ದಶಕದ ಏಕದಿನ ತಂಡ ಪ್ರಕಟಿಸಿದ ಆಸ್ಟ್ರೇಲಿಯಾ; ಧೋನಿಗೆ ನಾಯಕ ಪಟ್ಟ !

2020ರ ಮಾರ್ಚ್ 10 ರಂದು ಅತ್ಯಂತ ಹಿರಿಯರ ವಿಶ್ವಕಪ್ ಟೂರ್ನಿ ನಡಯೆಲಿದೆ. ಇದೇ ಮೊದಲ ಬಾರಿಗೆ ನಡೆಯುತ್ತಿರುವ 50ರ ಹರೆಯದ ಆಟಗಾರರ ವಿಶ್ವಕಪ್ ಟೂರ್ನಿಗೆ ಸೌತ್ ಆಫ್ರಿಕಾ ಆತಿಥ್ಯ ವಹಿಸಿದೆ. 2020ರ ಮಾರ್ಚ್ 10 ರಿಂದ 24ರ ವರೆಗೆ ನಡೆಯಲಿರುವ ಟೂರ್ನಿ ಕೇಪಟೌನ್ ಹಾಗೂ ಸ್ಟೆಲೆನ್‌ಬಾಶ್ ಮೈದಾನದಲ್ಲಿ ಪಂದ್ಯ ನಡೆಯಲಿದೆ. 

ಇದನ್ನೂ ಓದಿ: ಆಸ್ಟ್ರೇಲಿಯಾ ಸರಣಿಗೆ ಟೀಂ ಇಂಡಿಯಾ ಪ್ರಕಟ; ಕನ್ನಡಿಗ ಮಯಾಂಕ್ ಔಟ್!

ಭಾರತದ 50ರ ಹರೆಯದ ಕ್ರಿಕೆಟ್ ಸಂಸ್ಥೆ ತಂಡ ಆಯ್ಕೆ ಮಾಡಿದೆ. ಶೈಲೇಂದ್ರ ಸಿಂಗ್ ಭಾರತ ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ. ಮಾಜಿ ರಣಜಿ ಕ್ರಿಕೆಗ ಇಕ್ಬಾಲ್ ಖಾನ್ ಉಪನಾಯಕನಾಗಿ ಆಯ್ಕೆ ಮಾಡಿದ್ದಾರೆ.

50+ ಭಾರತ ತಂಡ:
ಶೈಲೇಂದ್ರ ಸಿಂಗ್, ಇಕ್ಬಾಲ್ ಖಾನ್, ಮಯಾಂಕ್ ಖಂಡ್ವಾಲ, ಪರಾಕ್ ಅನಂತ, ತುಷಾರ್ ಜಾವೆರಿ, ಅಶ್ವಾನಿ ಅರೋರ, ಪ್ರೀತಿಂದರ್ ಸಿಂಗ್, ಆದಿಲ್ ಚಾಗ್ಲಾ, ಪಿಜಿ ಸುಂದರ್, ಪ್ರದೀಪ್ ಪಟೇಲ್, ವಿರೇಂದರ್ ಬೂಮ್ಲಾ, ಥಾಮಸ್ ಜಾರ್ಜ್, ಸಂಜಯ್ ಬೆರಿ, ದೀಪಕ್ ಚಾಧ, ದಿಲೀಪ್ ಚೌವನ್, ಶ್ರೀಕಾಂತ್ ಸತ್ಯ

ಭಾರತ ಪೂಲ್ ಬಿ ಗುಂಪಿನಲ್ಲಿದ್ದು ಇದೇ ಗುಂಪಿನಲ್ಲಿ ಪಾಕಿಸ್ತಾನ, ಇಂಗ್ಲೆಂಡ್, ವೇಲ್ಸ್, ನಮಿಬಿಯಾ ಹಾಗೂ ಸೌತ್ ಆಫ್ರಿಕಾ ತಂಡಗಳಿವೆ. ಪೂಲ್ ಎ ಗುಂಪಿನಲ್ಲಿ ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್, ನ್ಯೂಜಿಲೆಂಡ್, ಕೆನಡಾ, ಜಿಂಬಾಬ್ವೆ, ಶ್ರೀಲಂಕಾ ತಂಡಗಳಿವೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಚಿನ್ನಸ್ವಾಮಿಯಲ್ಲಿ ಮತ್ತೆ ಐಪಿಎಲ್ : ಇಂದು ನಿರ್ಧಾರ
ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ