ಹಿಂದೂ ಅನ್ನೋ ಕಾರಣಕ್ಕೆ ತುಳಿದರು, ಪ್ರಧಾನಿಗೆ ಮನವಿ ಮಾಡಿದ ಪಾಕ್ ಕ್ರಿಕೆಟಿಗ ಕನೇರಿಯಾ!

By Suvarna News  |  First Published Dec 27, 2019, 12:10 PM IST

ಪಾಕಿಸ್ತಾನದಲ್ಲಿನ ಹಿಂದೂಗಳ ಪರಿಸ್ಥಿತಿ ಹೇಗಿದೆ ಅನ್ನೋದು ಹಲವು ಬಾರಿ ಬಹಿರಂಗವಾಗಿದೆ. ಇದೀಗ ಭಾರತದ ಪೌರತ್ವ ಕಾಯ್ದೆ  ಬೆನ್ನಲ್ಲೇ ಪಾಕಿಸ್ತಾನದ ಹಿಂದೂ ಕ್ರಿಕೆಟಿಗ ಮೇಲಿನ ಕಿರುಕಳ ಮತ್ತೆ ಸದ್ದು ಮಾಡುತ್ತಿದೆ. ಶೋಯೆಬ್ ಅಕ್ತರ್ ಹೇಳಿಕೆ ಬೆನ್ನಲ್ಲೇ ಕ್ರಿಕೆಟಿಗ ದಾನೀಶ್ ಕನೇರಿಯಾ ಇದೀಗ ಪ್ರಧಾನಿಗೆ ಮನವಿ ಮಾಡಿದ್ದಾರೆ. 


ಕರಾಚಿ(ಡಿ.27): ಪಾಕಿಸ್ತಾನ ಕ್ರಿಕೆಟಿ ದಾನೀಶ್ ಕನೇರಿಯಾ ವಿವಾದ ಮತ್ತೆ ಸದ್ದು ಮಾಡುತ್ತಿದೆ. ಫಿಕ್ಸಿಂಗ್ ಆರೋಪ  ಮಲೆ ಪಾಕಿಸ್ತಾನ ಸ್ಪಿನ್ನರ್ ದಾನೀಶ್ ಕನೇರಿಯಾನನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಮಾನತು ಮಾಡಿದೆ. 2012ರಿಂದ ಇಲ್ಲೀವರೆಗೆ ಹೋರಾಟ ಮಾಡುತ್ತಿದ್ದರೂ ಕನೇರಿಯಾ ಮೇಲಿನ ಆರೋಪ ದೂರವಾಗಿಲ್ಲ. ಇದೀಗ ಮಾಜಿ ವೇಗಿ ಶೋಯೆಬ್ ಅಕ್ತರ್ ಹೇಳಿಕೆಯೊಂದಿಗೆ ಕನೇರಿಯಾ ಪ್ರಕರಣ ಮತ್ತೆ ವಿಶ್ವದಲ್ಲೇ ಚರ್ಚೆಯಾಗುತ್ತಿದೆ.

ಇದನ್ನೂ ಓದಿ: ಹಿಂದು ಕನೇರಿಯಾಗೆ ಪಾಕ್‌ ಕ್ರಿಕೆಟ್‌ ತಂಡದಿಂದ ಧಾರ್ಮಿಕ ಕಿರುಕುಳ!

Latest Videos

undefined

ದಾನೀಶ್ ಕನೇರಿಯಾ ಹಿಂದೂ ಅನ್ನೋ ಕಾರಣಕ್ಕೆ ತುಳಿಯಲಾಯಿತು ಎಂದು ಶೋಯೆಬ್ ಅಕ್ತರ್ ಹೇಳಿದ್ದರು. ಸುಖಾಸುಮ್ಮೆ ಫಿಕ್ಸಿಂಗ್ ಆರೋಪ ಹೊರಿಸಿ ಬದುಕನ್ನೇ ಹಾಳು ಮಾಡಿದರು ಎಂದು ಅಕ್ತರ್ ಹೇಳಿದ್ದರು. ಇದರ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಕನೇರಿಯಾ, ನನ್ನ ಬದುಕೇ ನಾಶವಾಗಿ ಹೋಗಿದೆ. ಇಲ್ಲ ಸಲ್ಲದ ಆರೋಪದಿಂದ ಕ್ರಿಕೆಟ್‌ನಿಂದ ದೂರವಾದೆ. ಯಾರೂ ನನಗೆ ಸಹಾಯ ಮಾಡಲಿಲ್ಲ. ಇದೀಗ ಪಾಕಿಸ್ತಾನದ ಮಾಜಿ ನಾಯಕ, ಹಾಲಿ ಪ್ರಧಾನಿ ಇಮ್ರಾನ್ ಖಾನ್‌ಗೆ ಮನವಿ ಸಹಾಯಕ್ಕಾಗಿ ಅಂಗಲಾಚಿದ್ದಾರೆ.

ಇದನ್ನೂ ಓದಿ: ಟೀಂ ಇಂಡಿಯಾ ಸ್ಟಾರ್ ವೇಗಿ IPL 2020 ಆಡೋದು ಅನುಮಾನ.!.

ನನ್ನ ಮೇಲಿನ ಆರೋಪಕ್ಕೆ ಯಾವುದೇ ಸಾಕ್ಷ್ಯವಿಲ್ಲ. ಇಷ್ಟಾದರೂ ನನ್ನ ಪ್ರಕರಣ ಇನ್ನು ಪೂರ್ಣಗೊಂಡಿಲ್ಲ. ನಾನು ಪಾಕಿಸ್ತಾನಕ್ಕೆ ಆಡಿದ್ದೇನೆ ಎಂಬ ಹೆಮ್ಮೆ ಇದೆ. ನಾನು ಯಾವುದೇ ಕಳ್ಳಾಟದಲ್ಲಿ ಪಾಲ್ಗೊಂಡಿಲ್ಲ. ಆದರೆ ಪಾಕಿಸ್ತಾನ ತಂಡಕ್ಕಾಗಿ ಆಡಿದ 2ನೇ ಹಿಂದೂ ನಾನು. ಹಿಂದೂ ಅನ್ನೋ ಕಾರಣಕ್ಕೆ ನನಗೆ ಕಿರುಕುಳ ನೀಡಲಾಯಿತು ಎಂದು ಕನೇರಿಯಾ ಹೇಳಿದ್ದಾರೆ. ಇಮ್ರಾನ್ ಖಾನ್ ನನಗೆ ಸಹಾಯ ಮಾಡುತ್ತಾರೆ ಅನ್ನೋ ವಿಶ್ವಾಸದಲ್ಲಿದ್ದೇನೆ ಎಂದು ಕನೇರಿಯಾ ಹೇಳಿದ್ದಾರೆ.

ಕನೇರಿಯಾ ಪ್ರಕರಣ:
ಇಂಗ್ಲೆಂಡ್ ಕೌಂಟಿ ಕ್ರಿಕೆಟ್‌ನಲ್ಲಿ ಫಿಕ್ಸಿಂಗ್ ನಡೆಸಿದ್ದಾರೆ ಅನ್ನೋ ಆರೋಪಡಿ 2010ರ ಮೇನಲ್ಲಿ ಕನೇರಿಯಾನನ್ನು ಬಂಧಿಸಲಾಯಿತು. ಸೆಪ್ಟೆಂಬರ್‌ನಲ್ಲಿ ಆರೋಪ ಮುಕ್ತರಾಗಿ ಹೊರಬಂದರು. ಬಳಿಕ 2010ರ ಸೌತ್ ಆಫ್ರಿಕಾ ಪ್ರವಾಸಕ್ಕೆ ಆಯ್ಕೆಯಾಗಿದ್ದ ಕನೇರಿಯಾ ತರಬೇತಿ ಶಿಬಿರದಿಂದ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಯಾವುದೇ ಕಾರಣ ನೀಡದೆ ಹೊರಗಿಟ್ಟಿತು. 

2012ರಲ್ಲಿ ಸ್ಫಾಟ್ ಫಿಕ್ಸಿಂಗ್ ಆರೋಪದ ಮೇಲೆ ಇಂಗ್ಲೆಂಡ್ ಕ್ರಿಕೆಟಿಗ ಮರ್ವಿನ್ ವೆಸ್ಟ್‌ಫೀಲ್ಡ್ ಬಂಧಿಸಲಾಗಿತ್ತು. ದಾನೀಶ್ ಕನೇರಿಯಾ ಸ್ಫಾಟ್ ಫಿಕ್ಸಿಂಗ್ ಕುರಿತು ಮರ್ವಿನ್ ಸಂಪರ್ಕಿಸಿದ್ದರು ಅನ್ನೋ ಆರೋಪದಲ್ಲಿ ವಿಚಾರಣೆ ಎದುರಿಸಬೇಕಾಯಿತು. 2012ರ ಜೂನ್‌ನಲ್ಲಿ ಕನೇರಿಯಾ ತಪ್ಪಿತಸ್ಥ ಎಂದು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಶಿಸ್ತು ಸಮಿತಿ ಹೇಳಿತು.

ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿಯಿಂದ ಅಜೀವ ನಿಷೇಧಕ್ಕೊಳಗಾದ ದಾನೀಶ್ ಕನೇರಿಯಾಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಕೂಡ ಶಾಕ್ ನೀಡಿತು. ಇತ್ತ ಪಾಕ್ ಕ್ರಿಕೆಟ್ ಮಂಡಳಿ ಕೂಡ ಕನೇರಿಯಾ ನೆರವಿಗೆ ಧಾವಿಸಲಿಲ್ಲ. ಬದಲಾಗಿ 2009ರ ಫಿಕ್ಸಿಂಗ್ ಪ್ರಕರಣವನ್ನು ಕನೇರಿಯಾ ಮೇಲೆ ಹೊರಿಸಿದ ಪಾಕಿಸ್ತಾನ,  ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಕ್ರಮವನ್ನು ಎತ್ತಿ ಹಿಡಿಯಿತು.

ತನ್ನ ಮೇಲಿನ ಆರೋಪ ನಿರಾಕರಿಸಿದ್ದ ಕನೇರಿಯಾಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಒತ್ತಡಕ್ಕೆ ಮಣಿದು 5 ವರ್ಷಗಳ ಬಳಿಕ 2018ರಲ್ಲಿ 2009ರ ಫಿಕ್ಸಿಂಗ್ ಪ್ರಕರಣದಲ್ಲಿ ಭಾಗಿಯಾಗಿರುವುದನ್ನು ಒಪ್ಪಿಕೊಂಡಿದ್ದರು. ಆರೋಪವನ್ನು ಒಪ್ಪಿಕೊಂಡರೆ ಪ್ರಕರಣದಿಂದ ಮುಕ್ತಿ ನೀಡುವುದಾಗಿ ಪಾಕ್ ಕ್ರಿಕೆಟ್ ಮಂಡಳಿ ಹೇಳಿತ್ತು. ಆದರೆ ಕನೇರಿಯಾ ಮತ್ತೆ ಹಿನ್ನಡೆಯಾಯಿತು.

ಡಿಸೆಂಬರ್ 27ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!