
ಇಂದು ರಾಂಚಿಯಲ್ಲಿ ಟೀಂ ಇಂಡಿಯಾ ಹಾಗೂ ವೆಸ್ಟ್ ಇಂಡೀಸ್ ಎರಡನೇ ಪಂದ್ಯದಲ್ಲಿ ಭಾರತ ಹೀನಾಯವಾಗಿ ಸೋತಿತು. ಆರಂಭದಿಂದ ಮ್ಯಾಚ್ ಮುಗಿಯುವವರೆಗೆ ಕಾಡಿದ ವಿಂಡೀಸ್ ಪ್ಲೇಯರ್ ಟೀಂ ಇಂಡಿಯಾ ಬೌಲರಗಳನ್ನು ಅಕ್ಷರಶಃ ಚೆಂಡಾಡಿದ್ದಾರೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಭಾರತ 20 ಓವರ್‌ಗಳಿಗೆ 249 ರನ್ ಗಳಿಸಿತ್ತು ಆದರೆ ವಿಂಡೀಸ್ ಅದನ್ನನು 18ನೇ ಓವರ್ ಮುಕ್ತಾಯಕ್ಕೆ ಜಯವನ್ನು ದಾಖಲಿಸಿತು.
ಟಾಸ್ ಸೋತು ಕ್ರೀಸ್‌ಗೆ ಇಳಿದ ಭಾರತ 249 ಗಳಿಸಿತು. ಅದಕ್ಕೆ ತಕ್ಕಂತೆ ಮೊದಲು ಬ್ಯಾಟ್ ಮಾಡಿದ ಸ್ಯಾಮ್ಸನ್ 82 ರನ್ ಗಳಿಸಿದರೆ, ಇಶಾನ್ ಕಿಶನ್ 22 ಬೌಲ್‌ಗೆ 43, ಐಯ್ಯರ್ 18 ಬೌಲ್‌ಗೆ 40, ತಿಲಕ ವರ್ಮಾ 18 ಬಾಲ್ 44 ರನ್ ಗಳಿಸಿ, ಟೀಂ ಇಂಡಿಯಾವನ್ನು 200 ಗಡಿ ದಾಟಿಸಿದ್ದರು. ಆದರೆ ಬೌಲಿಂಗ್ ಕೌ ಕೊಟ್ಟ ಕಾರಣ ಇಂದು ಭಾರತ ಸೋಲನ್ನು ಒಪ್ಪಿಕೊಳ್ಳಬೇಕಾಯಿತು.
ಹೌದು ಫೇಸ್ ಬೌಲಿಂಗ್ ಹಾಗೂ ಸ್ಪಿನ್ ಸಹ ಇವತ್ತು ಗ್ರೌಂಡ್‌ಲ್ಲಿ ವರ್ಕ್ ಆಗಿಲ್ಲ. ಅದಕ್ಕೆ ಇಂದಿನ ಕಳಪೆ ಬೌಲಿಂಗೆ ಸಾಕ್ಷಿ. ಮಯಾಂಕ ಯಾದವ 3 ಓವರ್‌ಗೆ 3 ವಿಕೆಟ್ ಪಡೆದು 36 ರನ್ ಕೊಟ್ಟರೆ, ಉಳಿದಂತೆ, ಅಕ್ಷರ, ದುಬೆ, ಅರ್ಶದೀಪ ಎಲ್ಲರೂ ದುಬಾರಿಯಾದರು. ಅಲ್ಲದೇ ಪ್ರಾರಂಭದಿಂದಲೂ ಬ್ಯಾಟಿಂಗ್ ಸ್ಥಿರ ಪ್ರದರ್ಶನದಿಂದ ವಿಂಡೀಸ್ ಮತ್ತೊಂದೆಡೆ ಗೆಲುವುದನ್ನು ಪಡೆಯಿತು. ಆದರೆ ಪಂದ್ಯ ಮುಗಿಯುವವರೆಗೂ ವಿಕೆಟ್ ತೆಗೆಯಲು ಹೆನಗಾಡಿದ ಪೇಸರ ಹಾಗೂ ಸ್ಪಿನರ್ಸ್ ಆ ಸೆಕ್ಷನ್ ವಿಫಲತೆಯನ್ನು ಎತ್ತಿ ತೋರಿಸುತ್ತಿತ್ತು.
ಹೌದು ಸ್ಥಿರ ಬ್ಯಾಟಿಂಗ್ ಪ್ರದರ್ಶನದಿಂದಲೇ ವಿಂಡೀಸ್ ಗೆಲುವಿನ ದಡ ಸೇರಿತು ಎಂದು ಹೇಳಬಹುದು. ಆರಂಭದಲ್ಲಿ ಪೂರನ್, ಹ್ಯಾಟ್ಮರ್ ವಿಕೆಟ್ ಕಳೆದುಕೊಂಡು ಪ್ರೆಜರ್ ಅನುಭವಿಸಿದ ವಿಂಡೀಸ್‌ಗೆ ಆರಂಬದಲ್ಲಿ ಪೊವೆಲ್ ಹೋಪ್ ಬ್ಯಾಟಿಂಗ್ ಚೇತರಿಕೆಗೆ ನೆರವು ನೀಡಿತು. ಆದರೆ 24 ರನ್ ಗಳಿಸಿದ ಪೊವೆಲ್ ಅವರನ್ನು ಮಾಯಾಂಕ್ ಬೋಲ್ಡ್ ಮಾಡಿದಾಗ, ಆಲ್ ಮೋಸ್ಟ್ ವಿಂಡೀಸ್ ಸೋಲು ಖಚಿತ ಎಂದು ಭಾವಿಸಲಾಗಿತ್ತು. ಆದರೆ ನಂತರ ಆಗಿದ್ದೇನು? ಹೋಪ್ ಸ್ಥಿರ ಆಟದ ಪ್ರದರ್ಶನ ರುದರ್‌ಪೋರ್ಡ್ ಮಾರಕ ಬ್ಯಾಟಿಂಗ್ ಟೀಂ ಇಂಡಿಯಾಗೆ ಚೇತರಿಸಿಕೊಳ್ಳಲಾಗದ ಏಟನ್ನು ನಿಡುತ್ತಲೇ ಸಾಗಿತು. ಕೊನೆಗೆ 18 ಓವರ್ 3 ಬಾಲ್‌ಗೆ ವಿಂಡೀಸ್ ತನ್ನು 252 ರನ್ ಗಳಿಸಿ, ಗೆಲುವಿನ ದಡ ಸೇರಿತು.
ಈಗಾಗಲೇ ದಕ್ಷಿಣ ಆಫ್ರಿಕಾ ಇದೇ ವಿಂಡೀಸ್ ಮೇಲೆ 259 ರನ್‌ಗಳ ಚೇಸ್ ಮಾಡಿ ಗೆದ್ದು ಮೊದಲ ಸ್ಥಾನದಲ್ಲಿದ್ದರೆ, ಭಾರತ ಮೇಲೆ ಚೇಸ್ ಮಾಡಿದ ವಿಂಡೀಸ್ ಅತೀ ಚೇಸ್ ಮಾಡಿ ಗೆದ್ದ ದಾಖಲೆ ಮಾಡದಿದ್ದರೂ ಈಗ ಎರಡನೇ ಸ್ಥಾನದಲ್ಲಿದೆ. ಅಲ್ಲದೇ ಈ ಜಯ ವಿಂಡೀಸ್ ಮೇಲೆ ಇದ್ದ ಹಲವಾರು ಪ್ರಶ್ನೆಗೆ ಒಂದು ರೀತಿಯಲ್ಲಿ ಉತ್ತರ ಕೊಟ್ಟಂತೆ ಇದೆ. ವಿಂಡೀಸ್ ಸ್ಥಿರ ಪ್ರದರ್ಶನ, ಭಾರತದ ವೈಪಲ್ಯಗಳೇ ಇಂದಿನ ಪಂದ್ಯದ ಫಲಿತಾಂಶ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.