
ಬೆಂಗಳೂರು (ಅಕ್ಟೋಬರ್ 16): ಭಾರತ ಮತ್ತು ವೆಸ್ಟ್ ವಿಂಡೀಸ್ ನಡುವೆ ದ್ವಿಪಕ್ಷೀಯ ಕ್ರಿಕೆಟ್ ಸರಣಿ ನಡೆಯುತ್ತಿದೆ. ನಾಳೆ ಬೆಂಗಳೂರಿನಲ್ಲಿ ಐದನೇ ಮತ್ತು ಅಂತಿಮ ಟಿ-ಪಂದ್ಯ ನಡೆಯಲಿದೆ. ಹೈವೋಲ್ಟೇಜ್ ಪಂದ್ಯಗಳ ಬಿಸಿಯ ನಡುವೆ.. ಕ್ರಿಕೆಟ್ ಸರಣಿಗಳಿಂದ ಬರುವ ಆದಾಯದ ಬಗ್ಗೆ ಹೊಸ ವಿವಾದ ಭುಗಿಲೆದ್ದಿದೆ.
ಪ್ರಸ್ತುತ ಭಾರತ ಮತ್ತು ವೆಸ್ಟ್ ವಿಂಡೀಸ್ ನಡುವಿನ ಸರಣಿ ಆಯೋಜಿಸಿರೋದು ಬಿಸಿಸಿಐ. ಏಕದಿನ ಹಾಗೂ ಟಿ-ಸರಣಿಗಳಿಂದ ಬಿಸಿಸಿಐ ಬರೋಬ್ಬರಿ 2,50,00,00,000 ರೂಪಾಯಿ ಹಣ ಬಾಚಿಕೊಳ್ಳಲಿದೆ. ಆದರೆ ವೆಸ್ಟ್ ವಿಂಡೀಸ್ ಕ್ರಿಕೆಟ್ ಮಂಡಳಿಗೆ ಎಷ್ಟು ಹಣ ಸಿಗಲಿದೆ ಎಂಬ ಪ್ರಶ್ನೆ ಶುರುವಾಗಿದೆ. ವೆಸ್ಟ್ ವಿಂಡೀಸ್ ಕ್ರಿಕೆಟ್ ಮಂಡಳಿಯ ಸಿಇಒ ಕ್ರಿಸ್ ಡೆಹ್ರಿಂಗ್ ದ್ವಿಪಕ್ಷೀಯ ಸರಣಿಯ ಆದಾಯ ಮಾದರಿಯನ್ನು ಪ್ರಶ್ನಿಸಿದ್ದಾರೆ.
ವಿಂಡೀಸ್ ಸರಣಿಯು ಬಿಸಿಸಿಐಗೆ 200 ಕೋಟಿಗೂ ಹೆಚ್ಚು ಹಣವನ್ನು ಗಳಿಸುತ್ತದೆ ಎಂದು ಅಂದಾಜಿಸಲಾಗಿದೆ. ಆದರೆ ವಿಂಡೀಸ್ ಕ್ರಿಕೆಟ್ ಮಂಡಳಿ ಈ ಆದಾಯದಲ್ಲಿ ಯಾವುದೇ ಪಾಲನ್ನು ಪಡೆಯುವುದಿಲ್ಲ. ಅಷ್ಟೂ ಹಣವನ್ನು ಬಿಸಿಸಿಐ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲಿದೆ. ಪ್ರಸಾರ ಹಕ್ಕುಗಳು, ಟಿಕೆಟ್ ಮಾರಾಟ ಮತ್ತು ಇತರ ವಾಣಿಜ್ಯ ಒಪ್ಪಂದಗಳ ಮೂಲಕ ಗಳಿಸುವ ಹಣ ಸೇರಿದಂತೆ ಅಷ್ಟೂ ಹಣವೂ ಬಿಸಿಸಿ ಖಜಾನೆಗೆ ಸೇರಲಿದೆ. ಈ ಸರಣಿಗೆ ಪ್ರತಿಯಾಗಿ.. ಭಾರತ ವೆಸ್ಟ್ ಇಂಡೀಸ್ ಪ್ರವಾಸ ಮಾಡುತ್ತದೆ. ಈ ಸರಣಿಯಲ್ಲಿ ಸಿಕ್ಕ ಹಣವು ವಿಂಡೀಸ್ ಕ್ರಿಕೆಟ್ ಮಂಡಳಿಯಲ್ಲಿ ಉಳಿಯಲಿದೆ.
ಇದೇ ಕಾರಣಕ್ಕೆ ಕ್ರಿಸ್ ಡೆಹ್ರಿಂಗ್.. ಭಾರತದಲ್ಲಿ ನಡೆಯುತ್ತಿರುವ ದ್ವಿಪಕ್ಷೀಯ ಸರಣಿಗಳಿಂದಾಗಿ ವಿಂಡೀಸ್ಗೆ ಯಾವುದೇ ಆದಾಯವನ್ನು ತಂದುಕೊಡುವುದಿಲ್ಲ ಎಂದಿದ್ದಾರೆ. ಐಸಿಸಿ ಆದಾಯ ಮಾದರಿಯು ಇಂಡೀಸ್ ಕ್ರಿಕೆಟ್ ಮಂಡಳಿಯನ್ನು ದಿವಾಳಿಯಾಗಲು ಕಾರಣವಾಗಿದೆ. ಆದಾಯ ಮಾದರಿಯು ಆದಾಯವನ್ನು ಇನ್ನಷ್ಟು ಹದಗೆಡಿಸುತ್ತದೆ ಎಂದು ಹೇಳಿದ್ದಾರೆ.
ಅಂದರೆ ಇಲ್ಲಿ ವಿಂಡೀಸ್ ಕ್ರಿಕೆಟ್ ಅಧಿಕಾರಿ ದ್ವಿಪಕ್ಷೀಯ ಕ್ರಿಕೆಟ್ ಸರಣಿಗಳಿಂದ ಬರುವ ಆದಾಯವನ್ನು ನಿಯಂತ್ರಿಸುವ ಆದಾಯದ ಮಾದರಿ ಪ್ರಶ್ನಿಸಿದ್ದಾರೆ. ದ್ವಿಪಕ್ಷೀಯ ಪಂದ್ಯಗಳಿಂದ ಬರುವ ಪ್ರಸಾರ ಆದಾಯದಲ್ಲಿ ಭೇಟಿ ನೀಡುವ ತಂಡಗಳಿಗೆ ಹಂಚಿಕೊಳ್ಳಲು ಅವಕಾಶ ಇಲ್ಲ. ಭಾರತದಲ್ಲಿ 20 ರಿಂದ 30 ಮಿಲಿಯನ್ ಡಾಲರ್ ಗಳಿಸುವ ಸಿರೀಸ್ನಿಂದ ವಿಂಡೀಸ್ಗೆ ಯಾವುದೇ ಆದಾಯ ಸಿಗಲ್ಲ. ಇದಕ್ಕೆಲ್ಲ ಕಾರಣ 1997 ರಲ್ ನಡದ ಐಸಿಸಿ ಒಪ್ಪಂದ. ಈ ಒಪ್ಪಂದಕ್ಕೂ ಮೊದಲು ಆತಿಥೇಯ ರಾಷ್ಟ್ರಗಳು ಸಾಮಾನ್ಯವಾಗಿ ಭೇಟಿ ನೀಡುವ ತಂಡಗಳಿಗೆ ನಿಗದಿತ ಶುಲ್ಕವನ್ನು ನೀಡುತ್ತಿದ್ದವು. ಇದು ಕೆಲವೊಮ್ಮೆ ವಿಂಡೀಸ್ ಮನೆಯಲ್ಲಿ ಪಂದ್ಯಗಳನ್ನು ಆಯೋಜಿಸುವುದಕ್ಕಿಂತ ಹೆಚ್ಚಿನದನ್ನು ಗಳಿಸಲು ಕಾರಣವಾಗಿತ್ತು. 1997ರಲ್ಲಿ ಈ ನಿಯಮಕ್ಕೆ ಗುಡ್ಬೈ ಹೇಳಲಾಯಿತು ಎಂದಿದ್ದಾರೆ. ಆದರೆ 1997ರ ಒಪ್ಪಂದ ಪ್ರಕಾರ, ಹಿಂದಿನ ನಿಯಮವನ್ನು ಕೈಬಿಡಲಾಯಿತು. ಇದರಿಂದ ನಮ್ಮ ಸಂಸ್ಥೆ ನಷ್ಠದಲ್ಲಿದೆ ಎಂದಿದ್ದಾರೆ.
ಡೆಹ್ರಿಂಗ್ ಪ್ರಕಾರ.. ಹೆಚ್ಚಿನ ಪ್ರೇಕ್ಷಕರನ್ನು ಹೊಂದಿರುವ ದೇಶಗಳು ಮತ್ತು ಸಣ್ಣ ಕ್ರಿಕೆಟ್ ಆಡುವ ರಾಷ್ಟ್ರಗಳ ನಡುವೆ ಭಾರೀ ಅಸಮತೋಲನ ಸೃಷ್ಟಿಸುತ್ತದೆ. ಇದರರ್ಥ ಭಾರತವು 1.5 ಶತಕೋಟಿ ಜನಸಂಖ್ಯೆಯಿಂದ ಬರುವ ಆದಾಯವನ್ನು ಬಿಸಿಸಿಐ ಉಳಿಸಿಕೊಳ್ಳಬಹುದು. ಆದರೆ ವೆಸ್ಟ್ ಇಂಡೀಸ್ ಆಂಟಿಗುವಾ (ಸುಮಾರು 100,000 ಜನಸಂಖ್ಯೆ) ಅಥವಾ ಸೇಂಟ್ ಕಿಟ್ಸ್ (ಸುಮಾರು 30,000 ಜನಸಂಖ್ಯೆ)ನಲ್ಲಿ ಬರುವ ಆದಾಯವನ್ನು ಉಳಿಸಿಕೊಳ್ಳಬಹುದು. ಇದು ನಮಗೆ ಆಗುತ್ತಿರುವ ಅನ್ಯಾಯ ಎಂದಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.