
ಇಬ್ಬನಿ ಹಾಗೂ ಶಾಯ್ ಹೋಪ್, ರೂಥರ್ ಫೋರ್ಡ್ ಅವರ ಅತ್ಯುತ್ತಮ ಪ್ರದಶನವೇ ನಮ್ಮ ಸೋಲಿಗೆ ಕಾರಣವಾಗಿದೆ ಎಂದು ಟೀಂ ಇಂಡಿಯಾ ನಾಯಕ ಶ್ರೇಯರ್ ಅಯ್ಯರ್ ಹೇಳಿದ್ದಾರೆ. ಇಬ್ಬನಿಯ ಪ್ರಭಾವ ಇರುವಾಗ ಎಷ್ಟೇ ದೊಡ್ಡ ಮೊತ್ತವಾದರೂ ಅದನ್ನು ಡಿಫೆಂಡ್ ಮಾಡಿಕೊಳ್ಳುವುದು ಕಷ್ಟಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಗೆಲುವಿನ ಕ್ರೇಡಿಟ್ ಸಂಪೂರ್ಣವಾಗಿ ಬ್ಯಾಟರ್‌ಗಳಿಗೆ ಸಲ್ಲುತ್ತದೆ ಎಂದು ಹೇಳಿದ್ದಾರೆ.
ಐದು ಪಂದ್ಯಗಳ ಟಿ20 ಸರಣಿಯ ಭಾಗವಾಗಿ ಶುಕ್ರವಾರ ನಡೆದ ಎರಡನೇ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ 6 ವಿಕೆಟ್ ಭರ್ಜರಿ ಗೆಲುವು ಪಡೆದುಕೊಂಡಿದೆ. 250 ರನ್ ಗಳ ಟಾರ್ಗೆಟ್ ಅನ್ನು 9 ಎಸೆತ ಬಾಕಿ ಇರುವಾಗಲೇ ಗುರಿಮುಟ್ಟಿ ಟೀಂ ಇಂಡಿಯಾ ಸೋಲಿಣಿಸಿದೆ. ಈ ಗೆಲುವಿನೊಂದಿಗೆ ಸರಣಿಯಲ್ಲಿ 1-1 ರೊಂದಿಗೆ ಸಮಬಲ ಸಾಧಿಸಿದೆ.
ಪಂದ್ಯದ ಬಳಿಕ ಮಾತನಾಡಿದ ಟೀಂ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್, ಹೋಪ್ ಹಾಗೂ ರೂಥರ್ ಫಾರ್ಡ್ ಅವ ನಡುವಿನ ಜೊತೆಯಾಟ ನಮ್ಮಿಂದ ಪಂದ್ಯವನ್ನು ದೂರ ಮಾಡಿತು. ನಮಗೆ ಸಿಕ್ಕ ಅವಕಾಶಗಳನ್ನು ನಾವು ಕೈಚೆಲ್ಲಿದ್ದೆವು. ಇಬ್ಬನಿಯ ಪ್ರಭಾವ ಇರುವ ಸಂದರ್ಭದಲ್ಲಿ ಗೆಲುವಿಗೆ ಎಷ್ಟು ಸ್ಕೋರ್ ಮಾಡಬೇಕು ಎಂದು ಹೇಳೋದು ಕಷ್ಟ. ಇಬ್ಬನಿ ಬಿದ್ದರೆ ಎಷ್ಟು ದೊಡ್ಡ ಮೊತ್ತವಾದರೂ, ಅದನ್ನು ಡಿಫೆಂಡ್ ಮಾಡಿಕೊಳ್ಳುವುದು ಕಷ್ಟ. 249 ಭಾರಿ ಸ್ಕೋರ್ ಅನ್ನು ವೆಸ್ಟ್ ಇಂಡೀಸ್ ಬ್ಯಾಟರ್‌ಗಳು ಎರಡು ಓವರ್ ಬಾಕಿ ಇರುವಂತೆ ಚೇಸ್ ಮಾಡಿದ್ದರು.
ಈ ಪಿಚ್‌ನಲ್ಲಿ ನಮ್ಮ ಬೌಲರ್‌ಗಳು ತಪ್ಪು ಮಾಡುವ ಅವಕಾಶ ಕಡಿಮೆ. ಲೈನ್ ಅಂಡ್ ಲೆಂಥ್ ಸ್ವಲ್ಪ ಮಿಸ್ ಆದರೂ ಚೆಂಡು ಬೌಂಡರಿ ಗೆರೆದಾಟುತ್ತದೆ. ವೆಸ್ಟ್ ಇಂಡಿಸ್ ಬ್ಯಾಟರ್‌ಗಳು ಉತ್ತಮ ಪ್ರದರ್ಶನ ನೀಡಿದ್ದಾರೆ. ಅವರಿಗೆ ಸಿಗಬೇಕಾದ ಕ್ರೇಡಿಟ್ ನೀಡಲೇಬೇಕು. ನಮಗೆ ಸಿಕ್ಕ ಕೆಲವು ಅವಕಾಶಗಳನ್ನು ಕೈಚೆಲ್ಲಿದ್ದೆವು. ಇದು ಆಟಗಾರ ಒಂದು ಭಾಗ ಅಷ್ಟೇ ಎಂದು ಶ್ರೇಯಸ್ ಹೇಳಿದ್ದಾರೆ.
ವಿಂಡೀಸ್ ತಂಡ ಭಾರತದ ವಿರುದ್ಧ 250 ರನ್ ಬೆನ್ನತ್ತಿ ಗೆದ್ದಿತ್ತು. ಇದು ಅಂತರಾಷ್ಟ್ರೀಯ ಟಿ20 ಯಲ್ಲಿ 2ನೇ ಗರಿಷ್ಠ ರನ್ ಚೇಸ್ ಆಗಿದೆ. 2023ರಲ್ಲಿ ವಿಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾ ತಂಡ 259 ರನ್‌ಗಳ ಗುರಿಯನ್ನು ಬೆನ್ನತ್ತಿ ಗೆದ್ದಿದ್ದು ಈಗಲೂ ದಾಖಲೆಯಾಗಿ ಉಳಿದಿದೆ.
ಈ ಪಂದ್ಯದಲ್ಲಿ ಎರಡು ತಂಡಗಳು ಒಟ್ಟು 501 ರನ್ ಕಲೆ ಹಾಕಿದವು. ಇದು ಅಂತರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ದಾಖಲಾದ ಎರಡನೇ ಗರಿಷ್ಠ ರನ್ ಎನಿಸಿಕೊಂಡಿದೆ. 2023ರಲ್ಲಿ ವಿಂಡೀಸ್ ಮತ್ತು ದಕ್ಷಿಣ ಆಪ್ರಿಕಾ ನಡುವಿನ ಪಂದ್ಯದಲ್ಲಿ ಒಟ್ಟು 517 ರನ್ ದಾಖಲಾಗಿತ್ತು. ಈ ದಾಖಲೆ ಹಾಗೆಯೇ ಉಳಿದುಕೊಂಡಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.